ಪ್ರೀತಿಯ ಪುಸ್ತಕ : ಸಂಚಿಕೆ - 93
Friday, January 12, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 93
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಗೋಲಿ ಆಟ ಆಡಿದ್ದೀರಾ? ಇತ್ತೀಚೆಗೆ ಈ ಆಟ ಆಡುವುದು ಅಷ್ಟಾಗಿ ಕಾಣುವುದಿಲ್ಲ. ಚಂದದ ಚಿತ್ರಗಳೊಂದಿಗೆ ಈ ಪುಸ್ತಕದಲ್ಲಿ ಈ ಗೋಲಿ ಆಟದ ವಿವರ ಇದೆ. ಕಿರಣ ಚಾಮರಾಜನಗರದಲ್ಲಿ ಅಪ್ಪನ ಗೆಳೆಯರ ಮನೆಗೆ ಹೋಗಿದ್ದ. ಅಲ್ಲಿ ಮನೆ ಹತ್ತಿರ ಇಬ್ಬರು ಹುಡುಗರು ಗೋಲಿಗಳನ್ನು ಜೋಡಿಸುತ್ತಾ ಆಟ ಶುರುಮಾಡಿದ್ದು ಕಿರಣನಿಗೆ ಕಂಡಿತು. ಕಿರಣನಿಗೆ ಕುತೂಹಲವಾಯಿತು. ಸ್ವಲ್ಪ ಹೊತ್ತು ನೋಡುತ್ತಿದ್ದು ಆಮೇಲೆ ಮೆತ್ತಗೆ ಹೋಗಿ ಹುಡುಗರಿಗೆ ತನ್ನ ಪರಿಚಯ ಮಾಡಿಸಿಕೊಂಡ ಕಿರಣ. ತಾನೂ ಆಟ ಆಡುವುದಾಗಿ ಕೇಳಿಕೊಂಡಾಗ ಆ ಹುಡುಗರೂ ಅವನಿಗೆ ತಮ್ಮದೇ ಗೋಲಿ ಕೊಟ್ಟು ಅವರ ಜೊತೆಗೆ ಆಟ ಆಡಿಸಿದರು. ಅವರ ಹಾಗೆ ಕುಕ್ಕರಗಾಲಿನಲ್ಲಿ ಕೂರಲು ಕಿರಣನಿಗೆ ಸ್ವಲ್ಪ ಕಷ್ಟವಾದರೂ, ಚೆನ್ನಾಗಿ ಗುರಿಯಿಟ್ಟು ಹೊಡೆಯುತ್ತಿದ್ದ. ಅವನಿಗೆ ಹೊಸ ಆಟ ಕಲಿತ ಖುಶಿ.. ಆಮೇಲೆ ಕಿರಣ ಏನು ಮಾಡಿದ, ಓದಿ ನೋಡಿ. ಪುಸ್ತಕದಲ್ಲಿ ಆಟ ಆಡುವ ವಿಧಾನವನ್ನೂ ಪರಿಚಯಿಸಿದ್ದಾರೆ. ನೀವೂ ಆಡಬಹುದು.
ಲೇಖಕರು: ಯಶಸ್ವಿನಿ ಎಸ್ ಎನ್
ಚಿತ್ರಗಳು: ಲಿಪ್ತಿ ರಾವ್
ಪ್ರಕಾಶಕರು: ಹರಿವು ಬುಕ್ಸ್
ಬೆಲೆ: ರೂ.90
4 ರಿಂದ 6ನೇ ತರಗತಿಯವರು ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************