ಪ್ರೀತಿಯ ಪುಸ್ತಕಸ : ಸಂಚಿಕೆ - 114
Friday, June 7, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 114
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇದೊಂದು ಪದ್ಯದ ತರಹದ ಕಥೆ. ಟ್ರಕ್ಕಿನ ಸ್ಟ್ರೈಕು ಶುರುವಾಗಿತ್ತು. ಹಣ್ಣು ತುಂಬಿದ ಟ್ರಕ್ಕೊಂದು ಹಳ್ಳಿ ಪ್ರದೇಶ ಒಂದರಲ್ಲಿ ನಿಂತು ಬಿಟ್ಟಿತ್ತು. ಸುಸ್ತಾದ ಡ್ರೈವರ್ ಮಲಗಿಯೇ ಬಿಟ್ಟಿದ್ದರು. ಕ್ಲೀನರ್ ಎಲ್ಲೋ ಸುತ್ತಾಡಲು ಹೋಗಿದ್ದರು. ಮಕ್ಕಳ ಗುಂಪೊಂದು ಅಲ್ಲಿಗೆ ಬಂತು. ಮಕ್ಕಳು ಸುಮ್ಮನಿರಲು ಸಾಧ್ಯವೇ... ಘಮ ಘಮ ಪರಿಮಳ ಬೇರೆ ಬರುತ್ತಿದೆ. ಟ್ರಕ್ಕಿನ ಗೋಣಿಯೊಳಗೆ ಏನೋ ಇದೆ. ಐಡಿಯಾ ಹಾಕುತ್ತಾರೆ. ಕೋಲು ತರುತ್ತಾರೆ. ಗೋಣಿಯನ್ನು ಮೆತ್ತಗೆ ತೂತು ಮಾಡುತ್ತಾರೆ.. ಕೆಂಪು ಕೆಂಪು ಹಣ್ಣು ಗೋಣಿಯಿಂದ ಹೊರಚೆಲ್ಲುತ್ತದೆ. ಈ ತುಂಟ ಹುಡುಗರು ಮುಂದೇನು ಮಾಡುತ್ತಾರೆ. ಓದಿ ನೋಡಿ. ನೀವೂ ಇಂತಹ ತುಂಟತನ ಮಾಡಿದ್ದರೆ ಆ ಬಗ್ಗೆ ಬರೆಯಿರಿ.
ಲೇಖಕರು : ಆನಂದ ಪಾಟೀಲ
ಚಿತ್ರಗಳು : ಸಂತೋಷ್ ಸಸಿಹಿತ್ಲು
ಪ್ರಕಾಶಕರು : ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ : ರೂ.25/-
4-5ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಭಿನವ ಪ್ರಕಾಶನ abhinavaravi@gmail.com; www.abhinavabook.com 9448804905
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************