-->
ಮಕ್ಕಳ ಕವನಗಳು - ರಚನೆ : ಪ್ರತೀಕ್ಷಾ ತಂಟೆಕ್ಕು : ಸಂಚಿಕೆ - 02

ಮಕ್ಕಳ ಕವನಗಳು - ರಚನೆ : ಪ್ರತೀಕ್ಷಾ ತಂಟೆಕ್ಕು : ಸಂಚಿಕೆ - 02

ಮಕ್ಕಳ ಕವನಗಳು : ಸಂಚಿಕೆ - 02
ಕವನ ರಚನೆ : ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      

ಹೇ ಲಂಬೋಧರನೇ 
ಹೇ ಅಂಬಾಸುತನೆ
ಮೋದಕ ಪ್ರಿಯನೇ
ಕದಿಕೆ ಪ್ರಿಯನೇ
ಗೌರಿ ತನಯನೇ
ಶಿವನ ಕುಮಾರನೇ
ಕವಿಜನಪ್ರಿಯನೇ
ಡೊಳ್ಳು ಹೊಟ್ಟೆ ಗಣಪನೇ
ನಿನಗೆ ನನ್ನ ವಂದನೆ....
ಮೂಷಿಕ ನಿನ್ನ ವಾಹನ
ನೀ ಗಜ ಮುಖದ ಗಜವದನ
ವಿದ್ಯಾದಾಯಕನೇ ನೀ 
ಬುದ್ಧಿ ಪ್ರದಾಯಕನೇ ನೀ
ನಮ್ಮ ಪೊರೆವ ಗಜಾನನ ನೀ ದೇವ
ವಿಘ್ನದ ಅಂತ್ಯ ನೀ 
ಶುಭಕಾರ್ಯದ ಸೂಚಕನಾದ ನೀ 
ಪ್ರಥಮಾರಾಧಕ
ನೀ ನಮ್ಮನ್ನು ರಕ್ಷಿಸುವ ಸಂರಕ್ಷಕ
ದೇವತೆಗಳ ನಾಯಕ
ನೀನೇ ಗಣನಾಯಕ 
ಗೌರಿ ಪುತ್ರ ವಿನಾಯಕ 
ನಿನಗೆ ನನ್ನ ಶರಣು ದೇವ.....
ಜಗದ ಕಲ್ಯಾಣ ಮಾಡುವ 
ಸಿದ್ದಿವಿನಾಯಕ ನೀ
ಮುಧೂರು ಮದನಂತೇಶ್ವರದ 
ಮಹಾ ಗಣಪತಿ ನೀ
ನಮ್ಮ ಪೊರೆವ ಕವಚ ನೀ
ಶರಣು ದೇವ ಶರಣು
ಕಲಿಯುಗದ ಈ ಕಾಲದಲ್ಲಿ
ದುಷ್ಟರ ಅಟ್ಟಹಾಸಕ್ಕೆ ಎಸೆ ಮಣ್ಣು
ಒಳ್ಳೆತನದ ಮೇಲೆ ಇದೆಯಲ್ಲ 
ಕೆಟ್ಟತನದ ಕಣ್ಣು..
ಹೇ ಪ್ರಭು 
ಲೋಕದಲ್ಲಾಗುತ್ತಿದೆಯಲ್ಲಾ ಪಾಪ.....
ಇದನ್ನು ತಡಿ ಹೇ ಗಣಪ
ನಮ್ಮನ್ನು ಹರಸುವ ಭಗವಂತ 
ಕಾಪಾಡು ರಕ್ಷಿಸು ರಕ್ಷಿಸು
ನಮ್ಮ ಜೀವನವೆಂಬ ಹೂವ ಅರಳಿಸಿ 
ಬೆಳಗಿಸುವ ದೇವ ನೀ ಗಣಪ
ಜೈ ಶ್ರೀ ಗಣೇಶ... 
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************ಮಹಾತ್ಮರೆನಿಸಿದ ಮಹಾನ್ ವ್ಯಕ್ತಿ
ಅಮರವಾದ ದೇಶದ ಶಕ್ತಿ
ಶಾಂತಿ ಹಾಗೂ ಸತ್ಯದ ಮೂರ್ತಿ
ಇವರಿಲ್ಲಿ ಜನಿಸಿರುವುದು ನಮ್ಮ ಕೀರ್ತಿ

ಇವರಿಂದಾಯಿತು ಉಪಖಂಡ
ಸರ್ವ ತಂತ್ರ ಸ್ವತಂತ್ರ
ಬಾಗಿಹೋಯಿತು ಬ್ರಿಟಿಷರ ಕುತಂತ್ರ.
ಚರಕ ಇವರ ಯಂತ್ರ
ಕ್ಷಣ ಕ್ಷಣಕೂ ಜಪಿಸಿದರು ಸತ್ಯದ ಮಂತ್ರ.

ದ್ವೇಷ ಗುಣವಿಲ್ಲದ
ಶುದ್ಧವಾದ ಸುವಿಶಾಲ ಮನಸ್ಸು
ಸ್ವತಂತ್ರ ಭಾರತವಾಗಿತ್ತು ಇವರ ಕನಸು
ಭಾರತಮಾತೆಯ ಹೆಮ್ಮೆಯ ಕೂಸು.

ಮೋಹನ ದಾಸ ಕರಮ ಚಂದ ಗಾಂಧಿ
ಇವರು ಮೊಳಗಿದರು ಭಾರತದ ಏಳ್ಗೆಗೆ ನಾಂದಿ.

ಭಾರತಕ್ಕಾಗಿ ತಮ್ಮ ಪ್ರಾಣವನ್ನು 
ತ್ಯಾಗ ಮಾಡಿದ ಮಹಾನ್ ಧೀಮಂತ
ಇವರು ಸದಾ ನಮ್ಮ ಹೃದಯದಲ್ಲಿದ್ದು 
ವಾಸಿಸುವರು ಜೀವಂತ.
ಉಚ್ಛ ದಾರಿಯನ್ನು ದೇಶಕ್ಕೆ ತೋರಿದ ಹೃದಯವಂತ
ಇವರ ಮನಸೆಂದು ಇತ್ತು ಶ್ರೀಮಂತ.

ಇವರ ಹಾದಿ ನುಡಿ ನಡತೆ ಅನರ್ಘ್ಯ
ದೇಶ ಕಂಡ ಮಹಾನ್ ಮಹೋದಯ.
ನಮ್ಮ ಗಾಂಧೀಜಿ
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************ಬಾಳಿನ ಕತ್ತಲ ಓಡಿಸಿ
ಅಂಧಕಾರವ ಗುಡಿಸಿ
ಪ್ರೀತಿ ದೀಪವ ಬೆಳಗಿಸಿ
ಸಂತೋಷ ಕುಸುಮವ ಅರಳಿಸಿ
ಸ್ನಾನದ ಹಂಡೆಯ ಶೃಂಗರಿಸಿ
ಬಾಗಿಲ ಅಲಂಕರಿಸಿ 
ಹೊಸ ಉಡುಪ ಧರಿಸಿ
ಆಚರಿಸುವ ಹಬ್ಬ
ದೀಪಗಳ ಹಬ್ಬ.

ಹಸಿರು ಪಟಾಕಿಯ ಸಿಡಿಸುವ
ಪರಿಸರ ಸಂರಕ್ಷಣೆ ಮಾಡುವ

ಗೋಪೂಜೆಯ ಮಾಡಿ ಗೋಮಾತೆಗೆ 
ನಮಿಸೋ ಶುಭದಿನ
ದೀಪಾವಳಿ ಹಬ್ಬ ತರುವುದು ರೋಮಾಂಚನ
ಬಹು ಚೆಲುವಿದೆ ಅದರ ಸಿಂಚನ
ಭಕ್ತರ ಮನೆಯೊಳು ಮಹಾಲಕ್ಷ್ಮಿಯ ಆಗಮನ.
ಎಣ್ಣೆಯ ಹಚ್ಚಿ ಸ್ನಾನವ ಮಾಡುವ ದಿನ
ಪಟಾಕಿ ಸಿಡಿತದ ಮೇಲಿರುವುದು ಎಲ್ಲರ ಗಮನ.

ದೀಪವ ಬೆಳಗಿಸಿ ಸಂಭ್ರಮಿಸುವ ಈ ಹಬ್ಬ
ಇದು ಆನಂದದ ಹಬ್ಬ 
ಪ್ರತಿ ಮನೆಯಲ್ಲೂ ಸಿಹಿ ತಿಂಡಿಗಳ ಡಬ್ಬ

ದುಃಖವ ತುಂಬಿದ ಕಣ್ಣೀರ ಒರೆಸಿ
ಬೇಸರವ ಮನದಿಂದ ತೊಲಗಿಸಿ 
ನೋವನು ಓಡಿಸಿ
ನಿಂದನೆಯನ್ನು ಮರೆಸಿ
ಸಂತೋಷವನ್ನು ಹರಡಿಸಿ
ದುಃಖದ ಮಳೆಯು ತೊರೆದು ಹೋಗಲಿ
ಸಂತೋಷದ ಕಳೆ ಮಿನುಗುತಿರಲಿ
ಈ ಹಬ್ಬ ತರಲಿ ಪ್ರತಿ ಮನೆಯಲ್ಲಿ ಹರುಷವ
ಪ್ರತಿ ಮನದಲ್ಲಿ ಉಲ್ಲಾಸವ....
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


 
ಮಕ್ಕಳ ಸಂಭ್ರಮದ ದಿನ
ಇದು ಮಕ್ಕಳ ದಿನ
ಮಕ್ಕಳಲ್ಲಿ ಮಕ್ಕಳಾಗುವ ದಿನ
ಆಟಗಳಿಂದ ತುಂಬಿಹುದು ಮಕ್ಕಳ ದಿನ
ಆಡಿ ನಲಿಯುದು ಮಕ್ಕಳ ತನ
ಮಕ್ಕಳನ್ನು ಪ್ರೋತ್ಸಾಹಿಸುವ ಪ್ರತಿದಿನ.

ಜವಾಹರ ಲಾಲ ನೆಹರು ಅವರ ಜನ್ಮ ದಿನ
ಮಕ್ಕಳೇ ಕದಿಯಿರಿ ಮನಸುಗಳನ್ನು
ಕಾಣಿರಿ ನಿದ್ದೆಕೆಡುವ ಕನಸುಗಳನ್ನು
ಸ್ವಪ್ನಗಳನ್ನು ಸಾಧಿಸೋಕೆ ಮಾಡಿರಿ ಯತ್ನ
ಸೋತರೆ ಮತ್ತೆ ಮಾಡಿರಿ ಪ್ರಯತ್ನ
ಎಂದಿಗೂ ಬಿಡಬೇಡಿ ನಿಮ್ಮ ತನ
ಅದಾಗಿರಲಿ ಎಂದೂ ಒಳ್ಳೆತನ.

ಅರಳುವ ಹೂವುಗಳೇ
ಕೇಳಿರಿ ನನ್ನದೊಂದು ಮಾತ,
ನಿಮ್ಮಲ್ಲಿ ಯಾವತ್ತೂ ಇರಬಾರದು ಜಾತಿ ಮತ.
ಕೇಳಿರಿ ದೊಡ್ಡವರ ಮಾತ.
ಕೆಟ್ಟದ್ದು ಸುಳ್ಳು, ಒಳ್ಳೆಯದು ಸರಿ 
ಎಂದೇ ಹೇಳುತ್ತದೆ ಜೀವನದ ದಾರಿ

ಚಿಲಿಪಿಲಿ ಹಕ್ಕಿಗಳೇ ಕೇಳಿರಿ ನನ್ನದೊಂದು ಮಾತ
ಎಂದೂ ಮುಚ್ಚದಿರಿ ಜೀವನದ ಪುಟ
ಎಂದೂ ಮಾಡದಿರಿ ಇಲ್ಲ ಸಲ್ಲದಕ್ಕೆ ಹಠ
ಎಂದೂ ನೀಡದಿರಿ ತಂದೆ ತಾಯಿಗೆ ಕಾಟ
ಎಂದೆಂದೂ ಮರೆಯದಿರಿ ಶಿಕ್ಷಕರ ಪಾಠ.

ಮಿನುಗುವ ಮುತ್ತುಗಳೇ 
ಕೇಳಿರಿ ನನ್ನದೊಂದು ಮಾತ
ನಿಮ್ಮ ಗುರಿಯ ಕಡೆ ಇರಲಿ ನಿಮ್ಮ ಪಥ
ಜ್ಞಾನದ ಕೋಟೆ ಕಟ್ಟಿಕೊಳ್ಳಿ ನಿಮ್ಮ ಸುತ್ತ.
ಸಾಮಾಜಿಕ ಜಾಲತಾಣ ತರಬಹುದು ನಿಮ್ಮ
ಜೀವನಕ್ಕೆ ಕುತ್ತ.....
ಶುಭಾಶಯ ಕೋರುತ್ತಾ
ಪಾಲಿಸಿ ನನ್ನ ಈ ಮಾತ
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************
ಹೇಳುವರು ಮಕ್ಕಳು ಹಾಳಾಗಿದ್ದಾರೆ... 
ಓದಿನ ಕಡೆ ಗಮನವಿರದೆ 
ಮೊಬೈಲ್ ನೋಡುತ್ತಾ....
ಆದರೆ ಪೋಷಕರು ಮರೆತಿರುವರು 
ಮಕ್ಕಳಿಗೆ ಸಮಯ ನೀಡಲು 
ಮೊಬೈಲ್ ಬಳಕೆ ಮಾಡುತ್ತಾ.....!!

ಮಕ್ಕಳು ಕೆಟ್ಟ ಪದ 
ಮಾತಾಡುವುದು ಸರಿ ಇಲ್ಲ...!!
ದೊಡ್ಡವರು ಮಕ್ಕಳ ಮುಂದೆ 
ಕೆಟ್ಟ ಶಬ್ದ ಬಳಕೆ ಮಾಡುವುದು 
ಸಹ ಒಳಿತಲ್ಲ.....!!

ತನ್ನ ಕೂಸು ಇಲ್ಲಸಲ್ಲದ ಕೆಲಸ ಮಾಡಿದರೆ 
ಅತಿಯಾದ ಮಮಕಾರ ತೋರದೆ
ಶಿಲ್ಪಿಯಾಗಿ ಕಲ್ಲಂತಿರುವ ಕಂದನ ತಿದ್ದಿ
ಒಳ್ಳೆಯ ದಾರಿಯ ತೋರಿ....
ಪರೀಕ್ಷೆ ಅಂಕ ಮುಖ್ಯ ಎಂದು ಹೇಳಿ
ಒಳ್ಳೆಯ ನಡತೆ ಮುಖ್ಯ ಎಂದು ಹೇಳಲು ಮರೆಯದಿರಿ.

ಓದುವ ಹಾದಿಯಲಿ ಮುಂದಿರ ಬೇಕು 
ಎಂದು ಹೇಳಿ......
ಜೀವನದ ಪಥದೊಳು ಹಿಂದುಳಿಯ ಬೇಡ 
ಎಂಬುದನ್ನು ಹೇಳುತಲಿರಿ   
ಶಿಕ್ಷಕರು ಮಗುವಿಗೆ ಹೊಡಿದಿಹರೆಂದು
ಕಾರಣ ತಿಳಿಯದೆ 
ಆರೋಪ ಎಂದಿಗೂ ಮಾಡದಿರಿ.

ಮಕ್ಕಳ ದೊಡ್ಡ ಕನಸುಗಳ ಹಿಡಿದು 
ನಿನ್ನಿಂದ ಇದು ಅಸಾಧ್ಯ ಎಂದು 
ಹೀಯಾಳಿಸದಿರಿ....
ಬೆನ್ನು ತಟ್ಟುತ್ತಾ....
ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತಲಿರಿ.

ಮಾಡದಿರಿ ತನ್ನ ಮಗುವನು 
ಮತ್ತೊಬ್ಬರ ಮಗುವಿಗೆ ಹೋಲಿಕೆ .
ನೀಡಿರಿ ಮಕ್ಕಳ ಜೀವನಕ್ಕೆ 
ಒಳ್ಳೆಯ ಸಂಸ್ಕಾರದ ಹೊದಿಕೆ.

ಅತಿಯಾದ ಮೋಹವೆಂಬ ಪಂಜರದಿಂದ
ಹಕ್ಕಿಯಂತೆ ಇರುವ ಮಕ್ಕಳನು 
ಬಿಡುಗಡೆ ಗೊಳಿಸಿರಿ.
ಹಾಗೆಂದು ಅತಿಯಾದ ಸ್ವಾತಂತ್ರ ನೀಡದಿರಿ.

ಬೇರೆಯವರ ದೂರನ್ನು ಮಕ್ಕಳಲ್ಲಿ ಹೇಳದಿರಿ.
ಮಕ್ಕಳ ಮನದೊಳು ಕೆಡಕು ಭಾವ ತುಂಬದಿರಿ.

ಭವ್ಯ ಭಾರತದ ಮುಂದಿನ ಮುಕುಟಮಣಿಗಳ ಮನದೊಳು ದೇಶ ಪ್ರೇಮ ತುಂಬುತಲಿರಿ
ಸಹಾಯ ಮಾಡಬೇಕು , ಗುರು ಹಿರಿಯರಿಗೆ ಮರ್ಯಾದೆ ನೀಡಬೇಕು ಎಂಬ ವಿಷಯ ತಿಳಿಸಲು ಮರೆಯದಿರಿ....!!
ಬೆಳೆಸಿ ಮಕ್ಕಳನು ಸಮಾಜದಲ್ಲಿ 
ಉತ್ತಮ ವ್ಯಕ್ತಿಯಾಗಿ ರೂಪಿಸುವ ಕರ್ತವ್ಯ
ಜವಾಬ್ದಾರಿ ನಿಮ್ಮದೆಂದು ಮರೆಯದಿರಿ...!! 

ಅತ್ತ ಕರುಳ ಕೂಗ ಮಕ್ಕಳು 
ಆಲಿಸುವಂತೆ ಮಾಡುವ ಗುಣ 
ಹೆತ್ತ ಕರುಳಿನಿಂದ ಬರಲಿ 
ಒಬ್ಬ ವ್ಯಕ್ತಿಗೆ ಗಾಯವಾಗಿ 
ರಕ್ತ ಮೈತುಂಬ ಹರಿಯುತ್ತಿದ್ದರೆ 
ಸಹಾಯ ಮಾಡುವ ಗುಣ 
ರಕ್ತದಿಂದಲೇ ಬಂದರೆ ಒಳ್ಳೆಯದು 
ಎಂಬುದು ನನ್ನ ಆಶಯ
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************ರಾಮನ ಮೊಗದಲ್ಲೊಂದು ತೇಜಸ್ಸು...
ನನಸಾಗಿದೆ ಎಷ್ಟೋ ಜೀವರಾಶಿಗಳ ಕನಸು.
ಅಯೋಧ್ಯೆಯತ್ತ ಎಲ್ಲರ ಗಮನ.
ಶ್ರೀ ರಾಮನಿಗೊಂದು ನನ್ನ ನಮನ.

ಕೈಯಲ್ಲೊಂದು ಬಿಲ್ಲು ಬಾಣ
ರಾಮ ನಾಮವ ಜಪಿಸುತ್ತಿದೆ ನನ್ನ ಕಣ ಕಣ.
ರಾಮ ಮಂದಿರ ಎಂಬ ಭೂಸ್ವರ್ಗದಲ್ಲಿ ರಾಮನಿರುವುದು ಅದೆಷ್ಟು ಸುಂದರ,
ಜಾನಕಿಯ ಮನಕದ್ದ ಚೋರ.

ರಾಮನ ಮೂರ್ತಿ ಎನಿತು ಮನೋಹರ.
ಶಿರದ ಮೇಲೆ ನೇಸರ.. 
ಮಿನುಗುವ ನೋಟ..
ಉಬ್ಬಿದ ಕೆನ್ನೆ
ಮೊಗದಲ್ಲೊಂದು ಮುಗುಳು ನಗೆ.
ಆ ಸೌಂದರ್ಯದ ಬಗ್ಗೆ ಸಂಭೋದಿಸಲು 
ಸಾಧ್ಯವೇ ನಮಗೆ...??

ತಂದೆ ತನ್ನ ತಾಯಿಗೆ ನೀಡಿದ 
ವಚನದ ಮರ್ಯಾದೆಗಾಗಿ ಕಾನನಕ್ಕೆ
ತೆರಳಿದ ಮರ್ಯಾದ ಪುರುಷೋತ್ತಮ
ನಮ್ಮ ಪ್ರಭು ಶ್ರೀ ರಾಮ.
ಧರ್ಮದ ಪಥವನ್ನು ಹಿಡಿದು 
ಪರಮೋಚ್ಚ ರೀತಿಯಲ್ಲಿ ಬಾಳಸಾಗಿಸಿದ
ರಘು ಕುಲದ ರಘುನಂದನ.
ದಶ ಮುಖ ರಾವಣನ ವಧಿಸಿದ
ಕೌಸಲ್ಯ ನಂದನ.

ಐನೂರು ವರ್ಷಗಳ ಹೋರಾಟದ ಫಲ 
ಈ ರಾಮ ಮಂದಿರ
ಜನಕನಂದಿನಿಯ ಆಣ್ಮ.
ಲಕ್ಷ್ಮಣ, ಭರತ ಶತ್ರುಘ್ನನರ ಅಣ್ಣ.
ರಾಮಜನ್ಮ ಭೂಮಿಯಲ್ಲಿ 
ಹಸುಳೆ ಶ್ರೀರಾಮನಿಗೆ 
ಮೂಡಿಬಂದ ಭವ್ಯ ಅರಮನೆ.

ಇಡೀ ದೇಶಕ್ಕೆ ರಾಮನಾಮ ಪಸರಿಸಲಿ
ಆ ದೇವನು ಭಕ್ತರ ತೊಳಲುಗಳ ನೀಗಿಸಲಿ
ಆ ಹನುಮಂತನ ಸ್ವಾಮಿ, ತ್ರಿಲೋಕದ ಒಡೆಯ 
ಇಡೀ ರಾಷ್ಟ್ರವನ್ನು ಪೊರೆಯಲಿ, ಪರಿಪಾಲಿಸಲಿ.
ಜೈ ಶ್ರೀರಾಮ......       
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್
ಕಕ್ಯಪದವು, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************
Ads on article

Advertise in articles 1

advertising articles 2

Advertise under the article