-->
ಪ್ರೀತಿಯ ಪುಸ್ತಕ : ಸಂಚಿಕೆ - 102

ಪ್ರೀತಿಯ ಪುಸ್ತಕ : ಸಂಚಿಕೆ - 102

ಪ್ರೀತಿಯ ಪುಸ್ತಕ
ಸಂಚಿಕೆ - 102
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


                          ಟೊಮಾಟೋ ಫಿಶ್  
ಪ್ರೀತಿಯ ಮಕ್ಕಳೇ, ಈ ಪುಸ್ತಕದ ಚಿತ್ರಗಳ ಬಗ್ಗೆಯೇ ನಾನು ಮೊದಲು ನಿಮಗೆ ಹೇಳಬೇಕು. ವನಿತಾ ಯಾಜಿಯವರು ಬಣ್ಣಬಣ್ಣದ ಬಟ್ಟೆ ಬಳಸಿ ಚಿತ್ರಗಳನ್ನು ಮಾಡಿ ಇದರಲ್ಲಿ ಬಳಸಿದ್ದಾರೆ. ನೀವೂ ಕೂಡಾ ಹೀಗೇ ಹಳೆಯ ಬಣ್ಣ ಬಣ್ಣದ ಬಟ್ಟೆ ಬಳಸಿ ಚಿತ್ರ ಮಾಡಬಹುದು. ಈ ಟೊಮಾಟೋ ಫಿಶ್ ಒಂದು ಹೊಸ ಬಗೆಯ ಮೀನು. ಇದರ ಹುಟ್ಟು ಕೂಡಾ ವಿಶೇಷವೇ? ನೀರಿಗೆ ಬಿದ್ದ ಟೊಮಾಟೋ ತಿಂದು ಮೀನುಗಳು ಟೊಮಾಟೋ ಫಿಶ್ ಆದವು. ಹೀಗೆ ಮೀನುಗಳು ಏನೇನು ತಿಂದರೆ ಏನೇನು ಆಗುವುದಾದರೆ ಹೇಗಿರಬಹುದು? ಈ ಪುಸ್ತಕದಲ್ಲಂತೂ ಇಂತಹ ಹಲವು ಯೋಚನೆಗಳು ಇವೆ. ನೀವೂ ಸ್ವಲ್ಪ ರುಚಿ ನೋಡಿ. ಟೊಮಾಟೋ ಫಿಶ್ ನ ರುಚಿ ಅಲ್ಲ, ಪುಸ್ತಕದ ರುಚಿ ನೋಡಿ ಅಂತ ಹೇಳಿದ್ದು....
ಲೇಖಕರು: ಕೈಲಾಶ್ ತಿಪಟೂರು.
ಚಿತ್ರಗಳು: ವನಿತಾ ಅಣ್ಣಯ್ಯ ಯಾಜಿ
ಪ್ರಕಾಶಕರು: ಎಲ್ಲರ ಪುಸ್ತಕ
ಬೆಲೆ: ರೂ.120/-
4-5ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ellarapusthaka@gmail.com
Mob : 9141184535
........................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article