-->
ರಾಷ್ಟ್ರೀಯ ಕಲೋತ್ಸವದಲ್ಲಿ ಚಿನ್ನದ ಪದಕ ಪಡೆದ ರಕ್ಷಿತಾ

ರಾಷ್ಟ್ರೀಯ ಕಲೋತ್ಸವದಲ್ಲಿ ಚಿನ್ನದ ಪದಕ ಪಡೆದ ರಕ್ಷಿತಾ

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 04
ಬರಹ : ವಿನೋದ್ ಕುಮಾರ್
ಚಿತ್ರಕಲಾವಿದರು
ಮಂಡ್ಯ ಜಿಲ್ಲೆ


   ಕೇಂದ್ರ ಸರಕಾರದ ಶಾಲಾ ಶಿಕ್ಷಣ ಸಚಿವಾಲಯ
ದಿಂದ ಹೊಸ ದಿಲ್ಲಿಯಲ್ಲಿ ನಡೆದ 2023 - 24 ನೇ ಸಾಲಿನ ರಾಷ್ಟ್ರೀಯ ಕಲೋತ್ಸವದಲ್ಲಿ ದೃಶ್ಯಕಲಾ ಎರಡು ಆಯಾಮದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಟಿ ನರಸೀಪುರ ತಾಲೂಕಿನ ಸೋಸಲೆ ಹೋಬಳಿ ಮುಸುವಿನ ಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಪ್ರಥಮ ಸ್ಥಾನ ಪಡೆದಿದ್ದಾರೆ. ರಕ್ಷಿತಾ ಪ್ರಥಮ ಸ್ಥಾನಗಳಿಸಿ, ಚಿನ್ನದ ಪದಕ ಹಾಗೂ 25 ಸಾವಿರ ರೂ ಬಹುಮಾನ ಗಳಿಸಿದ್ದಾಳೆ. 
     ದೃಶ್ಯಕಲಾ ಎರಡು ಆಯಾಮದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ರಕ್ಷಿತಾ ಜನವರಿ 9 ರಿಂದ 11 ರವರೆಗೆ ದಿಲ್ಲಿಯ ಬಾಲ ಭವನದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಟುಡಿ ಆಯಾಮದ ದೃಶ್ಯ ಕಲೆಯನ್ನು ರಚಿಸಿದ್ದರು. ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧಿಸಿ ರಚಿಸಿದ ದೃಶ್ಯ ಕಲೆಗೆ ಪ್ರಥಮ ಸ್ಥಾನ ಲಭಿಸಿ ಚಿನ್ನದ ಪದಕ ದೊರಕಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ. ಇದೇ ಶಾಲೆಯ ವಿದ್ಯಾರ್ಥಿ ಲೋಕೇಶ್ 2019-2020ನೇ ಸಾಲಿನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪ್ರಥಮ ಸ್ಥಾನ ಪಡೆದು ಪಾರಿತೋಷಕ ಹಾಗೂ ಚಿನ್ನದ ಪದಕ ಪಡೆದಿದ್ದರು. 2021ರಲ್ಲಿ ಇದೇ ಶಾಲೆಯ ಸುಶ್ಮಿತಾ ಕಲೋತ್ಸವ ದಲ್ಲಿ ಭಾಗವಹಿಸಿದ್ದರು. 2022ನೇ ಸಾಲಿನಲ್ಲಿ ಪಲ್ಲವಿ ಎಂಬ ವಿದ್ಯಾರ್ಥಿನಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದರು. ಒಟ್ಟಾರೆ ರಾಷ್ಟ್ರೀಯ ಕಲೋತ್ಸವದಲ್ಲಿ ಇದೇ ಶಾಲೆಯ ವಿದ್ಯಾರ್ಥಿಗಳಿಗೆ ಎರಡು ಬಾರಿ ಚಿನ್ನ ಹಾಗೂ ಒಂದು ಬಾರಿ ಬೆಳ್ಳಿ ಪದಕ ಗಳಿಸಿದ್ದಾರೆ. 
ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ್ ಕೆ ರವರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ದೃಶ್ಯ ಕಲೆಯ ತರಬೇತಿ ನೀಡುತ್ತಿದ್ದಾರೆ. ಅವರ ನಿರಂತರ ಪ್ರಯತ್ನದಿಂದ ಶಾಲೆಯ ವಿದ್ಯಾರ್ಥಿಗಳು
ಕಲೋತ್ಸವದಲ್ಲಿ ಸತತವಾಗಿ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಮೂರು ಬಾರಿ ಪ್ರಶಸ್ತಿ ಗಳಿಸಿದ್ದಾರೆ.  ಶಾಲೆಯ ವಿದ್ಯಾರ್ಥಿಗಳು ಸತತ ನಾಲ್ಕನೇ ಬಾರಿಗೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಮೂರು ಬಾರಿ ಪ್ರಶಸ್ತಿ ಗಳಿಸಿರುವುದು ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ಈ ಬಾರಿ ಮತ್ತೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಸಿಕ್ಕಿರುವುದು ಅತೀವ ಸಂತೋಷ ತಂದಿದೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯ ಶಿಕ್ಷಕರಾದ ಮಹಾದೇವಸ್ವಾಮಿ, ಸಹೋದ್ಯೋಗಿಗಳು, ಪೋಷಕರು ಇದಕ್ಕೆ ಪ್ರೋತ್ಸಾಹ ನೀಡಿದ್ದಾರೆ.
................................... ವಿನೋದ್ ಕುಮಾರ್
ಚಿತ್ರಕಲಾ ಶಿಕ್ಷಕರು
ಮಂಡ್ಯ ಜಿಲ್ಲೆ
******************************************

ರಕ್ಷಿತಾ ರಚಿಸಿರುವ ಚಿತ್ರಗಳು
ರಕ್ಷಿತಾ
ಸರ್ಕಾರಿ ಪ್ರೌಢಶಾಲೆ ಮುಸುವಿನ ಕೊಪ್ಪಲು 
ಟಿ ನರಸೀಪುರ ತಾಲೂಕು
ಮೈಸೂರು ಜಿಲ್ಲೆAds on article

Advertise in articles 1

advertising articles 2

Advertise under the article