-->
ಜಗಲಿ ಕಟ್ಟೆ : ಸಂಚಿಕೆ - 48

ಜಗಲಿ ಕಟ್ಟೆ : ಸಂಚಿಕೆ - 48

ಜಗಲಿ ಕಟ್ಟೆ : ಸಂಚಿಕೆ - 48
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

     
      ರಜೆಯಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ತುಂಬಾ ಮಂದಿ ಮಕ್ಕಳು ಕೂಡ ಇದ್ದರು. ಅವರಲ್ಲಿ ಹಲವರು 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆದವರಾಗಿದ್ದರು. ಹೀಗೆ ಮಾತಾಡುತ್ತಾ, ಮುಂದೇನು ಕಲಿಯುತ್ತೀರಿ ಅಂದಾಗ.. "ಇನ್ನೂ ಡಿಸೈಡ್ ಮಾಡಿಲ್ಲ ನೋಡಬೇಕು" ಎನ್ನುತ್ತಿದ್ದ ಅವರು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಗೊಂದಲದಲ್ಲಿದ್ದರು. ತಮ್ಮ ಮುಂದಿನ ಗುರಿ ಏನು ಎಂದು ಯೋಚನೆ ಮಾಡುವ ಶಕ್ತಿ ಇನ್ನೂ ಒದಗಿಲ್ಲ ಅಂದರೆ ತಮ್ಮ ಆಸಕ್ತಿಯ ವಿಷಯವನ್ನು ಇನ್ನೂ ಕಂಡುಕೊಂಡಿಲ್ಲವೆಂದೆ ಹೇಳಬಹುದು. ಹಾಗಾದರೆ ಈ ಮಕ್ಕಳು ತಮ್ಮ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತಾರೆ ಎನ್ನುವುದೇ ಪ್ರಶ್ನೆ....!!?
       ಈಗೀಗ ಹೊಸ ಹೊಸ ಕೋರ್ಸುಗಳು ಬಂದಿವೆ. ದಿನಕ್ಕೊಂದು ಹೊಸ ಕಾಲೇಜುಗಳು  ತಲೆ ಎತ್ತುತ್ತಿರುವುದುವುದನ್ನು ನೋಡುತ್ತಿದ್ದೇವೆ. ಇವೆಲ್ಲ ಯಾವ ಕೋರ್ಸ್ ಮೇಲೆ ಹೆಚ್ಚು ಅವಕಾಶಗಳಿವೆ ಎನ್ನುವುದನ್ನು ಬಿಂಬಿಸುತ್ತಾ ವಿದ್ಯಾರ್ಥಿಗಳನ್ನು ಆಕರ್ಷಿಸುವುದರಲ್ಲಿ ಮಗ್ನವಾಗಿದೆ. ಸಲಹೆ ಕೊಡುವವರು ಅಷ್ಟೇ... ವಿದ್ಯಾರ್ಥಿಗಳ ಪ್ರತಿಭೆಯ ಮೇಲೆ ಅವಲಂಬಿತವಾಗಿರದ ವಿಫುಲ ಅವಕಾಶಗಳಿರುವ ಕೋರ್ಸುಗಳನ್ನು ಆಯ್ಕೆ ಮಾಡಲು ಸೂಚಿಸುವುದನ್ನು ಕಾಣುತ್ತೇವೆ. ಆದರೆ ತನ್ನ ಪ್ರತಿಭೆಗೆ ತಕ್ಕ ಸಿಗದ ಕೋರ್ಸುಗಳಲ್ಲಿ ಮುಂದೆ ಸಾಗುತ್ತಾ ಹೆಚ್ಚು ತ್ರಾಸ ಅನುಭವಿಸುವುದನ್ನು ಕೂಡ ಕಾಣುತ್ತೇವೆ. ಆದುದರಿಂದ ತನ್ನ ಆಸಕ್ತಿ ಹಾಗೂ ಕೌಶಲ್ಯಕ್ಕೆ ಅನುಗುಣವಾಗಿ ಕೋರ್ಸುಗಳನ್ನು ಆಯ್ಕೆ ಮಾಡುವುದು ಉತ್ತಮ. 
        ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗೆ ವಿಪುಲ ಅವಕಾಶವಿದೆ ಎಂದು ಕೋರ್ಸುಗಳನ್ನು ಆಯ್ಕೆ ಮಾಡಿ ಶಿಕ್ಷಕನಾದರೆ ವಿದ್ಯಾರ್ಥಿಗಳ ಜೊತೆಗೆ ಬೆರೆತು ಬೋಧನೆ ಮಾಡುವ ಕೌಶಲ್ಯವನ್ನು ಹೇಗೆ ಪಡೆದುಕೊಳ್ಳಲು ಸಾಧ್ಯ...!! ಇದೇ ರೀತಿಯ ಪರಿಸ್ಥಿತಿ ಅನೇಕ ರಂಗಗಳಲ್ಲೂ ಕೂಡ ಆಗುವುದಿದೆ.... ತಾಂತ್ರಿಕ ಕ್ಷೇತ್ರಗಳಲ್ಲಿ ಆಸಕ್ತಿ ಇಲ್ಲದಿದ್ದರೂ ಅವಕಾಶವಿದೆ ಎಂದು ಆ ಕ್ಷೇತ್ರಕ್ಕೆ ಕಾಲಿಡುವುದು... ವೈದ್ಯಕೀಯ ಕ್ಷೇತ್ರದಲ್ಲಿ ಅಪ್ಪ ಅಮ್ಮನ ಒತ್ತಾಯಕ್ಕೆ ಕಾರ್ಯನಿರ್ವಹಿಸುವುದು, ಆಡಳಿತ, ವ್ಯವಹಾರದ ಜ್ಞಾನ ಇಲ್ಲದೆ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗುವುದು, ಮಾತಿನ ಕೌಶಲ್ಯ, ದಕ್ಷತೆ , ಗೌರವಿಸುವ ಗುಣ, ಹೊಂದಾಣಿಕೆಯ ಮನೋಭಾವ ಇಲ್ಲದವರು ಅಧಿಕಾರಿಗಳಾಗುವುದು, ಉತ್ತಮ ಯೋಚನೆ, ಯೋಜನೆಗಳಿಲ್ಲದವರು ಸಾರ್ವಜನಿಕ ಕ್ಷೇತ್ರದ ದೊಡ್ಡ ಹುದ್ದೆಗಳಲ್ಲಿ ಇರುವುದರಿಂದ ಸರಿಯಾದ ದಿಕ್ಕಿನಲ್ಲಿ ಕೆಲಸ ಸಾಗದೆ ಗುಣಮಟ್ಟವನ್ನು ಕಳೆದುಕೊಳ್ಳುವುದನ್ನು ಕಾಣುತ್ತೇವೆ. ಇಲ್ಲಿ ನಮ್ಮ ನಿಜವಾದ ಕಾರ್ಯ ಕ್ಷಮತೆಯನ್ನು ಬಲಿಕೊಟ್ಟ ಹಾಗೆ...!!
     ಕಳೆದ ಬಾರಿ ಅತ್ಯುತ್ತಮ ಚಿತ್ರ ಮಾಡುತ್ತಿದ್ದ ಬೇರೆ ಊರಿನ ವಿದ್ಯಾರ್ಥಿ ಒಬ್ಬರು ತಮ್ಮ ಕಲಾಕೃತಿಗಳನ್ನು ವಾಟ್ಸಪ್ ಮೂಲಕ ಕಳುಹಿಸಿ ಕೊಟ್ಟಿದ್ದರು. ಅವರ ಕೌಶಲ್ಯ ಪ್ರತಿಭೆಯನ್ನು ಕಂಡು ಇಂದಿನ ಪ್ರಸ್ತುತ ವಿಶುವಲ್ ಆರ್ಟ್ ಕೋರ್ಸ್ ಆಯ್ಕೆ ಮಾಡಲು ಸಲಹೆ ನೀಡಿದ್ದೆ. ಆ ಮೂಲಕ ತಮ್ಮ ಪ್ರತಿಭೆಗೆ ಪೂರಕ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ವಿಪುಲ ಅವಕಾಶದ ಬಗ್ಗೆಯೂ ತಿಳಿಸಿದ್ದೆ. ಆದರೆ ಅದರ ಮಾಹಿತಿಯ ಕೊರತೆಯ ಯಾರೋ ಹಿರಿಯರು ಆ ಬಗ್ಗೆ ನಕಾರಾತ್ಮಕ ಮಾಹಿತಿ ನೀಡಿ ದಾರಿ ತಪ್ಪಿಸಿದರು. ಅತ್ಯುತ್ತಮ ಕಲಾವಿದನಾಗುವ ಅವಕಾಶದಿಂದ ವಂಚಿತನಾಗಿ ಸಾಮಾನ್ಯವಾಗಿ ಹಣ ಸಂಪಾದಿಸಿ ಬದುಕುವ ದಾರಿಯನ್ನು ಕಂಡುಕೊಳ್ಳುವ ಪರಿಸ್ಥಿತಿ ಅವರಿಗೆ ಎದುರಾಯಿತು.
     ಕಲಾಮಾಧ್ಯಮದಲ್ಲಿ ಆಸಕ್ತಿ ಹೊಂದಿದ್ದ ಅನೇಕ ನನ್ನ ವಿದ್ಯಾರ್ಥಿಗಳು ಇಂದು ಕಲಾಕ್ಷೇತ್ರದ ಅತ್ಯಂತ ಬೇಡಿಕೆಯ ಕಲಾವಿದರಾಗಿರುವುದು ಅತ್ಯಂತ ಸಂತಸದ ವಿಷಯ. ಸರಿಯಾದ ಮಾಹಿತಿ ಪ್ರೋತ್ಸಾಹ ಬೆಂಬಲವಿದ್ದರೆ ಯಾವುದೇ ವಿದ್ಯಾರ್ಥಿಗಳು ಕೂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾರೆ. ಮಾಡುವ ಉದ್ಯೋಗ ಸಣ್ಣದು ದೊಡ್ಡದು ಎನ್ನುವ ಕಲ್ಪನೆ ಇಲ್ಲದೆ ತಮ್ಮ ಆಸಕ್ತಿ, ಪ್ರತಿಭೆ ಹಾಗೂ ಕೌಶಲ್ಯಕ್ಕೆ ಅನುಗುಣವಾಗಿ ನಿರ್ವಹಿಸುತ್ತಾ ಹೋದರೆ ಅತ್ಯಂತ ಬೇಡಿಕೆಯ ವ್ಯಕ್ತಿಗಳಾಗುತ್ತೇವೆ ಎನ್ನುವುದು ಮಾತ್ರ ನಿಜ. ನಮಸ್ಕಾರ
    

ಕಳೆದ ಸಂಚಿಕೆಯ ಜಗಲಿಕಟ್ಟೆ - 47 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ,
    ಪತಂಜಲಿ ಮಹರ್ಷಿಯ ಸೂತ್ರದಂತೆ ಆನೋಪಾಯ ಎಂದರೇನು ಮತ್ತು ಆನೋಪಾಯದ ವಿಧಗಳನ್ನು ಸವಿಸ್ತಾರವಾಗಿ ತಿಳಿಸಿ ಅದರಿಂದಾಗುವ ಪ್ರಯೋಜನಗಳ ಕುರಿತ ಸುಂದರ ಸಂಚಿಕೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
    ವಿಸ್ಮರಣೆಯಿಂದಾಗುವ ತೊಂದರೆಗಳು ಅದರಿಂದಾಗಿ ಇತರರು ಪಡಬೇಕಾಗುವ ಕಷ್ಟಗಳ ಕುರಿತಾಗಿ ವಿವರಣಾತ್ಮಕವಾದ ಲೇಖನ ರಮೇಶ್ ಬಾಯಾರು ರವರಿಂದ. ಚೆನ್ನಾಗಿತ್ತು ಸರ್ ಲೇಖನ.
    ವೈರಸ್ಗಳು ಆಶ್ರಯ ಜೀವಿಯ ಕೋಶಗಳನ್ನು ಸೇರಿ ಬೆಳವಣಿಗೆ ಹೊಂದುವ ಪರಿಯನ್ನು ಬಹಳ ಸೊಗಸಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ದಿವಾಕರ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ತಿಳಿಸಿದ್ದಾರೆ. ಧನ್ಯವಾದಗಳು ಸರ್ ತಮಗೆ.
    ಅರವಿಂದರವರ ಹಕ್ಕಿ ಕಥೆಯಲ್ಲಿ ಒಣಗಿದ ಹುಲ್ಲಿನ ಬಣ್ಣದ ಸುಂದರವಾದ ಮಲೆ ನೆಲ ಗುಬ್ಬಿ ಹಕ್ಕಿಯ ಪರಿಚಯ ಸೊಗಸಾಗಿ ಮೂಡಿಬಂದಿದೆ. 
     ವಿಜಯಾ ಮೇಡಂರವರ ನಿಷ್ಟಾಪಿ ಸಸ್ಯಗಳ ಸಂಚಿಕೆಗಳು ಪ್ರತಿ ವಾರವೂ ಹೊಸ ಸಸ್ಯಗಳ ಪರಿಚಯದ ಜೊತೆಗೆ ಅವುಗಳ ಉಪಯುಕ್ತತೆಯ ಕುರಿತಾಗಿ ಅಗತ್ಯ ಮಾಹಿತಿಗಳನ್ನು ನೀಡುತ್ತವೆ. ಈ ವಾರ ಹೊನೆಗನಿ ಸಸ್ಯದ ಪರಿಚಯ ಉತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು ಮೇಡಂ.
     ಕೇವಲ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಮಾತ್ರ ಶ್ರೇಷ್ಠ ಎಂದು ತಮ್ಮ ಮಕ್ಕಳನ್ನು ಅಂತಹ ಶಿಕ್ಷಣಕ್ಕೆ ಕಳುಹಿಸುವ ಪೋಷಕರಿಗೆ ಕಿವಿ ಮಾತು ಯಾಕೂಬ್ ಸರ್ ರವರ ಈ ಸಲದ ಸಂಚಿಕೆ.
    ಮಕ್ಕಳಿಗಾಗಿಯೇ ಇರುವ ಕಥೆಗಳನ್ನೊಳಗೊಂಡ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
     ರಮೇಶ್ ಉಪ್ಪಂದರವರ ಈ ವಾರದ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿಬಂದಿದೆ.
    ತಂದೆಯವರು ಹೇಳಿದ ಉಪಾಯವನ್ನನುಸರಿಸಿ ಸುಲಭವಾಗಿ ಜೇನು ತೆಗೆದ ಅನುಭವ ನಾಗೇಂದ್ರರವರ ಈ ಸಲದ ಸನಿ ಜೇನು ಸಂಚಿಕೆಯಲ್ಲಿ ಸುಂದರವಾಗಿ ಮೂಡಿಬಂದಿದೆ.
     ಸುಂದರ ಲೇಖನಗಳಿಗೆ ಕಾರಣಕರ್ತರಾದ ಜಗಲಿಯ ಎಲ್ಲಾ ಲೇಖಕರಿಗೂ ನನ್ನ ಮನದಾಳದ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
********************************************




ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................... ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

Ads on article

Advertise in articles 1

advertising articles 2

Advertise under the article