-->
ಯಕ್ಷರಂಗಕ್ಕೆ ಪಾದಾರ್ಪಣೆಯ ಕ್ಷಣ - ಬರಹ : ಅಭಿನವ್ ಪಿ ಎನ್,  6ನೇ ತರಗತಿ

ಯಕ್ಷರಂಗಕ್ಕೆ ಪಾದಾರ್ಪಣೆಯ ಕ್ಷಣ - ಬರಹ : ಅಭಿನವ್ ಪಿ ಎನ್, 6ನೇ ತರಗತಿ

ಮಕ್ಕಳ ಲೇಖನ : ಯಕ್ಷರಂಗಕ್ಕೆ ಪಾದಾರ್ಪಣೆಯ ಕ್ಷಣ
ಬರಹ : ಅಭಿನವ್ ಪಿ ಎನ್ 
6ನೇ ತರಗತಿ 
ಸ ಉ ಹಿ ಪ್ರಾ ಶಾಲೆ ಮುಂಡೂರು. 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
       

      ನಮ್ಮ ಶಾಲೆಯಲ್ಲಿ ಪಾಠದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಹೆಚ್ಚಿನ ಅವಕಾಶವನ್ನು ನೀಡುವುದು ನನಗೆ ಬಹಳ ಸಂತೋಷದ ವಿಷಯ. ಶಾಲೆ ಆರಂಭವಾಗುವಾಗ ನಮ್ಮ ಮುಂಡೂರು ಶಾಲೆಯ ಮುಖ್ಯ ಶಿಕ್ಷಕರಾದ ವಿಜಯ ಮಿಸ್ ರವರು ಯಾರಿಗೆಲ್ಲಾ ಭರತನಾಟ್ಯ, ಚಿತ್ರಕಲೆ, ಯಕ್ಷಗಾನ ಕ್ಕೆ ಸೇರಲು ಆಸಕ್ತಿಯಿದೆ ಎಂದು ಕೇಳಿದರು. ನನ್ನ ಬಹಳ ಆಸಕ್ತಿಯ ಕ್ಷೇತ್ರವಾದ ಚಿತ್ರಕಲೆ ಮತ್ತು ಯಕ್ಷಗಾನಕ್ಕೆ ನನಗೆ ಸೇರಬೇಕೆಂಬ ಆಸೆ ಉಂಟಾಯಿತು. ಮನೆಯಲ್ಲಿ ಬಂದು ತಂದೆ ತಾಯಿಯರಲ್ಲಿ ಕೇಳಿದಾಗ ಅದಕ್ಕೆ ಒಪ್ಪಿಗೆ ನೀಡಿದರು. ಮರುದಿನವೆ ನಾನು ಬಂದು ಚಿತ್ರಕಲೆ ಮತ್ತು ಯಕ್ಷಗಾನಕ್ಕೆ ಹೆಸರನ್ನು ನೀಡಿದೆ. ನನ್ನ ಸ್ನೇಹಿತರೂ ಕೆಲವರು ಸೇರಿದರು. ಪ್ರತೀ ಶನಿವಾರ ತರಗತಿಗಳು ಆರಂಭವಾಗ್ತದೆ ಎಂದು ತಿಳಿಸಿದರು. ಯಾವಾಗ ಶನಿವಾರ ಬರುತ್ತದೆ ಎಂದು ಕಾಯಲು ಆರಂಭಿಸಿದೆನು. ಒಂದು ದಿನ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಅಂದಿನಿಂದ ಪ್ರತೀ ಶನಿವಾರ ತರಗತಿಗಳು ಆರಂಭವಾದವು.
        ಯಕ್ಷಗಾನ ಕಲಾವಿದ ಉತ್ತಮ್ ಪಡ್ಪು ಸರ್ ರವರು ನಮಗೆ ಯಕ್ಷಗಾನದ ತರಗತಿಗಳನ್ನು ಮಾಡಿದರು. ಮೊದಲಿಗೆ ಒಂದೊಂದಾಗಿ ಹೆಜ್ಜೆಗಳನ್ನು ಕಲಿಸಿಕೊಟ್ಟರು. ನಂತರ ಇದನ್ನು ಮನೆಯಲ್ಲಿ ಅಭ್ಯಾಸ ಮಾಡಲು ತಿಳಿಸಿದರು. ಶಾಲೆಯಲ್ಲೂ ಸ್ನೇಹಿತರ ಜೊತೆ ಸೇರಿ ಅಭ್ಯಾಸ ಮಾಡುತ್ತಿದ್ದೆವು. ಹಾಗೆಯೇ ಇದರ ಜೊತೆ ಜೊತೆಗೆ ಚಿತ್ರಕಲಾ ತರಗತಿಗಳು ನಡೆಯುತ್ತಿತ್ತು. ಶಿವಸುಬ್ರಹ್ಮಣ್ಯ ಸರ್ ರವರು ನಮಗೆ ಚಿತ್ರಕಲೆಯನ್ನು ಕಲಿಸಿಕೊಡುತ್ತಿದ್ದರು. ಹಾಗೆಯೇ ಭರತನಾಟ್ಯಕ್ಕೆ ಸೇರಿದ ನನ್ನ ಸ್ನೇಹಿತರಿಗೆ ಸಂಧ್ಯಾ ಮಿಸ್ ರವರು ಭರತನಾಟ್ಯ ಕಲಿಸುತ್ತಿದ್ದರು. ನಾವೆಲ್ಲರೂ ಶನಿವಾರಕ್ಕಾಗಿ ಕಾಯುತ್ತಿದ್ದೆವು. ಶನಿವಾರ ಬಂತೆಂದರೆ ನಮಗೆಲ್ಲ ಸಂಭ್ರಮ. ಹೀಗೆ ತರಗತಿಗಳು ನಡೆಯುತ್ತಿತ್ತು. ಒಂದು ದಿನ ನಮ್ಮ ಯಕ್ಷಗಾನದ ರಂಗಪ್ರವೇಶ ಆಗಬೇಕಲ್ಲ, ಹಾಗಾಗಿ ಗಣರಾಜ್ಯೋತ್ಸವ ದಂದು ಮಾಡುವುದಾಗಿ ಶಾಲೆಯಲ್ಲಿ ತೀರ್ಮಾನಿಸಿದರು. ಅಂದಿನಿಂದ ನಮ್ಮ ಸಂತೋಷ ಕ್ಕೆ ಪಾರವೇ ಇಲ್ಲ‌. ನಮ್ಮ ಯಕ್ಷಗಾನದ ಅಭ್ಯಾಸಗಳು ಬಹಳ ಭರದಿಂದ ಸಾಗಿದವು. "ಶ್ವೇತಾವಸಾನ" ಎಂಬ ಯಕ್ಷಗಾನ ಪ್ರಸಂಗ ಮಾಡುವುದಾಗಿ ತಿಳಿಸಿದರು. 
ಅದಕ್ಕಾಗಿ ಪಾತ್ರಗಳ ಆಯ್ಕೆ ಮಾಡಲು ನಮ್ಮನ್ನೆಲ್ಲಾ ಓದಿಸಿದರು. ನಂತರ ಒಬ್ಬೊಬ್ಬರಿಗೆ ಒಂದೊಂದು ಪಾತ್ರವನ್ನು ನೀಡಿದರು. ನನಗೆ ಶ್ರೀ ಕೃಷ್ಣನ ಪಾತ್ರ ದೊರೆಯಿತು. ಅದರ ಸಂಭಾಷಣೆ ಯನ್ನು ಹೇಳಿಕೊಟ್ಟರು. ಇಲ್ಲಿಂದ ಶಾಲೆಯಲ್ಲೂ, ಮನೆಯಲ್ಲೂ ಇದರ ಅಭ್ಯಾಸ ಮುಂದುವರಿಯಿತು. ಒಂದು ದಿನ ಭಾಗವತಿಕೆಯವರು, ಚೆಂಡೆಯವರು, ಮದ್ದಳೆಯವರು ಬರುತ್ತಾರೆ ಎಂದು ತಿಳಿಸಿದರು. ಅಂದು ನನಗೆ ಜ್ವರ ಆದರೂ ಶಾಲೆಗೆ ಹೋದೆ. ಅಭ್ಯಾಸ ಮಾಡಿದೆ. ನನ್ನ ಸ್ನೇಹಿತರೆಲ್ಲರೂ ಬಹಳ ಚೆನ್ನಾಗಿ ಅಭ್ಯಾಸ ಮಾಡಿದರು. ಜನವರಿ 26 ಬಂದೇ ಬಿಟ್ಟಿತು. ಇದರ ಮೊದಲ ದಿನ ಬಹುಮಾನ ವಿತರಣಾ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿದರು. ನನಗೂ ಬಹುಮಾನ ದೊರೆಯಿತು. ಬಹಳ ಖುಷಿಯಿಂದ ಮನೆಗೆ ಹೋದೆ. ನಾಳೆಯ ದಿನಕ್ಕಾಗಿ ಕಾಯುತ್ತಿದ್ದೆ. ಬಹಳ ಸಂಭ್ರಮ ಸಡಗರದಿಂದ ಶಾಲೆಯ ಕಡೆಗೆ ನಡೆದೆವು. ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಬಹಳ ಗೌರವದಿಂದ ರಾಷ್ಟ್ರಧ್ವಜಕ್ಕೆ ವಂದನೆಯನ್ನು ಸಲ್ಲಿಸಿದೆವು. ನಂತರ ಸಭಾಕಾರ್ಯಕ್ರಮ ಆರಂಭವಾಯಿತು. ನಮ್ಮನ್ನು ಬಣ್ಣ ಹಚ್ಚಲು ಕರೆದರು. ಮೊದಲ ಬಾರಿಗೆ ಮುಖಕ್ಕೆ ಬಣ್ಣ ಹಚ್ಚುವುದು. ಏನೋ ಒಂಥರಾ ಉತ್ಸಾಹ. ಬಣ್ಣ ಹಚ್ಚಿಯಾಯಿತು. ಅದಕ್ಕೆ ಸರಿಯಾದ ಉಡುಪನ್ನು ಕೊಟ್ಟರು. ಎಲ್ಲಾ ಡ್ರೆಸ್ ಆದಮೇಲೆ ಫೋಟೋವನ್ನು ತೆಗೆಸಿಕೊಂಡೆನು. ಕೈಗೆ ಕಟ್ಟಿದ ಹಗ್ಗ, ತಲೆಗೆ ಕಟ್ಟಿದ ಕಿರೀಟದ ಹಗ್ಗ ಬಿಗಿಯಾಗಿ ನೋವಾಗಲು ಪ್ರಾರಂಭವಾಯಿತು. ಸರ್ ನಲ್ಲಿ ಹೇಳಿದೆ. ಅವರು ಅದನ್ನು ಸರಿಪಡಿಸಿದರು. ಇನ್ನೇನೋ ಸ್ವಲ್ಪ ಹೊತ್ತಿನಲ್ಲಿ ಯಕ್ಷಗಾನ ಆರಂಭ ಆಗ್ತದೆ ಎಂದು ತಿಳಿಸಿದರು. ನಾವೆಲ್ಲಾ ರಂಗಪ್ರವೇಶಕ್ಕೆ ಸಿದ್ಧರಾದೆವು. ದೇವರನ್ನು ಪ್ರಾರ್ಥಿಸಿ ಗುರುಗಳಿಗೆ ನಮಸ್ಕರಿಸಿ ಹೊರಟೆವು. ಯಕ್ಷಗಾನ ಆರಂಭವಾಯಿತು.
ಯಕ್ಷರಂಗಕ್ಕೆ ನನ್ನ ಮೊದಲ ಪಾದಾರ್ಪಣೆಯಾಯಿತು. ನನಗಂತೂ ಹೊಸ ಅನುಭವ. ಬಹಳಷ್ಟು ಖುಷಿಪಟ್ಟೆ. ನನಗೆ ಅವಕಾಶ ನೀಡಿದ ಉತ್ತಮ್ ಪಡ್ಪು ಸರ್ ಮತ್ತು ನಮ್ಮ ಮುಂಡೂರು ಶಾಲಾ ಶಿಕ್ಷಕರಾದ ವಿಜಯ ಮಿಸ್, ರಾಮಚಂದ್ರ ಸರ್, ರವೀಂದ್ರ ಶಾಸ್ತ್ರೀ ಸರ್, ಬಶೀರ್ ಸರ್, ವನಿತಾ ಮಿಸ್, ಶಶಿಕಲಾ ಮಿಸ್, ನಾಗವೇಣಿ ಮಿಸ್, ಅನ್ನಪೂರ್ಣ ಮಿಸ್, ರೂಪಾ ಮಿಸ್, ಶಕುಂತಲಾ ಮಿಸ್ ಗೆ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತಾ ನನ್ನ ಲೇಖನಕ್ಕೆ ಪೂರ್ಣ ವಿರಾಮ ನೀಡುತ್ತಿದ್ದೇನೆ.
....................................... ಅಭಿನವ್ ಪಿ ಎನ್ 
6ನೇ ತರಗತಿ 
ಸ ಉ ಹಿ ಪ್ರಾ ಶಾಲೆ ಮುಂಡೂರು. 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article