-->
ಮಕ್ಕಳ ಕವನಗಳು : ಸಂಚಿಕೆ - 10

ಮಕ್ಕಳ ಕವನಗಳು : ಸಂಚಿಕೆ - 10

ಮಕ್ಕಳ ಕವನಗಳು : ಸಂಚಿಕೆ - 10
ಕವನ : ಚುನಾವಣೆ
ಕವನ ರಚನೆ : ಶರ್ಮಿಳಾ ಕೆ ಎಸ್          
10 ನೇ ತರಗತಿ              
ವಿವೇಕ ಬಾಲಕಿಯರ ಪ್ರೌಢಶಾಲೆ 
ಕೋಟ, ಉಡುಪಿ ಜಿಲ್ಲೆ.
     

ಮಾನವನಿಗೆ ಬೇಕು ನೇತ್ರದಾನ
ಕೃಶವಾದಾಗ ಬೇಕು ರಕ್ತದಾನ 
ಪುಣ್ಯ ಸಂಪಾದನೆಗೆ ಬೇಕು ಅನ್ನದಾನ 
ಸದೃಢ ದೇಶ ನಿರ್ಮಾಣಕ್ಕೆ 
ಮಾಡಿ ಮತದಾನ...!

ನಿಮ್ಮ ಮತ ನಿಮ್ಮ ಕೈಲಿ ಎನ್ನುವರು 
ಹಣ ಬಟ್ಟೆ ಮನೆ ಮನೆಗೆ ಹಂಚಿದರು
ಮತಕ್ಕಾಗಿ ಸಭೆ ಸಮಾರಂಭ ಕರೆದರು 
ಒಂದಿಷ್ಟು ಪ್ರೇರಣೆಯ ಮಾತಾಡಿ ಮನವೊಲಿಸಿದರು... 

ಜಾಗರೂಕತೆಯಿಂದ ಹಾಕಿ 
ಅಮೂಲ್ಯವಾದ ಮತ 
ಹಾಕುವ ಮೊದಲೇ ಯೋಚಿಸಿ 
ಭಾರತದ ಹಿತ 
ಮತದಾನದ ಘೋಷಣೆ ಹಿಡಿದು 
ಮಾಡುವ ಜಾಗೃತಿ ಜಾಥಾ
ಲಿಂಕನ್ ರವರ  ಪ್ರಕಾರ 
ಗಣರಾಜ್ಯವೆಂದರೆ ಜನರ ಆಡಳಿತ... 

ಒಮ್ಮೆಗೆ ಯೋಚಿಸಿ ಯಾರಿಗಾಗಿ ಚುನಾವಣೆ 
ಕಳೆಯುವುದು ಮತದಿಂದ ದೇಶದ ಬವಣೆ 
ಪ್ರತಿ ವಯಸ್ಕರಿಗೂ ಇರುವುದದೇ 
ಮತದಾನದಾವಕಾಶ ಕಳಕೊಳ್ಳಬೇಡಿ 
ಏಕೆಂದರೆ ಇಲ್ಲಿರುವುದು ದೇಶದ ಭವಿಷ್ಯ... 

ಮತ ಹಾಕಿ ಪಡೆಯಿರಿ 
ಯೋಜನೆಗಳ ಮಹಾಪೂರ 
ಇದೇ ತಾನೇ ಸಂಕಲ್ಪ 
ದೇಶಕ್ಕೆ ಮುತ್ತಿನ ಹಾರ 
ಮತದ ವಿಷಯದಲ್ಲೆಂದೂ ಆಗಬೇಡಿ 
ನೆಟ್ಟನೆಯ ಮರ 
ನಿಮ್ಮ ಮತ ಸರಿಯಾದರೆ ಶಾಸಕರ 
ಮನದಲ್ಲೆಂದಿಗೂ ನೀ ಅಮರ... 

ಈ ವರ್ಷದ ಏಪ್ರಿಲ್ ಇಪ್ಪತ್ತಾರು
ನಿರ್ಧರಿಸುವುದು ರಾಜಕೀಯದ ಏರು ಪೇರು
ಓಟಿನ ಬೆಲೆ ಗೊತ್ತಿಲ್ಲದ ಅಜ್ಞಾನಿಗೆ ಗದರು 
ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಲು ಎಗರು... 

ಒಂದು ಓಟಿಗಾಗಿ ಶಾಸಕರು 
ಮಾಡಿದ ಹರಸಾಹಸ 
ವ್ಯಯವಾದರೂ ಪರವಾಗಿಲ್ಲ 
ಹಾಕಿ ನಿಮ್ಮದೇ ಮತ 
ಏಕೆಂದರೆ ಗೆದ್ದ ನಂತರ ಅವರಿಗೆ 
ನಿಮ್ಮ ಓಟೇ ನೀರಸ 
ಮತ್ತೊಮ್ಮೆ ಯೋಚಿಸಿ 
ಮತದ ಮೊದಲು ಭಾರತದ ಹಿತ... 

ಜಾತಿ ದೇಶ ಮತ ಧರ್ಮ ಸಂಸ್ಕೃತಿಯ ಮರೆತು 
ಆಲಿಸಿರಿ ಪ್ರತಿ ಶಾಸಕರ ಅಂತರಾಳದ ಮಾತು 
ಅವರ ಅನುಭವದ ನುಡಿಯನು ಮನವರಿತು 
ಅವರ ಆರೋಪದ ಸರಿ ತಪ್ಪನ್ನು ಅರಿತು... 

ಕೆಟ್ಟ ಆಲೋಚನೆಗಳ 
ಧಿಕ್ಕರಿಸಿ  ಗೆಲ್ಲಿಸೋಣ 
ಚುನಾವಣೆಯರ್ಥ ತಿಳಿಯದ 
ಶಾಸಕರಿಗೆ ತಿಳಿಸೋಣ
ಸರಿಯಾದ ಮತ ಹಾಕಿ ಮಾಡೋಣ 
ದೇಶದ ನಿರ್ಮಾಣ 
ತೀರಿಸಿದಂತಾಗುವುದು ನೆಲೆಕೊಟ್ಟ
ಭಾರತಾಂಬೆಯ ಋಣ... 

ಸುಭಾಷ್ ತಾಂತ್ಯಾ ಭಗತ್ ರ 
ಸ್ವಾತಂತ್ರ್ಯದ ಬಲಿದಾನ 
ಪ್ರೇರಣೆಯಾಗಿಸಿ ಮಾಡಿರಿ 
ನಿಮ್ಮ ಅಮೂಲ್ಯ ಮತದಾನ 
ಬರಲಿ ನಿಷ್ಠಾವಂತ ಪಕ್ಷದ 
ಆಡಳಿತದ ಗೀತಗಾಯನ
ಆಗಲೇ ತಾನೇ ನಲಿವುದು 
ಮತದಾರನ ಮುಗ್ಧ ಮನ... 

ಊಟ ಮರೆತರೂ 
ನಿದ್ದೆ ಮರೆತರೂ
ಮರೆಯದಿರಿ ಏಪ್ರಿಲ್ ಇಪ್ಪತ್ತಾರು
ಭವಿಷ್ಯದ ನಿರ್ಧಾರಕ್ಕೆ ಮೇರು 
ಚಲಾಯಿಸಿರಿ ಸರಿಯಾದ ಮತವ ಎಲ್ಲರೂ...
..................................... ಶರ್ಮಿಳಾ ಕೆ ಎಸ್          
10 ನೇ ತರಗತಿ              
ವಿವೇಕ ಬಾಲಕಿಯರ ಪ್ರೌಢಶಾಲೆ 
ಕೋಟ, ಉಡುಪಿ ಜಿಲ್ಲೆ.
********************************************.



Ads on article

Advertise in articles 1

advertising articles 2

Advertise under the article