-->
ಮಕ್ಕಳ ಕಥೆಗಳು - ಸಂಚಿಕೆ : 08 : ಸ್ವರಚಿತ ಕಥೆ : ಭೂಮಿಕಾ, 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 08 : ಸ್ವರಚಿತ ಕಥೆ : ಭೂಮಿಕಾ, 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 08
ಸ್ವರಚಿತ ಕಥೆ : ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ

         
            
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ರಾಜ ಅಂದ ಕೂಡಲೇ ನಮ್ಮ ಮನಸ್ಸಿನಲ್ಲಿ ರಾಜನಿಗೇನು ಆಸ್ತಿ ಇದೆ, ಐಶ್ವರ್ಯ ಇದೆ, ಅಂತಸ್ತಿದೆ ಎಂದು ತಿಳಿದಿರ‌ಬಹುದು. ಆದರೆ ಈ ರಾಜನ ಕಥೆ ಹಾಗಲ್ಲ. ಈತನ ಜೀವನದಲ್ಲಿ ಬರಿ ದುಃಖಗಳೇ ತುಂಬಿಕೊಂಡಿದ್ದವು. ಇತನಿಗೆ ಆಗಾಗ ಒಂದು ದೆವ್ವ ಕಾಣಿಸುತ್ತಿತ್ತು. ಅವನು ಇದನ್ನು ತನ್ನ ಹೆಂಡತಿಗೆ ಹೇಳಿದರೆ ಅವಳು ನಿಮ್ಮ ಭ್ರಮೆ ಎಂದು ಹೇಳಿ ಹೋಗುತ್ತಿದ್ದಳು. ಹೀಗೆ ಒಂದು ದಿನ ಆ ದೆವ್ವ ಮತ್ತೆ ಪ್ರತ್ಯಕ್ಷವಾಯಿತು. ಪ್ರತ್ಯಕ್ಷವಾಗಿ ಅದು "ನಿನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಹಾಕು" ಎಂದು ಹೇಳಿತು. ಆ ಮಾತನ್ನು ಕೇಳಿದ ರಾಜ ಮಲಗಿದ್ದವನು ಎದ್ದು ಕುಳಿತುಕೊಂಡ. ಮತ್ತೆ ದೆವ್ವ ಅದೇ ಮಾತನ್ನು ಹೇಳಿತು. ರಾಜನು ಆ ಉಂಗುರವನ್ನೇ ನೋಡುತ್ತಾ ಇದನ್ನು ತೆಗೆದು ಹಾಕಿದರೆ ಏನು ಆಗಬಹುದು... ಎಂದು ಯೋಚಿಸುತ್ತಾ ಅಲ್ಲೇ ಕುಳಿತುಕೊಂಡ. ಮತ್ತೊಂದು ಬಾರಿ ದೆವ್ವ ಈ "ಉಂಗುರವನ್ನು ತೆಗೆದುಹಾಕಿ ನನಗೆ ಮುಕ್ತಿ ಕೊಡಿಸು" ಎಂದು ಹೇಳಿತು. ಆಗ ರಾಜನಿಗೆ ಮತ್ತೆ ಜೀವ ಬಂದಂತಾಗಿ ಕುಳಿತ. ದೆವ್ವದ ಮಾತು ಕೇಳಿದ ರಾಜನು ಮತ್ತೆ ಯೋಚನಾ ಮಗ್ನನಾಗಿ ಕುಳಿತ. ರಾಜನು ಮನಸ್ಸಿನಲ್ಲಿ ಈ ಉಂಗುರವನ್ನು ತೆಗೆದು ಹಾಕಿದರೆ ಮತ್ತೆ ಈ ದೆವ್ವ ನನ್ನನ್ನು ಕಾಡಿಸುವುದಿಲ್ಲ ಅಂತ ಕಾಣಿಸುತ್ತೆ ಇದನ್ನು ಮೊದಲು ತೆಗೆಯೋಣ ಅಂತ ಯೋಚಿಸುತ್ತ ಆ ಉಂಗುರವನ್ನು ತೆಗೆದ. ತಕ್ಷಣವೇ ಆ ದೆವ್ವ ರಾಜನ ಮೈಯೊಳಗೆ ಪ್ರವೇಶಿಸಿತು ರಾಜನು ಜೋರು ಜೋರಾಗಿ ನಗಲು ಶುರು ಮಾಡಿದ. ಅವನು ನಗುವ ಶಬ್ದವನ್ನು ಕೇಳಿ ಅವನ ಹೆಂಡತಿ ರಾಜನ ಬಳಿ ಓಡೋಡಿ ಬಂದಳು. ರಾಜನ ದೇಹದೊಳಗಿದ್ದ ದೆವ್ವ ಹೇಳಿತು "ಬಂದ್ಯ ಬಾ ನಿನಗಾಗಿ ಕಾಯುತ್ತಿದ್ದೆ ಯಾರು ಅಂತ ಗೊತ್ತಾಗ್ಲಿಲ್ವೇನು? ನಿನ್ನ ಗೆಳತಿ ಪ್ರಿಯ" ಅಂದ ತಕ್ಷಣ ರಾಣಿ ನೀ.... ನಾ ನೀನು ಹೇಗೆ? ಎಂದು ಹೇಳುತ್ತಾ, ತಲೆಸುತ್ತಿ ಅಲ್ಲೇ ಬಿದ್ದಳು. ನಂತರ ರಾಜನನ್ನು ಆ ದೆವ್ವ ಕನ್ನಡಿ ಮುಂದೆ ತಂದು ನಿಲ್ಲಿಸಿ, "ನಾನು ನಿನ್ನ ಒಂದನೆ ಹೆಂಡತಿ ನಾನು ಹೇಗೆ ಇಲ್ಲಿಗೆ ಬಂದ ಅನಿಸುತ್ತಿದೆ ನಿಂಗೆ ನಿಜವಾದ ಕಥೆ ನಾನು ವಿವರಿಸುತ್ತೇನೆ... ಅವತ್ತು ನಾನು ನದಿಯ ದಡದ ಹತ್ತಿರ ಸ್ನಾನ ಮಾಡಲು ಹೋದಾಗ ನನ್ನ ಗೆಳತಿ ರುಕ್ಮಿಣಿ ಅಂದರೆ ನಿನ್ನ ಈಗಿನ ಹೆಂಡತಿ ಬಂದಳು. ನಾನು ಮತ್ತು ಅವಳು ಅಲ್ಲೇ ಕೂತು ಮಾತನಾಡುತ್ತಿರುವಾಗ ಅವಳು ನನ್ನನ್ನು ನದಿಗೆ ತಳ್ಳಿ ಊರಿಗೆ ಬಂದು ನಾನು ಯಾರದ್ದೋ ಜೊತೆ ಓಡಿ ಹೋಗಿದ್ದೇನೆ ಎಂದು ಸುದ್ದಿಯ ಹಬ್ಬಿಸಿ ನಂತರ ನಿನ್ನನ್ನು ಮದುವೆಯಾದಳು. ನನ್ನನ್ನು ಕೊಂದು ಹಾಕಿ ಈಗ ನಿನ್ನ ಜೊತೆ ಸುಖದಿಂದಾಳೆ ನಾನು ಅವಳನ್ನು ಬಿಡುವುದಿಲ್ಲ. ಅವಳನ್ನು ಸಾಯಿಸಿದರೆ ಮಾತ್ರ ನನಗೆ ಮುಕ್ತಿ ಸಿಗುವುದು" ಎಂದು ಪ್ರಿಯ ಹೇಳಿದಳು. ಅದನ್ನು ಕೇಳಿದ ರಾಜರು "ನಿನ್ನನ್ನು ಕಳೆದುಕೊಂಡ ನೋವಿನಲ್ಲಿ ಇದ್ದೀನಿ ಮತ್ತೆ ಅವಳನ್ನು ಕೊಂದು ನನ್ನ ಮನಸ್ಸಿಗೆ ಮತ್ತಷ್ಟು ನೋವು ಮಾಡಬೇಡ. ಮೇಲಿದ್ದ ದೇವರು ಅವಳಿಗೆ ಶಿಕ್ಷೆ ಕೊಡುತ್ತಾನೆ. ಎಂದು ಹೇಳಿದ ರಾಜನ ಮಾತನ್ನು ಕೇಳಿದ ದೆವ್ವಕ್ಕೂ ಈ ಮಾತು ನಿಜ ಎಂದು ತಿಳಿಯಿತು. ಆದರೆ "ನನ್ನದೊಂದು ಶರತ್ತಿದೆ.. ಆ ಶರತ್ತಿಗೆ ನೀನು ಒಪ್ಪಿಕೊಂಡರೆ ಮಾತ್ರ ಅವಳನ್ನು ಬಿಟ್ಟು ಬಿಡುತ್ತೇನೆ". ಎಂದಿತು ದೆವ್ವ. ನಾನು ನೆರವೇರಿಸಿಕೊಡುತ್ತೇನೆ ಎಂದ ರಾಜ "ನೀನು ಈ ಪಾಪಿಯನ್ನು ಬಿಟ್ಟು ಬೇರೆ ಯಾರನ್ನಾದರೂ ಮದುವೆಯಾಗು, ಮದುವೆಯಾಗಿ ಸುಖದಿಂದ ಬಾಳಬೇಕು" ಎಂದಿತು "ಈ ಶರತ್ತಿಗೆ ನನಗೆ ಒಪ್ಪಿಗೆ ಇದೆ ಎಂದುಕೊಂಡು ಇಬ್ಬರು ಕೈ ಕುಲುಕಿಕೊಂಡರು ನಂತರ ರಾಜನ ಮದುವೆಯಾಯಿತು, ಮತ್ತೆ ಆ ದೆವ್ವ ರಾಜನಿಗೆ ಎಂದೂ ಕಾಟ ಕೊಡಲಿಲ್ಲ. ಎಲ್ಲರೂ ಸುಖ ಸಂತೋಷ ಸಮೃದ್ಧರಾಗಿ ಬಾಳಿದರು. ಇಲ್ಲಿಗೆ ರಾಜನ ದುಃಖದ ದಿನಗಳು ಮುಗಿದವು. 
....................................................... ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************

     

ಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು. ಒಬ್ಬ ಬಳೆ ವ್ಯಾಪಾರಿಯಾಗಿದ್ದ. ಮತ್ತೊಬ್ಬ ತರಕಾರಿ ವ್ಯಾಪಾರಯಾಗಿದ್ದ. ಬಳೆ ವ್ಯಾಪಾರಿ ತುಂಬಾ ಕರುನಾಳು ಹಾಗೂ ದಯಾಳು ಆಗಿದ್ದ. ಅವರಿಬ್ಬರೂ ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು. ಬಳೆ ವ್ಯಾಪಾರಿಗಿಂತಲೂ ಸ್ವಲ್ಪ ಜಾಸ್ತಿನೇ ಹಣ ತರಕಾರಿ ವ್ಯಾಪಾರಿಯು ದುಡಿಯುತ್ತಿದ್ದ. ಹೀಗೆ ಒಂದು ದಿನ ವ್ಯಾಪಾರ ಮುಗಿಸಿಕೊಂಡು ಮನೆಗೆ ಸೇರಿದ ಬಳಿಕ ತರಕಾರಿ ವ್ಯಾಪಾರಿಯ ಮನೆಗೆ ಒಂದು ಅಜ್ಜಿ ಬಂದು ಮನೆಯ ಬಾಗಿಲನ್ನು ತಟ್ಟಿದಳು. ಹೊರಗೆ ಬಂದ ತರಕಾರಿ ವ್ಯಾಪಾರಿ ಅಜ್ಜಿಯನ್ನು ಕಂಡು "ಏನು ಮುದಿ ಹೆಂಗಸೇ ನನಗೆ ತೊಂದರೆ ಕೊಡಲೆಂದು ಬಂದಿದೆಯಾ", ಹೀಗೆ ಹೇಳಿದ. ಅದಕ್ಕೆ ಅಜ್ಜಿ "ಅಲ್ಲಪ್ಪ ಇಷ್ಟು ಕತ್ತಲಾಗಿದೆ ಈ ರಾತ್ರಿ ನನಗೆ ನಿನ್ನ ಮನೆಯಲ್ಲಿ ಜಾಗ ಕೊಡುವೆಯಾ...? ಬೆಳಗ್ಗೆ ಆಗುತ್ತಲೇ ಇಲ್ಲಿಂದ ಹೊರಟು ಹೋಗುತ್ತೇನೆ." ಎಂದಳು. "ಎದ್ದೇಳು ಅದಕ್ಕೆ ನಿನಗೆ ನನ್ನ ಮನೆಯೇ ಕಣ್ಣಿಗೆ ಬಿತ್ತು. ಇಲ್ಲಿ ಇಷ್ಟೊಂದು ಮನೆ ಇದೆ ಅವರ ಮನೆಗೆ ಹೋಗು" ಎಂದು ಫಟಾರನೆ ಬಾಗಿಲು ಹಾಕಿದನು. ಪಾಪ ಅಜ್ಜಿ ಬೇಸರದ ಮುಖ ಮಾಡಿಕೊಂಡು ಹಿಂತಿರುಗಿದಳು. ಮತ್ತೆ ಒಂದು ಮನೆ ಹತ್ತಿರ ಹೋದಳು. ಅಲ್ಲೂ ಸಹ ಹಾಗೆ ಆಯ್ತು. ಹಾಗೂ ಹೀಗೂ ನಡೆಯುತ್ತಾ ನಡೆಯುತ್ತಾ, ಬಳೆ ವ್ಯಾಪಾರಿಯ ಮನೆ ಹತ್ತಿರ ಬಂದಳು. ಅಜ್ಜಿ ಬಂದು ಬಾಗಿಲು ತಟ್ಟಿದಳು. ಹೊರಗೆ ಬಂದ ಬಳೆ ವ್ಯಾಪಾರಿ ಅಜ್ಜಿಗೆ ಮಾತನಾಡಲು ಬಿಡದೆ "ಅಜ್ಜಿ ಇಷ್ಟು ಕತ್ತಲಾಯಿತು ಈಗ ನೀವು ಎಲ್ಲಿಗೆ ಹೋಗುತ್ತಿರುವಿರಿ ಇವತ್ತು ಇಲ್ಲೇ ಇದ್ದು ನಾಳೆ ಹೋಗುವೆ ಅಂತೆ." ಅಂತ ಹೇಳಿ ಅಜ್ಜಿಗೆ ತಿನ್ನಲು ತನ್ನ ಪಾಲಿಗೆ ತಂದಿದ್ದ ಆಹಾರವನ್ನು ಕೊಟ್ಟು ತಾನು ಹಸಿವಿನಿಂದಲೇ ಮಲಗಿದ. ಅಜ್ಜಿಗೆ ಮಲಗಲು ಹಾಸಿಗೆ ಹಾಸಿಕೊಟ್ಟ. ಅಜ್ಜಿ ಆ ಹಾಸಿಗೆ ಮೇಲೆ ನಿದ್ರಾವಶಳಾದಳು. ಮರುದಿನ ಬೆಳಿಗ್ಗೆ ಅಜ್ಜಿ ಹೊರಡುವ ಮುನ್ನ ಒಂದು ಸುಂದರವಾದ ಯಕ್ಷಣಿಯಾಗಿ ಪರಿವರ್ತಿತಗೊಂಡಳು. ಅದನ್ನು ಕಂಡ ಬಳೆ ವ್ಯಾಪಾರಿಗೆ ಆಶ್ಚರ್ಯವಾಯಿತು. ಆ ಯಕ್ಷಿಣಿ ಹೇಳುತ್ತಾಳೆ, "ನಿನ್ನ ಉಪಚಾರ ಕಂಡು ನನಗೆ ಸಂತೋಷವಾಗಿದೆ. ನಿನಗೆ ಏನು ವರಬೇಕು ಕೇಳು ನಾನು ಕೊಡುತ್ತೇನೆ" ಎಂದಳು. ಆಗ ಬಳೆ ವ್ಯಾಪಾರಿಯು, "ದೇವಿ ನಾನು ಈಗ ಸಂತೃಪ್ತನು ನನಗೆ ಈಗ ಏನೂ ಬೇಡ. ನನಗೆ ಏನಾದರೂ ಕಷ್ಟ ಕಾಲ ಬಂದರೆ ನಿನ್ನನ್ನು ನೆನಪಿಸಿಕೊಳ್ಳುತ್ತೇನೆ. ಆವಾಗ ಬಂದು ನನಗೆ ಸಹಾಯ ಮಾಡು" ಎಂದು ಹೇಳಿದ. ಯಕ್ಷಣಿ ಮಾಯವಾದಳು. ಹೀಗೆ ಹತ್ತು ಹದಿನೈದು ವರ್ಷಗಳು ಕಳೆದವು. ಆ ಊರಿನಲ್ಲಿ ಬರಗಾಲ ಆರಂಭವಾಯಿತು. ಜನರ ಕಷ್ಟಗಳು ಶುರುವಾದವು. ಎಲ್ಲೆಲ್ಲೂ ನೀರಿಲ್ಲವಾಯಿತು. ಕುಡಿಯಲಿಕ್ಕೂ ಸಹ ನೀರಿಲ್ಲವಾಯಿತು. ಇದನ್ನು ನೋಡಿದ ಬಳೆ ವ್ಯಾಪಾರಿಯ ಮನಸ್ಸು ತಲ್ಲಣಿಸಿತು. ತಾನು ಹೇಗಾದರೂ ಮಾಡಿ ಜನರಿಗೆ ಸಹಾಯ ಮಾಡಬೇಕು ಎಂದೆನಿಸಿತು. ಆವಾಗ ಅವನಿಗೆ ಯಕ್ಷಿಣಿ ಕೊಟ್ಟ ವರದ ಬಗ್ಗೆ ನೆನಪಿಗೆ ಬಂತು. ಅವನು ಸ್ಮರಿಸಿದ ಕೂಡಲೇ ದೇವತೆಯು ಅವನ ಎದುರಿಗೆ ಬಂದಳು. ಅವಳು "ಏನು ನನ್ನ ಕರೆದ ವಿಷಯ" ಎಂದು ಕೇಳಿದಳು. ಆಗ ಅವನು "ಈ ಊರಿನಲ್ಲಿ ಬರಗಾಲ ಆರಂಭವಾಗಿದೆ. ಜನರು ಕಷ್ಟದಲ್ಲಿ ಮುಳುಗಿದ್ದಾರೆ. ಆದ್ದರಿಂದ ನೀನು ಈ ಹಳ್ಳಿಗೆ ನೀರನ್ನು ಮತ್ತೆ ಪುನಃ ತರಬೇಕು." ಎಂದು ಪ್ರಾರ್ಥಿಸುತ್ತಾನೆ. ಆಗ ದೇವತೆಗೆ ಬಳೆ ವ್ಯಾಪಾರಿಯ ಸಹಾಯಗುಣವು ತುಂಬಾ ಇಷ್ಟವಾಗಿ ಅವಳು ಆ ಹಳ್ಳಿಗೆ ನೀರನ್ನು ಮತ್ತೆ ಪುನಃ ತರಿಸುತ್ತಾಳೆ. ಮತ್ತೆ ಬಳೆ ವ್ಯಾಪಾರಿಗೆ ಒಂದು ಸುಂದರವಾದ ಮನೆಯನ್ನು ನಿರ್ಮಿಸಿ ಕೊಡುತ್ತಾಳೆ. ಆ ಹಳ್ಳಿಗೆ ನೀರು ಮತ್ತೆ ಪುನಹ ಬಂದಿದ್ದನ್ನು ನೋಡಿ ಜನರಿಗೆ ಪುನಃ ಸಂತೋಷವಾಗುತ್ತದೆ. ಎಲ್ಲರೂ ಬಳೆ ವ್ಯಾಪಾರಿಯನ್ನು ಕೊಂಡಾಡಿ ಹೊಗಳುತ್ತಾರೆ. ಬಳೆ ವ್ಯಾಪಾರಿ ಆ ಮನೆಯಲ್ಲಿ ಸುಖದಿಂದ ಇದ್ದು ತನ್ನ ಕೈಲಾದಷ್ಟು ಸಹಾಯವನ್ನು ಜನರಿಗೆ ಮಾಡುತ್ತಾನೆ. ಹೀಗೆ ಅವನು ಸುಖ ಹಾಗೂ ಸಂತೋಷದಿಂದ ಅವನ ಜೀವನವನ್ನು ಕಳೆಯುತ್ತಾನೆ.
.................................................. ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************


 
               

ಒಂದೂರಿನಲ್ಲಿ‌ ಅರುಂಧತಿ ಎಂಬುವವಳು ತನ್ನ ಮಕ್ಕಳ ಜೊತೆ ಬಾಳುತಿದ್ದಳು. ಅವಳಿಗೆ ಮೂರು ಗಂಡು ಮಕ್ಕಳಿದ್ದರು. ಅವರ ಹೆಸರು ಶಾಮ ರಾಮ ಮತ್ತು ಭೀಮ ಎಂಬುದಾಗಿತ್ತು. ಇದರಲ್ಲಿ ದೊಡ್ಡವನಾಗಿದ್ದವನು ಶಾಮ. ಇವನು ತುಂಬಾ ಬುದ್ಧಿವಂತನಾಗಿದ್ದನು. ಇನ್ನು ಎರಡನೇ ಮಗ ರಾಮ ಅವನು ಓದಿನಲ್ಲಿ ಚುರುಕಾಗಿದ್ದನು. ಮೂರನೆಯ ಮಗ ಭೀಮ ಇವನು ಬುದ್ಧಿವಂತನೂ ಆಗಿರಲಿಲ್ಲ ಓದಿನಲ್ಲಿ ಕೂಡ ಚುರುಕಾಗಿರಲಿಲ್ಲ ಆದರೆ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದ. ಹೀಗೆ ವರ್ಷಗಳು ಉರುಳಿದವು. ಎಲ್ಲರೂ ದೊಡ್ಡವರಾದರು. ಮೊದಲನೆಯವನು ಬುದ್ಧಿವಂತನಾಗಿದ್ದರಿಂದ ಅವನಿಗೆ ಕೆಲಸ ಸಿಕ್ಕಿತು. ಎರಡನೆಯವನು ಓದಿನಲ್ಲಿ ಚುರುಕಾಗಿದ್ದರಿಂದ ಅವನಿಗೂ ಕೆಲಸ ಸಿಕ್ಕಿತು. ಮೂರನೇಯವನು ಬುದ್ಧಿವಂತನೂ ಆಗದೆ ಚುರುಕು ಆಗದಿರುವುದರಿಂದ ಅವನಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಅವನು ಮನೆಯಲ್ಲೇ ಉಳಿದುಬಿಟ್ಟ. ಹೀಗೆ ಇಬ್ಬರು ತಮ್ಮ ಕೆಲಸದ ಮೇಲೆ ಬೇರೆ ದೇಶಗಳಿಗೆ ಹೋದರು. ಉಳಿದ ಒಬ್ಬ ಮಗ ಮಾತ್ರ ಮನೆಯಲ್ಲೇ ಇರುವ ಅವರ ಗೆದ್ದೆಯಲ್ಲಿ ಕೃಷಿ ಮಾಡಿ, ಬೆಳೆಯನ್ನು ಬೆಳೆದ. ಆ ಬೆಳೆ ಚೆನ್ನಾಗಿ ಫಸಲನ್ನು ಕೊಟ್ಟಿತು. ಹೀಗೆ ಒಂದು ವರ್ಷ ಕಳೆಯಿತು. ಹೊರದೇಶಕ್ಕೆ ಕೆಲಸಕ್ಕೆ ಹೋದ ಮಕ್ಕಳು ಮತ್ತೆ ಪುನಃ ಮನೆಗೆ ಸಪ್ಪೆ ಮುಖ ಮಾಡಿಕೊಂಡು ಬಂದರು. ಬಂದವರಿಗೆ ಆಶ್ಚರ್ಯವೂ ಆಶ್ಚರ್ಯ. ಹಳೆ ಗುಡಿಸಲು ಇದ್ದ ಜಾಗದಲ್ಲಿ ದೊಡ್ಡದೊಂದು ಮನೆ ನಿರ್ಮಿಸಲಾಗಿತ್ತು. ಬಂಗಲೆ ಮುಂದೆ ತಮ್ಮ ಮೂರನೇ ತಮ್ಮನಾದ ಭೀಮನು ನಿಂತಿದ್ದ. ಅವನು ಇವರನ್ನು ನೋಡಿ ಅಣ್ಣ ‌ಬಂ‌ದಿರಾ ಬನ್ನಿ ಎಂದು ಕರೆದ. ಅವರಿಗೆ ಕುಡಿಯಲು ನೀರು ಹಾಗೂ ಊಟ ಉಪಚಾರವನ್ನು ನೀಡಿ ಸತ್ಕರಿಸಿದ. ನಂತರ ಮಾತನ್ನು ಪ್ರಾರಂಭಿಸಿ ಬಂದ ವಿಚಾರವನ್ನು ಕೇಳಿದ. ಅವರು ತಮ್ಮನ್ನು ಕೆಲಸದಿಂದ ತೆಗೆದ ವಿಚಾರವನ್ನು ತನ್ನ ತಮ್ಮನಿಗೆ ಹೇಳಿದರು. ನಂತರದ ದಿನಗಳಲ್ಲಿ ಮೂರು ಜನ ಒಟ್ಟು ಸೇರಿ ಕೃಷಿ ಕೆಲಸ ಪ್ರಾರಂಭಿಸಿದರು. ಇದರಿಂದ ನಮಗೆ ತಿಳಿಯುವುದೇನೆಂದರೆ, ಓದು ಯಾವಾಗಲೂ ಪ್ರಾಮುಖ್ಯತೆಯನ್ನು ವಹಿಸುವುದಿಲ್ಲ. ಓದಿನ ಜೊತೆ ಸಾಮಾನ್ಯ ಜ್ಞಾನವು ಸ್ವಲ್ಪ ನಮಗೆ ತಿಳಿದಿರಬೇಕು ಎಂದು ಈ ಕಥೆ ಹೇಳುತ್ತದೆ.
.................................................. ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************

          

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನು ಮಾಯಾಪುರ ಎಂಬ ನಗರವನ್ನು ಆಳುತ್ತಿದ್ದ. ಅವನ ರಾಜ್ಯದಲ್ಲಿ ಪ್ರಜೆಗಳು ಸುಖ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ರಾಜನಿಗೆ ಮಕ್ಕಳಿಲ್ಲವೆಂಬ ಚಿಂತೆ ಆಗಾಗ ಕಾಡುತ್ತಿತ್ತು. ಅದನ್ನು ಮರೆಯುವ ಸಲುವಾಗಿ ಅವನ ರಾಜಧಾನಿಯ ಪಕ್ಕದಲ್ಲಿದ್ದ ಉದ್ಯಾನವನದಲ್ಲಿ ಕೂತು ಮನಸ್ಸಿಗೆ ಶಾಂತಿ ಸಿಗುವವರೆಗೂ ಅತ್ತು ಬರುತ್ತಿದ್ದ. ಹೀಗೆ ಒಂದು ದಿನ ಉದ್ಯಾನವನದಲ್ಲಿ ಕೂತು ಅಳುತ್ತಿರುವಾಗ ಮರದ ಮೇಲಿಂದ ಒಂದು ಗಿಳಿ ಕೆಳಗೆ ಬಿತ್ತು. ಅದನ್ನು ನೋಡಿ ರಾಜ ಅಳುವುದನ್ನು ನಿಲ್ಲಿಸಿ ಆ ಗಿಳಿಯ ಪಕ್ಕದಲ್ಲಿ ಬಂದು ನಿಂತ. ಅದು ಇನ್ನೇನು ಸಾಯುವ ಪರಿಸ್ಥಿತಿಯಲ್ಲಿತ್ತು. ಅದನ್ನು ನೋಡಿದ ರಾಜನಿಗೆ ದುಃಖವಾಯಿತು. ಕೂಡಲೇ ಉದ್ಯಾನವನದ ಪಕ್ಕದಲ್ಲಿ ಇದ್ದ ಕೆರೆಯ ಬಳಿ ಹೋಗಿ ತನ್ನ ಕೈ ಬೊಗಸೆಯಲ್ಲಿ ನೀರನ್ನು ತಂದು ಗಿಳಿಗೆ ಕುಡಿಸಿದ. ನಂತರ ಅದು ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಬಂದಿತು. ಅದನ್ನು ರಾಜ ಮರದ ಮೇಲೆ ಬಿಟ್ಟು ಅರಮನೆಗೆ ಹಿಂತಿರುಗಿದ. ಹೀಗೆ ಒಂದು ತಿಂಗಳು ಕಳೆಯಿತು. ರಾಜನು ಆಸ್ಥಾನದ ಪಂಡಿತರೊಡನೆ ಮಾತನಾಡುತ್ತಿರುವಾಗ ಅಲ್ಲಿಗೆ ಇಬ್ಬರು ದಂಪತಿಗಳು ಬಂದರು. ಅವರ ಕೈಯಲ್ಲಿ ಒಂದು ಪುಟ್ಟ ಮಗುವಿತ್ತು. ಆ ದಂಪತಿಗಳು ರಾಜನ ಬಳಿ ಬಂದು, "ಮಹಾರಾಜರಿಗೆ ನನ್ನ ನಮಸ್ಕಾರಗಳು, ನಮ್ಮ ಈ ಮಗುವಿಗೆ ನೀವೇ ನಾಮಕರಣ ಮಾಡಬೇಕೆಂದು ನಮ್ಮಿಬ್ಬರ ಆಸೆ ಆದ್ದರಿಂದ ನಾವು ಈ ಮಗುವನ್ನು ತೆಗೆದುಕೊಂಡು ನಿಮ್ಮ ಬಳಿ ಬಂದಿದ್ದೇವೆ. ದಯವಿಟ್ಟು ಈ ಮಗುವಿಗೆ ನೀವೇ ನಾಮಕರಣವನ್ನು ಮಾಡಬೇಕು." ಎಂದು ಹೇಳಿದರು. ಅದಕ್ಕೆ ರಾಜನು "ಆಗಲಿ" ಎಂದು ಹೇಳುತ್ತಾ ರಮ್ಯ, ರಮ್ಯ, ರಮ್ಯ, ಎಂದು ಮೂರು ಬಾರಿ ಆ ಮಗುವಿನ ಕಿವಿಯಲ್ಲಿ ಹೇಳಿದನು. ನಂತರ ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ತೆಗೆದು ಮಗುವಿನ ಕುತ್ತಿಗೆಗೆ ಹಾಕಿದನು. ಆ ದಂಪತಿಗಳು ಮತ್ತೆ ರಾಜನಿಗೆ ನಮಸ್ಕರಿಸಿ ಮರಳಿ ಮನೆಗೆ ಹೋದರು. ಆ ದಂಪತಿಗಳು ಹಿಂತಿರುಗಿದ ಬಳಿಕ ರಾಜನಿಗೆ ಮತ್ತೆ ಮಕ್ಕಳಿಲ್ಲವೆಂಬ ದುಃಖವಾಗಿ ಆಸ್ಥಾನದಿಂದ ಉದ್ಯಾನವನದ ಕಡೆ ನಡೆದನು. ಉದ್ಯಾನವನದಲ್ಲಿದ್ದ ಒಂದು ದೊಡ್ಡ ಮರದ ಕೆಳಗೆ ಕೂತು ತನ್ನ ಮನಸ್ಸಿನಲ್ಲಿರುವ ದುಃಖವನ್ನೆಲ್ಲ ಅತ್ತು ಅತ್ತು ಹೊರೆಗೆ ಹಾಕುತ್ತಿರುವಾಗ, ಯಾರೋ ಮಾತನಾಡಿದ ಶಬ್ದ ಕೇಳಿಸಿತು. ರಾಜನು ಮನಸ್ಸಿನಲ್ಲಿ "ಈ ಉದ್ಯಾನವನದಲ್ಲಿ ನನ್ನನ್ನು ಬಿಟ್ಟು ಬೇರೆ ಯಾರು ಬರುವಂತೆ ಇಲ್ಲ. ಆದರೆ ಇಲ್ಲಿ ಮಾತನಾಡುತ್ತಿರುವುದು ?" ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಭವವಾಯಿತು, "ಯಾರದು" ಎಂದು ಕೇಳುತ್ತಾ ಎದ್ದು ನಿಂತ, ಅಲ್ಲಿ ಯಾರೂ ಇರಲಿಲ್ಲ. ಮತ್ತೆ ಅದೇ ಶಬ್ದವು ಮರದ ಮೇಲಿಂದ ಕೇಳಿಸತೊಡಗಿತು. ರಾಜನು ಮರದ ಮೇಲೆ ನೋಡಿದ ಅಲ್ಲಿ ಸಣ್ಣದೊಂದು ಗಿಳಿ ಕೂತು ಮಾತನಾಡುತ್ತಿತ್ತು. ಅದನ್ನು ನೋಡಿದ ರಾಜನಿಗೆ ಆಶ್ಚರ್ಯವಾಯಿತು. ರಾಜನ ಮನಸ್ಸಿನಲ್ಲಿ "ಇದೊಂದು ಪಕ್ಷಿ ಇದು ಹೇಗೆ ಮಾತನಾಡಲು ಸಾಧ್ಯ" ಎಂದು ಯೋಚಿಸುತ್ತಾ "ಯಾರು ನೀನು" ಎಂದು ಕೇಳಿದ. ಆ ಗಿಳಿಯು "ಹೆದರಬೇಡ ರಾಜ ನಾನು ಒಂದು ಪಕ್ಷಿ, ಪಕ್ಷಿ ಹೇಗೆ ಮಾತನಾಡುತ್ತದೆ ಎಂಬುದು ನಿನ್ನ ಆಲೋಚನೆಯಲ್ಲವೇ? ನಾನು ಒಬ್ಬ ಸನ್ಯಾಸಿ ಸಾಕಿದಂತಹ ಗಿಳಿ ಆದ್ದರಿಂದ ನನಗೆ ಮಾತು ಬರುತ್ತದೆ." ಹೀಗೆ ಒಂದು ತಿಂಗಳ ಹಿಂದೆ ನಾನು ಇಲ್ಲಿ ಹಣ್ಣು ತಿನ್ನಲೆಂದು ಬರುವಾಗ. ಬಾಯಾರಿಕೆಯಾಗಿ ತಲೆಸುತ್ತಿ ಬಿದ್ದೆ. ಆವಾಗ ನೀನು ಬಂದು ನನ್ನನ್ನು ಉಪಚಾರ ಮಾಡಿದೆ. ಆದ್ದರಿಂದ ನನ್ನ ಪ್ರಾಣ ಉಳಿಯಿತು. ಅದಕ್ಕೆ ನಾನು ನಿನಗೆ ಚಿರಋಣಿಯಾಗಿದ್ದೇನೆ. ಆದರೆ ನೀನು ಇಲ್ಲಿ ಚಿಂತಾಕ್ರಾಂತನಾಗಿ ಕುಳಿತಿರುವೆಯಲ್ಲಾ ಏಕೆ? ಏನಾಯ್ತು". ಎಂದು ಕೇಳಿತು ಗಿಳಿ, ಆಗ ರಾಜನು, ತನಗೆ ಮಕ್ಕಳಿಲ್ಲವೆಂಬ ದುಃಖವನ್ನು ಗಿಳಿಯ ಮುಂದೆ ಹೇಳಿದನು. ಅದನ್ನು ಕೇಳಿದ ಗಿಳಿಗೆ ರಾಜನ ಮೇಲೆ ಕರುಣೆ ಬಂದು, "ಅಳಬೇಡ ರಾಜ ನಾನು ನಿನಗೆ ಒಂದು ಹಣ್ಣನ್ನು ತೆಗೆದುಕೊಂಡು ಬರುತ್ತೇನೆ. ಅದನ್ನು ನೀನು ನಿನ್ನ ಹೆಂಡತಿಗೆ ಕೊಡು. ಅದನ್ನು ತಿಂದ ಬಳಿಕ ಅವಳು ಗರ್ಭವನ್ನು ಪಡೆಯುತ್ತಾಳೆ. ಎಂದು ಹೇಳಿ ಹಾರಿಹೋಯಿತು. ರಾಜನು ಗಿಳಿಯ ಬರುವುವಿಕೆಗಾಗಿ ಕಾಯುತ್ತಾ ಅಲ್ಲೇ ಕುಳಿತ. ಕೆಲ ಹೊತ್ತಿನ ನಂತರ ಗಿಳಿ ಒಂದು ಹಣ್ಣಿನ ಜೊತೆಗೆ ಬಂತು. ಅದನ್ನು ರಾಜನ ಕೈಯಲ್ಲಿ ಕೊಟ್ಟು ಇದೇ ಆ ಹಣ್ಣು. ಇದನ್ನು ನಿನ್ನ ಹೆಂಡತಿಗೆ ಕೊಡು ಎಂದು ಹೇಳಿತು. ರಾಜನು ಅದಕ್ಕೆ ಕೃತಜ್ಞತೆಯನ್ನು ತಿಳಿಸಿ ಅರಮನೆಗೆ ಹಿಂತಿರುಗಿದ. ಬಳಿಕ ತನ್ನ ರಾಣಿಯನ್ನು ಕರೆದು ಆ ಹಣ್ಣನ್ನು ತನ್ನ ಪತ್ನಿಗೆ ತಿಳಿಸಿದ. ಅದನ್ನು ತಿಂದ ಕೆಲ ತಿಂಗಳುಗಳ ಬಳಿಕ ಅವಳು ಗರ್ಭವನ್ನು ಧರಿಸಿದಳು. ಅದನ್ನು ನೋಡಿದ ರಾಜನ ಖುಷಿಗೆ ಪಾರವೇ ಇರಲಿಲ್ಲ. ತನ್ನ ನಗರದ ಪ್ರಜೆಗಳಿಗೆ ಹೊಸ ಉಡುಪನ್ನು ನೀಡಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ. ಇದನ್ನು ನೋಡಿದ ಪ್ರಜೆಗಳಿಗೂ ಸಹ ತುಂಬಾ ಸಂತೋಷವಾಯಿತು. ಹೀಗೆ ಒಂಬತ್ತು ತಿಂಗಳು ಕಳೆಯಿತು. ಒಂದು ದಿನ ರಾತ್ರಿ ಸಮಯದಲ್ಲಿ ರಾಜನ ಹೆಂಡತಿಗೆ ಹೊಟ್ಟೆ ನೋವು ಶುರುವಾಯಿತು. ರಾಜನು ದಾಸಿಯರನ್ನು ಕರೆದು ವಿಷಯವನ್ನು ತಿಳಿಸಿದ. ನಂತರ ಒಂದು ಪುಟ್ಟ ಮಗು ಅಳುವ ಶಬ್ದವು ರಾಜನ ಕಿವಿಗೆ ಕೇಳಿಸಿತು. ರಾಜನ ಆನಂದಕ್ಕೆ ಪಾರವೇ ಇರಲಿಲ್ಲ. ಅವನು ಊರ ತುಂಬಾ ಡಂಗುರ ಸಾರಿದ. ತನ್ನ ಊರಿನ ಎಲ್ಲಾ ಪ್ರಜೆಗಳಿಗೂ ತರತರವಾದ ಬಟ್ಟೆ ತಿನಿಸು ಎಲ್ಲವನ್ನು ನೀಡಿದ. ಹೀಗೆ ಮಗುವಿನ ನಾಮಕರಣವನ್ನು ಸಹ ವಿಜೃಂಭಣೆಯಿಂದ ಆಚರಿಸಲಾಯಿತು. ಈಗ ರಾಜ ತನ್ನ ದುಃಖವನ್ನೆಲ್ಲ ಮರೆತು ತನ್ನ ಹೆಂಡತಿ ಹಾಗೂ ಮಗಳೊಂದಿಗೆ ಸುಖವಾಗಿ ತನ್ನ ಜೀವನವನ್ನು ಕಳೆದನು.
.................................................. ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************


                

ಈಗ ನಮ್ಮ ಕಥೆ ಶುರುವಾಗುವುದು ಮನೋಜ ಎಂಬ ಹುಡುಗನಿಂದ. ಅವನು ಸೋಮಪುರ ಎಂಬ ಹಳ್ಳಿಯವನಾಗಿದ್ದ. ಅವನ ತಂದೆ ತಾಯಿ ಯಾವುದೋ ಕಾರಣದಿಂದಾಗಿ ಅವನನ್ನು ಹಳ್ಳಿಯಲ್ಲಿ ಇಟ್ಟುಕೊಳ್ಳದೇ ಅವನನ್ನು ಬೆಂಗಳೂರಿನಲ್ಲಿ ಹಾಸ್ಟೆಲ್ ಗೆ ಹಾಕಿದ್ದರು. ಇದು ಅವನಿಗೆ ಇಷ್ಟವಿಲ್ಲದಿದ್ದರೂ ಹಾಸ್ಟೆಲ್ ನಲ್ಲಿ ಇರಲೇಬೇಕಿತ್ತು. ಹೀಗೆ 10 - 15 ವರ್ಷಗಳು ಕಳೆದವು. ಅವನಿಗೆ ಈಗ ಮದುವೆ ವಯಸ್ಸು ಬಂದಿತ್ತು. ಅವನ ತಂದೆ ತಾಯಿ ಅವನಿಗೆ ಮದುವೆ ಮಾಡುವ ಸಲುವಾಗಿ ಹಳ್ಳಿಯಲ್ಲಿ ಒಂದು ಕನ್ಯೆಯನ್ನು ಹುಡುಕಿದರು. ಈ ಸಲುವಾಗಿ ಅವನನ್ನು ಈಗ ಹಳ್ಳಿಗೆ ಕರೆಸಲಾಯಿತು. ಅವನ ಜೊತೆ ಅವನ ಸ್ನೇಹಿತರು ಕೂಡ ಹಳ್ಳಿಗೆ ಬಂದರು. ರೈಲ್ವೆ ಸ್ಟೇಷನಿಂದ ಮನೆಗೆ ಕರೆ ತರಲು ಮನೋಜನ ತಾಯಿ ರಾಮಪ್ಪ ಎಂಬ ಅವರ ಮನೆಯ ಆಳನ್ನು ಕಳಿಸಿದ್ದರು. ಮನೋಜ್ ಮತ್ತು ಅವರ ಸ್ನೇಹಿತರು ಜೀಪನ್ನು ಹತ್ತಿದರು. ರಾಮಪ್ಪ ಗಾಡಿಯನ್ನು ಸ್ಟಾರ್ಟ್ ಮಾಡಿದ ರೈಲ್ವೆ ಸ್ಟೇಷನ್ ನಿಂದ ಸೋಮಪುರಕ್ಕೆ ಹೋಗಬೇಕಿದ್ದರೆ ಶಿವನಹಳ್ಳಿ ಎಂಬ ಊರನ್ನು ದಾಟಿ ಹೋಗಬೇಕಿತ್ತು, ರಾಮಪ್ಪ ಡ್ರೈವಿಂಗ್ ಮಾಡುತ್ತಾ ಇದ್ದ ಜೀಪಿನಲ್ಲಿರುವವರೆಲ್ಲ ಸುಮ್ಮನೆ ಕುಳಿತಿದ್ದರು. ಮನೋಜ ಮೌನವನ್ನು ಮುರಿಯುತ್ತ, "ರಾಮಪ್ಪ ನೀವು ಎಷ್ಟು ವರ್ಷದಿಂದ ನಮ್ಮಲ್ಲಿ ಕೆಲಸ ಮಾಡ್ತಾ ಇದ್ದೀರಾ?" "ಒಂದು ಐದು -ಆರು ವರ್ಷ ಆಯ್ತು ಅಪ್ಪೊರೆ" ಎಂದು ಹೇಳಿದ. ನೀವು ನನಗೆ ಅಪ್ಪೊರೆ ಎಂದು ಕರೆಯುವುದು ಬೇಡ ರಾಮಪ್ಪ. ಎಂದ ಮನೋಜ. ಅಲ್ಲ ಅಪ್ಪೊರೆ ಅದು.... ಅದು ಇಲ್ಲ ಇದು ಇಲ್ಲ ನೀವು ನನಗೆ ಮನೋಜ್ ಅಂತನೇ ಕರೀರಿ. ಆದ್ರೆ ನಾವು ಮಾತ್ರ ನಿಮಗೆ ಕಾಕಾ ಅಂತೀವಿ ಅಂದ. ಅದಕ್ಕೆ ಚಿರಾಗ ಎನ್ನುವವನು "ಹೌದು ಇದು ಸರಿಯಾಗಿದೆ" ಎಂದು ಹೇಳಿದ. ಅದಕ್ಕೆ ಎಲ್ಲರೂ ಕೂಡ ಹೌದು ಎನ್ನುವಂತೆ ತಲೆಯಾಡಿಸಿದರು. ಹೀಗೆ ಮಾತನಾಡುತ್ತಾ ಇರುವಾಗ ಸುಶಾಂತ ಅನ್ನುವವನಿಗೆ ಏನೊ ನೆನಪಾಗಿ ರಾಮಪ್ಪನ ಹತ್ತಿರ "ಕಾಕಾ ಇಲ್ಲಿ ಯಾವುದೋ ದೆವ್ವ ಇತ್ತಂತೆ ಅದು ರಾತ್ರಿ ವೇಳೆ ಊರಿನಲ್ಲಿ ಇಲ್ಲೇ ತಿರುಗಾಡುತ್ತಿರುತ್ತಂತೆ ಹೌದಾ?" ಎಂದು ಕೇಳಿದ. ಇದನ್ನು ಕೇಳುತ್ತಿದ್ದಂತೆಯೇ ರಾಮಪ್ಪನ ಮೈ ಒಂದ್ಸಲ ಕಂಪಿಸಿತು. ಅವನು ತೊದಲುತ್ತಾ ಯಾರ.... ಯಾರ್ ಹೇಳಿದ್ದು ನಿಮಗೆ. ಇದೆಲ್ಲ ಸುಳ್ಳು. ದೆವ್ವನು ಇಲ್ಲ ಗಿವ್ವನು ಇಲ್ಲ ಅಂತ ಅಂದ. ಆದರೆ ಇದು ಅಲ್ಲಿರುವವರಿಗೆ ನಂಬಿಕೆ ಬರುವಂತಿರಲಿಲ್ಲ. ಮನೋಜ್ ನ ಸ್ನೇಹಿತರು ರಾಮಪ್ಪನನ್ನು ನಿಜ ಹೇಳಲು ಬೇಡಿದರು. ಆದರೆ ರಾಮಪ್ಪ ಮಾತ್ರ ಏನೂ ಹೇಳಲಿಲ್ಲ. ಸ್ವಲ್ಪ ಸಮಯದ ನಂತರ ಅವರ ಮುಖ ಕಂಡಾಗ ರಾಮಪ್ಪನಿಗೆ ಬೇಸರವಾಗಿ ನಿಜ ಹೇಳಲು ಒಪ್ಪಿಕೊಂಡ. ಮನೋಜ ಮತ್ತು ಅವನ ಐದು ಸ್ನೇಹಿತರು ಕೂಡ ಕುತೂಹಲದಿಂದ ಕುಳಿತರು. ರಾಮಪ್ಪ ಡ್ರೈವಿಂಗ್ ಮಾಡುತ್ತಲೇ ಕಥೆ ಹೇಳಲು ಪ್ರಾರಂಭಿಸಿದ. ಸುಮಾರು ವರ್ಷದ ಹಿಂದೆ ಇಲ್ಲಿ ಚಿತ್ರಕಲಾ ಎಂಬ ಹುಡುಗಿ ಒಂದು ಅಂಗಡಿ ಹಾಕಿಕೊಂಡು ಮನೆಯ ಕೆಲಸವನ್ನು ನೋಡಿಕೊಳ್ಳುತ್ತಾ ಅಂಗಡಿ ಕೆಲಸವನ್ನು ನೋಡಿಕೊಳ್ಳುತ ಜೀವನ ಸಾಗಿಸುತಿದ್ದಳಂತೆ. ಒಂದಿನ ಅವಳ ಅಂಗಡಿಗೆ ಬಂದ ಗ್ರಾಹಕ ಇವಳನ್ನು ನೋಡಿ ಇವಳ ಸೌಂದರ್ಯದ ಬಲೆಯಲ್ಲಿ ಬಿದ್ದನಂತೆ. ಆಮೇಲಿನಿಂದ ದಿನಾ ಅವಳ ಅಂಗಡಿಗೆ ಬರತೊಡಗಿದನಂತೆ. ಒಂದಿನ ತನ್ನ ಪ್ರೀತಿಯನ್ನು ಅವಳ ಎದುರಿಗೆ ವ್ಯಕ್ತಪಡಿಸಿದ. ಇದನ್ನು ಅವಳು ಒಪ್ಪಕೊಳ್ಳದಿದ್ದಕ್ಕಾಗಿ ಅವಳನ್ನು ಸಾಯಿಸಿದನಂತೆ. ಇದು ನನಗೆ ನನ್ನ ತಂದೆ ತಿಳಿಸಿದ ವಿಷಯ. ಸುಶಾಂತ್ ನ ತಲೆಯಲ್ಲಿ ಮತ್ತೊಂದು ಪ್ರಶ್ನೆ ಕುರಿತು ಇದನ್ನು ಮನಗಂಡ ಮನೋಜ್... "ಏನು ಸುಶಾಂತ ಏನೋ ಚಿಂತೆ ಮಾಡುತ್ತಾ ಇದ್ದಂಗೆ ಇದೆ? ಅದಕ್ಕೆ ಉತ್ತರ ಕೊಟ್ಟ ಸುಶಾಂತ "ಆದ್ರೆ ಅದೇನು ಅವಳಿಗೆ ರಕ್ತ ಪಿಶಾಚಿ ಎಂದು ಹೆಸರು ಬಂತು ಎಂದು ಪುಸ್ತಕದಲ್ಲಿ ಓದಿದ ನೆನಪು. "ಸುಶಾಂತ್ ಎಷ್ಟು ಹೇಳುತ್ತಿದ್ದಂತೆ ರಾಮಪ್ಪ ಸಡನ್ ಆಗಿ ಬ್ರೇಕ್ ಹಾಕಿದ. ಯಾಕ್ ಬ್ರೇಕ್ ಹಾಕ್ದೆ ರಾಮಪ್ಪ ? ಎಂದು ಮನೋಜ್ ಕೇಳಿದ. ಅದಕ್ಕೆ ರಾಮಪ್ಪ "ಇನ್ನೇನು ಮಾಡಲಿ ಸರ್ ಮನೆ ಬಂತು ಅಂದ. ಓ ....ಹೌದಾ ಎನ್ನುತ್ತ ಮನೋಜ್ ಮತ್ತು ಅವನ ಐದು ಸ್ನೇಹಿತರು ಜೀಪಿನಿಂದ ಕೆಳಗಿಳಿದರು. ಮನೋಜನ ಸ್ನೇಹಿತರಿಗೆ ಶಾಕ್ ಅವರಿಗಾಗಿ ಕಾದಿತ್ತು. ಅನ್ನುವ ತರ ಮನೋಜನ ಮನೆಯನ್ನು ಅಷ್ಟು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಅವರೆಲ್ಲ ಮನೋಜನಿಗೆ ಮನೆ ಸೂಪರ್ ಅಂತ ಹೇಳ್ತಾ ಮನೆಯ ಒಳಗೆ ಹೋದರು. ಆದರೆ ಮನೋಜ್ ಮಾತ್ರ ಹೊರಗೆ ಇದ್ದಿದ್ದ. ಅವನಿಗೆ ತನ್ನನ್ಯಾರೋ ಫೋಲೊ ಮಾಡುತ್ತಿದ್ದಾರೆ ಅನಿಸುತ್ತಿತ್ತು. ಅವನು ಅದೆಲ್ಲ ತನ್ನ ಭ್ರಮೆಯೆಂದು ಅಂದುಕೊಳ್ಳುತ್ತಾ ಒಳಗೆ ಹೋದ. ಒಳಗೆ ಬರುತ್ತಿದ್ದಂತೆ ಅವನ ತಾಯಿ ಅವನನ್ನು ನೋಡಿ ಓಡಿಹೋಗಿ ತಬ್ಬಿ ಕೊಳ್ಳುತ್ತಾಳೆ. ಅವಳ ಕಣ್ಣೀರಲ್ಲಿ ಧಾರಾಕಾರವಾಗಿ ಕಣ್ಣೀರು ಸುರಿಯುತ್ತ ಇತ್ತು. ಅವಳು ತನ್ನ ಮಗನಿಗೆ ಕುಶಲ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಅವನು ಸಹ ಉತ್ತರ ಕೊಟ್ಟ ನಂತರ ಅವನ ತಾಯಿ ಕಣ್ಣೀರನ್ನು ಒರೆಸಿಕೊಳ್ಳುತ್ತ "ಈಗ ಹೋಗಿ ಮಲಗು. ನಿನಗೆ‌ ಸುಸ್ತಾಗಿರುತ್ತೆ ನಾಳೆ ನಿನ್ನ ಮದುವೆ ಇದೆ" ಮದುವೆ ಎನ್ನುವ ವಿಷಯ ಕೇಳುತ್ತಿದ್ದಂತೆ ಮನೋಜನಿಗೆ ಶಾಕ್ ಆಯ್ತು. ಅವನಿಗೆ ತನ್ನ ತಾಯಿ ತನಗೆ ವಿಷಯ ಹೇಳದೆ ಮದುವೆ ಪ್ರಸ್ತಾಪವನ್ನು ಮುಂದಿಟ್ಟದಕೆ ಸ್ವಲ್ಪ ಸಿಟ್ಟು ಬಂತು. ಆದ್ರೂ ತನ್ನ ತಾಯಿ ಯಾವಾಗಲೂ ಸರಿಯಾದುದನ್ನೆ ಆರಿಸಿರುತ್ತಾರೆ ಎಂದು ಭಾವಿಸುತ್ತಾ ಮಲಗಲು ಹೋದ. ಮರುದಿನ ಬೆಳಿಗ್ಗೆ ಮದುವೆ ಸಂಭ್ರಮ ಜೋರಾಗಿ ಇತ್ತು. ಎಲ್ಲಾ ಶಾಸ್ತ್ರವನ್ನು ಮುಗಿಸಿದ ಬಳಿಕ ಇನ್ನೇನು ಮದುವೆಗೆ ಅರ್ಧ ಗಂಟೆ ಇದೇ ಅನ್ನುವಾಗ ಹೊರಗಿನ ವಾತಾವರಣ ಬದಲಾಯಿತು. ಬೆಳ್ಳಿಯ ಮೋಡಗಳು ಕರಿಯ ಮೋಡಗಳಾಗಿ ಪರಿವರ್ತಿತಗೊಂಡವು. ಗಾಳಿ ರಭಸವಾಯಿತು. ಮರಗಳು ಅಲ್ಲಾಡತೊಡಗಿದವು. ಅಷ್ಟರಲ್ಲಿ ಮದುವೆ ಹುಡುಗಿಯನ್ನು ಕರೆತಂದು ಕೂರಿಸಲಾಯಿತು. ಅವಳು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದಳು. ಆದ್ರಿಂದ ಮನೋಜನಿಗೆ ಅವಳ ಮುಖ ನೋಡಲು ಸಾಧ್ಯವಾಗಲಿಲ್ಲ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಕರೆಂಟ್ ಹೋಯಿತು. ಅಲ್ಲಿ ತುಂಬಾ ಕತ್ತಲ ಆವರಿಸಿತು. ಕರೆಂಟ್ ಬರುವುದರೊಳಗೆ ಮನೋಜನ ಪಕ್ಕ ಕುಳಿತ್ತಿದ್ದ ಹುಡುಗಿ ಮಾಯವಾಗಿದ್ದಳು. ಆ ಹುಡುಗಿ ಎಲ್ಲಿ ಹೋದ್ಲು ಯಾಕ್ ಕರೆಂಟ್ ಹೋಯ್ತು, ಯಾರಾದ್ರೂ ಕರೆಂಟ್ ತಗೆದ್ರ ಅವಳೇ ದೆವ್ವಾನ ತಿಳೀಲಿಲ್ಲ.........
.................................................. ಭೂಮಿಕಾ 
10ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article