ಪರಿಸರ ದಿನಾಚರಣೆ - ಕವನ ರಚನೆ : ಕೌಶೀಲ, ದ್ವಿತೀಯ ಪಿಯುಸಿ
Tuesday, June 4, 2024
Edit
ಮಕ್ಕಳ ಕವನಗಳು : ಸಂಚಿಕೆ - 14
ಪರಿಸರ ದಿನಾಚರಣೆ - ಜೂನ್ 5 ವಿಶೇಷ
ಕವನ ರಚನೆ : ಕೌಶೀಲ
ದ್ವಿತೀಯ ಪಿಯುಸಿ
ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ
ಕಾಲೇಜು, ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪರಿಸರ ದಿನಾಚರಣೆ - ಜೂನ್ 5
ಪರಿಸರ ಪರಿಸರ
ಎಷ್ಟೊಂದು ಚಂದದ ಪರಿಸರ
ಹಚ್ಚ ಹಸಿರಿನ ಪರಿಸರವನ್ನು
ಬನ್ನಿ ಗೆಳೆಯರೇ
ನಾವು ಉಳಿಸೋಣ..
ಕಾಡನ್ನು ಬೆಳೆಸಿರಿ
ನಾಡನ್ನು ಉಳಿಸಿರಿ
ಹಸಿರ ಸೊಬಗನು ಸಂರಕ್ಷಿಸಿರಿ
ಸ್ವಚ್ಛ ಉಸಿರನ್ನು ಆಸ್ವಾದಿಸಿರಿ....
ಸ್ವಚ್ಛ ಗಾಳಿ ಸ್ವಚ್ಛ ನೀರು
ಸ್ವಚ್ಛತೆಯ ಮಹತ್ವ ತಿಳಿಯೋಣ
ನಮ್ಮ ಭೂಮಿಗೆ ಒಂದು ಉಡುಗೊರೆ
ಗಿಡವ ನೆಟ್ಟು
ಜೀವನ ಸಾರ್ಥಕಗೊಳಿಸೋಣ....
ಬನ್ನಿ ಭಾರತ ಮಾತೆಯ ಮಕ್ಕಳೇ
ಸುಂದರ ಬದುಕನು ಬದುಕೋಣ
ನಮ್ಮ ಪರಿಸರವನ್ನು ಉಳಿಸೋಣ
ನಮ್ಮ ಪರಿಸರವನ್ನು ಬೆಳೆಸೋಣ.....