-->
ಮಕ್ಕಳ ಕವನಗಳು : ಸಂಚಿಕೆ - 18 : ಕವನ ರಚನೆ : ಪ್ರತೀಕ್ಷಾ ತಂಟೆಕ್ಕು, 9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 18 : ಕವನ ರಚನೆ : ಪ್ರತೀಕ್ಷಾ ತಂಟೆಕ್ಕು, 9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 18
ಕವನ ರಚನೆ : ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ 
ಯಲ್  ಸಿ  ಆರ್  ಇಂಡಿಯನ್
ಸ್ಕೂಲ್,  ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
     

            
ನನ್ನ ಬಾಳ ಬೆಳಕನ್ನು ಅರಳಿಸಿದ
ಕವಿತೆ ಲೋಕ
ಈ ಲೋಕದಲ್ಲಿ ದೊರೆಯಿತೆನಗೆ               
ಸ್ವರ್ಗ ಸುಖ.

ಮನದ ಭಾವನೆಯನ್ನು ಗೀಚಿದ          
ಘಳಿಗೆಗಳು
ಭಾವನೆಗಳನ್ನು ಸಾಲುಗಳ                 
ರೂಪದಲ್ಲಿ ಹೊರತಂದ ಕ್ಷಣಗಳು.

ಆ ಸಾಲುಗಳು ಹಕ್ಕಿಯಂತೆ ಹಾರಿ          
ನೀರಿನಂತೆ ಹರಿದು ಪುಸ್ತಕಕ್ಕೆ               
ಕವಿತೆಯ ರೂಪದಲ್ಲಿ ಸೇರಿದವು
ಎಲ್ಲರ ಮನಸುಗಳ ಗೆದ್ದವು.

ಕವಿತೆ ಒಂದು ನನಗೆ ತಿಳಿಯದ                 
 ಹಾದಿಯಾಗಿತ್ತು                                         
 ಆದರೆ ಆ ದೇವರ ಆಟ ಬೇರೆಯೇ        
 ಆಗಿತ್ತು.

ನನಗೆ ತಿಳಿಯದ ಹಾದಿಗೆ                    
ಕರೆದೊಯ್ಯಿತಿ ನನ್ನ ಜೀವನದ ಪಥ.
ಮುಂದೆ ಕವಿತೆಯಾಗಿತು 
ನನ್ನ ಬಾಳರಥ.

ಈ ಕವಿತೆಗೊಂದು ದಿನ                               
 ನನ್ನಂತವರಿಗಂತೂ ಇದು ಶುಭದಿನ 
ಎಲ್ಲರಿಗೂ ವಿಶ್ವ ಕವಿತೆ ದಿನದ              
 ಶುಭಾಶಯಗಳು.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ 
ಯಲ್  ಸಿ  ಆರ್  ಇಂಡಿಯನ್
ಸ್ಕೂಲ್,  ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************




ಬಿಸಿ ಬಿಸಿ ಬಿಸಿಲ ಆರ್ಭಟ
ಸಹಿಸಲು ಕಷ್ಟ ಈ ಕಾಟ
ಸೂರ್ಯನೇ  ಸಾಕೀಸಂಕಟ.

ಇಳೆಯು ಉರಿಯುತಿದೆ
ಬೇಸಿಗೆ ಬಿಸಿಲಿಗೆ
ಹೊರಗೆ ಕಾಲಿಡಲು ಅಸಾಧ್ಯ ಈ ಧಗೆಗೆ.

ವೃಕ್ಷ ಗಿಡಗಳ ಕಡಿದು
ಹೆಚ್ಚಾಗಿದೆ ಬಿಸಿಲು
ಭಾಸ್ಕರನೇ ಬಿಡು ನಮ್ಮ ಕಾಡಲು.

ಬೆವರಿಳಿಯಲು ಮಿತಿಯಿಲ್ಲ
ಇನ್ನೆನಿತು ನರಳಬೇಕೆಂದು                     
 ನೇಸರನೇ ಬಲ್ಲ.

ಮಳೆಯ ತಂಪಿಲ್ಲದೆ ಬಿಸಿಲು ಏರುತ್ತಿದೆ
ಹೊಳೆ, ಭಾವಿಗಳಲ್ಲಿ ನೀರು                                       ಆವಿಯಾಗುತಿದೆ.

ಹಪ್ಪಳದಂತ ತಿಂಡಿ ಮಾಡಲು
ಒಳ್ಳೆಯ ಸಮಯ
ಕೆಲವು ಕಡೆಯಂತೂ ಮಳೆ ಮಾಯ.

ಸೂರ್ಯ ದೇವನೇ ಜೀವರಾಶಿಗಳ
ಕಷ್ಟ ನೋಡು
ನೀರಿಲ್ಲದಂತಾಗಿದೆ ಜೀವಿಗಳ ಪಾಡು.

ಸೂರ್ಯನೇ ಬಿಸಿಲು ಹೋಗಿ               
 ಮಳೆಯ ತಂಪು ಬರಲಿ
ಹೋದ ಉಲ್ಲಾಸ ಮರಳಿ ತರಲಿ.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ 
ಯಲ್  ಸಿ  ಆರ್  ಇಂಡಿಯನ್
ಸ್ಕೂಲ್,  ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



ಎಲ್ಲರ ಕಣ್ಣುಗಳ ಸೆಳೆಯುವುದು
ನನ್ನ ಕೆಲಸ
ನನ್ನ ಮುಂದೆ ನಕಲಿ ಒಡವೆಗಳು
ಆಗುವುದು ಕಸ.

ಒಂದು ಆಕೃತಿಯಲ್ಲಷ್ಟೇ ಅಲ್ಲದೆ
ನಾನಾ ರೀತಿಯಲ್ಲಿ ಇರುವೆ
ಒಬ್ಬರ ಕೈಯಲ್ಲಿ ಬಳೆಗಳಾಗಿ
ಇನ್ನೊಬ್ಬರ ಕತ್ತಿನಲ್ಲಿ ಸರಗಳಾಗಿ.

ಕೆಲವರ ಕೈಯಲ್ಲಿ ಉಂಗುರವಷ್ಟೇ
ಅಲ್ಲದೆ ಬ್ರಾಸ್ಸ್ ಲೈಟ್ ಆಗಿ ಇರುವೆ
ಭೂಮಿಯ ಆಳದಲ್ಲಿ ದೊರೆಯುವೆ
ಫಳ ಫಳವೆಂದು ಮಿನುಗುವೆ.

ನನ್ನ ಬೆಲೆ ಏರಿಕೆಯಾದರೆ
ಜನರಿಗೆ ಬಲು ಬೇಸರ
ಜನರಿಗೆ ನನ್ನ ಖರೀದಿಸಲು ಆತುರ
ಅದು ನನ್ನ ಚಮತ್ಕಾರ.

ಹಳದಿ ಬಣ್ಣದಲ್ಲಿ ಹೊಳೆಯುವೆ
ಸುಂದರವಾಗಿ ಕಾಣುವೆ
ಸೆಳೆಯುವೆ ಎಲ್ಲರ ಕಣ್ಣಾ
ನನ್ನ ಹೆಸರೇ ಚಿನ್ನ.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ 
ಯಲ್  ಸಿ  ಆರ್  ಇಂಡಿಯನ್
ಸ್ಕೂಲ್,  ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
 
              

ಸ್ನೇಹಗಳ ಮಧ್ಯೆ ಇರಬೇಕಾದ್ದು
ಸಂಬಂಧಗಳ ನಡುವೆ 
ನೆಲೆಸಬೇಕಾದ್ದು
ಎಲ್ಲ ಬಂಧಗಳ ನಡುವೆ ಇರಲಿ ಈ ಶಕ್ತಿ
ಇದೆ ಸಂಬಂಧಗಳ ಉಳಿಸಲಿರುವ ಯುಕ್ತಿ
ಇದೊಂದು ಮಹಾನ್ ಶಕ್ತಿ.

ಇದೊಂದಿದ್ದರೆ ಸಾಕು ಸ್ನೇಹಿತರ ಸ್ನೇಹಕ್ಕೆ
ರಕ್ತದಿಂದ ಬೆಸೆದ ಬಂಧಕ್ಕೆ.
ಇಲ್ಲಿ ಜಾಗವಿಲ್ಲ ದ್ವೇಷ ಅನುಮಾನಕ್ಕೆ
ಇದೊಂದಿದ್ದರೆ ಬಂಧ ಮುರಿಯಲು ಕಿವಿ ಚುಚ್ಚುವರಾರುಂಟು?
ಇದೊಂದಿದ್ದರೆ ಗಟ್ಟಿಯಾಗಿರುವುದು 
ಎಲ್ಲಾ ನಂಟು.

ಗೆಳತನ ಹಾಗು ಸಂಬಂಧಗಳ      
ಆಧಾರ ಸ್ತಂಭವಿದು.
ಇಲ್ಲಿ ಜಾಗವಿಲ್ಲ ಅವಿಶ್ವಾಸಕ್ಕೆ
ಇಲ್ಲಿ ಸ್ಥಾನ ಬರೀ ಪ್ರೀತಿ ಸ್ನೇಹಕ್ಕೆ
ಇದು ಬಹಳ ಅಗತ್ಯ ಎಲ್ಲಾ ಬಂಧಕ್ಕೆ
ಇದರ ನಾಮವೇ ನಂಬಿಕೆ.
....................................... ಪ್ರತೀಕ್ಷಾ ತಂಟೆಕ್ಕು
9ನೇ ತರಗತಿ 
ಯಲ್  ಸಿ  ಆರ್  ಇಂಡಿಯನ್
ಸ್ಕೂಲ್,  ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



Ads on article

Advertise in articles 1

advertising articles 2

Advertise under the article