ಪ್ರೀತಿಯ ಪುಸ್ತಕ : ಸಂಚಿಕೆ - 124
Friday, August 16, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 124
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಮಿಲೇಟಸ್ ನಗರದ ಅಲೆಮಾರಿ ಮುದುಕ ಥೇಲೀಸ್. ಈ ಪುಸ್ತಕದ ಒಂದು ಕಡೆ ನಾಟಕ ಶುರುವಾಗುತ್ತದೆ; ಇನ್ನೊಂದು ಕಡೆ ಕಥೆ ಇದೆ. ಅಂದರೆ ಎರಡು ಮುಖಪುಟ ಹೊಂದಿದ ಪುಸ್ತಕ ಇದು. ಥೇಲೀಸ್ ಒಬ್ಬ ಗ್ರೀಕ್ ಗಣಿತ ಶಾಸ್ತ್ರಜ್ಞ. ಇವನನ್ನು ಅನೇಕರು ಗ್ರೀಕ್ ಪರಂಪರೆಯ ಮೊದಲ ತತ್ವಶಾಸ್ತ್ರಜ್ಞ ಎಂದು ಕರೆದಿದ್ದಾರೆ. ಬಹಳ ಬುದ್ಧಿವಂತ ಕುಶಾಗ್ರಮತಿ. ರೇಖಾಗಣಿತವನ್ನು ಒಂದು ಜ್ಞಾನ ಶಿಸ್ತಾಗಿ ಗುರುತಿಸಿದವನು. ಬಹಳ ಬಡವನಾಗಿದ್ದ. ಅವನ ಬದುಕು ಜನಪದ ಕಥೆಗಳಲ್ಲಿ ಸೇರಿಹೋಗಿದೆ. ನೆರಳಿನ ಜಾಡು ಹಿಡಿದು ಪಿರಮಿಡ್ಡಿನ ಎತ್ತರವನ್ನು ಲೆಕ್ಕ ಹಾಕಿದ ಕಥೆ ಬಹಳ ಪ್ರಸಿದ್ಧವಾದದ್ದು. ಅವನ ಕುರಿತು ಲಭ್ಯವಾಗಿರುವ ಬಿಡಿ ಬಿಡಿ ಕಥೆಗಳನ್ನು ಪೋಣಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಲೆಕ್ಕ, ವಿಜ್ಞಾನಗಳ ಕುರಿತು ಆಸಕ್ತಿ ಇದ್ದವರಿಗೆ ಇದು ಖಂಡಿತವಾಗಿಯೂ ಉತ್ತಮ ಓದು.
ಕಥೆಯ ಲೇಖಕರು: ವಿ.ಎಸ್. ಶಾಸ್ತ್ರಿ
ನಾಟಕ ರೂಪ: ಡಾ.ನಿಂಗು ಸೊಲಗಿ
ಚಿತ್ರಗಳು: ಶಿವಣ್ಣ ಜಿ.ಕೆ
ಪ್ರಕಾಶಕರು: ಭಾರತೀಯ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ
ಬೆಲೆ: ರೂ.50/-
6-7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ರುಚಿಸುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು; bgvskarnataka@gmail.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************