-->
ಜಗಲಿ ಕಟ್ಟೆ : ಸಂಚಿಕೆ - 55

ಜಗಲಿ ಕಟ್ಟೆ : ಸಂಚಿಕೆ - 55

ಜಗಲಿ ಕಟ್ಟೆ : ಸಂಚಿಕೆ - 55
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


 
   ಆ ಹುಡುಗ ವಿಶೇಷ ಪ್ರತಿಭಾನ್ವಿತ. ಚಿತ್ರ, ಬರಹ, ಸಂಗೀತ, ಯಕ್ಷಗಾನ, ಚಂಡೆ ವಾದನ ಹೀಗೆ ಎಲ್ಲವೂ ಆತನಿಗೆ ಇಷ್ಟವಾದ ವಿಷಯ. 2021 ರಲ್ಲಿ 7ನೇ ತರಗತಿಯಲ್ಲಿದ್ದಾಗ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳಲಾರಂಭಿಸಿದರು. ತನ್ನ ನಿರಂತರ ಪ್ರಯತ್ನ, ಶ್ರದ್ಧೆ, ಪಾಲ್ಗೊಳ್ಳುವಿಕೆಯ ಮೂಲಕ ಬೆಳೆಯುತ್ತಿರುವ ಈ ಬಾಲಕನೇ ಬೆಳ್ತಂಗಡಿಯ ಸಾತ್ವಿಕ್ ಗಣೇಶ್. ಬಜಿರೆ ಶಾಲೆಯಲ್ಲಿ ಪ್ರಾಥಮಿಕ ಶಾಲೆಯನ್ನು ಪೂರೈಸಿ ವೇಣೂರು ಪ್ರೌಢಶಾಲೆಯಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ.
      ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಅನೇಕ ವಿಶೇಷ ಪ್ರತಿಭಾನ್ವಿತ ಮಕ್ಕಳಲ್ಲಿ ಸಾತ್ವಿಕ್ ಕೂಡ ಒಬ್ಬರು. ಏಳನೇ ತರಗತಿಯಲ್ಲಿದ್ದಾಗ ಮಕ್ಕಳ ಜಗಲಿಗೆ ಚಿತ್ರಗಳನ್ನು ರಚಿಸಿ ಕೊಡಲಾರಂಭಿಸಿದರು. ಪೆನ್ಸಿಲ್ ಶೇಡಿಂಗ್ ಹಾಗೂ ಸಾಧಾರಣ ಮಟ್ಟಿಗೆ ವಾಟರ್ ಕಲರ್ ಬಳಸಿ ರಚಿಸುತ್ತಿದ್ದ ಇವರ ಕಲಾಕೃತಿಗಳು ಬೆಳವಣಿಗೆಯ ಹಂತವನ್ನು ಸೂಚಿಸುತ್ತಿತ್ತು. ಪ್ರತಿ ಬಾರಿ ಚಿತ್ರಗಳನ್ನು ರಚಿಸಿ ಕಳುಹಿಸಿ ಪ್ರಕಟಣೆಗಾಗಿ ಕಾಯುತ್ತಿದ್ದ ಕ್ಷಣಗಳನ್ನು ಗಮನಿಸುವಾಗ ಏನೋ ಕುತೂಹಲ ಬೆಳೆಯಬೇಕೆನ್ನುವ ಹಠ ಇವರಲ್ಲಿತ್ತು.
      ಹೆಚ್ಚಾಗಿ ದೇವರ ಚಿತ್ರಗಳು, ವ್ಯಕ್ತಿ ಚಿತ್ರಗಳು, ರಾಷ್ಟ್ರ ನಾಯಕರ ಚಿತ್ರಗಳು, ಪ್ರಾಕೃತಿಕ ವೈವಿಧ್ಯತೆಯ ಚಿತ್ರಗಳನ್ನು ರಚಿಸುತ್ತಿದ್ದುದು ಕಂಡು ಬರುತ್ತಿತ್ತು. ಹೀಗೆ ಬೆಳೆಯುತ್ತಾ ಬಂದ ಸಾತ್ವಿಕ್ ಗಣೇಶ ನ ಕೈಚಳಕ ಈಗ ಪ್ರಬುದ್ಧವಾಗಿದೆ. ಅತ್ಯಂತ ನೈಜವಾಗಿ ರಚಿಸುವ ಮಟ್ಟಿಗೆ ಬೆಳೆದು ಬಂದಿದ್ದಾರೆಂದರೆ, ಅವರ ನಿರಂತರ ಪರಿಶ್ರಮ ಕಾರಣವಾಗಿದೆ. ಜಲ ವರ್ಣದಲ್ಲಿಯೂ ಕೂಡ ವಿಶೇಷ ಪಕ್ವತೆಯನ್ನು ಪಡೆದುಕೊಂಡು ಗುಣಮಟ್ಟದ ಕಲಾಕೃತಿಗಳು ರಚನೆಯಾಗುತ್ತಿದೆ. 
         ಶಾಲೆಯಲ್ಲಿ ಹಾಗೂ ಮನೆಯಲ್ಲಿ ಒದಗುವ ಬಿಡುವಿನ ವಿರಾಮವನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಉತ್ತಮ ಕೌಶಲ್ಯ ಸಾತ್ವಿಕ್ ಗೆ ಇದೆ. ಏಳನೇ ತರಗತಿಯಿಂದ ಪ್ರಸ್ತುತ ಹತ್ತನೇ ತರಗತಿಯವರೆಗೆ ನಿರಂತರವಾಗಿ ಮಕ್ಕಳ ಜಗಲಿಯನ್ನು ತನ್ನ ವೈಯಕ್ತಿಕ ಬೆಳವಣಿಗೆಗಾಗಿ ಬಳಸಿಕೊಂಡ ಅನೇಕ ಮಕ್ಕಳಲ್ಲಿ ಇವರ ಪಾಲು ಕೂಡ ಇದೆ.
       ಮಕ್ಕಳ ಜಗಲಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ಚಟುವಟಿಕೆಗಳನ್ನು ನೀಡುತ್ತಿರುತ್ತೇವೆ. ಹೀಗೆ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಕೂಡ ಪಾಲ್ಗೊಳ್ಳುತ್ತಾ ತನ್ನ ಬೆಳವಣಿಗೆಯನ್ನು ಕಾಣುತ್ತಿದ್ದ ಸಾತ್ವಿಕ್ ನ ವಿಶೇಷ ಗುಣ ಮೆಚ್ಚಲೇ ಬೇಕಾದುದು. ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿದ್ದ ಅಕ್ಕನ ಪತ್ರಕ್ಕೆ ಉತ್ತರ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಅಕ್ಕನ ಪತ್ರಕ್ಕೆ ಉತ್ತರ ಬರೆಯುವ ಮೂಲಕ ಬರೆಯುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆನ್ನುವುದು ಮಕ್ಕಳ ಜಗಲಿಯ ಕನಸಾಗಿತ್ತು. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದ ಮಕ್ಕಳಲ್ಲಿ ಸಾತ್ವಿಕ್ ಕೂಡ ಒಬ್ಬರು. ಹೀಗೆ ಬರೆಯುವ ಕೌಶಲ್ಯಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಅನೇಕ ಮಕ್ಕಳು ಬರೆಯುವ ಧೈರ್ಯವನ್ನು ಹೊಂದಿದ್ದಾರೆನ್ನುವುದು ಹೆಮ್ಮೆ ಎನಿಸುತ್ತದೆ. 
      ತದನಂತರದಲ್ಲಿ ಸಣ್ಣ ಸಣ್ಣ ಕವನಗಳನ್ನು ಬರೆಯುತ್ತಾ ಪ್ರಕಟವಾದಾಗ ಇನ್ನಷ್ಟು ಹೊಸ ಕವನಗಳನ್ನು ಬರೆಯಲು ಪ್ರೇರಣೆ ಪಡೆದುಕೊಂಡು ಬರೆಯುತ್ತಿದ್ದುದು ಇವರ ಬರೆಯುವ ಕೌಶಲ್ಯಕ್ಕೆ ಉದಾಹರಣೆಯಾಗಿದೆ. ಇದೇ ರೀತಿ ಕಥೆ, ಲೇಖನಗಳನ್ನು ಬರೆಯುತ್ತಾ ಮಕ್ಕಳ ಜಗಲಿಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಪ್ರತಿಭಾನ್ವಿತ ಇವರು. ಮಕ್ಕಳ ಜಗಲಿ ಏರ್ಪಡಿಸುವ ವರ್ಷದ ಚಿತ್ರಕಲಾ ಸ್ಪರ್ಧೆ ಹಾಗೂ ಕಥೆ ಕವನ ಸ್ಪರ್ಧೆಯಲ್ಲಿ ನಿರಂತರವಾಗಿ ಭಾಗವಹಿಸುವುದು ಇವರ ಆದ್ಯತೆಯಾಗಿತ್ತು. ಕಳೆದ ಬಾರಿ ಆಯೋಜಿಸಲಾದ ಎರಡನೇ ವರ್ಷದ ಕಥಾ ಸ್ಪರ್ಧೆಯಲ್ಲಿ 'ಕಥಾಸಿರಿ 2023' ಪ್ರಶಸ್ತಿ ಇವರ ಮುಡಿಗೇರಿರುವುದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳ ನಿರೀಕ್ಷೆಗಳಿಲ್ಲದೆ ತನ್ನ ಪ್ರತಿಭೆಯ ಸಾಕ್ಷಾತ್ಕಾರಕ್ಕೆ ಹವಣಿಸುತ್ತಿರುವ ಈ ಪ್ರತಿಭೆ ಮುಂದೊಂದು ದಿನ ಅನರ್ಘ್ಯವಾಗಲಿದೆ. 
      ಮಕ್ಕಳ ಜಗಲಿಯ ಮೂಲಕ ಬೆಳೆದು ಬಂದ ಅನೇಕ ವಿದ್ಯಾರ್ಥಿಗಳ ಸಾಲಲ್ಲಿ ಸಾತ್ವಿಕ್ ಕೂಡ ಮಿನುಗುವ ನಕ್ಷತ್ರವಾಗಿ ಹೊರಹೊಮ್ಮಿದ್ದಾರೆ ಎನ್ನುವುದು ಸಂತಸದ ಸಂಗತಿ. ಇವರಿಗೆ ನಿತ್ಯ ಪ್ರೋತ್ಸಾಹ ಕೊಡುತ್ತಿರುವ ತಂದೆ ತಾಯಿ ಹಾಗೂ ಶಾಲೆಯ ಶಿಕ್ಷಕರು ಅಭಿನಂದನೆಗೆ ಅರ್ಹರು. ಶುಭವಾಗಲಿ ಸಾತ್ವಿಕ್ ಗಣೇಶ್...
    

ಕಳೆದ ಸಂಚಿಕೆಯ ಜಗಲಿಕಟ್ಟೆ - 54 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರಗಳು,
    ಪತಂಜಲಿ ಮಹರ್ಷಿಯ ಅಭಿನೀವೇಶದ ಕುರಿತಾದ ವಿವರಣಾತ್ಮಕವಾದ ಸೊಗಸಾದ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್.
     ವಿಸ್ತರಣೆ ಸಹಜ. ಮನುಷ್ಯನಲ್ಲಿ ವಿಸ್ತರಣೆಯ ಸಾಧಕ ಭಾದಕಗಳ ಕುರಿತಾಗಿ ರಮೇಶ್ ಸರ್ ರವರು ಬಹಳ ಚೆನ್ನಾಗಿ ವಿವರಿಸಿದ್ದಾರೆ.
     ಏಕ ಕೋಶೀಯ ಜೀವಿ ಅಮೀಬಾದಲ್ಲಿ ನಡೆಯುವ ಜೀರ್ಣ ಕ್ರಿಯೆಯ ವಿಧಾನವನ್ನು ಸರಳವಾಗಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ದಿವಾಕರ ಸರ್ ರವರು ಸೊಗಸಾಗಿ ವಿವರಿಸಿದ್ದಾರೆ.
     ಸರ್ಪಗಂಧಿ ಅತ್ಯಮೂಲ್ಯವಾದ ಗಿಡ. ಪ್ರಸ್ತುತ ಸಂಚಿಕೆಯಲ್ಲಿ ವಿಜಯಾ ಮೇಡಂ ರವರು ಈ ಗಿಡದ ಕುರಿತಾದ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.
     ಈ ವಾರ ವಾಣಿಯಕ್ಕನವರಿಂದ ಹಕ್ಕಿಗಳು ಸಿನಿಮಾ ನಟಿಸುವ ಕುರಿತಾದ ಹಕ್ಕಿ ಮಂಜರಿ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿ ಮೂಡಿಬಂದಿದೆ.
     ರಜೆಯಲ್ಲಿ ಮಕ್ಕಳ ಶಿಬಿರಗಳು ಮಕ್ಕಳಿಗೆ ಹೇಗೆ "ಉಪಯುಕ್ತ ಎನ್ನುವುದನ್ನು ವಿನುತಾ ಲಸ್ರದೊರವರು ತಮ್ಮ ಮೊದಲ ಶಿಬಿರದ ಅನುಭವದಲ್ಲಿ ಚೆನ್ನಾಗಿ ಹಂಚಿಕೊಂಡಿದ್ದಾರೆ.
     ಮಕ್ಕಳ ಕವನಗಳಲ್ಲಿ ಮಾನಸರವರ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಪ್ರವಾಸ ಕಥನದಲ್ಲಿ ಒರಿಗಾಮಿ ಬಸ್ಸಿನಲ್ಲಿ ನೋಡಿದ ಒರಿಗಾಮಿ ಕಲೆಯ ಕುರಿತಾದ ಸರಳ ಸುಂದರ ಲೇಖನ ಪುಟಾಣಿ ನಿನಾದ್ ರವರಿಂದ. ಮಾನಸ ಹಾಗೂ ನಿನಾದನಿಗೆ ಅಭಿನಂದನೆಗಳು.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
     ಸವಿ ಜೇನು ಸಂಚಿಕೆಯಲ್ಲಿ ನಾಗೇಂದ್ರ ಸರ್ ರವರು ಜೇನು ಹುಳುಗಳ ವಿವಿಧ ಪ್ರಕಾರಗಳ ಆಧಾರದ ಮೇಲೆ ಜೇನಿನ ವಿಧಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.
      ಈ ವಾರದ ಜಗಲಿಯಲ್ಲಿ ಸುಂದರ ಬರಹಗಳ ಮೂಲಕ ಮನರಂಜಿಸಿದ ಎಲ್ಲರಿಗೂ ಹೃತ್ಪೂರ್ವಕ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
      ಸುಖ ನೀಡುವ ವಸ್ತುವಿನ ಮೇಲೆ ಒಲವು ಮೂಡಿದಾಗ ಉಂಟಾಗುವ ಅನುಭವ ರಾಗ. ರಾಗ ಇತಿ ಮಿತಿಯಲ್ಲಿದ್ದಾಗ ಮಾತ್ರ ಮನಸ್ಸಿಗೆ ಸುಖ. ಇಲ್ಲವಾದಲ್ಲಿ ಕ್ಲೇಶ. ರಾಗ ಕ್ಲೇಶದ ಕುರಿತಾದ ಸುಂದರ ಲೇಖನ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಂದ.
      ಪ್ರತಿಯೊಂದು ವಿಷಯದಲ್ಲಿ ಕಾಳಜಿಯನ್ನು ವಹಿಸಿದಾಗ ಸುಂದರ ಬದುಕು ನಮ್ಮದಾಗುತ್ತದೆ. ರಮೇಶ್ ಸರ್ ರವರ ಕಾಳಜಿ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ಸರ್.
     ಸಿಲಂಟರೇಟಾ ವಂಶದ ಪ್ರಾಣಿಗಳಿಂದ ತೊಡಗಿ ಮನುಷ್ಯ ನಲ್ಲಿನವರೇಗೆ ಪ್ರಾಣಿಗಳ ಜೀರ್ಣ ಕ್ರಿಯಾ ವಿಧಾನವನ್ನು ದಿವಾಕರ ಸರ್ ರವರು ಸರಳವಾಗಿ ತಮ್ಮ ವೈಜ್ಞಾನಿಕ ಲೇಖನದಲ್ಲಿ ತಿಳಿಸಿದ್ದಾರೆ.
     ವಿಜಯಾ ಮೇಡಂ ರವರ ನಿಷ್ಟಾಪಿ ಸಸ್ಯಗಳ ಪ್ರಸ್ತುತ ಸಂಚಿಕೆಯಲ್ಲಿ ಶತಾವರಿ ಗಿಡದ ಕುರಿತಾದ ಅನೇಕ ವಿಚಾರಗಳು ಲಭ್ಯವಾದವು. ಧನ್ಯವಾದಗಳು ಮೇಡಂ.
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಈ ವಾರ ಲೇಖಕರಾದ ತಮ್ಮಣ್ಣ ಬೀಗಾರ ರವರ ಬಾಲ್ಯದ ನೆನಪುಗಳ ಹಸಿರೂರಿನ ಹುಡುಗ ಎನ್ನುವ ಪುಸ್ತಕದ ಪರಿಚಯ ತುಂಬಾ ಚೆನ್ನಾಗಿತ್ತು.
     ಹಲವು ದಿನಗಳ ಬಳಿಕ ತೇಜಸ್ವಿ ಅಕ್ಕನವರ ಲೇಖನ ಶಿಕ್ಷಕರ ಡೈರಿಯಲ್ಲಿ ಈ ವಾರ ಪ್ರಕಟವಾಯಿತು. ಬದಲಾಗಬೇಕಾದದ್ದು ನಮ್ಮ ಮನಸ್ಥಿತಿ ಎಂಬುದನ್ನು ಬಹಳ ಅದ್ಭುತವಾಗಿ ಸಾಧಿಸಿ ತೋರಿಸುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದೀರಿ. ಧನ್ಯವಾದಗಳು ಮೇಡಂ.
     ಲಿಖಿತ್ ರಾಜ್, ವಿಸ್ಮಯ್ ಹಾಗೂ ಅನ್ವಿಟರವರ ಚಿತ್ರ ಸಂಚಿಕೆಗಳಲ್ಲಿ ಎಲ್ಲಾ ಚಿತ್ರಗಳು ಸುಂದರವಾಗಿ ಮೂಡಿ ಬಂದಿವೆ.
ಹನಿ ಐತಾಳ್ ರವರ ಕವನಗಳು ಉತ್ತಮವಾಗಿದೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
     ಪದಗಳ ಜೋಡಣೆ ಮತ್ತು ಹುಡುಕುವಿಕೆಗೆ ಕಾರಣವಾದ ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬಂದಿದೆ.
    ನಾಗೇಂದ್ರ ಸರ್ ರವರ ಸವಿಜೇನು ಸಂಚಿಕೆಯಲ್ಲಿ ಯಾವ ವಿಧದ ಹೂವುಳಲ್ಲಿ ಜೇನು ಪ್ರಮಾಣ ಎಷ್ಟಿರುತ್ತದೆ ಹಾಗೂ ವಿವಿಧ ಜಾತಿಯ ಜೇನುಹುಳುಗಳು ಇತ್ಯಾದಿಗಳ ಕುರಿತಾದ ಉಪಯುಕ್ತ ಲೇಖನ.
       ಕೊನೆಯದಾಗಿ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article