ಮಕ್ಕಳ ಕವನಗಳು : ಸಂಚಿಕೆ - 16 : ರಚನೆ : ಹನಿ ಐತಾಳ್ ಪಿ, 8ನೇ ತರಗತಿ
Saturday, June 22, 2024
Edit
ಮಕ್ಕಳ ಕವನಗಳು : ಸಂಚಿಕೆ - 16
ಕವನ ರಚನೆ : ಹನಿ ಐತಾಳ್ ಪಿ
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಪಟಾಕಿ ಹೊಡೆಯುತ್ತಾ ಕೂತೆನಾ,
ಪಟಾಕಿ ಹೊಡೆಯುತ್ತಾ ಹೊಡೆಯುತ್ತಾ,
ನಾಯಿಯ ಬಾಲ ಮೆಟ್ಟಿದೆನಾ,
ಕಚ್ಚಲು ಬಂತು ನನ್ನನ್ನು,
ಎದ್ದೆನೋ ಬಿದ್ದೆನೋ ಓಡಿದೆನಾ,
ಓಡಿ-ಓಡಿ ಕೆಸರಿನಲ್ಲಿ ಬಿದ್ದೆನಾ,
ಕೆಸರಿನಲ್ಲಿ ಬಿದ್ದು ಅಂಗಿ ಮಣ್ಣು ಮಾಡಿದ್ದಕ್ಕೆ,
ಬೆತ್ತದಲ್ಲಿ ಹೊಡೆದರು ನನ್ನ,
ಯಾರೆಂದು ಕೇಳಬೇಡಿ ನನ್ನ,
ತಪ್ಪಿಯೂ ಅಪ್ಪ ಅಂತ ಹೇಳಿದೆನಾ?
.......................................... ಹನಿ ಐತಾಳ್ ಪಿ
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************
ಅದಕ್ಕೆ ಇಲ್ಲ ನೆವನ,
ಹೀಗೆ ಸಾಗುತ್ತಿದೆ ನನ್ನ ಜೀವನ.
ತರಗತಿಯಲ್ಲಿರಬೇಕು ಮೌನ,
ಪಾಠದಲ್ಲಿ ಕೊಡಬೇಕು ಗಮನ,
ಇದೇ ವಿದ್ಯಾರ್ಥಿಗಳ ಜೀವನ
.......................................... ಹನಿ ಐತಾಳ್ ಪಿ
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************
ಮನವೆಲ್ಲ ಅರಳಿತು,
ಮನೆ-ಮನೆಯಲ್ಲಿ ಸಂಭ್ರಮವು,
ಮನ-ಮನದಲ್ಲಿ ಖುಷಿಯು.
ಮೈಸೂರಿನಲ್ಲಿ ಒಡೆಯರ ಸಾಮ್ರಾಜ್ಯ,
ನಮ್ಮೂರಿನಲ್ಲಿ ನಮ್ಮೂರಿನಲ್ಲಿ
ನಮ್ಮದೇ ಸಾಮ್ರಾಜ್ಯ,
ಆನೆಯ ನಡಿಗೆ ನೋಡಲು ಬಹುಚಂದ,
ಬನ್ನಿ ನಮ್ಮೂರ ದಸರಕ್ಕೆ,
ನಮ್ಮೂರ ದಸರ ಹಬ್ಬಕ್ಕೆ.
ಎಲ್ಲರು ಕೂಡಿ ನಲಿಯುವ ದಿನವಿದು,
ಮರೆಯದೆ ಬನ್ನಿ ಹಬ್ಬಕ್ಕೆ,
ನಮ್ಮೂರ ದಸರ ತುಂಬಾ ಚಂದ,
ಮರೆಯದೆ ಬನ್ನಿ ಹಬ್ಬಕ್ಕೆ,
ನಮ್ಮೂರ ದಸರ ಹಬ್ಬಕ್ಕೆ.
.......................................... ಹನಿ ಐತಾಳ್ ಪಿ
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************
ಯಾರೇ ಇರಲಿ,
ನಾವು ಯಾವಾಗಲು ಒಂದೇ ಎಂಬುದು
ಮನಸ್ಸಲ್ಲೇ ಇರಲಿ.
ರಕ್ಷಾಬಂಧನದ ಈ ದಿನವು,
ಅಣ್ಣ, ತಂಗಿಯರ ಅನುಬಂಧವು,
ನನ್ನನು ನೀನು, ನಿನ್ನನ್ನು ನಾನು,
ರಕ್ಷಿಸುವೆ ಎಂಬುವ ದಿನವು.
ದ್ರೌಪದಿ ಕೃಷ್ಣನ ಕಥೆ ಕೇಳುವ ದಿನವು,
ಪ್ರಿತಿಯಿಂದ ಸಿಹಿ ಹಂಚುವ ದಿನವು,
ನೀನೆಲ್ಲೇ ಇದ್ದರೂ, ನಾನೆಲ್ಲೇ ಇದ್ದರೂ,
ಪರಸ್ಪರರನ್ನು ನೆನೆಯುವ ದಿನವು.
.......................................... ಹನಿ ಐತಾಳ್ ಪಿ
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************
ಹಾರಿತು ಚಂದ್ರಯಾನ-3
ಎಲ್ಲಾ ಭಾಗಗಳು ಬಿದ್ದು ಹೋದರು,
ಮುಂದೆ ಸಾಗಿತು ಚಂದ್ರಯಾನ-3
ಚಂದ್ರನ ಸುತ್ತ ತಿರುಗಿ-ತಿರುಗಿ,
ಅಗಸ್ಟ್ 23ರಂದು ಇಳಿಯಿತು ಚಂದ್ರನ ಮೇಲೆ.
ನಮ್ಮ ಹೆಮ್ಮೆಯ ಭಾರತ ದೇಶ,
ಚಂದಿರನ ದಕ್ಷಿಣ ಭಾಗದ ಮೆದು ಪ್ರವೇಶ.
ಚಂದ್ರಯಾನದ ವಿಜ್ಞಾನಿಗಳು ಸಾಧಕರು,
ಏರಿಸಿದರು ಭಾರತದ ಕೀರ್ತಿ ಪತಾಕೆ!
8ನೇ ತರಗತಿ
ಎನ್. ಐ. ಟಿ. ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸ ನಗರ, ಸುರತ್ಕಲ್
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
********************************************