ಪ್ರೀತಿಯ ಪುಸ್ತಕ : ಸಂಚಿಕೆ - 125
Friday, August 23, 2024
Edit
ಪ್ರೀತಿಯ ಪುಸ್ತಕ
ಪ್ರೀತಿಯ ಮಕ್ಕಳೇ... ವನ್ಯಜೀವಗಳಿಗೆ ಸಂಬಂಧಿಸಿದ ಹಾಗೆ ಭಾರತದ ಉದ್ದಗಲದ ನೈಜ ಘಟನೆಗಳನ್ನು ಆಧರಿಸಿದ ಕಥೆಗಳು ಇಲ್ಲಿವೆ. ಕಾಡುಪಾಪಗಳನ್ನು ಕಾಪಾಡುವ ತುಮಕೂರಿನ ಶಾಲಾ ಮಕ್ಕಳ ಕಥೆ; ಐವತ್ತು ಸಾವಿರ ವಲಸೆ ಪಕ್ಷಿಗಳಿಗೆ ಊಟ ಹಾಕುತ್ತಿರುವ ರಾಜಸ್ತಾನಿ ಗ್ರಾಮದ ಕಥೆ. ಚಿರತೆಗಳ ಜೊತೆಗೆ ಬೆರೆತ ಜನ – ಹೀಗೆ ಹತ್ತು ಸತ್ಯ ಕಥೆಗಳು ಇವೆ. ಇವನ್ನು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಜೀವಲೋಕದ ಜೊತೆಗೆ ಒಂದು ಸುಂದರ ಸಂಬಂಧದ ಎಳೆ ಈ ಕಥೆಗಳಲ್ಲಿ ಕಾಣಬಹುದು. ನಮ್ಮ ಸುತ್ತಲೂ ಅಪಾರ ಜೀವ ವೈವಿಧ್ಯಗಳು ಇವೆ. ಅವರ ಜೊತೆಗೆ ನಾವು ಹೇಗೆ ಸಹಜೀವನ ನಡೆಸಬಹುದು ಎಂದು ಕಾಣಬಹುದು. ಇದು ನಮ್ಮೆಲ್ಲರಿಗೂ ಪ್ರೇರಣೆ ನೀಡಬಹುದಾದ ಒಂದು ಪುಸ್ತಕ. ನೀವು ನಿಮ್ಮದೇ ರೀತಿಯಲ್ಲಿ ವನ್ಯಲೋಕದೊಂದಿಗೆ ಸಂಬಂಧ ಇಟ್ಟುಕೊಂಡಿರಬಹುದು. ಅಂತಹ ಅನುಭವಗಳನ್ನು ಬರೆದಿಡಬಹುದು. ಓದಿ ನೋಡಿ.
..................................... ವಾಣಿ ಪೆರಿಯೋಡಿ


ಸಂಚಿಕೆ - 125
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸಂಪಾದಕರು: ತಾನ್ಯಾಮುಜಂದಾರ್; ಸುಜಾತಾ ಪದ್ಮನಾಭನ್
ಚಿತ್ರಗಳು: ನಯನ್ ತಾರಾ ಸುರೇಂದ್ರನಾಥ್
ಅನುವಾದ: ನಾಗೇಶ ಹೆಗಡೆ
ಪ್ರಕಾಶಕರು: ಅಂಕಿತ ಪುಸ್ತಕ
ಬೆಲೆ: ರೂ.195/-
7-8ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಉಪಯೋಗ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಂಕಿತ ಪುಸ್ತಕ, ಬೆಂಗಳೂರು; ದೂರವಾಣಿ: 26617100/26617755; ಸಪ್ನಾ ಬುಕ್ ಹೌಸಿನಲ್ಲಿ ಈ ಪುಸ್ತಕ ಸಿಗುತ್ತದೆ. ankitapustaka@gmail.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************