ಪ್ರೀತಿಯ ಪುಸ್ತಕ : ಸಂಚಿಕೆ - 103
Friday, March 22, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 103
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಳುಹಿಸುತ್ತೀರಾ..?
ಪ್ರೀತಿಯ ಮಕ್ಕಳೇ.... ನೀವೆಲ್ಲರೂ ಆನೆ ನೋಡಿದ್ದೀರಿ ಅಲ್ವಾ? ಸ್ವಲ್ಪ ಕಾಲದ ಹಿಂದೆ ಬೇರೆ ಅನೇಕ ದೇಶಗಳಲ್ಲಿ ಆನೆಯನ್ನೇ ನೋಡದ ಮಕ್ಕಳು ಇದ್ದರು. ಅವರಿಗೆ ಆನೆ ನೋಡಬೇಕು ಅಂತ ಆಸೆ. ಅಂತೆಯೇ ಜಪಾನಿನ ಟೋಕಿಯೋ ದೇಶದ ಟೈಟೋ ವಾರ್ಡಿನ ಒಂದಷ್ಟು ಮಕ್ಕಳು ಚಾಚಾ ನೆಹರೂಗೆ, ನಮಗೊಂದು ಆನೆ ಕಳುಹಿಸಿಕೊಡಿ ಅಂತ ಪತ್ರ ಬರೀತಾರೆ. ನೆಹರೂ ಗೊತ್ತಲ್ಲಾ, ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿ. ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಅಂತಾನೂ ನಿಮಗೆ ಗೊತ್ತಲ್ಲಾ. ಅದಕ್ಕೆ ಜಪಾನಿನ ಮಕ್ಕಳು ಕೇಳಿದಾಗ ಆನೆ ಕಳುಹಿಸಿಕೊಡುತ್ತಾರೆ. ಅಬ್ಬಾ, ಅಷ್ಟು ದೊಡ್ಡ ಆನೆಯನ್ನು ಅಷ್ಟು ದೂರ ಹೇಗಪ್ಪಾ ಕಳುಹಿಸಿಕೊಟ್ಟರು, ಅಂತ ಅನಿಸಿದ್ದರೆ ಪುಸ್ತಕ ಓದಿ ನೋಡಿ. ಜಪಾನಿಗೆ ಮಾತ್ರವಲ್ಲ, ಇನ್ನೂ ಅನೇಕ ದೇಶಗಳಿಗೆ ಕಳುಹಿಸುತ್ತಾರೆ. ಮಕ್ಕಳಿಗೂ ಖುಶಿ, ಚಾಚಾ ನೆಹರೂಗೂ ಖುಶಿ, ಆದರೆ ಆನೆಗೆ ಹೇಗೆ ಅನಿಸಿರಬಹುದು – ಎಲ್ಲಾ ತಿಳಿಯಲು ಓದಿ ನೋಡಿ. ಚಿತ್ರಗಳೂ ಕಥೆಯ ಚಂದವನ್ನು ಹೆಚ್ಚಿಸಿವೆ.
ಲೇಖಕರು: ದೇವಿಕಾ ಕಾರ್ಯಪ
ಅನುವಾದ: ಪಲ್ಲವಿ ರಾವ್
ಚಿತ್ರಗಳು: ಸಾತ್ವಿಕ್ ಗಾದೆ
ಪ್ರಕಾಶಕರು: ತುಲಿಕಾ
ಬೆಲೆ: ರೂ.165/-
6+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com; email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************