-->
April -1 ಮೂರ್ಖರ ದಿನವೇ…? ಬರಹ : ಲಿಖಿತಾ ಸಿದ್ಧಕಟ್ಟೆ

April -1 ಮೂರ್ಖರ ದಿನವೇ…? ಬರಹ : ಲಿಖಿತಾ ಸಿದ್ಧಕಟ್ಟೆ

ಮಕ್ಕಳ ಜಗಲಿಯಲ್ಲಿ ಮಕ್ಕಳ ಲೇಖನ
ಲೇಖನ : April -1 ಮೂರ್ಖರ ದಿನವೇ…?
ಬರಹ : ಲಿಖಿತಾ ಸಿದ್ಧಕಟ್ಟೆ
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
        

     April-1… ಮೂರ್ಖರದಿನವೇ…? ಹೊಸ ವರ್ಷವೇ…? ಭಾರತದಲ್ಲಿ ಮೂರ್ಖರ ದಿನವಿದೆಯೇ...?
      April - 1 ‘Fools Day. “ಮೂರ್ಖರ ದಿನ”
ಈ ದಿನವಂತೂ ಎಷ್ಟೋ ಮಂದಿಯನ್ನು ತಿಳಿದೋ ತಿಳಿಯದೆಯೋ ಮೂರ್ಖರಾಗಿಸೋದನ್ನು ಕಾಣುತ್ತೇವೆ. ಈ ದಿನ ಎಲ್ಲಿಂದ ಬಂತು...? ಯಾಕೆ ಬಂತು..? ಇದರ ಇತಿಹಾಸ ತಿಳಿಯೋಣವೇ..
       ಸ್ನೇಹಿತರೆ… ಏಪ್ರಿಲ್ 01 ಪೂಲ್ಸ್ ಡೇ ಅನ್ನೋದು ಮೊದಲು ಪ್ರಾರಂಭವಾದದ್ದು ಕ್ರಿಸ್ತಶಕ 1564ರಲ್ಲಿ. ಯುರೋಪ್ ಖಂಡದ 3ನೇ ಅತಿ ದೊಡ್ಡ ದೇಶ ಪ್ರಾನ್ಸ್ ನಲ್ಲಿ. ಯುರೋಪ್ ನ ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1 ಅಲ್ಲಿನ ಜನರಿಗೆ ಹೊಸ ವರುಷವಾಗಿತ್ತು. ಆದರೆ 1564ರ ನಂತರ ಅಲ್ಲಿನ ದೊರೆ 10ನೆ ಜಾನ್ ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೆ ತಂದ. ಜನವರಿ 1 ರಂದು ಹೊಸ ವರುಷ ವನ್ನು ಆಚರಿಸಬೇಕು ಎಂದು ಆಜ್ಞೆ ಮಾಡಿದ. ಬಹುತೇಕರು ರಾಜನ ಆಜ್ಞೆಯ ಪ್ರಕಾರ ಜನವರಿ 1ನೇ ತಾರೀಕಿನಂದು ಹೊಸ ವರ್ಷವನ್ನು ಆಚರಿಸೋದಿಕ್ಕೆ ಪ್ರಾರಂಭಿಸಿದರು. ಆದರೆ ಅಲ್ಲಿನ ಕೆಲವರು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಒಪ್ಪಲು ತಯಾರಿರಲಿಲ್ಲ. ಏಪ್ರಿಲ್ 1 ನ್ನೆ ಹೊಸ ವರ್ಷವನ್ನಾಗಿ ಆಚರಿಸುತ್ತಿದ್ದರು. ದೊರೆಯ ಆಜ್ಞೆ ಯನ್ನೆ ಉಲ್ಲಂಘಿಸಿದ ಇವರಿಗೆ ಸುತ್ತಲಿನ ಜನ ಮೊದ ಮೊದಲು ಗೇಲಿ ಮಾಡೋದಿಕ್ಕೆ ಶುರು ಮಾಡಿದ್ರು. ನಂತರ ನಕಲಿ ಉಡುಗೊರೆ ಗಳನ್ನ ಕೊಡೋದು. ಔತಣಕ್ಕೆ ಆಹ್ವಾನಿಸಿ ಅದನ್ನ ನಂಬಿ ಬಂದವ್ರನ್ನು ಮೂರ್ಖರನ್ನಾಗಿ ಮಾಡೋದು. ಇಂತಹ ಪ್ರಕರಣಗಳು ಶುರುವಾಯಿತು. ಕೊನೆಗೆ ಈ ದಿನ ಹೊಸ ವರುಷದ ಬದಲಾಗಿ ಮೂರ್ಖರ ದಿನವಾಗಿ ಬದಲಾಯಿತು.
         ನಾವೆಲ್ಲರೂ ಈ ದಿನವನ್ನು ಮನೋರಂಜನೆಗಾಗಿ ಆಚರಿಸುವುದೇನೋ ಹೌದು. ಆದರೆ ಈ ದಿನದ ಇತಿಹಾಸದ ಪ್ರಕಾರ ನಾವೇನು ಏಪ್ರಿಲ್ 1 ನ್ನು ಹೊಸ ವರುಷವಾಗಿ ಆಚರಿಸಿ ಮೂರ್ಖರಾಗಿಲ್ಲ. ಆದರೂ ನಾವು ಒಂದರ್ಥದಲ್ಲಿ ಮೂರ್ಖರೇ...!!
 
ಹೇಗೆ....?
      ಭಾರತದಲ್ಲಿ ಖಾಲ್ಸಾ ಕ್ಯಾಲೆಂಡರ್ ಪ್ರಕಾರ ಸಿಖ್ಖರ ಹೊಸ ವರ್ಷ ಬೈಸಾಖಿ. ಬೋಹಾಗ್ ಬಿಹು ಭಾರತದ ಈಶ್ಯಾನ ರಾಜ್ಯಗಳ ನಿವಾಸಿಗಳ ಹೊಸ ವರ್ಷ. ಗುಡಿ ಪಾಡ್ವ ಮಹಾರಾಷ್ಟ್ರ ಜನರ ಹೊಸ ವರ್ಷ. ಪಾರ್ಸಿ ಯನ್ನರ ಹೊಸ ವರ್ಷ ಜಮ್ಶೇಡಿ ನಮ್ರೋಜ್. ಪೋಹೆಲ ಬೋಯಿಶಾಖ್ ಪಶ್ಚಿಮ ಬಂಗಾಳದ ಹೊಸ ವರ್ಷ. ದಕ್ಷಿಣ ಭಾರತದ ಹೊಸ ವರ್ಷ ಯುಗಾದಿ. ದೇಶೀಯ ಸಂಸ್ಕೃತಿ.. ಆಹಾರ ಪದ್ಧತಿ.. ಉಡುಗೆ ತೊಡುಗೆ, ಆಚಾರ ವಿಚಾರ ಗಳನ್ನ ಬಿಟ್ಟು ವಿದೇಶೀಯ ಜೀವನಕ್ರಮವನ್ನು ಮೈಗೂಡಿಸಿಕೊಳ್ಳುತ್ತಿರುವ ನಾವು ಏಪ್ರಿಲ್ 1ರಂದು ಮಾತ್ರವಲ್ಲ ಪ್ರತಿ ದಿನವೂ ಮೂರ್ಖರಾಗುತ್ತಿರುವುದು ವಿಪರ್ಯಾಸ. ಸಂಸ್ಕೃತಿ, ಸಂಪ್ರದಾಯ ಮರೆತರೆ ನಾವು ನಿಜವಾದ ಮೂರ್ಖರು. ಆರೋಗ್ಯಕರ ಜೀವನ ನಡೆಸುತ್ತಿದ್ದ ಹಿರಿಯರ ಆಹಾರ ಪದ್ಧತಿ, ಜೀವನ ಕ್ರಮವನ್ನು ಕೈ ಬಿಡುತ್ತಿರುವ ನಾವು ನಿಜವಾದ ಮೂರ್ಖರು. ಸಾಂಪ್ರದಾಯಿಕ ಉಡುಗೆತೊಡುಗೆಯ ತ್ಯಜಿಸಿ ವಿದೇಶೀ ವಸ್ತ್ರಗಳಿಗೆ ಮಾರು ಹೋಗಿರುವ ನಾವು ನಿಜವಾದ ಮೂರ್ಖರು. ಈ ಮೂರ್ಖತನ ಯಾವಾಗ ಬಿಡುತ್ತದೆಯೋ.. ತಿಳಿಯದು. ದೇಸೀ ಆಚಾರ- ವಿಚಾರ, ಸಂಸ್ಕೃತಿ - ಸಂಪ್ರದಾಯ ಗಳನ್ನು ಅರಿತು ಬದುಕೋಣ. ಅರ್ಥಪೂರ್ಣ ಆಚರಣೆಗಳ ಕಡೆ ಗಮನ ಹರಿಸೋಣ.
...................................... ಲಿಖಿತಾ ಸಿದ್ಧಕಟ್ಟೆ 
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article