-->
ಮಕ್ಕಳ ಕವನಗಳು : ಸಂಚಿಕೆ -29 : ಶ್ರೀ ಕೃಷ್ಣ ಜನ್ಮಾಷ್ಟಮಿ ಯ ವಿಶೇಷ ಸಂಚಿಕೆ

ಮಕ್ಕಳ ಕವನಗಳು : ಸಂಚಿಕೆ -29 : ಶ್ರೀ ಕೃಷ್ಣ ಜನ್ಮಾಷ್ಟಮಿ ಯ ವಿಶೇಷ ಸಂಚಿಕೆ

ಮಕ್ಕಳ ಕವನಗಳು : ಸಂಚಿಕೆ -29
ಶ್ರೀ ಕೃಷ್ಣ ಜನ್ಮಾಷ್ಟಮಿ ಯ ವಿಶೇಷ ಸಂಚಿಕೆ
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕಾವ್ಯಶ್ರೀ, ದ್ವಿತೀಯ ಪಿಯುಸಿ (ವಿಜ್ಞಾನ)
◾ ಪಯಸ್ವಿನಿ. ಬಿ, 9ನೇ ತರಗತಿ 
◾ ಋತ್ವಿಕ್ ಮೊಳೆಯಾರ್, 7ನೇ ತರಗತಿ 



ನೀಲಿ ವರ್ಣ ಮೈ ಬಣ್ಣ 
ಮುದ್ದು ಮೊಗದ ಚಂದಿರ 
ತೊದಲು ಮಾತನಾಡಿ ಜನಕೆ
 ಮುದವ ನೀಡೋ ಬಾಲಕ
ಇವನೇ ನಮ್ಮ ಯಶೋದಾನಂದನ
ಬಾಲಕಿಶೋರ ಶ್ರೀ ಕೃಷ್ಣ

    ಇವನ ನಗುವೆ ಹೊನ್ನ ಕಲಶ
    ಇವನೆ ಜಗದ ಉಸ್ತುವಾರಿ 
    ವಿಶ್ವಕೆ ಪ್ರೀತಿಯ ಪಸರಿಸಿದ
    ಒಲವಿನ ಅರ್ಥವ ಸಾರಿದ
    ಜಗದ್ಗುರು ಈ ನಮ್ಮ
    ದ್ವಾರಕಾದೀಶ ಶ್ರೀ ಕೃಷ್ಣ
.................................................. ಕಾವ್ಯಶ್ರೀ 
ದ್ವಿತೀಯ ಪಿಯುಸಿ (ವಿಜ್ಞಾನ)
ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಬೇಕೂರು
ಮಂಜೇಶ್ವರ ತಾಲ್ಲೂಕು, ಕಾಸರಗೋಡು ಜಿಲ್ಲೆ.
******************************************             
               

ದೇವಕಿಯ ಮಗನಾಗಿ ಜನಿಸಿದ 
ಗೋಕುಲದಲಿ ಹುಟ್ಟಿ ಬೆಳೆದ 
ಕೊಳಲನು ಊದುತ ನಲಿಯುವ 
ಬೆಣ್ಣೆಯ ಕದಿಯುತ 
ಮಣ್ಣನು ತಿನ್ನುತ 
ಬಾಯಲ್ಲೇ ತೋರಿದೆ ಬ್ರಹ್ಮಾಂಡವ
ಭಗವಾನ್ ವಿಷ್ಣುವಿನ ಎಂಟನೇ ಅವತಾರ 
ಮಾಡಿದೆ ನೀನು ರಾಕ್ಷಸ ಕಂಸನ ಸಂಹಾರ
 ಗೋವರ್ಧನ ಗಿರಿಯನು ಕಿರು ಬೆರಳಲ್ಲಿ ಎತ್ತಿದ 
 ಹಸುಗಳೆ ನಿನ್ನ ಪ್ರೀತಿಯ ಗೆಳೆಯರು
ಎಲ್ಲರಿಗೂ ಪ್ರಿಯನಾದವನು 
ಅವನೇ ಭಗವಂತನು 
ಹಲವು ರೀತಿಯ ಶಕ್ತಿಗಳಿವೆ 
ನಿನ್ನಯ ವಿಶ್ವರೂಪ ಅದ್ಭುತ
........................................... ಪಯಸ್ವಿನಿ. ಬಿ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಬೇಕೂರು 
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
******************************************
              

                

ಕೃಷ್ಣನೆಂದರೆ ಕಷ್ಟ ಇನ್ನಷ್ಟು ದೂರ
ಕ್ಲಿಷ್ಟ ಸಮಯದಲ್ಲಿ ಬರುವ ಹತ್ತಿರ/
ಕ್ಲಪ್ತ ಗುರಿ ಮುಟ್ಟಿಸುವ ಗಿರಿಧರ
ಕೇಶ ಕಳೆಯುವ ಈತನೆ ಮುರಹರ//

ಮನೋವಿಜ್ಞಾನಿ ಈತನೇ ನಮ್ಮಯ ಕೇಶವ
ಆತ್ಮೀಯ ಗೆಳೆಯ ಈತನೇ ಮಾಧವ
ನ್ಯಾಯಕ್ಕೆ ಅಧಿಪ ಈತನೇ ಮುಕುಂದ
ಧರ್ಮಕ್ಕೆ ಅಧೀಶ ಈತನೇ ಗೋವಿಂದ//

ಪರಿಪೂರ್ಣತೆ ಎಂದರೆ ಅವನೇ ಶ್ರೀಹರಿ
ಮುಗ್ಧತೆ ಎಂದರೆ ಅವನೇ ಬಾಲಮುರಾರಿ/
ಸಾಧನೆ ಎಂದರೆ ಅವನೇ ಮಹಾವಿಷ್ಣು
ಸಂಕಲ್ಪ ಎಂದರೆ ಅವನೇ ಜಿಷ್ಣು//

ಜಯ ಜಯ ಭೂರಕ್ಷಕ ಪ್ರಭೋ ನಾರಾಯಣ
ಜಯ ಜಯ ಗೋರಕ್ಷಕ ಪ್ರಭೋ ರಮಾರಮಣ/
ಜಯ ಜಯ ಪಾಹಿಮಾಂ ಪ್ರಭೋ ಶ್ರೀಕರ
ಜಯ ಜಯ ಅನಂತ ವರದಾಯಕ ವಿಶ್ವಂಭರ//