ಹೊಸ ವರುಷ - 2024 : ಮಕ್ಕಳ ಕವನಗಳು
Wednesday, January 3, 2024
Edit
ಹೊಸ ವರುಷ - 2024 : ಮಕ್ಕಳ ಕವನಗಳು
ಜಗಲಿಯ ಮಕ್ಕಳು ಬರೆದ
ಹೊಸ ಕ್ಯಾಲೆಂಡರ್ ವರುಷದ
ಹೊಸ ಕನಸಿನ ನವ ಕವನಗಳು
ವಸಂತ ಕಾಲವನು ಮರಳಿ ತರುತಲಿದೆ
ಹೊಸ ಕನಸುಗಳು ಚಿಗುರುವ ಸಮಯ
ಎಲ್ಲರ ಬದುಕಾಗಿರಲಿ ಆನಂದಮಯ
ವರ್ಷವಿಡೀ ಇರಲಿ ಸುಖ ಶಾಂತಿ
ನಮ್ಮೆಲ್ಲರಿಂದ ಶುರುವಾಗಲಿಂದು ಜ್ಞಾನದ ಕ್ರಾಂತಿ
ಸರ್ವರ ಮೊಗವಿರಲು ಬೆಳದಿಂಗಳ ಹೊಳಪಿನಂತೆ
ಸ್ಪರ್ಧಿಸಿ ಯಾರಿಗೂ ಸಾಟಿಯಿಲ್ಲದಂತೆ
ಹಳೆ ನೆನಪುಗಳು ಆಗಾಗ
ಮರುಕಳಿಸುತಲಿರಲಿ
ಅದರಿಂದ ಕಲಿತ ಪಾಠಗಳೆಂದೂ
ಮರೆಯಾಗದಿರಲಿ
ಪರಿಶ್ರಮದ ಫಲವೆಂದು ಸಿಹಿಯಾಗಿರುವುದು
ಶ್ರಮದ ಬದುಕು ಸ್ವರ್ಗಕ್ಕೆ ಮಿಗಿಲಾಗಿರುವುದು
ಭರವಸೆಯ ಬೆಳಕನ್ನು ಎಲ್ಲರಲ್ಲಿ ಮೂಡಿಸೋಣ
ಅಂಧಕಾರವನ್ನು ನಮ್ಮಿಂದ ದೂರ ಓಡಿಸೋಣ
ಮಾನವರೆಂದಿಗೂ ದಾನವರಾಗದೆ
ಒಗ್ಗಟ್ಟಿನ ಮಂತ್ರವ ಜಪಿಸೋಣ
ಗತಕಾಲಕ್ಕೆ ವಿದಾಯ ಹೇಳುತ್ತಾ
ಹೊಸ ಬದುಕಿಗೆ ಪಾದಾರ್ಪಣೆ ಮಾಡೋಣ...
ಮಕ್ಕಳ ಜಗಲಿಯ ಬಾಂಧವರಿಗೆಲ್ಲರಿಗೂ ಹೊಸ ವರ್ಷದ ಪ್ರೀತಿಯ ಶುಭಾಶಯಗಳು..
10ನೇ ತರಗತಿ
ಸರಕಾರಿ ಪ್ರೌಡ ಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************
ಹೊಸ ಹೊಸ ದಿನ
ನಲಿಯುತ ಕುಣಿಯುತ
ಬಾಳುವ ದಿನ
ಸುಖ ಶಾಂತಿ ನೆಮ್ಮದಿ
ಬರಲಿ ಎಂದು ಪ್ರಾರ್ಥಿಸುವ ದಿನ
ಹಳೆ ವರ್ಷಕ್ಕೆ ಹೇಳಿ ಬಾಯ್ ಬಾಯ್
ಹೊಸ ವರ್ಷಕ್ಕೆ ಹೇಳಿ ಹಾಯ್ ಹಾಯ್
ಸುಖ ಶಾಂತಿ ನೆಮ್ಮದಿ ತರಲಿ
ಹೊಸ ವರುಷದಲ್ಲಿ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಪಾಪೆ ಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ದಾರಿ ತೋರುವ ದಾರಿದೀಪವಾಗಲಿ
ಈ ವರ್ಷದಲ್ಲಿ ನಮ್ಮ ಬದುಕು
ವಿಸ್ಮಯದಿಂದ ಕೂಡಿರಲಿ
ನಮ್ಮ ಕನಸೆಲ್ಲ ನನಸಾಗಲಿ
ನಮ್ಮ ಈ ಬಾಳಲಿ
ಸ್ವಾತಂತ್ರ್ಯದಿಂದ ಇರುವ ಹಕ್ಕಿಯಂತೆ
ಬಾನಲಿ ತೇಲಾಡುವಂತೆ ಆಗಲಿ
ಎಲ್ಲೆಡೆಯೂ ಈ ಹೊಸ ವರ್ಷದ
ಹರುಷ ತುಂಬಿರಲಿ
ಕಷ್ಟಗಳೆಲ್ಲ ಕುಗ್ಗಲಿ
ಸಂತೋಷ ಎಂಬ ಜ್ಯೋತಿಯು ಆರದಿರಲಿ
ನಮ್ಮ ನಿಂದಿಸುವ ಜನರೆದುರುಗಡೆ
ತಲೆ ಎತ್ತಿ ನಡೆಯುವಂತೆ ಆಗಲಿ
ಇಂದಿನ ಮನಸ್ತಾಪ
ದುಃಖಗಳನ್ನು ಇಂದಿಗೆ ಬಿಟ್ಟು
ಹೊಸ ವರ್ಷ ದೆಡೆಗೆ ಹರ್ಷದಿಂದ
ಕಾಲಿಡುವಂತೆ ಆಗಲಿ
ಎಲ್ಲರಿಗೂ ಕಷ್ಟದಲ್ಲಿ ಸಹಾಯ ಮಾಡುವ
ಒಳ್ಳೆಯ ಬಾವವಿರಲಿ
ಧ್ವನಿಯಲ್ಲೇ ಎಲ್ಲರ ಮನಸ್ಸನ್ನೂ
ಗೆಲ್ಲುವಂತಹ ಮಾತಿರಲಿ
ಕಣ್ಣಿನಲ್ಲೇ ಭಾವನೆಗಳನ್ನು
ಅರ್ಥೈಸಿ ಕೊಳ್ಳುವಂತೆ ಆಗಲಿ
ಈ ಹೊಸ ವರ್ಷದ ಶುಭಗಳಿಗೆಯು
ನಮ್ಮನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡಲಿ
ಎಲ್ಲರ ಈಡೇರಿಕೆಯು ಪೂರೈಸಲಿ
ಈ ವರ್ಷವು ಎಲ್ಲರಿಗೂ
ಒಳಿತನ್ನು ಮಾಡಲಿ........
8ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ಕಟ್ಟೆ
ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ
******************************************
ಹಕ್ಕಿಗಳ ಚಿಲಿಪಿಲಿ ಆಟ
ಬಾನಿನಲ್ಲಿ ಸೂರ್ಯ, ಚಂದ್ರ
ನಕ್ಷತ್ರಗಳ ಮಿನುಗುವ ನೋಟ.
ಹೊಸ ವರ್ಷದ ಸಡಗರದ
ಹುರುಪು ಮೂಡುತ್ತಿದೆ
ಹಳೆ ವರುಷದ ಸಿಹಿ -ಕಹಿ
ನೆನಪು ಮರೆಯಾಗುತ್ತಿದೆ .
ಈ ವರ್ಷ ಬಾಳಲ್ಲಿ
ಗೆಲುವು- ನಲಿವು ಮೂಡಲಿ
ಪ್ರೀತಿ, ಮಮತೆ, ವಾತ್ಸಲ್ಯ
ತುಂಬಿ ಹರಿಯಲಿ.
ಆಹಾ.... ಆಹಾ....
ಹೊಸ ವರ್ಷ ಬರುತ್ತಿದೆ
ನನ್ನ ಮನಸ್ಸು ಹೂವಿನಂತೆ ಅರಳುತ್ತಿದೆ .
ಮಕ್ಕಳ ಜಗಲಿ ಹೀಗೆಯೇ
ನಿರಂತರ ಮುಂದೆ ಸಾಗಲಿ
ದೇವರು, ಆರೋಗ್ಯ, ಆಯುಷ್ಯ ಕೊಟ್ಟು
ಎಲ್ಲರನ್ನೂ ಹರಸಲಿ.
" ನನ್ನ ಎಲ್ಲಾ ಮಕ್ಕಳ ಜಗಲಿಯ ಮಿತ್ರರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು."
8ನೇ ತರಗತಿ
ದ. ಕ. ಜಿ. ಪಂ. ಹಿರಿಯ
ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಜೀವನದಲ್ಲಿನ ಕನಸು-ನನಸುಗಳ
ಆನಂದಮಯ ನವಹರ್ಷ
ಕಾಣದ ಸಂತೋಷವನ್ನು ಬಯಸುವ
ಹೃದಯಗಳು ಸಾವಿರಾರು
ಕಾಣಿಸುವ ಹೃದಯಗಳಿಗೆ
ಸಂತೋಷ ನೀಡುವ ಜನರು ಹಲವಾರು
ಈ ವರ್ಷ ಮಾಡಿದ ಪರಿವರ್ತನೆಗೆ ಹೊಸ
ವರ್ಷವೆಂಬ ಪದವೇ ಬದಲಾವಣೆ
ಈ ವರ್ಷ ಮಾಡಿದ ತಪ್ಪಿಗೆ
ಹೊಸ ವರ್ಷವೆಂಬ ಪದವೇ ಪರಿವರ್ತನೆ
ಈ ಹೊಸ ವರ್ಷದಂದು ನಾವು ನಗುತ್ತಾ
ಎಲ್ಲರಿಗೂ ಸಂತೋಷವನ್ನು ಹಂಚುವ
ಹೊಸ ವರ್ಷದಂದು ಒಳ್ಳೆಯ ಬೆಳವಣಿಗೆ
ಹೊಂದುತಾ ಎಲ್ಲರಿಗೂ ಮಾದರಿಯಾಗುವ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಹೊಸವರ್ಷ ಬರಲಿದೆ,
ತರಲಿದೆ ತರಲಿದೆ
ಹೊಸತನವ ತರಲಿದೆ
ಹೊಸತನವ ಮೈಗೂಡಿಸಿಕೊಂಡು
ಕೈ ಬೀಸಿ ಹೊಸದಾಗಿ ಕರೆಯಲಿದೆ
ಬದುಕಿನ ದಾರಿಗೆ....
ಹೊಸ ಆಯಾಮವನ್ನು ನೀಡಲಿದೆ
ನಾನು ಎಂಬುವ ಅಹಂಕಾರ ಮರೆಸಿ
ನಾವು ಎನ್ನುವ ಪ್ರೀತಿಯ
ಸಹಬಾಳ್ವೆಯನ್ನು ತಿಳಿಸುತ ಬರಲಿದೆ
ನಿನ್ನೆಗಳ ನೋವು ಮರೆಸಲು
ನಾಳೆಗಳ ಸಂತಸವನ್ನು ನೀಡಲು
ಹೊಸದಾಗಿ ಬರಲಿದೆ
ಗುರು-ಶಿಷ್ಯರ ಬಾಂಧವ್ಯ ಬೆಸೆಯಲು
ಮತ್ತೊಮ್ಮೆ ಹೊಸದಾಗಿ ಬರಲಿದೆ
ಕನಸುಗಳ ಮೂಟೆಗೆ ನನಸೆಂಬ
ಭರವಸೆಯ ಬಣ್ಣವ ಬಳಿದು
ಹೊಸದಾಗಿ ಬರಲಿದೆ
ಬದುಕಿನ ಏಳು ಬೀಳುಗಳನ್ನು ಮರೆಸಲು
ಮತ್ತೊಮ್ಮೆ ಹೊಸವರ್ಷ ಬರಲಿದೆ,
ಭರವಸೆಯ ಬದುಕು ನಮ್ಮದಾಗಲೆಂದು
ಹರಸುತ ಹೊಸವರ್ಷ ಬರುತಿದೆ.....
ಪ್ರಥಮ ಪಿಯುಸಿ
ಸರ್ಕಾರಿ ಪದವಿಪೂರ್ವ
ಕಾಲೇಜು ಹೊಸನಗರ
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
******************************************
ಪ್ರಕೃತಿ ನೋಡಲು ಹಚ್ಚ ಹಸುರಾಗಿದೆ
ನಮ್ಮ ಮನಸ್ಸು ಪ್ರಕೃತಿಗೆ ತಲ್ಲಣವಾಗಿದೆ
ಪ್ರಕೃತಿಯ ಸೊಬಗು
ನೋಡಲು ತುಂಬಾ ಚಂದ.
ಪದಗಳಲ್ಲಿ ವರ್ಣಿಸಲಾಗದು
ಇದರ ಅಂದ
ಹಚ್ಚ ಹಸುರಾಗಿ ಕಾಣುವ ಗಿಡಮರ
ಓ ಪ್ರಕೃತಿ ನೀ ಬಲು ಸುಂದರ.
ಪ್ರಕೃತಿಯನ್ನು ಮಾಡಬಾರದು ವಿಕೃತಿ
ಹೊಸ ವರ್ಷದ ಹೊಸ ಕಲ್ಪನೆಯಲ್ಲಿ
ಇದಕ್ಕೆ ಕಲ್ಪಿಸಬೇಕು ಒಂದು ಆಕೃತಿ..
ಸರಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
******************************************
ಹರುಷವನ್ನು ತರಲಿ
ಹಳೆಯ ಕಹಿಯನ್ನು ಮರೆಯೋಣ
ಹೊಸತನವನ್ನು ಸ್ವಾಗತಿಸೋಣ
ಇಂದಿನಿಂದ ನಾವು ಕಲಿಯೋಣ
ನಾಳೆಗೆ ಭರವಸೆ ಇಡೋಣ.
ಜೀವನ ಪೂರ್ತಿ ಹೊಳೆಯುತಿರಲಿ
ನಗುವಿನ ಸೊಗಸು
ನನಸಾಗಲಿ ಮನದೊಳಗಿನ ಕನಸು
ಸುಗಂಧದಂತೆ ಹರಡಲಿ ಮಕ್ಕಳ ಮನಸ್ಸು.
"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು"....
7ನೇ ತರಗತಿ
ದ. ಕ. ಜಿ. ಪಂ. ಹಿರಿಯ
ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬಂದೇ ಬಿಟ್ಟಿದೆ ಹೊಸ ವರ್ಷ
ಹೊಸ ವರ್ಷದಲ್ಲಿ ನಮ್ಮ ಸಾಧನೆಯು
ಕಳೆದ ವರ್ಷವನ್ನು ಮೀರುವಂತಿರಬೇಕು
ಮರೆಯಲ್ಲಿ ನೋವನುಂಡ ಆ ದಿನಗಳು
ಮರೆಯಾಗಿ ಬರುತಿರಲಿ
ಹರುಷ ತುಂಬಿದ ಹೊಸ ದಿನಗಳು
6ನೇ ತರಗತಿ
ಸಿರಿ ವಿದ್ಯಾಲಯ ಸಾಲೆತ್ತೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಹೊಕ್ಕಳ ಬಳ್ಳಿಯಿಂದ ಬಂದೆ
ಕಲಿತು ಕಲಿಯುತ
'ಮಕ್ಕಳ ಜಗಲಿ'ಯಲಿ ನಿಂತೆ.
ವರುಷ ಕಳೆದಿದೆ
ಹರುಷ ಹಾಗೇ ಉಳಿದಿದೆ
“ಮಹರ್ಷಿ' ಯ ಈ ಗುರುಪೀಠದಲಿ
ಹರ್ಷಿತಳಾದೆ.
ಬೆರೆತು ಬಿನ್ನಾಣಕೆ
ಚಿನ್ನಾಟವ ಆಡಿದ ಊರು “ಕಿಲ್ಪಾಡಿ,
“ವ್ಯಾಸರ” ಪಾದತಲದಲ್ಲಿ ಅಭ್ಯಾಸ
ಅಧ್ಯಾನವೇ ನಮ್ಮ ಬದುಕ ತಿದ್ದಿ ತೀಡಿ
ಬುದ್ಧಿ ಪ್ರಬುದ್ಧತೆಯಲಿ ನಾನು ವಾರಿಧಿ
ವಾರುಣಿಯ ಮಾರಿಸಿದ
ಪಯೋನಿಧಿ ನಾನೇ.......“ರಿಧಿ?"
D/o ಸುಚಿತ್ರಾ ರವಿಚಂದ್ರ ಆಚಾರ್ಯ
5ನೇ ತರಗತಿ
ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ, ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************