-->
ನಾ ನೋಡಿದ ಓರಿಗಾಮಿ ಮ್ಯೂಸಿಯಂ ಬಸ್ಸ್ - ಬರಹ : ನಿನಾದ್ ಕೈರಂಗಳ್

ನಾ ನೋಡಿದ ಓರಿಗಾಮಿ ಮ್ಯೂಸಿಯಂ ಬಸ್ಸ್ - ಬರಹ : ನಿನಾದ್ ಕೈರಂಗಳ್

ಮಕ್ಕಳ ಲೇಖನ
ಪ್ರವಾಸ ಕಥನ : ಓರಿಗಾಮಿ ಮ್ಯೂಸಿಯಂ ಬಸ್ಸ್
ಬರಹ : ನಿನಾದ್ ಕೈರಂಗಳ್
7ನೇ ಪಾಣಿನಿ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ



ದಿನಾಂಕ 14/06/24ರಂದು ನಮ್ಮ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮಗೆ ಓರಿಗಾಮಿ ಮ್ಯೂಸಿಯಂ ಬಸ್ ಬಿ.ಸಿ ರೋಡ್ ಗೆ ಬರುವ ಬಗ್ಗೆ ತಿಳಿಸಿದರು. ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಕರೆದರು. ಆಗ ನಾನು ಕೂಡ ಹೋದೆ. ಆ ಬಸ್ಸು ಹೇಗಿರಬಹುದು...?ಎಂಬ ಕುತೂಹಲ ಇತ್ತು. ಗೆಳೆಯರೆಲ್ಲಾ ಅವತ್ತು ಬಹಳ ಸಂಭ್ರಮದಿಂದ ಇದ್ದೆವು . ಮರುದಿನ ಬೆಳಿಗ್ಗೆ 10 -ಗಂಟೆಗೆ ಸರಿಯಾಗಿ ನಾವು ಶಾಲೆಯಿಂದ ಬಸ್ಸ್ ಮೂಲಕ ಪ್ರಯಾಣಿಸಿದೆವು. ನಮ್ಮ ಜೊತೆಗೆ ಸುಧೀಂದ್ರ ಶ್ರೀಮಾನ್, ನನ್ನ ವಿಜ್ಞಾನ ಮಾತಾಜಿಯಾದ ಜ್ಯೋತಿ ಶ್ರೀ ಮಾತಾಜಿ, ಪ್ರಿಯ ಮಾತಾಜಿ ಹಾಗೂ 50ವಿದ್ಯಾರ್ಥಿಗಳು ಜೊತೆಗೆ ಇದ್ದರು.
     ಬಿ.ಸಿ ರೋಡ್ ನಲ್ಲಿ ನಾವು ಕುತೂಹಲದಿಂದ ಕಾಯುತ್ತಿದ್ದ ಆ ಓರಿಗಾಮಿ ಬಸ್ಸ್ ನಿಂತಿತ್ತು. ಬಸ್ಸ್ ನಿಂತ ಜಾಗಕ್ಕೆ ಹೋದೆವು. ಅಲ್ಲಿ ರಷ್ ಇದ್ದ ಕಾರಣ ನಮ್ಮನ್ನು ಮೊದಲು ಒಂದು ಸಭಾಂಗಣಕ್ಕೆ ಓರಿಗಾಮಿ ಚಟುವಟಿಕೆ ಮಾಡಲು ಕರೆದುಕೊಂಡು ಹೋದರು. ಅಲ್ಲಿ ನಮಗೆ ಒಂದು ಮೊಲ ಮಾಡಲು ಕಾಶ್ಯಪಿ ಅಕ್ಕ ಹೇಳಿ ಕೊಟ್ಟರು. ನಂತರ ಬಸ್ಸಿನೊಳಗೆ ಹೋದೆವು. ಬಸ್ಸನ್ನು ನೋಡಿ ಆಶ್ಚರ್ಯವಾಯಿತು. ಅಲ್ಲಿ ವಿವಿಧ ರೀತಿಯ ಓರಿಗಾಮಿಗಳಿದ್ದು ನೋಡಿ ಬಹಳ ಖುಷಿಯಾಯಿತು.  
     ಅಲ್ಲಿ ಪಂಚತಂತ್ರದ ಕಥೆಗಳದ್ದು ಓರಿಗಾಮಿ, ಸಿಂಹ ಮತ್ತು ಹುಡುಗ ನದ್ದು, ಡ್ರ್ಯಾಗನ್ ಮತ್ತು ಅನೇಕ ಹಕ್ಕಿಗಳು ಮರದ ಮೇಲೆ ಕೂತದ್ದು ಮತ್ತು ಅನೇಕ ಥರದ ಪೇಪರ್ ಕ್ರ್ಯಾಫ್ಟ್ ಗಳನ್ನು ಹೇಗೆ ಮಾಡೋದು? ಎಂದು ಬರೆದಿತ್ತು. 
     ನನಗೆ ಅಲ್ಲಿ ಓರಿಗಾಮಿಯ ಬಗ್ಗೆ ಮಾಹಿತಿ ಇರುವ ಪುಸ್ತಕ ಕೂಡ ಸಿಕ್ಕಿದೆ. ನನಗೆ ಬಹಳ ಖುಷಿಯಾಯಿತು. ಅಲ್ಲಿ ನನಗೆ ನಾನು ನೋಡಿದ ಓರಿಗಾಮಿ ಬಸ್ಸಿನ ಬಗ್ಗೆ ಅರವಿಂದ್ ಕುಡ್ಲ ರವರು ಮಾತನಾಡಲು ಅವಕಾಶ ಮಾಡಿಕೊಟ್ಟರು. ಇಂಥ ವ್ಯವಸ್ಥೆಯನ್ನು ಸಂಘಟಿಸಿದ ಮೌನೇಶ ಸರ್ ಅವರನ್ನು ದೂರದಲ್ಲಿ ನೋಡಿಕೊಂಡು... ನಂತರ ನಾವೆಲ್ಲರು ಶಾಲಾ ಬಸ್ಸಿನಲ್ಲಿ ಶಾಲೆಗೆ ಹಿಂದಿರುಗಿದೆವು. ಧನ್ಯವಾದಗಳೊಂದಿಗೆ....
...................................... ನಿನಾದ್ ಕೈರಂಗಳ್
7ನೇ ಪಾಣಿನಿ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************






Ads on article

Advertise in articles 1

advertising articles 2

Advertise under the article