-->
ಪ್ರೀತಿಯ ಪುಸ್ತಕ : ಸಂಚಿಕೆ - 120

ಪ್ರೀತಿಯ ಪುಸ್ತಕ : ಸಂಚಿಕೆ - 120

ಪ್ರೀತಿಯ ಪುಸ್ತಕ
ಸಂಚಿಕೆ - 120
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                     
               
                               ಏಕೆಂದು ಏಕೆಂದು
ಪ್ರೀತಿಯ ಮಕ್ಕಳೇ..... ಏಕೆ? ಹೇಗೆ? ಏನು? ಎಂಬ ಪ್ರಶ್ನೆಗಳು ಎಲ್ಲರಿಗೂ ಹುಟ್ಟುತ್ತವೆ. ಅದರಲ್ಲೂ ಮಕ್ಕಳಾದ ನಿಮಗೆ ಹುಟ್ಟುವ ಪ್ರಶ್ನೆಗಳಿಗೆ ಕೊನೆಮೊದಲಿಲ್ಲ. ಅಂತಹ ಅನೇಕ ಪ್ರಶ್ನೆಗಳಿಗೆ ಉತ್ತರ 20 ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಇದೆ. ವೈಜ್ಞಾನಿಕವಾದ ವಿವರಣೆಗಳು ಇವೆ. ಮಂಜಗಡ್ಡೆಯಿಂದ ಮನೆ ಕಟ್ಟ ಬಹುದೇ? ನೀವೇಕೆ ಹಾರಲು ಆಗುವುದಿಲ್ಲ? ಗೊರಕೆ ಯಾಕೆ? ಮಿಂಚುಹುಳ ಮಿನುಗುವುದು ಏಕೆ? ಸಮುದ್ರದ ಮೇಲೆ ನಡೆಯಬಹುದೇ? – ಇಂತಹ 25 ಪ್ರಶ್ನೆಗಳನ್ನು ಎತ್ತಿಕೊಂಡಿದ್ದಾರೆ. ಓದಿ ನೋಡಿ. ಈ ಪ್ರಶ್ನೆಗಳನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಂಡು ಆನಂದಿಸಿ. ಪ್ರಶ್ನೆಗಳು ಮುಗಿಯುವುದಿಲ್ಲ. ಇದು ಗೊತ್ತಾದ ಮೇಲೆ ಮತ್ತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. 
ಲೇಖಕರು: ಜಿ. ವಿನುತಾ, ಪಿ.ಕೆ.ಅಬ್ದುಲ್ ಲತೀಫ್
ಪ್ರಕಾಶಕರು: ಭಾರತೀಯ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ
ಬೆಲೆ: ರೂ.50/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಉಪಯೋಗ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
****************************************** 


Ads on article

Advertise in articles 1

advertising articles 2

Advertise under the article