-->
ಮಕ್ಕಳ ಕವನಗಳು : ಸಂಚಿಕೆ - 06 - ರಚನೆ : ಪ್ರತೀಕ್ಷಾ ತಂಟೆಕ್ಕು 8ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 06 - ರಚನೆ : ಪ್ರತೀಕ್ಷಾ ತಂಟೆಕ್ಕು 8ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 06
ಕವನ ರಚನೆ : ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ 
ಸ್ಕೂಲ್ , ಕಕ್ಯಪದವು, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
.
             

ಸಾರಿದರು ಐದನೇ ಎಂಟನೇ 
ಒಂಬತ್ತನೆಗೆ ಪಬ್ಲಿಕ್ ಎಂದು
ಈಗ ಆದೇಶವಿತ್ತರಲ್ಲಾ ಪಬ್ಲಿಕ್ ಮುಂದೂಡಲಾಗಿದೆಯೆಂದು.
       ರೀತಿ ರಿವಾಜುಗಳಿಗೆ ಅರ್ಥವಿಲ್ಲವೇ?
       ಮಕ್ಕಳ ಪರಿಶ್ರಮಕ್ಕೆ , ಶಿಕ್ಷಕರ            
       ಪರದಾಟಕ್ಕೆ, ಪೋಷಕರ  
      ಗೊಂದಲಕ್ಕೇನು ಬೆಲೆಯಿಲ್ಲವೇ??
ಮಕ್ಕಳೇನು ಆಡುವ ಗೊಂಬೆಗಳೇ??
ಈಗಷ್ಟೇ ಅರಳುತ್ತಿರುವ                                                ಹೂವುಗಳನ್ನು ಚಿವುಟುವ ಕಾರ್ಯ
ನಡೆಯುತ್ತಿರುವುದೇಕೆ??
     ಆದೇಶ ಹೊರಡಿಸುವುದು ಸರಳ
     ಈಗ ಪರೀಕ್ಷೆ ಯಾವಾಗ ಎಂಬುದು       
     ಶಿಕ್ಷಕರ, ಮಕ್ಕಳ ಹಾಗೂ 
     ಹೆತ್ತವರ ಕಳವಳ.
ಎರಡು ಪರೀಕ್ಷೆ ನಡೆಸಿ
ಈಗ ಪರೀಕ್ಷೆಯನ್ನೇಕೆ                         
 ಮುಂದೂಡಿಸಿದಿರಿ.....??
ಇದೇನು ಮಾಡಿದಿರಿ....??
     ಸರಿಯಾದ ರೀತಿ ಇಲ್ಲದ                       
     ದಿನಕೊಂದು ನೀತಿಯೇಕೆ??
     ಮಕ್ಕಳ ಭವಿಷ್ಯಕ್ಕೆ                            
     ಹುಳಿಹಿಂಡುವುದೇಕೆ...??
ಈಗಿನ ರೀತಿ ನೀತಿಗಳು ಮಕ್ಕಳ             
ಭವಿಷ್ಯಕ್ಕೆ ಮುಳ್ಳಾದರೆ
ಮಕ್ಕಳ ಮುಂದಿನ ಭವಿಷ್ಯದ             
ಕತೆಯೇನು.....??
     ಇಂತಹ ತಪ್ಪು ಮಾಡದಿರಿ
     ಯೋಚಿಸದೆ ನಿರ್ಧಾರ ಕೈಗೊಳ್ಳದಿರಿ.
     ಚಿಂತಿಸಿ ಮುಂದಿನ ಆದೇಶವ ತಿಳಿಸಿ
     ಎಲ್ಲರ ಭರವಸೆಯ ಉಳಿಸಿ.
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ 
ಸ್ಕೂಲ್ , ಕಕ್ಯಪದವು, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************




ಮುತ್ತು ರತ್ನ ಹವಳಕ್ಕಿಂತಲೂ
ದಿವ್ಯವಾದ ಈ ಮಹಾರಥ
ಕಾರಿಂಜದ ಸುಂದರ ರಥ 
ಎಲ್ಲರ ಮನಗೆದ್ದ ರಥ                         
ಕಾರಿಂಜೇಶ್ವರನ ರಥ 
ಮಹಾ ರಥ...
    ನಾಗದೇವನ ಶಿಲೆಯನ್ನು ಕೂಡಿ
    ಶಿವನ ವಿವಿಧ ರೂಪದ ಶಿಲ್ಪದಿಂದ                       
    ಕಂಗೊಳಿಸುತ್ತಾ
    ಪುಟ್ಟ ಪುಟ್ಟ ಗಂಟಾಮಣಿಯಿಂದ
    ಎಲ್ಲರ ನೋಟ ಸೆಳೆದಿದೆ
    ಕಾರಿಂಜದ ರಥ.
ರಥದ ಆಗಮನಕ್ಕೆ ಕಾಯುತಿತ್ತು      
ಭಕ್ತ ಸಮೂಹ
ಎಲ್ಲರಲ್ಲು ಇತ್ತು 
ಒಂದು ಉತ್ಸಾಹ 
ಎಲ್ಲೆಲ್ಲು ಕೇಳುತಿತ್ತು 
ಕಾರಿಂಜೇಶ್ವರನಿಗೆ ಜೈಕಾರ
ಎಲ್ಲರಿಗೊಳಿತು ಮಾಡಲಿ ಆ ಶಿವ.
    ಪಾರ್ವತಿ ಪರಮೇಶ್ವರ
    ಆಸೀನರಾಗುವ ಮಹಾರಥದ ಬಗ್ಗೆ
    ಸಂಭೋದಿಸಲು ಅಸಾಧ್ಯ ನಮಗೆ
    ಭೂ ಕೈಲಾಸದ ಭವ್ಯ ರಥ 
    ನೋಡಲೆರಡು ನೇತ್ರ ಸಾಲದು
    ಅಷ್ಟು ಸುಂದರವಾದ ಕಾರಿಂಜ ರಥ.
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ 
ಸ್ಕೂಲ್ , ಕಕ್ಯಪದವು, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article