ಪ್ರೀತಿಯ ಪುಸ್ತಕ : ಸಂಚಿಕೆ - 109
Friday, May 3, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 109
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ....
ಸಾವಿತ್ರಿಬಾಯಿ ಫುಲೆ ಹೆಸರು ಕೇಳಿದ್ದೀರಾ? ನಾವು ಇವರ ಬಗ್ಗೆ ತಿಳಿದುಕೊಳ್ಳಲೇ ಬೇಕು. ಈ ಪುಸ್ತಕದಲ್ಲಿ ಬಹಳ ಸುಂದರವಾಗಿ ಇವರ ಕಥೆಯನ್ನು, ಜೀವನ ಪಯಣವನ್ನು ಚಿತ್ರದೊಂದಿಗೆ ವಿವರಿಸಿದ್ದಾರೆ. ಇದರಲ್ಲಿ ವಿಶೇಷ ರೀತಿಯ ಚಿತ್ರ ಇವೆ. ಚಿತ್ರ ನೋಡುವುದಕ್ಕೂ ಸಮಯ ಬೇಕು. ದಟ್ಟ ಬಣ್ಣಗಳ ಚಿತ್ರಗಳು. ಪ್ರತಿ ಚಿತ್ರದ ಜೊತೆಗೆ ಕಥೆಯ ನಿರೂಪಣೆ ಇದೆ. ಸಾವಿತ್ರಿ ಬಾಯಿಗೆ 9ನೇ ವರುಷಕ್ಕೆ ಮದುವೆ ಆಗುತ್ತದೆ. ಗಂಡ ಜ್ಯೋತಿಬಾ ಫುಲೆ. ಅವರು ಒಬ್ಬ ವಿಶೇಷ ವ್ಯಕ್ತಿ. ಸಾವಿತ್ರಿಗೆ ಓದು-ಬರಹ ಕಲಿಸುತ್ತಾರೆ. ಸಾವಿತ್ರಿ ಚೆನ್ನಾಗಿ ಓದಿ ಟೀಚರ್ ಆಗುತ್ತಾರೆ. ಯಾರಿಗೆ ಶಿಕ್ಷಣ ಪಡೆಯುವ ಅವಕಾಶ ಸಿಗುವುದಿಲ್ಲವೋ ಅಂತಹ ಹೆಣ್ಣುಮಕ್ಕಳಿಗೆ ಕಲಿಸುತ್ತಾರೆ. ಹಿಂದುಳಿದ ಜನರಿಗೆ ಕಲಿಸುವಾಗ ಜನ ಅವರಿಗೆ ತುಂಬಾ ತೊಂದರೆ ಕೊಡುತ್ತಾರೆ. ಆದರೆ ಸಾವಿತ್ರಿ ಬಾಯಿ ತನ್ನ ಗಂಡನ ಸಹಕಾರದೊಂದಿಗೆ ಬಹಳ ಧೈರ್ಯದಿಂದ ತಮ್ಮ ಕೆಲಸ ಮುಂದುವರಿಸುತ್ತಾರೆ. ಇವರು ನಮಗೆಲ್ಲಾ ಪ್ರೇರಣೆ. ಓದಿ.. ಬೇರೆಯವರಿಗೂ ಇವರ ಕಥೆ ಹೇಳಿ
ಲೇಖಕರು: ಲೇಹ್ ವರ್ಗೀಸ್, ರಂಜನಾ, ಮೇಧಾ ಸುಂದರ್
ಚಿತ್ರಗಳು: ಸುಮನ್ ಚಿತ್ರಕಾರ್, ಪಟುವಾ ಕಲಾವಿದರು
ಕನ್ನಡ ಅನುವಾದ: ಗೋಪಾಲಕೃಷ್ಣ ಐ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಸಹಯೋಗ: ಅಜೀಂ ಪ್ರೇಮ್ ಜಿ ಫೌಂಡೇಶನ್
ಬೆಲೆ: ರೂ.125/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************