-->
ಪ್ರೀತಿಯ ಪುಸ್ತಕ : ಸಂಚಿಕೆ - 116

ಪ್ರೀತಿಯ ಪುಸ್ತಕ : ಸಂಚಿಕೆ - 116

ಪ್ರೀತಿಯ ಪುಸ್ತಕ
ಸಂಚಿಕೆ - 116
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                     
                         ಹಸಿರೂರಿನ ಹುಡುಗ
ಪ್ರೀತಿಯ ಮಕ್ಕಳೇ.... ನಿಮ್ಮ ಮನೆಯಲ್ಲಿ ದೊಡ್ಡವರ ಅಥವಾ ಶಿಕ್ಷಕರ ಬಾಲ್ಯದ ಅನುಭವಗಳನ್ನು ಕೇಳಿಸಿಕೊಳ್ಳುವುದು ನಿಮಗೂ ಇಷ್ಟ ಅಂತ ಅಂದುಕೊಂಡಿದ್ದೇನೆ. ನಾನಂತೂ ಕಣ್ಣು ಬಾಯಿ ಬಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ಈ ಪುಸ್ತಕದಲ್ಲಿ ತಮ್ಮಣ್ಣ ಬೀಗಾರರು, ಅವರು ಒಬ್ಬ ಶಿಕ್ಷಕರೂ ಹೌದು, ಬಹಳ ಕುತೂಹಲಕಾರಿಯಾಗಿ ತಮ್ಮ ಬಾಲ್ಯದ ಕಥೆಗಳನ್ನು ಹೇಳಿಕೊಂಡಿದ್ದಾರೆ. “ಕಾಡು ಎನ್ನುವ ಪದವೇ ನನಗೆ ಪ್ರೀತಿಯ ಶಬ್ದ, ಕಾಡು ಅಂದಾಗಲೆಲ್ಲಾ ಜೀರುಂಡೆಯ ಧ್ವನಿ.. ಜುಳು ಜುಳು ಹರಿಯುವ ತಂಪಾದ ನೀರು, ದೊಡ್ಡ ದೊಡ್ಡ ಮರಗಳು, ಬಳ್ಳಿಗಳು, ಕಾನು ಕುರಿಗಳು, ಬಣ್ಣದ ಅಳಿಲುಗಳು..” ಹೀಗೇ ವಿವರ ಸಾಗುತ್ತದೆ. ಸಾಹಸದ ಅನುಭವಗಳು, ಮಜ ಮಜಾ ಅನುಭವಗಳು ಇವೆ. ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಪುಟ್ಟ ಹಕ್ಕಿಯನ್ನು ಕಾಪಾಡಿ ಖುಶಿಪಟ್ಟ ಕಥೆಯೂ ಇದೆ. ನಿಮ್ಮ ಕಾಲದಿಂದ ಸ್ವಲ್ಪ ಹಿಂದಕ್ಕೆ ಹೋಗಿ ನೋಡುವ, ಅದರಿಂದ ಕಲಿಯುವ ಅವಕಾಶ ಇಲ್ಲಿ ಸಿಗುತ್ತದೆ. ಆಮೇಲೆ ನಿಮ್ಮ ಮನೆಯಲ್ಲಿ ದೊಡ್ಡವರ ಹತ್ತಿರ ಅವರ ಬಾಲ್ಯದ ಕಥೆ ಹೇಳಲು ಹೇಳಿ. ಅದನ್ನು ಬರೆಯಿರಿ. 
ಲೇಖಕರು: ತಮ್ಮಣ್ಣ ಬೀಗಾರ
ಚಿತ್ರಗಳು: ರಘುಪತಿ ಶೃಂಗೇರಿ
ಪ್ರಕಾಶಕರು: ಬಂಡಾಯ ಪ್ರಕಾಶನ, ಹೊನ್ನಾವರ
ಬೆಲೆ: ರೂ.120/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 9448729359
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article