ಪ್ರೀತಿಯ ಪುಸ್ತಕ : ಸಂಚಿಕೆ - 108
Friday, April 26, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 108
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ಮೀನು ಇಷ್ಟ ಪಡುವವರಿಗೆ ಇದು ಭಾರೀ ಖುಶಿ ಕೊಡುವ ಪುಸ್ತಕ. ಮೀನು ಇಷ್ಟವಿಲ್ಲದೇ ಹೋದರೂ ಇಷ್ಟಪಡುವವರ ಅಭಿರುಚಿ, ಖುಶಿಯಲ್ಲಿ ಪಾಲ್ಗೊಳ್ಳಬಹುದು. ಅಗಲ ಗಾತ್ರದ, ಪುಟ ತುಂಬಾ ಚಿತ್ರವಿರುವ, ಚಿಕ್ಕ ಚಿಕ್ಕ ಬರಹ ಇರುವ ಸುಂದರವಾದ ಪುಸ್ತಕವಿದು. ಕರಾವಳಿ ಪ್ರದೇಶದವರಿಗೆ ದಿನನಿತ್ಯ ಕಣ್ಣಿಗೆ ಕಾಣುವ ದೃಶ್ಯಗಳು ಈ ಪುಸ್ತಕದಲ್ಲಿ ಇವೆ. ಕರಾವಳಿಯ ಪುಟ್ಟ ಊರಿನ ಪುಟ್ಟ ಹುಡುಗಿ ಕಲ್ಪನಾ. ಮೀನು ಅಂದರೆ ಬಹಳ ಇಷ್ಟ. ಮೀನು ಮಾರುವ ಮೀನಮ್ಮ ಬಂದರೆ ಕಲ್ಪನಾಗೆ ಆ ಮೀನಿನ ಬುಟ್ಟಿ ನೋಡುವ, ಹೊಸ ಹೊಸ ಮೀನುಗಳ ಪರಿಚಯ ಮಾಡಿಕೊಳ್ಳುವ ತವಕ. ದಿನಾ ಮೀನು ನೋಡುವ ಕಲ್ಪನಾಗೆ ಒಮ್ಮೆ ಮೀನೇ ಸಿಗುವುದಿಲ್ಲ.. ಯಾಕಿರಬಹುದು ಅಂತ ಅವಳಿಗೆ ತಲೆಬಿಸಿ.. ಏನಾಗಿರುತ್ತದೆ ಗೊತ್ತಾ..? ಸಮುದ್ರದಲ್ಲಿ ತೂಫಾನ್ ಬಂದಿರುತ್ತದೆ. ಮೀನುಗಾರರಿಗೆ ಮೀನೇ ಸಿಕ್ಕಿರೋದಿಲ್ಲ. ಆಮೇಲೆ ಏನಾಯಿತು ಓದಿ ನೋಡುತ್ತೀರಲ್ಲಾ.. ತರತರಹದ ಮೀನುಗಳ ಬಗ್ಗೆ ತಿಳಿದುಕೊಳ್ಳುತ್ತೀರಲ್ಲಾ.. ಕಲ್ಪನಾಗೆ ಯಾವುದು ತುಂಬಾ ಇಷ್ಟ ಅಂತ ತಿಳಿದುಕೊಳ್ಳುತ್ತೀರಲ್ಲಾ..
ಲೇಖಕರು: ಕಿರಣ್ ಮಂಜುನಾಥ್
ಚಿತ್ರಗಳು: ನಿಹಾರಿಕಾ ಶೆಣೈ
ಪ್ರಕಾಶಕರು: ಋತುಮಾನ
ಬೆಲೆ: ರೂ.175/-
4-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 9480035877/9480009997/9591368966
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************