ಪ್ರೀತಿಯ ಪುಸ್ತಕ : ಸಂಚಿಕೆ - 89
Friday, December 15, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 89
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಅಕ್ಷರ ಮಾಲೆ ಜೊತೆಗೆ ಆಟ ಆಡಿದ ಹಾಗೆ ಆಗುತ್ತದೆ, ಈ ಪುಸ್ತಕ ಓದುವಾಗ. ನಾನು ಒಂದೆರಡು ಉದಾಹರಣೆ ಕೊಟ್ಟರೆ ಸಾಕು, ನಿಮಗೆ ಈ ಪುಸ್ತಕ ಓದಲೇ ಬೇಕು ಅಂತ ಅನಿಸಬಹುದು.
“ಅಡವಿಯ ನಡುವಲಿ,
ಅರಳಿಯ ಮರದಲಿ,
ಅಳಿಲಿನ ಗೂಡಿತ್ತು..”
“ಆಲದ ಮರದಡಿ,
ಆಡಿನ ಮರಿಯದು,
ಆಟವ ಆಡಿತ್ತು..”
ಮೂರು ಸಾಲುಗಳ ಸುಂದರವಾದ ಪ್ರಾಸದೊಂದಿಗೆ ‘ಅ’ ದಿಂದ ಹಿಡಿದು ‘ಳ’ ವರೆಗೂ ಹೀಗೇ ಸಾಗುತ್ತದೆ. ಎಷ್ಟು ಚಂದ ರಾಗವಾಗಿ, ಓದಿಸುತ್ತಾ ಹೋಗುತ್ತದೆ. ಚಿತ್ರಗಳು ಚೆನ್ನಾಗಿವೆ. ಅಕ್ಷರಗಳು ದೊಡ್ಡದಾಗಿ ಸುಲಭ ಓದಿಗೆ ಅನುಕೂಲವಾಗುವ ಹಾಗೆ ಇದೆ. ಚಿಕ್ಕ ಮಕ್ಕಳು ಹೊಸ ಹೊಸ ಪದಗಳನ್ನೂ ಆಸಕ್ತಿಯಿಂದ ಕಲಿಯಬಹುದು. ನಿಮ್ಮ ಖುಶಿಗಾಗಿ ಇನ್ನೊಂದು ಉದಾಹರಣೆ –
“ನರಿ ಮರಿಯೊಂದು,
ನಗಾರಿ ಸದ್ದಿಗೆ,
ನಡುಗುತ ಓಡಿತ್ತು..”
ಲೇಖಕರು: ಜಿ.ಆನಂದ್
ಚಿತ್ರಗಳು: ಸಂತೋಷ್ ಸಸಿಹಿತ್ಲು
ಪ್ರಕಾಶಕರು: ಹರಿವು ಬುಕ್ಸ್
ಬೆಲೆ: ರೂ.45
4ನೇ ತರಗತಿಯವರು ಓದಬಹುದು. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು. ಇತರ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************