-->
ಮಕ್ಕಳ ಬೇಸಿಗೆ ಶಿಬಿರ - 2024

ಮಕ್ಕಳ ಬೇಸಿಗೆ ಶಿಬಿರ - 2024

ಮಕ್ಕಳ ಬೇಸಿಗೆ ಶಿಬಿರ - 2024
ವಿವಿಧ ಭಾಗಗಳಲ್ಲಿ ನಡೆಯುವ ಮಕ್ಕಳ ಶಿಬಿರಗಳ ಮಾಹಿತಿ

   ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿದ್ದೇವೆ. ವಾರ್ಷಿಕ ಪರೀಕ್ಷೆಗಳೆಲ್ಲ ಮುಗಿದು ಮಕ್ಕಳಿಗೆ ಇನ್ನೇನು ಬೇಸಿಗೆ ರಜೆ ಆರಂಭವಾಯಿತು... ಬಿರು ಬೇಸಿಗೆಯ ಖಾರವಾದ ವಾತಾವರಣ ಮನಸ್ಸನ್ನು ಕೂಡ ಬಿಸಿಗೊಳಿಸುತ್ತಾ ಇದೆ...!! 
    ಮಕ್ಕಳ ಮನಸ್ಸು ಮೃದುವಾಗಬೇಕು. ಹೊಸ ಹೊಸ ಕಲಿಕೆಗಳನ್ನು ತನ್ನದಾಗಿಸಿಕೊಳ್ಳಬೇಕು. ರಜೆಯ ಸಂಭ್ರಮವನ್ನು ತನ್ನದಾಗಿಸಿಕೊಳ್ಳಬೇಕು. ಹೀಗಾಗಬೇಕಾದರೆ ರಜೆಯಲ್ಲಿ ಮಜಾ ನೀಡುವ ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಮಕ್ಕಳೆಲ್ಲರೂ ಭಾಗವಹಿಸಬೇಕೆನ್ನುವುದು ಮಕ್ಕಳ ಜಗಲಿಯ ಆಶಯ.... 
      ವಿವಿಧ ಭಾಗಗಳಲ್ಲಿ ನಡೆಯುವ ಮಕ್ಕಳ ಶಿಬಿರಗಳ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಅನುಕೂಲವೆನಿಸುವ ಸಂದರ್ಭ ಒದಗಿ ಬಂದರೆ ಖಂಡಿತವಾಗಲು ಭಾಗವಹಿಸಿಕೊಳ್ಳಬಹುದು. ಸಂಘಟಕರನ್ನು ಸಂಪರ್ಕಿಸಿ ಶಿಬಿರದ ಮಾಹಿತಿಯನ್ನು ಪಡೆದುಕೊಳ್ಳಬಹುದು...


ಎಸ್ ವಿ ಎಸ್ ವಿದ್ಯಾವರ್ಧಕ ಸಂಘ (ರಿ) ಕಟಪಾಡಿ ಇವರು ಪ್ರಸ್ತುತ ಪಡಿಸುವ ರಜಾ ಮಜಾ -2024 ಮಕ್ಕಳ ಬೇಸಿಗೆ ಶಿಬಿರವು ಏಪ್ರಿಲ್ 8 ರಿಂದ ಏಪ್ರಿಲ್ 17ರ ವರೆಗೆ 10 ದಿನಗಳ ಕಾಲ ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲಾ ವಠಾರದಲ್ಲಿ ಜರಗಲಿರುವುದು.
6 ರಿಂದ 16 ವರ್ಷದ ಮಕ್ಕಳು ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 8088143006 ಈ ಮೋ. ನಂಬರನ್ನು ಸಂಪರ್ಕಿಸುವುದು.
      10 ದಿನಗಳ ಈ ಶಿಬಿರದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಚಟುವಟಿಕೆಗಳನ್ನು ನಾಡಿನ ಪ್ರಸಿದ್ದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ತರಬೇತಿಯನ್ನು ನೀಡಲಿರುವರು. 
       ಮುಖ್ಯವಾಗಿ ವೆಂಕಿ ಪಲಿಮಾರು, ರಾಜೇಶ್ ಕಾಮತ್, ರಾಜೇಂದ್ರ ಭಟ್ ಬೆಳ್ಮಣ್, ರಮೇಶ್ ಬಂಟಕಲ್, ರಾಘವ್ ಸೂರಿ ಮಂಗಳೂರು, ಚಂದ್ರಕಲಾ ರಾವ್, ರಮಿತಾ ಶೈಲೇಂದ್ರ ಕಾರ್ಕಳ, ಮನೋಜ್ ಕಾಂಚನ್, ಭಾಗ್ಯಲಕ್ಷ್ಮೀ ಉಪ್ಪೂರು, ದೀಕ್ಷಾ ಸಾಲಿಯಾನ್, ಶ್ರುತಿ ಭಟ್ ಉದ್ಯಾವರ, ಪ್ರಥಮ್ ಕಾಮತ್ ಕಟಪಾಡಿ, ಮುಸ್ತಾಫಾ, ನಾಗೇಶ್ ಕಾಮತ್ ಹಾಗೂ ಇನ್ನಿತರರು ತರಬೇತಿಯನ್ನು ನೀಡಲಿದ್ದಾರೆ.
         ಶಿಬಿರದ ಮುಖ್ಯ ಆಕರ್ಷಣೆಯಾಗಿ ಅಗ್ನಿಶಾಮಕ ದಳ ಉಡುಪಿ ಇವರಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ವ್ಯಕ್ತಿತ್ವ ವಿಕಸನ ತರಬೇತಿ, ಪಿಕ್ನಿಕ್, ಡ್ರಾಯಿಂಗ್, ಕ್ರಾಫ್ಟ್, ಮ್ಯಾಜಿಕ್, ಫೇಸ್ ಪೈಂಟಿಂಗ್, ಯೋಗ, ನೃತ್ಯ, ಸಂಗೀತ, ಟೆರಾಕೋಟ ಕಲೆ, ಮುಖವಾಡ ತಯಾರಿ, ಕಾಡಿನಲ್ಲಿ ಒಂದು ದಿನ,ಸ್ವಿಮ್ಮಿಂಗ್, ಮನೋರಂಜನಾ ಆಟಗಳು, ಇನ್ನೂ ಮುಂತಾದ ಹಲವು ಕಾರ್ಯಕ್ರಮಗಳು ಜರಗಲಿವೆ.
        ಶಿಬಿರದಲ್ಲಿ ಝೀ ಕನ್ನಡ ಪಾರು ಧಾರಾವಾಹಿಯ ಬಾಲನಟಿ ಪ್ರಾನ್ವಿ ಅಕ್ಷಯ್ ಮಂಗಳೂರು ಜೂ. ರಿಷಭ್ ಶೆಟ್ಟಿ ಖ್ಯಾತಿಯ ಪ್ರದೀಪ್ ಆಚಾರ್ಯ ಶಿರ್ವ ಭಾಗವಹಿಸಲಿರುವರು. ವಿದ್ಯಾವರ್ಧಕ ಸಂಘ ದ ಕಾರ್ಯದರ್ಶಿ ಹಾಗೂ ಸಂಚಾಲಕರಾದ ಕೆ ಸತ್ಯೇಂದ್ರ ಪೈ ಯವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ, ಶಿಕ್ಷಕೇತರ ಬಳಗದವರು ಶಿಬಿರದ ಕಾರ್ಯಕ್ರಮವನ್ನು ಸಂಘಟಿಸಲಿದ್ದು, ಕಾರ್ಯಕ್ರಮದ ಸಂಯೋಜನೆಯನ್ನು ಕಲಾವಿದ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ದೇವೇಂದ್ರ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಮಂಗಳೂರಿನಲ್ಲಿ ಸ್ವರೂಪ ಅಧ್ಯಯನ ಸಂಸ್ಥೆಯ ಮಕ್ಕಳ ಮೆಮೊರಿ ಕ್ಯಾಂಪ್ 


ರಂಗ ಸಂಭ್ರಮ ರಾಜ್ಯಮಟ್ಟದ ಮಕ್ಕಳ ಶಿಬಿರ - ಬೆಳ್ಳಾರೆ


ಚಿಣ್ಣರ ಹಬ್ಬ ರಾಜ್ಯಮಟ್ಟದ ಮಕ್ಕಳ ಶಿಬಿರ - ವಿಟ್ಲ


ಚಿಣ್ಣರ ಮೇಳ ರಾಜ್ಯಮಟ್ಟದ ಮಕ್ಕಳ ಶಿಬಿರ - ರಂಗಮನೆ ಸುಳ್ಯ


ಝೇಂಕಾರ ಮಕ್ಕಳ ಬೇಸಿಗೆ ಶಿಬಿರ - ಬೆಳ್ತಂಗಡಿ


ಅದ್ವೈತ್ ಮಕ್ಕಳ ಬೇಸಿಗೆ ಶಿಬಿರ - ಪಂಜ - ಕಳಂಜ


ಬೇಸಿಗೆ ರಜಾ ಹಬ್ಬ ಸಂಸ್ಕಾರ ಸುರಭಿ - ಸಂಸ್ಕಾರ ಭಾರತಿ ಸಂಸ್ಥೆ




Ads on article

Advertise in articles 1

advertising articles 2

Advertise under the article