-->
ಪ್ರೀತಿಯ ಪುಸ್ತಕ : ಸಂಚಿಕೆ - 91

ಪ್ರೀತಿಯ ಪುಸ್ತಕ : ಸಂಚಿಕೆ - 91

ಪ್ರೀತಿಯ ಪುಸ್ತಕ
ಸಂಚಿಕೆ - 91
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                   ಮುನ್ನಿ ಮನೆಗೆ ಮುನ್ನ ಬಂದ
ಪ್ರೀತಿಯ ಮಕ್ಕಳೇ... ಈ ಮುನ್ನಿ ಯಾರು, ಮುನ್ನ ಯಾರು? ಮುನ್ನಿ ಒಂದು ಮುದ್ದಾದ ನಾಯಿ.. ಮುನ್ನ ಒಬ್ಬ ಪುಟ್ಟ ಹುಡುಗ. ಮುನ್ನಿ ಹುಟ್ಟಿದಾಗ ಅವಳನ್ನು ಜೋಪಾನ ಮಾಡಲು ಯಾರೂ ಇರಲಿಲ್ಲ. ಆಗ ಅನುಅಕ್ಕ ಅವಳನ್ನು ಮನೆಗೆ ಕರೆತಂದಳು. ಮುನ್ನಿಗೆ ಒಂದು ಪ್ರೀತಿಯ ಕುಟುಂಬ ಸಿಕ್ಕಿತು. ಆಮೇಲೆ ಸ್ವಲ್ಪ ಸಮಯದ ನಂತರ ಮುನ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಚ್ಚುಅಕ್ಕನಿಗೆ ಮಗು ಹುಟ್ಟಿತು. ಮುನ್ನ ಹುಟ್ಟಿದ. ಮುನ್ನ ಮನೆಗೆ ಬಂದಾಗ ಮುನ್ನಿಗೆ ಹೇಗೆ ಅನಿಸಿತು, ಮುನ್ನಿಗೆ ಮುನ್ನನ ಜೊತೆಗೆ ಹೇಗೆ ಸ್ನೇಹ ಬೆಳೆಯಿತು ಅಂತ ಈ ಪುಸ್ತಕ ಓದಿದರೆ ನಿಮಗೆ ಗೊತ್ತಾಗುತ್ತದೆ. ರಚನಾ ಅವರು ಈ ಸ್ನೇಹ ಬೆಳೆದ ರೀತಿಯ ಸುಂದರ ಚಿತ್ರಗಳನ್ನು ಬರೆದಿದ್ದಾರೆ. ನಾಯಿ, ಬೆಕ್ಕು, ನಂತಹ ಸಾಕು ಪ್ರಾಣಿಗಳು ನಿಮ್ಮ ಮನೆಯಲ್ಲೂ ಇರಬಹುದು. ನೀವೂ ಈ ರೀತಿಯ ಕಥೆ ಬರೆಯಬಹುದು. 
ಲೇಖಕರು: ವಾಣಿ ಪೆರಿಯೋಡಿ 
ಚಿತ್ರಗಳು: ರಚನಾ ಸೂರಜ್  
ಪ್ರಕಾಶಕರು: ಹಿತಾ ರಿಸೋರ್ಸ್ ಯುನಿಟ್, ಮಂಗಳೂರು
ಬೆಲೆ: ರೂ.70
4ನೇ 5ನೇ ತರಗತಿಯವರು ಓದಿಕೊಳ್ಳಬಹುದು. ದೊಡ್ಡ ಮಕ್ಕಳಿಗೂ ಪುಸ್ತಕ ಖುಶಿ ಕೊಡಬಹುದು.
........................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article