ಮಕ್ಕಳ ಕವನಗಳು (78ನೇ ಸ್ವಾತಂತ್ರ್ಯೋತ್ಸವ ವಿಶೇಷ) : ಸಂಚಿಕೆ -27
Thursday, August 15, 2024
Edit
ಮಕ್ಕಳ ಕವನಗಳು (78ನೇ ಸ್ವಾತಂತ್ರ್ಯೋತ್ಸವ ವಿಶೇಷ) : ಸಂಚಿಕೆ -27
78ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಕವನಗಳನ್ನು ರಚಿಸಿರುವ ಜಗಲಿಯ ವಿದ್ಯಾರ್ಥಿಗಳು :
◾ ಕೌಶೀಲ, ದ್ವಿತೀಯ ಪಿಯುಸಿ
◾ ಧನ್ವಿತಾ ಕಾರಂತ್, 10ನೇ ತರಗತಿ
ಕೋಟಿ ಜನಗಳ ಸಡಗರ
ಏಕತೆಯ ಎಲ್ಲರೂ ಮೆರೆಸಿರಿಂದು
ಸ್ವಾತಂತ್ರ್ಯವೆ ಅಜರಾಮರ
ಭರತ ಖಂಡದ ಶೃಂಖಲೆಗಳನು
ತೊಡೆದು ಹಾಕಿದ ದಿನವಿದು
ಸ್ಫೂರ್ತಿ ಚರಿತೆಯ ರಾಷ್ಟ್ರಭಕ್ತಿಯ
ಘೋರ ಸಮರದ ಫಲವಿದು
ದೇಶಭಕ್ತರ ತ್ಯಾಗ ಗಳಿಸಿದೆ
ಸಾರ್ಥಕತೆಯಾ ಭಾವನೆ
ಜನರ ಮನಗಳ ಮೂಲೆಯಲ್ಲಿ
ದೇಶ ಪ್ರಗತಿಯ ಕಾಮನೆ
ಸೊಗದ ಭಾರತ ಇಂದು ಎಂದಿಗೂ
ಜಗಕೆ ಉಜ್ವಲ ಜ್ಯೋತಿಯು
ಭರತ ಮಾತೆಯ ಪಾದ ಕಮಲವೆ
ನಮ್ಮ ಆತ್ಮದ ಶಕ್ತಿಯು
10 ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ
ಪ್ರೌಢ ಶಾಲೆ, ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬ್ರಿಟಿಷರಿಂದ ಬಿಡುಗಡೆ ಪಡೆದ ದಿನ
ಸ್ವಾತಂತ್ರ್ಯ ಹೋರಾಟಗಾರರ ನೆನೆಯುವ ದಿನ
ದೇಶಪ್ರೇಮವ ಇಮ್ಮಡಿಗೊಳಿಸುವ ದಿನ
ಸಮೃದ್ಧಿ ಸರ್ವರಿಗೂ ತಿಳಿಸುವ ದಿನ..
ಅದುವೇ ನಮ್ಮ ಸ್ವಾತಂತ್ರ್ಯೋತ್ಸವ ದಿನ...
ಬಾನೆತ್ತರದಲ್ಲಿ ಹಾರುತ್ತಿರುವ ತಿರಂಗ
ಧ್ವಜವು ಸಾರುತ್ತಿದೆ
ಇಂದು ಸ್ವಾತಂತ್ರೋತ್ಸವವೆಂದು . . . .
ಪ್ರತಿಯೊಬ್ಬ ಭಾರತೀಯನ ಮನೆಮನೆಗಳಲ್ಲಿ ಸಂಭ್ರಮಿಸುವ ಮಹೋತ್ಸವ ಇಂದು..
ಅವನ ಬಡಿದು ಇವನ ಹೊಡೆದು
ಬದುಕುವ ಬದುಕು ನಮಗೆ ಬೇಡ
ದ್ವೇಷದಿಂದ ಕೊರಗಬೇಡ
ನಾವು ಭಾರತೀಯರು
ಜಾತಿ ಮತ ಎನ್ನುವ ಭೇದ ಬೇಡ
ಗೊಂದಲ ಎನ್ನುವ ಗೂಡು ಬೇಡ
ಕಲಹ ಕೊಲೆ ಎನ್ನುವ ಮಾತು ಬೇಡ
ನಾವು ಭಾರತೀಯರು
ಸುಮ್ಮನೆ ದೊರೆತಿಲ್ಲ ನಮಗೆ
ಈ ಸ್ವಾತಂತ್ರ್ಯ ದಿನ
ಇದರ ಹಿಂದಿದೆ ಅದೆಷ್ಟೋ
ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನ
ಅಂತಹ ಹುತಾತ್ಮರಿಗೆ ಗೌರವ ಸಲ್ಲಿಸುವ
ದಿನ ಅದುವೇ
ನಮ್ಮ ಸ್ವಾತಂತ್ರೋತ್ಸವ ದಿನ
ಮೂರು ದಿನದ ಬದುಕಿನಲ್ಲಿ
ನಲಿಸಿ ನಲಿದು ಬಾಳೋಣ
ದ್ವೇಷವನ್ನು ಅಳಿಸಿ ನಾವು
ಶಾಂತಿಯ ತೋಟವನ್ನು ಬೆಳೆಸೋಣ
ಜೊತೆಗೆ ಗೂಡಿ ಬೆಳೆದು
ನಾವು ಪ್ರೀತಿಯ ದೇಶವ ಕಟ್ಟೋಣ
ದ್ವಿತೀಯ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು
ನಾರ್ಶ ಮೈದಾನ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************