-->
ಚಿತ್ರಕಥೆ : ಸಂಚಿಕೆ - 14 : ರಚನೆ : ನಿನಾದ್ ಕೈರಂಗಳ, 7ನೇ ಪಾಣಿನಿ

ಚಿತ್ರಕಥೆ : ಸಂಚಿಕೆ - 14 : ರಚನೆ : ನಿನಾದ್ ಕೈರಂಗಳ, 7ನೇ ಪಾಣಿನಿ

ಚಿತ್ರಕಥೆ : ಸಂಚಿಕೆ - 14
ರಚನೆ : ನಿನಾದ್ ಕೈರಂಗಳ
7ನೇ ಪಾಣಿನಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                


ಒಂದಾನೊಂದು ಕಾಲದಲ್ಲಿ ಒಂದು ಸುಂದರವಾದ ಕಾಡು. ಅದರಲ್ಲಿ ಒಂದಷ್ಟು ಗಿಡಮರಗಳು, ಪ್ರಾಣಿ, ಪಕ್ಷಿಗಳು ಕೀಟಗಳು ಇದ್ದವು. ಇವುಗಳಿಗೆಲ್ಲ ಕಾಡೇ ಮನೆಯಾಗಿತ್ತು. ಎಲ್ಲಾ ಪ್ರಾಣಿಗಳು ಸೌಹಾರ್ದತೆಯಿಂದ ಬಾಳುತ್ತಿದ್ದವು. ಕಾಡಿನಲ್ಲಿರುವ ಜೀವಿಗಳಲ್ಲಿ ಒಂದು ಜೀವಿಗೆ ಏನಾದರೂ ತೊಂದರೆಯಾದರೆ ಪರಸ್ಪರ ಸಹಾಯ ಮಾಡುವ ಗುಣ ಇತ್ತು. ಹೀಗೆ ಎಲ್ಲರೂ ಸಂತೋಷದಿಂದ ಬಾಳುತ್ತಿದ್ದರು.

ಕಾಡಿನಿಂದ ಒಂದು ದೂರದ ಪ್ರದೇಶದಲ್ಲಿ ಮೂರು ಮಂದಿ ಗೆಳೆಯರಿದ್ದರು. ಆ ಮೂರು ಗೆಳೆಯರು ಕೂಡ ಒಂದು ಯೋಜನೆಯನ್ನು ಮಾಡಿಕೊಂಡು "ಇವತ್ತು ಶನಿವಾರ ನಾಳೆ ಆದಿತ್ಯವಾರ ನಾಳೆಯ ದಿನದಂದು ನಾವು ಕಾಡಿಗೆ ಹೊರಡುವ. ಅಲ್ಲಿ ನಾವು ಎರಡು ದಿನಗಳ ಕಾಲ ಉಳಿಯುವ. ಅಲ್ಲಿ ಸಿಕ್ಕಾಪಟ್ಟೆ ಮಜಾ ಮಾಡೋಣ." ಎಂದು ಮಾತಾಡಿಕೊಂಡರು. ಎರಡು ಗೆಳೆಯರಲ್ಲಿ ಒಬ್ಬ ಹೇಳಿದ "ನಾವು ಮಜಾ ಮಾಡೋದು ಸರಿ ಆದರೆ ಮಜಾ ಮಾಡಲು ಮೂರು ಜನ ಸಾಕಾ" ಎಂದು ಹೇಳಿದ. ಹಾಗೆ ಇನ್ನೊಬ್ಬ "ಹೌದು ನಮಗೆ ರಾತ್ರಿಯ ವೇಳೆ ಊಟ ಇಲ್ಲದೆ ನರಳಾಡುವ ಪರಿಸ್ಥಿತಿ ಬರಬಾರದು" ಎಂದ. ಆಗ ಮೂರನೇಯವನು, "ನಾವು ಹೊರಡುವಾಗ ಚರ್ಚೆ ಮುಗಿಯುವುದೇ ಇಲ್ಲ ನಿಮ್ಮಿಬ್ಬರ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ನೀವು ಮುಂದೆ ಹೋಗುವುದೂ ಇಲ್ಲ. ಮೊದಲನೆಯವನ ಪ್ರಶ್ನೆಗೆ ಮೊದಲು ಉತ್ತರಿಸುತ್ತೇನೆ. ನಂತರ ಎರಡನೇಯವನ ಪ್ರಶ್ನೆಗೆ ಉತ್ತರಿಸುತ್ತೇನೆ... ಕೇಳಿ ನಾವು ಊರಿನಿಂದ ಹೋಗುವಾಗ ನಮ್ಮ ಕೆಲವು ಸಂಬಂಧಿಕರನ್ನು ಕರೆದುಕೊಂಡು ಒಟ್ಟಿಗೆ ಹೋಗೋಣ ಆಯ್ತಾ... ನಿನಗೆ ಸಮಾಧಾನವಾಯಿತ" ಎಂದ. ಈಗ ಎರಡನೆಯವನ ಪ್ರಶ್ನೆಗೆ ಉತ್ತರ... "ನಮಗೆ ಊಟ ಮುಖ್ಯ. ಹಾಗಾಗಿ ನಾವು ಊಟವನ್ನು ಕಾಡಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡಿ ಆಹಾರವನ್ನು ತಯಾರಿಸುವ" ಎಂದು ಹೇಳಿ ಮನುಷ್ಯರ ಕ್ರೂರ ವರ್ತನೆಯನ್ನು ತೋರಿಸಿದ.
ಇದನ್ನೆಲ್ಲವನ್ನು ಮರದ ಮೇಲೆ ಕುಳಿತಿದ್ದ ಎರಡು ಪಾರಿವಾಳಗಳು ಕೇಳಿಸಿಕೊಂಡವು. ಅವುಗಳು ಕಾಡಿಗೆ ಹಾರಿ ಹೋಗಿ ಕಾಡಿನಲ್ಲಿರುವ ಪಕ್ಷಿರಾಜನಾದ ಗಿಡುಗನ ಬಳಿ ಮನುಷ್ಯರು ಮಾತಾಡಿದ ಎಲ್ಲಾ ವಿಷಯವನ್ನು ಹೇಳಿತು. ಇದನ್ನು ಕೇಳಿ ಗಿಡುಗ ರಾಜ ಕಾಡಿನಲ್ಲಿರುವ ಎಲ್ಲಾ ಜೀವಿಗಳಿಗೆ ಬಹಳ ಎಚ್ಚರಿಕೆಯಿಂದ ಇರಲು ತಿಳಿಸಿತು. ಅಂತೂ ಇಂತೂ ಆದಿತ್ಯವಾರ ಬಂದೇ ಬಿಟ್ಟಿತು. ಕಾಡಿನಲ್ಲಿರುವ ಎಲ್ಲರಿಗೂ ಭಯ. ಕ್ರೂರ ಮನಸ್ಸಿನ ಮನುಷ್ಯರು ಕಾಡಿಗೆ ಬಂದು ಏನು ಮಾಡಬಹುದು... ನಮಗೆ ತೊಂದರೆ ಕೊಡಬಹುದೇ... ನಮ್ಮನೆಲ್ಲ ಸಾಯಿಸಬಹುದೇ... ಎಂದು ಎಲ್ಲಾ ಜೀವಿಗಳು ಪರಸ್ಪರ ಮಾತನಾಡುತ್ತಾ ಗಾಬರಿಗೊಂಡವು. ಆಗ ಒಂದು ಸಣ್ಣ ಅಳಿಲು ಮತ್ತು ಆನೆ ಕೂತುಕೊಂಡು ನಾವು ಹೇಗೆ ಆದರೂ ಮಾಡಿ ಕಾಡಿನಿಂದ ಆ ಮನುಷ್ಯರನ್ನು ಓಡಿಸಬೇಕು ಎಂದು ಯೋಚನೆ ಮಾಡಿದರು... ಆಗ ಅಳಿಲಿಗೆ ಒಂದು ಉಪಾಯ ಹೊಳೆಯಿತು. ಆ ಮನುಷ್ಯರು ಬಂದು ಎಷ್ಟು ಬೇಕಾದರೂ ಕಾಡನ್ನು ನೋಡಲಿ ಆಟ ಆಡಲಿ ಸಂತೋಷದಿಂದಿರಲಿ ಆದರೆ ನಮಗೆ ಏನಾದರೂ ತೊಂದರೆ ಮಾಡಿದರೆ ಅವರನ್ನು ಹೆದರಿಸಿ ಓಡಿಸುವ. ಆದರೆ ನಾವು ಯಾವ ತೊಂದರೆಯನ್ನು ಅವರಿಗೆ ಮಾಡುವುದು ಬೇಡ. ಅವರು ಈ ಕಾಡನ್ನು ನಾಶ ಮಾಡಿದರೆ ಪ್ರಕೃತಿಯೇ ಅವರ ಮೇಲೆ ಕೋಪಗೊಳ್ಳುತ್ತದೆ. ಮಳೆ ಬಾರದೆ ಬರಗಾಲ ಬರುತ್ತದೆ. ಶುದ್ಧ ಗಾಳಿ ಇಲ್ಲದೆ ಉಸಿರಾಡಲು ತೊಂದರೆಯಾಗುತ್ತದೆ. ಕಾಡನ್ನು ನಾಶ ಮಾಡಿ ನಾಡನ್ನು ಇನ್ನಷ್ಟು ಹೆಚ್ಚು ಹೆಚ್ಚು ಕಟ್ಟಿದರೆ ಈ ಭೂಮಿಯು ಕೂಡ ಉಳಿದ ಗ್ರಹಗಳಂತೆ ಆಗುವುದರಲ್ಲಿ ಸಂಶಯವಿಲ್ಲ. ಹಾಗೂ ಈಗಿನಿಂದಲೇ ಕಾಡುಗಳನ್ನು ಕಡಿಯದೆ ಹಸಿರನ್ನು ಬೆಳೆಸಿ ಗಿಡಗಳಿಗೆ ಉಪಕಾರ ಮಾಡಿದರೆ ಅದು ನಮಗೆ ಉಸಿರನ್ನು ನೀಡಿ ಉಪಕಾರ ಮಾಡುತ್ತದೆ. ಈ ರೀತಿ ಅಳಿಲು ಮತ್ತು ಆನೆ ಮಾತಾಡಿಕೊಳ್ಳುತ್ತಿರುವುದನ್ನು ಕೇಳಿದ ಆ ಮೂರು ಗೆಳೆಯರು... ಈ ಪ್ರಾಣಿಗಳು ಹೇಳಿದ ಹಾಗೆ ಕಾಡನ್ನು ನಾಶಮಾಡಿ ಪ್ರಾಣಿಗಳಿಗೆ ತೊಂದರೆ ಮಾಡಿದರೆ ಮುಂದೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದುಕೊಂಡರು. ಹಾಗೂ ಭವಿಷ್ಯದ ಬಗ್ಗೆ ಭಯಗೊಂಡರು. ಅವತ್ತಿನಿಂದಲೇ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರ ಜೊತೆಗೆ ನಾಡಿನ ಉಳಿದ ಜನರಿಗೂ ತಿಳಿಸಿ ಜಾಗೃತಿಯನ್ನು ಬೆಳೆಸಿದರು.