-->
ಜಗಲಿ ಕಟ್ಟೆ : ಸಂಚಿಕೆ - 38

ಜಗಲಿ ಕಟ್ಟೆ : ಸಂಚಿಕೆ - 38

ಜಗಲಿ ಕಟ್ಟೆ : ಸಂಚಿಕೆ - 38
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     ಕರಾವಳಿ ಭಾಗದ ಗಂಡು ಕಲೆ ಯಕ್ಷಗಾನಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಒಟ್ಟು ಜನಸಮೂಹವನ್ನು ಬಹಳ ಆಕರ್ಷಕವಾಗಿ ಮನಸೂರೆಗೊಳ್ಳುವ ಕಲೆ ಈ ಯಕ್ಷಗಾನದಲ್ಲಡಗಿದೆ. ತನ್ನ ಕಂಠ ಸಿರಿಯ ಮೂಲಕ ಯಕ್ಷಗಾನದ ಅಸ್ತಿತ್ವಕ್ಕೆ ಹೊಸ ಮೆರುಗನ್ನು ನೀಡಿರುವ ಪಟ್ಲ ಸತೀಶ್ ಶೆಟ್ಟಿಯವರ ಅಭೂತಪೂರ್ವ ಸಾಧನೆಯನ್ನು ಇಲ್ಲಿ ಸ್ಮರಿಸಲೇಬೇಕು. ಇವರು ಸ್ಥಾಪಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ 'ಯಕ್ಷಧ್ರುವ ಯಕ್ಷ ಶಿಕ್ಷಣ' ಎನ್ನುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸರಕಾರಿ ಶಾಲೆಯನ್ನು ಆಯ್ದುಕೊಂಡು ಅಲ್ಲಿನ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ವನ್ನು ಉಚಿತವಾಗಿ ನೀಡುವುದು ಈ ಸಂಸ್ಥೆಯ ಉದ್ದೇಶವಾಗಿತ್ತು.  
      ಯಕ್ಷಗಾನ ಕಲೆಯನ್ನು ಯುವ ಸಮುದಾಯದಲ್ಲಿ ಭದ್ರ ಪಡಿಸಬೇಕೆನ್ನುವ ದೃಷ್ಟಿಕೋನದಿಂದ ಈ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿತು. ಸುಮಾರು ನಲವತ್ತಕ್ಕಿಂತಲೂ ಹೆಚ್ಚಿನ ಸರಕಾರಿ ಶಾಲೆಯ ಯಕ್ಷಗಾನ ಕಲಾತಂಡಗಳು ಸಿದ್ಧವಾಗಿದ್ದವು. ಫೆಬ್ರವರಿ 6ರಂದು ಸಾಂಸ್ಕೃತಿಕ ಲೋಕದ ಕಾಶಿ ಎಂದು ಕರೆಯಬಹುದಾದ ಮಾಡಬಿದ್ರೆಯ ಆಳ್ವಾಸ್ ನಲ್ಲಿ 'ಯಕ್ಷ ಧ್ರುವ ಯಕ್ಷ ಶಿಕ್ಷಣ' ದ ಸಾವಿರಾರು ವಿದ್ಯಾರ್ಥಿಗಳು ಸೇರಿದ್ದರು. ತಮ್ಮ ತಮ್ಮ ಯಕ್ಷಗಾನ ಗುರುಗಳ ಮಾರ್ಗದರ್ಶನದೊಂದಿಗೆ ಸಿದ್ಧವಾದ ಯಕ್ಷ ರೂಪಕವನ್ನು ಸಿದ್ಧಪಡಿಸಿ ಶಾಲಾ ವಿದ್ಯಾರ್ಥಿಗಳು ಬಹಳ ಉತ್ಸಕತೆಯಿಂದ ಭಾಗವಹಿಸಿದ್ದರು. ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಯಕ್ಷಗಾನ ಆಸಕ್ತರು ಒಟ್ಟು ಜನಸಾಗರವೇ ಯಕ್ಷಗಾನದ ಉಳಿವಿಗಾಗಿ ಪಣತೊಟ್ಟು ಬಂದಿರುವಂತೆ ಭಾಸವಾಗುತ್ತಿತ್ತು.
        ಎರಡು ಭವ್ಯ ವೇದಿಕೆಗಳಲ್ಲಿ ಯಕ್ಷ ರೂಪಕ ಸ್ಪರ್ಧೆ. ಎಲ್ಲೆಲ್ಲೂ ಯಕ್ಷ ವಿದ್ಯಾರ್ಥಿಗಳ ಕಲರವ. ಹತ್ತನ್ನೆರಡು ಚೌಕಿಗಳಲ್ಲಿ ವೇಷಭೂಷಣದ ಸಿದ್ಧತೆ. ಪ್ರತಿ ತಂಡಗಳಿಗೆ ನಿಗದಿಪಡಿಸಿದ ಸಮಯದಲ್ಲಿ ಚೌಕಿಗಳಲ್ಲಿ ವೇಷಭೂಷಣವನ್ನು ಸಿದ್ಧಪಡಿಸಿಕೊಂಡ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಎಣೆಯಿರಲಿಲ್ಲ. 
      ಸುಮಾರು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಯಕ್ಷರೂಪಕ ಸ್ಪರ್ಧೆಗಳ ಜೊತೆಗೆ ಯಕ್ಷಗಾನದ ವಿಷಯಕ್ಕೆ ಸಂಬಂಧಿಸಿದ ಬೇರೆ ಬೇರೆ ವೈವಿಧ್ಯ ಸ್ಪರ್ಧೆಗಳು ಅಲ್ಲಿತ್ತು. ಸಾಲು ಸಾಲು ವಿದ್ಯಾರ್ಥಿಗಳ ಝಲಕ್ಕಿನ ವೇಷಗಳು ನೋಡುಗರ ಕಣ್ಣಿಗೆ ಹಬ್ಬದಂತಿತ್ತು. ಯಕ್ಷಲೋಕವೇ ಧರೆಗಿಳಿದಂತೆ ಭಾಸವಾಗಿದ್ದರೆ ಅತಿಶಯೋಕ್ತಿಯಾಗಲಾರದು....!!
    ಒಟ್ಟಾಗಿ ಹೇಳುವುದಿದ್ದರೆ ಒಂದು ಕಲೆಯ ಉಳಿವಿಗಾಗಿ ಅದರ ಬೆಳಕಿಗಾಗಿ ಇಷ್ಟೊಂದು ದೊಡ್ಡ ಮಟ್ಟದ ಪ್ರಯೋಗ ಕಂಡು ಬಹಳ ಆಶ್ಚರ್ಯ ಚಕಿತನಾದೆ... ಇದರ ಹಿಂದೆ ಒಬ್ಬರು ಕಾರಣರಾಗಿದ್ದಾರೆ ಎಂದಷ್ಟೇ ಹೇಳಲು ಸಾಧ್ಯ...! ಇಲ್ಲಿ ಯಕ್ಷಗಾನ ಕುಣಿದಿದೆ... ಇಲ್ಲಿ ಯಕ್ಷಗಾನ ನಲಿದಿದೆ...!!
 

ಕಳೆದ ಸಂಚಿಕೆಯ ಜಗಲಿಕಟ್ಟೆ - 37 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ ಚಾಮೆತ್ತಮೂಲೆ ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ,
     ಹೃದಯವಂತಿಕೆ ಇದ್ದಲ್ಲಿ ಆ ವ್ಯಕ್ತಿ ಸಮಾಜಕ್ಕೆ ಕೊಡುಗೆಯಾಗಬಲ್ಲ ಎನ್ನುವುದನ್ನು ಉದಾಹರಣೆಗಳೊಂದಿಗೆ ಬಹಳ ಸುಂದರವಾಗಿ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು ನಿರೂಪಿಸಿದ್ದಾರೆ. ಧನ್ಯವಾದಗಳು ಸರ್.
      ಸ್ಮರಣ ಶಕ್ತಿ ಪ್ರತಿಯೊಬ್ಬರಲ್ಲಿ ಇರುತ್ತವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಸ್ಮರಣಶಕ್ತಿ ಸದಾ ಉಳಿಯುವಂತೆ ಏನು ಮಾಡಬೇಕೆನ್ನುವುದನ್ನು ತಮ್ಮ ಈ ಸಲದ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ ರಮೇಶ್ ಸರ್ ರವರು.
    ಈ ವಾರದ ವೈಜ್ಞಾನಿಕ ಲೇಖನದಲ್ಲಿ ದಿವಾಕರ ಶೆಟ್ಟಿ ಸರ್ ರವರಿಂದ ಯಕ್ಷಗಾನ ಶೈಲಿಯಲ್ಲಿ ಶರ್ಕರ ಪಿಷ್ಟ (ಕಾರ್ಟೋ ಹೈಡ್ರೇಟ್) ಗಳ ಕುರಿತಾದ ಅರ್ಥವತ್ತಾದ ಹಾಗೂ ಸರಳವಾದ ವಿವರಣೆ ತುಂಬಾ ಸೊಗಸಾಗಿತ್ತು. ಧನ್ಯವಾದಗಳು ಸರ್.    
    ಅರವಿಂದ ಸರ್ ರವರ ನೀಲಿ ತಲೆಯ ಬಂಡೆ ಸಿಳ್ಳಾರ ಹಕ್ಕಿಯ ಪರಿಚಯ ಸುಂದರ ಛಾಯಾಚಿತ್ರದೊಂದಿಗೆ ಚೆನ್ನಾಗಿತ್ತು.
     ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ಔಡಲಗಿಡದ ಕುರಿತಾದ ವಿವರವಾದ ಉತ್ತಮ ಮಾಹಿತಿ ದೊರಕಿತು. ಧನ್ಯವಾದಗಳು ಮೇಡಂ.
    ಉತ್ತಮ ಶಿಕ್ಷಕಿಯೊಬ್ಬರ ದಾರುಣ ಅಂತ್ಯದ ಕ್ಷಣ ಮನಕಲುಕುವಂತಿತ್ತು. ಯಾಕೂಬ್ ಸರ್ ರವರ ಈ ಲೇಖನ ಪೋಷಕರಿಗೆ ಒಂದು ಪಾಠದಂತಿದೆ.
    ಆರ್ಟ್ ಗ್ಯಾಲರಿಯಲ್ಲಿ ಸಂದೀಪ್ ರವರ ಸುಂದರ ಕಲಾಕೃತಿಗಳ ಪರಿಚಯವಾಯಿತು. ಪುಸ್ತಕ ಪರಿಚಯದಲ್ಲಿ ವಾಣಿಯಕ್ಕ ನವರಿಂದ 'ಮತ್ತೆ ಬಂತು ಚಂಪು' ಎನ್ನುವ ಸುಂದರ ಪುಸ್ತಕದ ಪರಿಚಯವಾಯಿತು.
     ಶಿಕ್ಷಕರ ಡೈರಿಯಲ್ಲಿ ರಮೇಶ್ ಕುಲಾಲ್ ರವರು ತಮ್ಮ ವೃತ್ತಿ ಜೀವನದ ಅನುಭವವನ್ನು ಸುಂದರವಾಗಿ ಹಂಚಿಕೊಂಡಿದ್ದಾರೆ.
    ರಮೇಶ್ ಉಪ್ಪುಂದರವರ ಬುದ್ಧಿಯ ವಿಕಾಸಕ್ಕೆ ಕಾರಣವಾದ ಪದದಂಗಳ ಸಂಚಿಕೆ ಚೆನ್ನಾಗಿತ್ತು.
    ಈ ವಾರದ ಜಗಲಿಯ ಅಂದವನ್ನು ಹೆಚ್ಚಿಸಿದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article