ಪ್ರೀತಿಯ ಪುಸ್ತಕ : ಸಂಚಿಕೆ - 121
Friday, July 26, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 121
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಇದೊಂದು ವಿಶೇಷ ಪುಸ್ತಕ. ಮಕ್ಕಳಿಗೆ ಏನು ಕನಸುಗಳು ಇರುತ್ತವೆ? ಯಾವ ರೀತಿಯ ಸ್ವಾತಂತ್ರ್ಯ ಅವರಿಗೆ ಇಷ್ಟ? ದೊಡ್ಡವರ ಮನಸ್ಸಿನಲ್ಲಿ ಈ ಯೋಚನೆಗಳು ಬರುತ್ತವೆ. ನಿಮ್ಮನ್ನೇ ಈ ಪ್ರಶ್ನೆ ಕೇಳಿದರೆ ನೀವು ಏನು ಉತ್ತರ ಕೊಡುತ್ತೀರಿ? ಈ ಪುಸ್ತಕದಲ್ಲಿ ದೇಶದ ವಿವಿಧ ಭಾಗಗಳ ಹದಿನಾರು ಮಕ್ಕಳು ಈ ಪ್ರಶ್ನೆಗೆ ಕೊಟ್ಟ ಉತ್ತರಗಳು ಇವೆ. ತಮಿಳು ನಾಡು, ರಾಜಸ್ಥಾನ, ಹರಿಯಾಣ, ಬಿಹಾರ, ಜಮ್ಮು ಕಾಶ್ಮೀರದ ಮಕ್ಕಳು ತಮ್ಮ ಪುಟ್ಟ ಪುಟ್ಟ ಹಾರೈಕೆಗಳನ್ನು ಇಲ್ಲಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅನೇಕ ಚಿತ್ರಕಾರರು ಕೆಲಸ ಮಾಡಿದ್ದಾರೆ. ದೊಡ್ಡ ಅಳತೆಯ ಪುಸ್ತಕ, ಪುಟದಲ್ಲಿ ಕೆಲವೇ ವಾಕ್ಯಗಳು. ಕಣ್ಣು ತುಂಬುವಷ್ಟು ಚಿತ್ರಗಳು. ನೋಡುತ್ತಾ ಕಾಲ ಕಳೆಯಬಹುದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದ್ದಾರೆ. ಓದಿದರೆ ನಿಮಗೂ ನಿಮ್ಮ ಹಾರೈಕೆಗಳು ನೆನಪಾಗಬಹುದು. ನೀವೂ ಒಂದಷ್ಟು ಮಕ್ಕಳು ಸೇರಿ ಇಂತಹ ಒಂದು ಪುಸ್ತಕ ತಯಾರಿಸಬಹುದು.
ಲೇಖಕರು: ಎಸ್ತರ್ ಡುಫ್ಲೋ ಮತ್ತು ರುಕ್ಮಿಣಿ ಬ್ಯಾನರ್ಜಿ
ಚಿತ್ರಗಳು: ಪ್ರಿಯಾ ಕುರಿಯನ್
ಅನುವಾದ: ಹೇಮಾ ಕುರ್ಸಾಪುರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.70/-
4-5ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಆಸಕ್ತಿ ಹುಟ್ಟಿಸುವ ಹಾಗೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************