ಪ್ರೀತಿಯ ಪುಸ್ತಕ : ಸಂಚಿಕೆ - 94
Friday, January 19, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 94
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಬಾಯಿಂದ ಬಾಯಿಗೆ ಹರಿದು ಬರುತ್ತವೆ ಕಥೆಗಳು, ಗೊತ್ತಲ್ಲಾ? ಅಂತಹ ಒಂದು ಕಥೆ ಈ ಬೋನ್ ಬೀಬೀದು. ಬಂಗಾಳದ ಸುಂದರವೂ, ನಿಗೂಢವೂ ಆದ ಸುಂದರಬನ ಎಂಬ ಕಾಡಿನಲ್ಲಿ ನಡೆದ ಕಥೆ ಇದು. ಕಾಡಿನಲ್ಲಿ ಗುಲಾಬ್ ಬೀಬೀ ಒಂದು ಹೆಣ್ಣು ಮಗುವನ್ನು ಹೆರುತ್ತಾಳೆ. ಅವಳಿಗೆ ಬೋನ್ ಬೀಬೀ ಅಂತ ಹೆಸರಿಡುತ್ತಾರೆ. ಹಾಗೆಂದರೆ ಕಾಡಿನ ರಾಣಿ. ಆಮೇಲೆ ಅವಳಿಗೆ ಒಬ್ಬ ತಮ್ಮ ಹುಟ್ಟುತ್ತಾನೆ. ಅವನು ಶಾಹ್ ಗಂಗೋಲಿ. ಹಾಗೆಂದರೆ ಕಾಡಿನ ರಾಜ. ಅದೇ ಕಾಡಿನಲ್ಲಿ ದೊಕ್ಖಿನ್ ರಾಯ್ ಅಂತ ಒಬ್ಬ ಭಯಂಕರ ಕಣ್ಣುಗಳಿರುವ, ಹರಿತವಾದ ಹಲ್ಲುಗಳಿರುವ, ಪಟ್ಟೆಪಟ್ಟೆಯ ತೊಗಲಿರುವ, ಚೂಪಾದ ಉಗುರುಗಳಿರುವ ರಾಕ್ಷಸ ಇರುತ್ತಾನೆ. ಅಬ್ಬಾ! ಈ ಬೋನ್ ಬೀಬೀ ಇದ್ದಾಳಲ್ಲಾ, ಈ ರಾಕ್ಷಸನನ್ನು ಕಾಡಿನಿಂದ ಹೊರಗೋಡಿಸುವ ಬಗೆ ನೀವು ಓದಿಯೇ ತಿಳಿದುಕೋ ಬೇಕು. ಅಷ್ಟೇ ಅಲ್ಲ ಜನರೂ ಪ್ರಾಣಿಗಳೂ ಕಾಡಿನ ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳಲು ಸಂರಕ್ಷಿಸಲು, ಒಂದೇ ಕುಟುಂಬದವರಂತೆ ಬದುಕಲು ಕಲಿಸುತ್ತಾಳೆ. ಚಿತ್ರಗಳೂ ಪುಟತುಂಬಾ ಹರಡಿಕೊಂಡು ಸೊಗಸಾಗಿವೆ.
ಲೇಖಕರು: ಸಂಧ್ಯಾ ರಾವ್
ಅನುವಾದ: ಜಯಶ್ರೀ ಕಾಸರವಳ್ಳಿ
ಚಿತ್ರಗಳು: ಪ್ರೊಯಿತಿ ರಾವ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.135
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************