ಪ್ರೀತಿಯ ಪುಸ್ತಕ : ಸಂಚಿಕೆ - 107
Saturday, April 20, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 107
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.....
ಮಕ್ಕಳಿಗೆ ಮಕ್ಕಳ ಬದುಕಿನಿಂದಲೇ ಅಂದರೆ ಮಕ್ಕಳ ಅನುಭವಗಳಿಂದಲೇ ಕಥೆಗಳನ್ನು ಹೇಳುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ. ಪುಟಕ್ಕೊಂದು ಪುಟ್ಟ ಕಥೆ. ಪುಟ್ಟ ಚಿತ್ರ. 30 ಕಥೆಗಳು ಇವೆ. ಮಕ್ಕಳ ಮನದಲ್ಲಿ ಮೂಡುವ ಅದೆಷ್ಟೋ ಐಡಿಯಾಗಳು, ಕುತೂಹಲದಿಂದ ಮಾಡಿದ ಕೆಲಸಗಳು, ಸಲಹೆ ಸಹಕಾರಗಳು ಎಲ್ಲವೂ ಕಥೆಯ ರೂಪದಲ್ಲಿ ಇವೆ. ಉದಾಹರಣೆಗೆ, ಪ್ರತೀಕ್ ಅಮ್ಮನ ಜೊತೆ ತಾರಸಿ ತೋಟದಲ್ಲಿ ಇರುತ್ತಾನೆ. ಹತ್ತಿರವೇ ಇದ್ದ ಸ್ನೇಹಿತರ ಮನೆಯವರು ಒಂದೆರಡು ಗಿಡ ಕೇಳುತ್ತಾರೆ. ತಾರಸಿಯಿಂದ ತಾರಸಿಗೆ ಗಿಡ ತಲಪಿಸುವ ಪ್ರಯತ್ನ ಪುಟ್ಟ ಪ್ರತೀಕ್ ಮಾಡುತ್ತಾನೆ. ಉದ್ದದ ಕೋಲು, ಗೋಣಿ ಚೀಲ ಬಳಸಿ ತಲಪಿಸುತ್ತಾನೆ. ಚೆನ್ನಾಗಿದೆ ಅಲ್ಲವೇ ಐಡಿಯಾ? ಹೀಗೇ ಮಕ್ಕಳು ತುಂಟತನ ಮಾಡುವಾಗ, ಅರಿವಿಲ್ಲದೇ ತಪ್ಪು ಮಾಡುವಾಗ ದೊಡ್ಡವರು ಪ್ರೀತಿಯಿಂದ ಸರಿದಾರಿ ತೋರಿಸುವಂತಹ ಕಥೆಗಳು ಕೂಡಾ ಇದರಲ್ಲಿ ಇವೆ. ಓದಿ.. ಆಮೇಲೆ ಇಂತಹ ಕಥೆಗಳನ್ನು ನೀವೂ ಆರಾಮವಾಗಿ ಬರೆಯುವ ಪ್ರಯತ್ನ ಮಾಡಿ.
ಲೇಖಕರು: ಗೀತಾ ಶ್ರೀನಿವಾಸನ್
ಚಿತ್ರಗಳು: ಶ್ರೇಯಾ ಬಾಲಾಜಿ
ಪ್ರಕಾಶಕರು: ಸನ್ ಸ್ಟಾರ್ ಪಬ್ಲಿಷರ್ಸ್ ಆಂಡ್ ಪ್ರಿಂಟರ್ಸ್
ಬೆಲೆ: ರೂ.120/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.sunstarpublisher.com; 080 2222 2143/ 080 4153 7471
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************