-->
ಪ್ರೀತಿಯ ಪುಸ್ತಕ : ಸಂಚಿಕೆ - 87

ಪ್ರೀತಿಯ ಪುಸ್ತಕ : ಸಂಚಿಕೆ - 87

ಪ್ರೀತಿಯ ಪುಸ್ತಕ
ಸಂಚಿಕೆ - 87
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


         ಟ್ರಿನ್ ಟ್ರಿನ ಹಲೋ.. ಮಕ್ಕಳ ಸಹಾಯವಾಣಿ
      ಪ್ರೀತಿಯ ಮಕ್ಕಳೇ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಅಲ್ಲ, ಅವರು ಕೂಡಾ ಇಂದಿನ ಪ್ರಜೆಗಳೇ – ಎಂಬುದು ನೆನಪಿಟ್ಟುಕೊಳ್ಳಬೇಕಾದ ಅಂಶ. ಈ ಪುಸ್ತಕದಲ್ಲಿ ಮಕ್ಕಳು ಒಂದು ಗುಂಪಾಗಿ ತಮ್ಮ ಸಮಸ್ಯೆಗಳನ್ನು ಹಿರಿಯರ ಸಲಹೆ ಸಹಕಾರ ಪಡೆದುಕೊಂಡು ಎದುರಿಸುವ ವಿವರಣೆ ಇದೆ. ಮಕ್ಕಳು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯನ್ನು ಗುರುತಿಸಿ ಅದರ ವಿರುದ್ದ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಕಿರಿಯರೂ ಹಿರಿಯರೂ ಸೇರಿ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳವುದು, ಮಕ್ಕಳ ಕ್ಲಬ್ ಮಾಡುವುದು, ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯ ಎಂಬುದನ್ನು ಕಥಾ ರೂಪದಲ್ಲಿ ವಿವರಿಸಲಾಗಿದೆ. ಕೊನೆಯಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಧೈರ್ಯದಿಂದ, ಸಮರ್ಥವಾಗಿ ಭಾಗವಹಿಸುವ ಚಿತ್ರಣವಿದೆ. ಅಲ್ಲಿ ಮಕ್ಕಳೇ, ಮಕ್ಕಳ ಗ್ರಾಮಸಭೆಯ ಬಗ್ಗೆ ಹಲವಾರು ಪ್ರಶ್ನೆ ಕೇಳುತ್ತಾ, ಈ ಸಭೆಯ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಇದು ಸ್ವಲ್ಪ ಗಂಭೀರ ಓದು. ಮಾಹಿತಿಗಾಗಿ ಓದಲೇ ಬೇಕಾದ ಪುಸ್ತಕ. 
ಲೇಖಕರು: ಡಾ.ಪರಮೇಶ್ವರಯ್ಯ ಸೊಪ್ಪಿನಮಠ
ಚಿತ್ರಗಳು: ವಿಜಯಶ್ರೀ ನಟರಾಜ್ 
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ 
ಬೆಲೆ: ರೂ.95
9ನೆ, 10ನೆ ಮತ್ತು ಪಿ.ಯು ಮಕ್ಕಳು ಓದಬಹುದಾದ ಪುಸ್ತಕವಿದು. ಶಿಕ್ಷಕರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವವರಿಗೂ ಇದು ಉಪಯುಕ್ತ.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************




Ads on article

Advertise in articles 1

advertising articles 2

Advertise under the article