ಪ್ರೀತಿಯ ಪುಸ್ತಕ : ಸಂಚಿಕೆ - 104
Friday, March 29, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 104
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಆಕಾಶ್ ಮತ್ತು ಗಗನ್ ಇಬ್ಬರೂ ಮಳೆ ಬೀಳದ ಪ್ರದೇಶದ ಮಕ್ಕಳು. ಕೆರೆಯ ಬಯಲಿನಲ್ಲಿ ಕುಳಿತ ಅಜ್ಜನ ಹತ್ತಿರ ಅವರು ವಿಚಾರಿಸುತ್ತಾರೆ. ಕೆರೆಯಾಗ ನೀರು ಯಾಕಿಲ್ಲ? ದನ ಎಲ್ಲಿ ನೀರು ಕುಡಿತಾವು? ಗುಂಡ್ಯಾಗ ನಿಂತ ನೀರು ನೋಡುತ್ತಾರೆ. ನೀರು ಕೆಟ್ಟು ಹೋಗಿರುತ್ತದೆ. ಮೀನು ಸತ್ತಿರುತ್ತವೆ. ಮತ್ತೆ ಹೊಸ ನೀರು ಸಿಗಬೇಕೆಂದರೆ ಮಳೆ ಬರಬೇಕು.. ಮಳೆ ಎಲ್ಲಿ ಸಿಗುತ್ತೆ ಅಂತ ಇಬ್ಬರೂ ಸ್ನೇಹಿತರು ಹುಡುಕುತ್ತಾ ಹೋಗುತ್ತಾರೆ. ಯಾರ್ಯಾರನ್ನು ವಿಚಾರಿಸುತ್ತಾರೆ, ಎಲ್ಲೆಲ್ಲಿ ಹುಡುಕುತ್ತಾ ಹೋಗುತ್ತಾರೆ ಎಂಬುದು ಪುಸ್ತಕ ಓದಿದರೆ ತಿಳಿಯುತ್ತದೆ. ಈ ಪುಸ್ತಕದಲ್ಲಿ ಬೇರೆ ಬೇರೆ ಪ್ರದೇಶದ ಕನ್ನಡವನ್ನು ಬಳಸಿದ್ದಾರೆ. ಭಾಷೆಯ ಚಂದ ಕೂಡಾ ನೋಡಬಹುದು. ಚಿತ್ರಗಳೇ ಕಥೆ ಹೇಳುತ್ತವೆ. ಓದುವ ಮೊದಲು ನೀವೂ ಯೋಚಿಸಬಹುದು; ಯಾವ ಪ್ರದೇಶಗಳಲ್ಲಿ ಮಳೆ ಕಡಿಮೆ ಇದೆ? ಯಾಕೆ ಕಡಿಮೆ ಇದೆ? ನೀವು ಇರುವ ಜಾಗದಲ್ಲಿ ಮಳೆ ಹೇಗಿದೆ.? ಯೋಚಿಸುತ್ತಾ ಓದಿ.
ಲೇಖಕರು: ಸೋಮು ಕುದುರಿಹಾಳ
ಚಿತ್ರಗಳು: ನಿಖಿಲಾ ಅನಿಲ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.60/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************