ಜಗಲಿ ಕಟ್ಟೆ : ಸಂಚಿಕೆ - 58
Sunday, July 21, 2024
Edit
ಜಗಲಿ ಕಟ್ಟೆ : ಸಂಚಿಕೆ - 58
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಕೆಲವು ವರುಷಗಳ ಹಿಂದೆ ಆತ ನನ್ನ ವಿದ್ಯಾರ್ಥಿಯಾಗಿದ್ದ. ಚಿತ್ರ ಹಾಗೂ ಬರವಣಿಗೆಯಲ್ಲಿ ತುಂಬಾ ಆಸಕ್ತಿ. ಆತನಿಗೆ ಅಪ್ಪನದೇ ಕೊಡುಗೆಯೇನೋ... ಅಪ್ಪ ಕೂಡ ಚೆನ್ನಾಗಿ ಬರೆಯುವವರಾಗಿದ್ದರು. ಶಾಲಾ ಹಸ್ತ ಪ್ರತಿ ಗೆ ಆತ ಲೇಖನ, ಕಥೆ, ಕವನಗಳನ್ನು ತುಂಬಾ ಚೆನ್ನಾಗಿ ಬರೆಯುತ್ತಿದ್ದ. ಆತನ ವಿಶೇಷ ಆಸಕ್ತಿ ಕಂಡು ಒಂದಷ್ಟು ಕಥೆಗಳನ್ನು ಜೊತೆಗೆ ಕವನಗಳನ್ನು ಬಿಡುವಿರುವಾಗ ಬರೆಯುತ್ತಿರು ಅಂದೆ. ಒಪ್ಪಿ ಆತ ಬರೆಯುವುದರಲ್ಲಿ ನಿರತವಾಗಿದ್ದ.
ಹೀಗೆ ಒಂದು ದಿನ ವಿದ್ಯಾರ್ಥಿಯ ಅಪ್ಪನಲ್ಲಿ "ತಮ್ಮ ಮಗ ಚೆನ್ನಾಗಿ ಬರೆಯುತ್ತಾನೆ, ಆತನ ಕಥಾ ಸಂಕಲನ ದ ಪುಸ್ತಕ ಮಾಡಿದರೆ ಹೇಗೆ...?" ಅಂದೆ. ಆಗ ಆತನ ಅಪ್ಪ ಆಡಿದ ಮಾತು ನಿಜವಾಗಿರಬಹುದೇನೋ ಅನಿಸಿತು... "ಈಗಷ್ಟೇ ಬರೆಯಲು ಆರಂಭಿಸಿದ್ದಾನೆ. ಬರವಣಿಗೆ ಪಕ್ವವಾಗಲಿ... ಪುಸ್ತಕ ಏನಾದರೂ ಬೇಗ ಪ್ರಕಟಣೆಯಾದರೆ.. ಇನ್ನೂ ಸಾಧಿಸುವ ತವಕಗಳಿಗೆ ಅಡ್ಡಿಯಾಗಬಹುದು... ಇನ್ನೂ ಉತ್ತಮವಾಗಿ ಬರೆಯಬೇಕೆನ್ನುವ ಉತ್ಸಾಹ ಕುಂದಬಹುದು. ತನ್ನ ಬರವಣಿಗೆಯ ಮಟ್ಟ ಇದುವೇ ಅಂತಿಮವೆಂದು ಭಾವಿಸಬಹುದು..." ಎಂದು ಸಂಶಯ ವ್ಯಕ್ತಪಡಿಸಿದರು.
ಕೆಲವೊಮ್ಮೆ ನಾವು ಹೀಗೂ ಯೋಚನೆ ಮಾಡಬಹುದು. ಮಕ್ಕಳು ಒಂದಷ್ಟು ಸಾಧನೆ ಮಾಡಿದಾಗ ಮತ್ತಷ್ಟು ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಮಾದರಿಯನ್ನಾಗಿ ತೋರಿಸಿದಾಗ ತನ್ನ ಮುಂದಿನ ಗುರಿಯನ್ನು ನಿಶ್ಚಯಿಸಬಹುದು. ತನ್ನ ಸಾಧನೆಗೆ ಯಾವತ್ತೂ ಗಡಿ ನಿರ್ಮಾಣ ಆಗಬಾರದು. ತಾನು ಸಾಧಿಸಿರುವ ಮೈಲುಗಲ್ಲು ಏನೇನು ಸಾಲದು, ಇನ್ನಷ್ಟು ಕ್ರಮಿಸುವ ದಾರಿಯನ್ನು ತೋರಿಸಬೇಕಾಗುತ್ತದೆ. ಕಲಿತದ್ದು ಸ್ವಲ್ಪ ಕಲಿಯಲು ಸಾಕಷ್ಟಿದೆ ಅನ್ನುವ ಭಾವನೆ ಮೂಡಬೇಕು. ಸಾಧನೆಯ ದಾರಿಯಲ್ಲಿ ಯಾರೂ ಅಲ್ಪತೃಪ್ತರಾಗಬಾರದು. ಹೀಗಾದಾಗ ಒಂದು ಪ್ರತಿಭಾವಂತ ಮಗು ಪ್ರಬುದ್ಧವಾಗಿ ಬೆಳೆಯಬಹುದು.
ಮಕ್ಕಳ ಜಗಲಿಯಲ್ಲಿ ವರ್ಷಕ್ಕೊಂದು ಬಾರಿ ಚಿತ್ರಕಲಾ ಸ್ಪರ್ಧೆ ಹಾಗೂ ಕಥೆ ಮತ್ತು ಕವನ ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಪ್ರಶಸ್ತಿಗಳನ್ನು ಪಡೆಯುವುದು ಒಂದು ಭಾಗವಾದರೆ ಇದರ ಉದ್ದೇಶ ಮಕ್ಕಳು ನಿರಂತರವಾಗಿ ಆ ವಿಷಯದಲ್ಲಿ ನಿರತರಾಗಬೇಕೆನ್ನುವುದಾಗಿತ್ತು. ಒಂದು ಬಾರಿ ಸ್ಪರ್ಧೆಯ ಕಾರಣಕ್ಕಾಗಿ ಭಾಗವಹಿಸಿ ಆ ವಿಭಾಗದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಬೆಳೆಯಬೇಕು. ಜಗಲಿಯಲ್ಲಿ ಬರೆಯುವ ಅದೆಷ್ಟೋ ವಿದ್ಯಾರ್ಥಿಗಳನ್ನು ಗಮನಿಸಿದ್ದೇವೆ. ವರ್ಷಪೂರ್ತಿ ಬಿಡುವಿರುವಾಗ ಕಥೆ, ಕವನ, ಲೇಖನ, ಚಿತ್ರಗಳನ್ನು ರಚಿಸಿ ಕಳುಹಿಸೋ ಅದೆಷ್ಟೋ ಮಕ್ಕಳಿದ್ದಾರೆ. ವರ್ಷಕ್ಕೊಂದು ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತೆ ದೂರವಾಗುವ ವಿದ್ಯಾರ್ಥಿಗಳನ್ನೂ ನೋಡಿದ್ದೇವೆ. ಮಕ್ಕಳಿಗೆ ಪ್ರಶಸ್ತಿಗಳ ಆಸೆಯನ್ನು ಹುಟ್ಟಿಸದೆ ತನ್ನ ಪ್ರತಿಭೆಯ ವಿಕಾಸಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 57 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಐರಿನ್ ಫರ್ನಾಂಡಿಸ್, ಸಹಶಿಕ್ಷಕಿ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಜಗಲಿಕಟ್ಟೆ ಸಂಚಿಕೆ -57.. ಇದರಲ್ಲಿ ತಾರಾನಾಥ ಕೈರಂಗಳರವರು ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ತೊಡಗಿಸುವಿಕೆ.. ಇವುಗಳ ನಡುವಿನ ವ್ಯತ್ಯಾಸವೇನು? ತೊಡಗಿಸುವಿಕೆ ಏಕೆ ಮುಖ್ಯ ಎಂದು ಉತ್ತಮವಾಗಿ ವಿವರಿಸಿದ್ದಾರೆ. ಶಿಕ್ಷಕರ ಸ್ಕೂಲ್ ಡೈರಿ -51 ರಲ್ಲಿ ಪ್ರೌಢಶಾಲಾ ಶಿಕ್ಷಕಿ ಐರಿನ್ ರವರ ಬರಹ ತಟ್ಟುವಂತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಯಾವ ರೀತಿ ನೆರವಾಗಬಹುದು ಎನ್ನುವುದನ್ನು ತಿಳಿಸುವ ಬರಹ ಉಪಯುಕ್ತವಾಗಿದೆ. ಮಧ್ಯದಲ್ಲಿ ಶಾಲೆ ಬಿಟ್ಟ ಮಗುವು ಐದು ವರ್ಷಗಳ ಅಂತರದ ನಂತರ ಎಂಟನೇ ತರಗತಿಯಿಂದ ಶಾಲೆಗೆ ಮತ್ತೆ ಹೋಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶಿಕ್ಷಕಿಯಾದ ಸಂಗತಿಯ ಉಲ್ಲೇಖ ಪ್ರೇರಣಾದಾಯಿಯಾಗಿದೆ. ಕರೋನ ಸಮಯದಲ್ಲಿ ಮಕ್ಕಳ ಚಿತ್ರಗಳ ಪ್ರಕಟಣೆಯಿಂದ ಆರಂಭವಾದ ಮಕ್ಕಳ ಜಗಲಿ ಇಂದು ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ವೈವಿಧ್ಯ ಅವಕಾಶಗಳನ್ನು ತೆರೆದಿಟ್ಟಿದೆ.
ಸಹಶಿಕ್ಷಕಿ
ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ.
ಹೊಸಪಟ್ಣ. ಬೆಳ್ತಂಗಡಿ ತಾಲೂಕು.
Mob: +91 94499 07371
*******************************************
ಪ್ರಿಯ ಓದುಗರೇ... ನಾವೆಲ್ಲರೂ ಕೇಳಿರುವಂತಹ ಅತೀ ವಿಭಿನ್ನವಾದದ್ದು ಈ ಮಕ್ಕಳ ಜಗಲಿ . ಏಕೆಂದರೆ ಇದು ಮಕ್ಕಳ ಜಗಲಿ ಕಟ್ಟೆ... ಇಲ್ಲಿ ಮಕ್ಕಳದ್ದೇ ಕಲರವ... ಈಗಿನ ಜೀವನ ಶೈಲಿಯಲ್ಲಿ ಮಕ್ಕಳ ಮನಸ್ಥಿತಿಯನ್ನು ಖುದ್ದು ಪೋಷಕರೇ ಅರಿಯುವುವದು ತುಂಬಾ ಕಷ್ಟವಾಗಿದೆ. ಆದರೆ ಈ ಮಕ್ಕಳ ಜಗಲಿ ಮಕ್ಕಳ ಮನಸ್ಥಿತಿ, ಅವರ ಮನಸ್ಸಿನ ಭಾವನೆಗಳು, ಅವರ ಕಲ್ಪನೆಗಳು, ಅವರ ಅಭಿರುಚಿಗಳು ಹೀಗೆ ಹಲವಾರು ಕೌಶಲ್ಯಗಳನ್ನು ಅರಿಯಲು ಇದೊಂದು ಉತ್ತಮ ವೇದಿಕೆಯಾಗಿದೆ... ಇಲ್ಲಿ ಮಕ್ಕಳು ಸಂಕೋಚ ಮತ್ತು ಭಯ ಇಲ್ಲದೆ ತಮ್ಮ ತಮ್ಮ ಕೌಶಲಗಳನ್ನು ಪ್ರಸ್ತುತ ಪಡಿಸಬಹುದಾಗಿದೆ... ಇಂತಹ ಒಂದು ಒಳ್ಳೆಯ ವೇದಿಕೆಗೆ ಅವಕಾಶ ಮಾಡಿಕೊಟ್ಟಿರುವ ತಾರಾನಾಥ ಕೈರಂಗಳ್ ಅವರಿಗೆ ನನ್ನ ವಂದನೆಗಳು... ಈ ಜಗಲಿಯ ಸದಸ್ಯಳು ನಾನು ಎಂದು ಹೇಳಲು ತುಂಬಾ ಸಂತಸ ವ್ಯಕ್ತಪಡಿಸುತ್ತೇನೆ..
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
*******************************************
ಪ್ರಿಯ ಓದುಗರೆ,
1. ತಾರಾನಾಥ್ ಕೈರಂಗಳ ಇವರ ಜಗಲಿ ಕಟ್ಟೆ ಎಂಬ ಅಂಕಣ ಹಲವರಿಗೆ ಬರೆಯಲು ಪ್ರೇರಣೆ ನೀಡಿದೆ. ಇವರ ಸಾಧನೆಯೇ ಈ ಮಕ್ಕಳ ಜಗಲಿ ಡಿಜಿಟಲ್ ಆನ್ಲೈನ್ ಪತ್ರಿಕೆಯಾಗಿದೆ. ಮಕ್ಕಳ ಜಗಲಿ ಸಾಹಿತ್ಯ ಮತ್ತು ಕಲಾ ಸೇವೆಯ ಪೋಷಕರಾದ ಶ್ರೀ ಅಬ್ದುಲ್ ಜಲೀಲ್, ಶ್ರೀ ಕೆ ಟಿ ಶಿವಪ್ರಕಾಶ್, ಶ್ರೀ ವಸಂತ ಬರ್ಮದೆ ಹಾಗೂ ಶ್ರೀ ಅಲ್ಫೀಸ್ ಡಿಸೋಜಾ ಇವರೆಲ್ಲರ ಕಲಾ ಸೇವೆಗೆ ಚಿರಋಣಿಯಾಗಿದ್ದೇವೆ.
ಮಕ್ಕಳ ಜಗಲಿ ಎಂಬ ಈ ಪತ್ರಿಕೆಯಿಂದ ಹಲವು ಮುಖಗಳ ಪರಿಚಯವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಬೆಳೆಯಲು ಪ್ರೋತ್ಸಾಹ ಸಿಕ್ಕಿದೆ. ಅಷ್ಟೇ ಅಲ್ಲ ಅನುಭವಿ ಶಿಕ್ಷಕ ವೃಂದದವರ ಹಲವು ಬರವಣಿಗೆಗಳು ನಮಗೆ ಹೊಸ ವಿಚಾರಗಳ ಬಗ್ಗೆ ತಿಳಿಸಲು ಅನುವು ಮಾಡಿಕೊಟ್ಟಿದೆ.
2. ಶ್ರೀಮತಿ ವಾಣಿ ಪೆರಿಯೋಡಿ ಅವರ ಪ್ರೀತಿಯ ಪುಸ್ತಕದ ಲೇಖಕನದ ಮೂಲಕ ಹೊಸ ಪುಸ್ತಕಗಳ ಪರಿಚಯ ಮಾಡಿಕೊಡುವುದಲ್ಲದೆ ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಪ್ರಯತ್ನಿಸುವಂತಾಗಿದೆ.
3. ಯುವ ಲೇಖನವಾದ ಮೊದಲ ಶಿಬಿರದ ಅನುಭವ ಎಂಬ ವಿನುತಾ ಲಸ್ರಾದೊರವರ ಬರಹ ಯುವ ಪೀಳಿಗೆಗೆ ಪ್ರೇರಣೆ ನೀಡುವಂತಾಗಿದೆ.
4. ವಿದ್ಯಾರ್ಥಿ ನಿನಾದ್ ಕೈರಂಗಳವರು ಬರೆದ ನಾ ನೋಡಿದ ಓರಿಗಾಮಿ ಮ್ಯೂಸಿಯಂ ಬಸ್ ಎಂಬ ಪ್ರವಾಸ ಕಥನ ವಿದ್ಯಾರ್ಥಿಗಳಿಗೆ ಬರೆಯಲು ಪ್ರೇರಣೆ ನೀಡುತ್ತದೆ.
5. ಶಿಕ್ಷಕರಮೇಶ್ ನಾಯ್ಕ್ ರವರು ಬರೆಯುವ ಪದದಂಗಳ ಸಂಚಿಕೆ - ಪದಗಳ ಜೋಡಿಸುವ ಆಟ ವಿದ್ಯಾರ್ಥಿಗಳ ಮೆದುಳಿಗೆ ಹೊಸ ವಿಚಾರವನ್ನು ಹುಡುಕುವಂತೆ ಕ್ರಿಯಾಶೀಲರನ್ನಾಗಿ ಮಾಡುತ್ತದೆ.
6. ಶಿಕ್ಷಕ ನಾಗೇಂದ್ರ ಅವರು ಬರೆದ ಸವಿ ಜೇನು ಸಂಚಿಕೆ. ನಮಗೆ ಜೇನು ಹುಳುಗಳ ಪರಿಶ್ರಮ ಹಾಗೂ ಜೇನು ಹುಳುಗಳಿಂದ ಆಗುವ ಮಾರಣಾಂತಿಕ ದಾಳಿಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ.
7 . ಶಿಕ್ಷಣಾಧಿಕಾರಿ ಹಾಗೂ ಲೇಖಕರು ಆದ ಎಂ ಪಿ ಜ್ಞಾನೇಶ್ ಸರ್ ಬರೆದ ಜೀವನ ಸಂಭ್ರಮ ಎಂಬ ಈ ಸಂಚಿಕೆ - ರಾಗ ಕ್ಲೇಶದ ಬಗ್ಗೆ ಸುಂದರವಾಗಿ ವಿಚಾರಗಳನ್ನು ತಿಳಿಸಿದೆ.
8 ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಆದ ಶ್ರೀ ರಮೇಶ ಎಂ ಬಾಯಾರು ರವರು ಬರೆದಿರುವ ಸ್ಪೂರ್ತಿಯ ಮಾತುಗಳು -ಎಂಬ ಸಂಚಿಕೆಯಲ್ಲಿನ ಹಲವು ಲೇಖನಗಳು ನಮಗೆ ಸ್ಪೂರ್ತಿಯನ್ನು ನೀಡುತ್ತಾ ಬಂದಿದೆ.
9. ಮಕ್ಕಳ ಚಿತ್ರಗಳು - ಎಂಬ ಸಂಚಿಕೆ ಹಲವು ಶಾಲೆಯ ವಿದ್ಯಾರ್ಥಿಗಳ ಚಿತ್ರಕಲೆಯ ಪ್ರತಿಭೆಯನ್ನು ಪರಿಚಯಿಸಿ ಅವರಿಗೆ ಪ್ರೇರಣೆಯನ್ನು ನೀಡುವಂತಾಗಿದೆ.
10. ನಿವೃತ್ತ ಪ್ರವಾಚಕರು ಹಾಗೂ ಲೇಖಕರು ಆದ ಶ್ರೀ ದಿವಾಕರ್ ಶೆಟ್ಟಿ ಇವರು ಮಕ್ಕಳಿಗಾಗಿ ವಿಜ್ಞಾನ -ಎಂಬ ಸಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ತುಂಬಾ ಆಸಕ್ತಿ ಮೂಡಿಸುವಂತೆ ವಿವರಿಸುವ ರೀತಿ ತುಂಬಾ ವಿಶೇಷವಾಗಿದೆ.
11. ಸಹ ಶಿಕ್ಷಕಿ ಲೇಖಕಿಯಾದ ಶ್ರೀಮತಿ ವಿಜಯ ಬಿ ಶೆಟ್ಟಿ ಸಾಲೆತ್ತೂರು ಇವರು ನಿಷ್ಪಾಪಿ ಸಸ್ಯಗಳು ಎಂಬ ಸಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ಸಸ್ಯಗಳ ಪರಿಚಯ ಮಾಡಿಸುವ ಲೇಖನಗಳು ಅತ್ಯುತ್ತಮವಾಗಿ ಮೂಡಿಬಂದಿವೆ.
12. ಹಲವು ಶಿಕ್ಷಕರನ್ನು ಬರೆಯಲು ಪ್ರೇರೇಪಿಸುವ ಶಿಕ್ಷಕರ ಸ್ಕೂಲ್ ಡೈರಿ ಅನುಭವಗಳು ಇತರ ಶಿಕ್ಷಕರಿಗೆ ಬರೆಯಲು ಪ್ರೇರಣೆ ನೀಡುವಂತಾಗಿದೆ.
13. ಮಕ್ಕಳ ಕವನಗಳು ಎಂಬ ಸಂಚಿಕೆ ಹಲವು ವಿದ್ಯಾರ್ಥಿಗಳಿಗೆ ಕವನ ಬರೆಯಲು ಆಸಕ್ತಿಯನ್ನು ಬೆಳೆಸುವ ಪ್ರೇರಣೆ ನೀಡುವಂತಾಗಿದೆ.
14 ಮಕ್ಕಳ ಲೇಖನ ಎಂಬ ಸಂಚಿಕೆ - ವಿದ್ಯಾರ್ಥಿಗಳಲ್ಲಿ ಬರವಣಿಗೆ ಹಾಗೂ ಸಮಾಜದ ಹಲವು ವಿಚಾರಗಳ ಬಗ್ಗೆ ಮಾತನಾಡುವ ಧೈರ್ಯವನ್ನು ತುಂಬಿಸುವಂತಹಾಗಿದೆ.
15. ವಿಶ್ವ ದಾಖಲೆ ಬರೆದ ಅನ್ವೇಶ್ ಅಂಬೆಕಲ್ಲು ಎಂಬ ವಿದ್ಯಾರ್ಥಿಯ ಪರಿಚಯ ಹಾಗೂ ಅವನ ಸಾಧನೆಯಿಂದ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಅಂತೂ ನಾನು ಹೇಳಲು ಬಯಸುವುದೇನೆಂದರೆ ಈ ಮಕ್ಕಳ ಜಗಲಿ ಎಂಬ ಡಿಜಿಟಲ್ ಆನ್ಲೈನ್ ಪತ್ರಿಕೆಯು ಹಲವರ ಸಾಧನೆಗೆ ದಾರಿಯಾಗಿದೆ ಎಂದು ನನ್ನ ಅನಿಸಿಕೆಯಾಗಿದೆ. ಈ ಪತ್ರಿಕೆಗೆ ಪ್ರೇರಣೆ ನೀಡಿ ಮುಂದೆ ಬೆಳೆಯಲು ಅವಕಾಶ ಮಾಡಿಕೊಡಿ ಎಂದು ಓದುಗರಲ್ಲಿ ನನ್ನ ವಿನಮ್ರ ವಿನಂತಿಯಾಗಿದೆ.
ಸಹಶಿಕ್ಷಕಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob: +91 80735 47398
*******************************************
ನಮಸ್ತೇ,
ಸತ್ಯ ಎಂದೆಂದಿಗೂ ಸತ್ಯವೇ. ಸತ್ಯ ಅಸತ್ಯಗಳ ಕುರಿತಾದ ಮನಮುಟ್ಟುವ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ರವರಿಂದ.
ಗುಣಮಟ್ಟದ ಶಿಕ್ಷಣ, ಮೌಲ್ಯಯುತವಾದ ಬದುಕನ್ನು ನೀಡುವ ಶಿಕ್ಷಣದಿಂದ ಮಾತ್ರ ಜೀವನ ಉನ್ನತಿ ಸಾಧ್ಯ ಎಂಬುದನ್ನು ರಮೇಶ್ ಸರ್ ರವರು ಬಹಳ ಸುಂದರವಾಗಿ ತಿಳಿಸಿದ್ದಾರೆ.
ರಕ್ತ ಪರಿಚಲನೆಯ ವಿಧಾನವನ್ನು ಹಾಗೂ ರಕ್ತ ಪರಿಚಲನೆಯ ವಿಧಗಳನ್ನು ದಿವಾಕರ್ ಸರ್ ರವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
ವಿಜಯಾ ಮೇಡಂ ರವರಿಂದ ಈ ಸಲದ ಸಂಚಿಕೆಯಲ್ಲಿ ಬಹಳ ಅಪರೂಪವಾಗಿರುವ ಕಾಡು ಸುವರ್ಣ ಗೆಡ್ಡೆಯ ಕುರಿತಾದ ವಿವರವಾದ ಮಾಹಿತಿ ಸಿಕ್ಕ ಹಾಗಾಯಿತು.
ಜೇನು ಹಾಗೂ ಜೇನುಹುಳಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಕುರಿತಾದ ವಿವರಣಾತ್ಮಕವಾದ ಸುಂದರ ಲೇಖನ ನಾಗೇಂದ್ರ ಸರ್ ರವರಿಂದ.
ವಾಣಿಯಕ್ಕನವರಿಂದ ಈ ವಾರ ಜಲಿಯನ್ ವಾಲಾಬಾಗ್ ದುರಂತದ ಇತಿಹಾಸದ ಸುಂದರ ಪುಸ್ತಕದ ಪರಿಚಯ ಚೆನ್ನಾಗಿತ್ತು.
ಕಲಿಕೆಯಲ್ಲಿ ಹಿಂದುಳಿದ ಮಗುವಿನ ಕುರಿತಾದ ಕಾಳಜಿ ಹಾಗೂ ಆ ಮಗು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಾಗ ಉಂಟಾದ ಸಂತಸದ ಅನುಭವವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ ಐರಿನ್ ಮೇಡಂರವರು.
ಮಕ್ಕಳ ಚಿತ್ರ ಸಂಚಿಕೆಗಳಲ್ಲಿ ಪ್ರಕಟಗೊಂಡ ಎಲ್ಲ ಚಿತ್ರಗಳು ಸೊಗಸಾಗಿ ಮೂಡಿಬಂದಿವೆ. ಚೈತನ್ಯರವರ ಕವನಗಳು ಚೆನ್ನಾಗಿವೆ. ಚಿತ್ರ ಬಿಡಿಸಿದ ಎಲ್ಲಾಮಕ್ಕಳಿಗೆ ಅಭಿನಂದನೆಗಳು ಹಾಗೂ ಕವನ ರಚಿಸಿದ ಚೈತನ್ಯರವರಿಗೆ ಕೂಡ ಅಭಿನಂದನೆಗಳು.
ಪದಗಳನ್ನು ಹುಡುಕಾಡುತ್ತ ಹೊಸಪದದ ಅನ್ವೇಷಣೆಗೆ ಕಾರಣವಾದ ರಮೇಶ್ ಸರ್ ರವರ ಪದದಂಗಳ ಸಂಚಿಕೆ ಸೊಗಸಾಗಿತ್ತು.
ಈ ವಾರದ ಜಗಲಿಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ನನ್ನ ಮನ ತುಂಬಿದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ಸ್ತೇಯ ಮತ್ತು ಅಸ್ತೇಯಗಳ ಕುರಿತಾದ ಉದಾಹರಣೆ ಸಹಿತ ಸೊಗಸಾದ ಲೇಖನ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ.
ದೇಹ ವಿಕಸನ ಸಹಜ, ಆದರೆ ಜ್ಞಾನ ವಿಕಸನವಾದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗಬಲ್ಲ ಎನ್ನುವ ಸಂದೇಶದೊಂದಿಗೆ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ. ತುಂಬಾ ಮುದ ನೀಡಿದ ಲೇಖನ. ಧನ್ಯವಾದಗಳು ಸರ್.
ಪೋರ್ಟಲ್ ಅಭಿಧಮನಿ ಮಾನವನ ಪಿತ್ತಜನಕಾಂಗದಲ್ಲಿ ಹೇಗೆ ಕೆಲಸ ಮಾಡುತ್ತದೆ ಹಾಗೂ ಇದರ ಮಹತ್ವದ ಕುರಿತಾಗಿ ಉಪಯುಕ್ತ ಲೇಖನ ದಿವಾಕರ್ ಸರ್ ರವರಿಂದ.
ಹಲವು ದಿನಗಳ ನಂತರ ಚಿತ್ರಾ ಶ್ರೀಯವರ ಪ್ರವಾಸ ಕಥನ. ಆಂಧ್ರದ ಸತ್ಯ ಸಾಯಿ ಪ್ರದೇಶದಲ್ಲಿರುವ ಲೇಪಾಕ್ಷಿಯ ಅದ್ಭುತ ವಿವರಣೆ ಚಿತ್ರಗಳೊಂದಿಗೆ ಖುಷಿ ನೀಡಿತು.
ವಿವಿಧ ಜಾತಿಯ ನಂದಿ ಬಟ್ಟಲು ಹೂವಿನ ಗಿಡಗಳ ಪರಿಚಯ ವಿಜಯಾ ಮೇಡಂ ರವರಿಂದ ಈ ವಾರದ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ನಾಗೇಂದ್ರ ಸರ್ ರವರ ಸವಿಜೇನು ಕೊನೆಯ ಸಂಚಿಕೆಯಲ್ಲಿ ಜೇನಿನ ಹಾಗೂ ಜೇನುಹುಳುಗಳ ಉಪಯುಕ್ತತೆಯ ಕುರಿತಾಗಿ ವಿವರಣಾತ್ಮಕವಾದ ಲೇಖನ. ತಮ್ಮ ಸವಿಸ್ತಾರವಾದ ಸರಣಿ ಸಂಚಿಕೆಗಳಿಂದ ಜೇನು ಹಾಗೂ ಜೇನುಹುಳುಗಳ ಕುರಿತಾದ ಅವಶ್ಯ ಮಾಹಿತಿ ಸಿಕ್ಕಂತಾಯಿತು. ಧನ್ಯವಾದಗಳು ಸರ್.
ಭತ್ತ ಬೆಳೆಯುವ ಗದ್ದೆಯಲ್ಲಿ ಕೆಸರಿನಲ್ಲಿ ಆಡಿ ನಲಿದ ಸುಂದರ ಅನುಭವವನ್ನು ಸರಳವಾಗಿ ಸೊಗಸಾಗಿ ಅಭಿನವ್ ರಾಜ್ ರವರು ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಅಭಿನವ್ ಗೆ.
ಮಕ್ಕಳ ಚಿತ್ರ ಸಂಚಿಕೆಗಳಲ್ಲಿ ಸೊಗಸಾದ ಚಿತ್ರಗಳು ಮೂಡಿ ಬಂದಿವೆ. ಚಿತ್ರ ರಚಿಸಿದ ಎಲ್ಲಾ ಪುಟಾಣಿಗಳಿಗೆ ಅಭಿನಂದನೆಗಳು. ಸಿಂಚನಾ ರವರ ಕವನಗಳು ಚೆನ್ನಾಗಿವೆ. ಅಭಿನಂದನೆಗಳು ಸಿಂಚನಾ.
'ಏಕೆಂದು ಏಕೆಂದು' ಕುತೂಹಲ ಮೂಡಿಸುವ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ. ಧನ್ಯವಾದಗಳು ವಾಣಿಯಕ್ಕ.
ಅರಳುವ ಪ್ರತಿಭೆ ಆಯುಷ್ ರವರ ಕುರಿತಾದ ಪರಿಚಯ ಸೊಗಸಾಗಿತ್ತು ಸರ್.. ಈ ಅದ್ಭುತ ಪ್ರತಿಭೆ ಇನ್ನಷ್ಟು ಬೆಳಗಲಿ ಎನ್ನುವ ಶುಭ ಹಾರೈಕೆ.
ರಮೇಶ್ ಉಪ್ಪುಂದರವರ ಈ ವಾರದ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ.
ಅಭಿನವ್ ಪಿ ಎನ್ ರವರು ತಾನು ಯಕ್ಷರಂಗಕ್ಕೆ ಪದಾರ್ಪಣೆಯ ಕುರಿತಾದ ಅನುಭವವನ್ನು ತುಂಬಾ ಸೊಗಸಾಗಿ ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಅನುಭವ್ ರವರಿಗೆ.
ಕೊನೆಯದಾಗಿ ಜಗಲಿಯ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಐರಿನ್ ಫರ್ನಾಂಡಿಸ್, ಸಹಶಿಕ್ಷಕಿ, ರಮ್ಯಾ ಆರ್ ಭಟ್ , ಸಹ ಶಿಕ್ಷಕಿ , ವಿದ್ಯಾ ಕಾರ್ಕಳ, ಸಹ ಶಿಕ್ಷಕಿ .... ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************