ಪ್ರೀತಿಯ ಪುಸ್ತಕ : ಸಂಚಿಕೆ - 99
Friday, February 23, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 99
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಚಿಕ್ಕಂದಿನಿಂದಲೂ “ಗುಮ್ಮ.. ಗುಮ್ಮ ಬಂದ..” ಅಂತ ಹೆದರಿಸುವ ಕಥೆಗಳನ್ನು ನೀವು ಕೇಳಿಸಿಕೊಂಡಿರಬಹುದು. ಹೆದರಿಕೆ ಆಗಿರಬಹುದು. ಇದು ಹಾಗೆಯೇ ಅವಿಯನ್ನು ಹೆದರಿಸುವ, ಸತಾಯಿಸುವ ಒಂದು ಗುಮ್ಮನ ಕಥೆ. ಈ ಪುಸ್ತಕ ಓದುವ ಮೊದಲು ನೀವು ಮನಸಾರೆ ಇದರ ಚಿತ್ರಗಳನ್ನು ನೋಡಿ. ಬಹಳ ಚೆನ್ನಾಗಿವೆ. ಗುಮ್ಮನ ಚಿತ್ರವಂತೂ ಬಹಳ ಸೊಗಸಾಗಿದೆ. ನಿಮ್ಮ ಹಿಂದೆಯೇ ಬರುತ್ತಿದೆ ಅನಿಸಬಹುದು. ಈ ಗುಮ್ಮನ ವಿಶೇಷತೆ ಎಂದರೆ, ಇದು ಅವಿಯ ಮನಸ್ಸಿನೊಳಗಿಂದಲೇ ಹೊರಗೆ ಬಂದು ಅವಿಗೆ ತೊಂದರೆ ಕೊಡುತ್ತಿತ್ತು. ತನ್ನ ಒಳಗೇ ಗುಮ್ಮ ಇರುವುದು ಅವಿಗೂ ಗೊತ್ತಿತ್ತು. ಈಗ ಈ ಗುಮ್ಮವನ್ನು ಸೆಣಸಾಡಿ ಸೋಲಿಸುವುದು ಹೇಗೆ ಅನ್ನುವುದು ಅವಿಯ ಸಮಸ್ಯೆ. ನಿಮಗೆ ಈ ಗುಮ್ಮ ಯಾವುದು ಅಂತ ಗೊತ್ತಾಯಿತೇ.. ಅದನ್ನು ಹೊಡೆದೋಡಿಸಲು ಅವಿಗೆ ಏನಾದರೂ ದಾರಿ ತೋರಿಸಬಲ್ಲಿರೇ? ಅವಿ ಏನು ಮಾಡಿದ ಅಂತ ಗೊತ್ತಾಗಬೇಕಾದರೆ ಪುಸ್ತಕ ಓದಬೇಕು.. ಅಷ್ಟೇ..
ಲೇಖಕರು: ತಾನ್ಯಾ ಮುಜಂದಾರ್
ಅನುವಾದ: ಪ್ರಸಾದ್ ನಾಯ್ಕ್
ಚಿತ್ರಗಳು: ರಾಜೀವ ಐಪೆ
ಪ್ರಕಾಶಕರು: ಬಹುರೂಪಿ (ಪರಾಗ್, ಕಲ್ಪವೃಕ್ಷ)
ಬೆಲೆ: ರೂ.160/-
5- 7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************