ಅಂತರ್ಜಾಲ ಚಟ ಮಾರಕವೇ..? - ಬರಹ : ಪ್ರತೀಕ್ಷಾ, 10ನೇ ತರಗತಿ
Friday, July 26, 2024
Edit
ಮಕ್ಕಳ ಲೇಖನ : ಅಂತರ್ಜಾಲ ಚಟ ಮಾರಕವೇ..?
ಬರಹ : ಪ್ರತೀಕ್ಷಾ
10ನೇ ತರಗತಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ, ದಕ್ಷಿಣ ಕನ್ನಡ ಜಿಲ್ಲೆ
ಇಂದು ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೇ ಜಗತ್ತು ನಿಶ್ಚಲ ಎನ್ನುವಷ್ಟು ನಾವು ಅವಲಂಬಿತ ರಾಗಿದ್ದೇವೆ. ಅಂತರ್ಜಾಲ ನಮ್ಮ ಅನೇಕ ಸಮಸ್ಯೆಗಳನ್ನು ಸರಳಗೊಳಿಸಿದೆ. ನೂರು ವರ್ಷಗಳ ಹಿಂದೆ ಅಂತಹುದನ್ನು ಸೃಷ್ಟಿಸುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ. ಇದರಿಂದಾಗಿ ಪ್ರಪಂಚದ ಎಲ್ಲಾ ಮಾಹಿತಿಯು ಒಂದೇ ಸ್ಥಳದಲ್ಲಿ ಸುಲಭವಾಗಿ ಲಭ್ಯವಾಗುತ್ತಿದೆ. ಮತ್ತು ಪ್ರಪಂಚದ ಬಹುತೇಕ ಎಲ್ಲಾ ದೇಶಗಳು ಸಂಪರ್ಕಗೊಳ್ಳುತ್ತಿವೆ. ಇಂದು ಅಂತರ್ಜಾಲ ಎನ್ನುವುದು ನಮಗೆಲ್ಲಾ ತವರು ಮನೆಯಾಗಿದೆ. ಏಕೆಂದರೆ ಸ್ವತಃ ನಮ್ಮ ಮನೆಯ ಬಗ್ಗೆ ನಮಗೆ ತಿಳುವಳಿಕೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣ ಮತ್ತು ಪ್ರತಿದಿನ ಬಳಕೆ ಮಾಡುವ ಆನ್ಲೈನ್ ವೆಬ್ಸೈಟ್ ಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುತ್ತದೆ.
ಅಂತರ್ಜಾಲ ಪ್ರತಿಯೊಬ್ಬರಿಗೂ ಒಂದು ಪ್ರಮುಖ ಆಸ್ತಿಯಾಗಿದೆ ಮತ್ತು ಅದೇ ಸಮಯದಲ್ಲಿ ಅಂತರ್ಜಾಲದ ಮಿತಿಮೀರಿದ ಬಳಕೆಯು ಹಾನಿಕಾರಕವಾಗಬಹುದು. ಏಕೆಂದರೆ ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧದ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ ಶಿಕ್ಷಣವು ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿದೆ ಮತ್ತು ಇಂಟರ್ನೆಟ್ ಬಳಕೆಯಿಂದ ಅದು ತುಂಬಾ ಸುಲಭವಾಯಿತು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಡೀ ಎರಡು ವರ್ಷಗಳ ಕಾಲ ವಿಧ್ಯಾರ್ಥಿಗಳ ಶಿಕ್ಷಣದ ಮುಂದುವರಿಕೆಯಲ್ಲಿ ಅಂತರ್ಜಾಲವು ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಹೇಳಲು ಸಂತೋಷ ಪಡುತ್ತೇನೆ. ಈ ನಿಟ್ಟಿನಲ್ಲಿ ಇಂದು ಕಂಪ್ಯೂಟರ್ ತಂತ್ರಜ್ಞಾನ ಅವಶ್ಯಕವಾಗಿದೆ. ಕಂಪ್ಯೂಟರ್ ಇಂದು ಎಲ್ಲೆಂದರಲ್ಲಿ ತನ್ನ ಪ್ರಭಾವವನ್ನು ಬೀರಿದ್ದು ಇಂದು ಬಹಳ ಅತ್ಯವಶ್ಯಕ ಮಾದ್ಯಮವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಪರಿಣಾಮಕಾರಿಯಾದ ಶಿಕ್ಷಣ ಪಡೆಯುವಲ್ಲಿ ಕಂಪ್ಯೂಟರ್ ಹಲವಾರು ಅನುಕೂಲತೆಯನ್ನು ಕಲ್ಪಿಸಿದೆ. ಹಾಗೆಯೇ ಈ ಕಂಪ್ಯೂಟರ್ ನಿಂದ ಹಲವಾರು ಅನನುಕೂಲತೆಗಳೂ ಇವೆ.
● ಪುಸ್ತಕಗಳನ್ನು ಓದುವ ಹವ್ಯಾಸ ತಪ್ಪುವ ಸಾಧ್ಯತೆ ಹೆಚ್ಚು.
●ಸತತವಾಗಿ ಕಂಪ್ಯೂಟರ್ ಅನ್ನು ಬಳಸುವುದರಿಂದ ಕಣ್ಣುಗಳು ಹಾನಿಗೊಳಗಾಗಬಹುದು.
●ಇದು ಸೋಮಾರಿಗಳನ್ನು ಸೃಷ್ಟಿಸುವ ಮಾಯಪೆಟ್ಟಿಗೆಯಾಗಿದೆ. ಇಂಟರ್ನೆಟ್ ಇಂದಿನ ದಿನಗಳಲ್ಲಿ ಶತಕೋಟಿ ಬಳಕೆಗಳನ್ನು ಹೊಂದಿದೆ. ಕೇವಲ ಒಂದು ಕ್ಲಿಕ್ ನಿಂದ ಈ ಜಗತ್ತಿನ ಯಾವುದೇ ಮಾಹಿತಿಯನ್ನು ಪ್ರವೇಶಿಸಬಹುದಾಗಿದೆ ಮತ್ತು ಮಾನವ ಜೀವನವನ್ನು ಸರಳಗೊಳಿಸಿದೆ.
ಹೌದು. ಇತ್ತೀಚಿನ ಯುವಕ, ಯುವತಿಯರು ಅಂತರ್ಜಾಲದಲ್ಲೇ ವಿಹರಿಸುವುದರಿಂದ ಅವರ ಸಮಯವೆಲ್ಲಾ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿವೆ. ಗೆಳೆಯರು, ಸಹೋದ್ಯೋಗಿಗಳು ಸೇರಿದಂತೆ ಹೆತ್ತವರಿಂದಲೂ ದೂರವಾಗಿದ್ದಾರೆ ಎಂದರೆ ಇಂಟರ್ನೆಟ್ ಬಳಕೆ ಸಾಮಾನ್ಯ ಸಮಸ್ಯೆಯಾಗಿ ಉಳಿದಿಲ್ಲ ಎನ್ನಬಹುದು. ಕೇವಲ ಐದೇ ಐದು ನಿಮಿಷ
ಇಂಟರ್ನೆಟ್ ಸಂಪರ್ಕ ತಪ್ಪಿ ಹೋದರೆ ಆಗುವ ಚಡಪಡಿಕೆಯ ಮೂಲಕ ಎಲ್ಲವೂ ಅರ್ಥವಾಗುತ್ತದೆ ಅಂತರ್ಜಾಲ ಎನ್ನುವುದು ಚಟ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಏಕೆಂದರೆ ಇಂದು ಸಮಯ ಕಳೆಯಲು ಇಂಟರ್ನೆಟ್ ಎಂಬುದು ಮುಖ್ಯ ಅಂಶವಾಗಿದೆ. ಯುವಕರು ತಮ್ಮ ಅಮೂಲ್ಯ ಸಮಯವನ್ನು ಇಂಟರ್ನೆಟ್ ನಲ್ಲಿ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು, ಚಾಟಿಂಗ್ ಆಪ್ ಗಳ ವೀಕ್ಷಣೆಗೆಂದು ಹೆಚ್ಚು ಜನರು ತಮ್ಮ ಸಮಯವನ್ನು ವ್ಯಯಿಸುತ್ತಿದ್ದಾರೆ. ಈ ಇಂಟರ್ನೆಟ್ ನಿಂದಾಗಿ ಹೆಚ್ಚಿನವರು ತಮ್ಮ ದೈನಂದಿನ ಕೆಲಸಕ್ಕೆ ಸಮಯ ಹೊಂದಿಸಲು ತಡವರಿಸುತ್ತಿದ್ದಾರೆ.
ಹಿಂದಿನ ಮಕ್ಕಳು ವಿವಿಧ ರೀತಿಯ ಕ್ರೀಡೆಯಲ್ಲಿ ತೊಡಗಿ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಇದರಿಂದ ಅವರಲ್ಲಿ ಮಾನಸಿಕ ಬೆಳವಣಿಗೆ ಹೆಚ್ಚುತ್ತಿತ್ತು. A SOUND MIND IN A SOUND BODY ಅಂದರೆ ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸನ್ನು ನಿರ್ಮಿಸುವುದೇ ಕ್ರೀಡೆಯಾಗಿದೆ. ಆದರೆ ಇಂದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗದೇ ಮೊಬೈಲ್, ಕಂಪ್ಯೂಟರ್ ನಂತಹ ಪಿಡುಗುಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯು ಕುಂಠಿತವಾಗುತ್ತಿವೆ. ಅಂತರ್ಜಾಲದಿಂದಾಗಿ ವಿದ್ಯಾರ್ಥಿಗಳು ನೇರ ಸಂವಹನವನ್ನು ಮಾಡುವುದಿಲ್ಲ ಬದಲಾಗಿ ಅವರು ತಮ್ಮ ಮಾತುಕತೆಗಾಗಿ ಫೇಸ್ ಬುಕ್ ಅನ್ನು ಹೆಚ್ಚು ಅವಲಂಬಿಸಿದ್ದಾರೆ. ಇಂಟರ್ನೆಟ್ ಹಾಜರಾತಿಯಿಂದ ಕೆಲವರು ತಮ್ಮ ನಿದ್ರೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತರ್ಜಾಲ ದಿಂದಾಗಿ ಮಾನವರಿಗೆ ತೊಂದರೆ ಆಗುವುದಲ್ಲದೆ, ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮವನ್ನು ಬೀರುತ್ತಿವೆ. ಆದ್ದರಿಂದ ನಾವು ನಮ್ಮ ಉಳಿಯುವಿಕೆಗಾಗಿ ಅಂತರ್ಜಾಲದ ಬಳಕೆಯನ್ನು ಆದಷ್ಟು ಕಡಿಮೆಗೊಳಿಸೋಣ. ಧನ್ಯವಾದಗಳು.
10ನೇ ತರಗತಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ, ದಕ್ಷಿಣ ಕನ್ನಡ ಜಿಲ್ಲೆ
*******************************************
ಮಾರ್ಗದರ್ಶಕ ಶಿಕ್ಷಕರು : ಐರಿನ್ ಫರ್ನಾಂಡಿಸ್, ಲಿಟ್ಲ್ ಫ್ಲವರ್ ಪ್ರೌಢ ಶಾಲೆ ಕಿನ್ನಿಗೋಳಿ.