-->
ಜಗಲಿ ಕಟ್ಟೆ : ಸಂಚಿಕೆ - 32

ಜಗಲಿ ಕಟ್ಟೆ : ಸಂಚಿಕೆ - 32

ಜಗಲಿ ಕಟ್ಟೆ : ಸಂಚಿಕೆ - 32
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಮಕ್ಕಳ ಜಗಲಿಯ ಪ್ರತಿಯೊಬ್ಬರಿಗೂ ಕೂಡ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.... 

     ಹೊಸ ವರ್ಷ ಅಂದಾಕ್ಷಣ ಏನೋ ಹೊಸ ಸಂಚಲನ ನಮ್ಮಲ್ಲಿ... ಹೇಗೋ ಒಂದು ವರ್ಷ ಕಳೆದಾಯ್ತು ಇನ್ನು ಮುಂದೆ ಹೀಗಿರಬೇಕು ಹಾಗಿರಬೇಕು ಅನ್ನುವ ಆಲೋಚನೆಗಳು. ಏನೇನೋ ಚಿಂತೆಗಳು ಮೂಡುವುದು ಸಹಜ. 

     ನಾನಿಲ್ಲಿ ನನ್ನ ಆತ್ಮೀಯರಾದ ಕಲಾವಿದ ಪರಿಸರ ಚಿಂತಕ ದಿನೇಶ್ ಹೊಳ್ಳರನ್ನು ನೆನಪಿಸುತ್ತೇನೆ. ಅವರ ಹೊಸ ವರ್ಷದ ಸಂದೇಶ ಪತ್ರಗಳಲ್ಲಿ ಕೂಡ ಪರಿಸರವನ್ನು ಉಳಿಸುವ ನಡೆಯಿತ್ತು.
      ಸುಮಾರು 20 ವರ್ಷಗಳಿಂದ ದಿನೇಶ್ ಹೊಳ್ಳರ ಜೊತೆಗಿನ ನಂಟು. ಕಲೆ, ಸಾಹಿತ್ಯ, ಪರಿಸರ, ಗಾಳಿಪಟ, ಇವು ಅವರ ಸಂಗಾತಿಗಳು. ಮರ, ಗಿಡ , ಕಾಡು, ಪರಿಸರ ಅಂದಾಗ ಅವರ ಧ್ವನಿಯಲ್ಲಿ ಕಾಳಜಿಯ ಧಾಟಿಯೇ ಬೇರೆ. ಕಡಿಯುವ ಮರಗಳನ್ನು ಉಳಿಸುವ, ನಾಶವಾಗುತ್ತಿರುವ ಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೊಳ್ಳರ ಹೋರಾಟಗಳನ್ನು ಕಂಡಾಗ ನಿಜವಾಗಲೂ ನಾವು ಏನು ಮಾಡುತ್ತಿದ್ದೇವೆ ಅನ್ನುವ ಭಾವನೆ ಬರುತ್ತದೆ....!!
       ದಿನೇಶ್ ಹೊಳ್ಳರ ಜೊತೆ ಹಲವು ಬಾರಿ ನಮ್ಮ ಶಾಲಾ ಮಕ್ಕಳನ್ನು ಜೊತೆ ಸೇರಿಸಿಕೊಂಡು ಚಾರಣಕ್ಕೆ ಹೋದದ್ದಿದೆ. ಪ್ಲಾಸ್ಟಿಕ್ ಲಕೋಟೆಗಳು ಪ್ಲಾಸ್ಟಿಕ್ ಬಾಟಲಿಗಳ ಬಗ್ಗೆ ಮುಂಚಿತವಾಗಿ ಸಾಕಷ್ಟು ಎಚ್ಚರಿಕೆ ನೀಡಿ ಮಕ್ಕಳಲ್ಲಿ ಆ ಬಗ್ಗೆ ಅರಿವನ್ನು ಮೂಡಿಸಿದ್ದರು. ಕಾಡಿನ ಯಾವ ಭಾಗದಲ್ಲಿಯೂ ಕೂಡ ಯಾವುದೇ ರೀತಿಯ ಪ್ಲಾಸ್ಟಿಕ್ ಸೊತ್ತುಗಳನ್ನು ಬಳಸದೆ ವಾಪಾಸ್ ಬರುತ್ತಿದ್ದೆವು. ಅಷ್ಟರಲ್ಲಿ ಒಬ್ಬ ಹುಡುಗ ಪ್ಲಾಸ್ಟಿಕ್ ಬಾಟಲಿಯೊಂದನ್ನು ಎಸೆದಿದ್ದು ಹೊಳ್ಳರ ಗಮನಕ್ಕೆ ಬಂತು. ತನ್ನೊಡಲಿಗೆ ಫಾಸಿಯಾದಂತೆ ಭಾವಿಸಿದ ಅವರ ವರ್ತನೆ ಅರಿತ ಬಾಲಕನಿಗೆ ತನ್ನ ತಪ್ಪಿನ ಅರಿವಾಗಲು ಸಮಯವೇ ಬೇಕಿರಲಿಲ್ಲ..!! 

       ಇಂತಹ ಶಿಕ್ಷಣ ಪ್ರತಿ ಮನೆಯಲ್ಲೂ, ಶಾಲೆಯಲ್ಲೂ, ಧಾರ್ಮಿಕ ಕೇಂದ್ರಗಳಲ್ಲೂ ದೊರೆತಾಗ ದಾರಿಯುದ್ದದ ಅಷ್ಟೂ ಪ್ಲಾಸ್ಟಿಕ್ ರಾಶಿಗಳು ಮಾಯವಾಗಬಹುದೇನೊ...!! ಹೊಸ ವರ್ಷದಲ್ಲಿ ಪರಿಸರಕ್ಕೆ ಕೆಡುಕಾಗದೇ ಬದುಕೋಣ...! 
  (ಚಿತ್ರಗಳು : ದಿನೇಶ್ ಹೊಳ್ಳ) 


ಕಳೆದ ಸಂಚಿಕೆಯ ಜಗಲಿಕಟ್ಟೆ - 31 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
     ದರೋಡೆಕೋರನೊಬ್ಬ ಮಗುನಿನ ಮುಗ್ದ ಪ್ರೀತಿಯ ನಗುವಿನಿಂದ ಯಾವ ರೀತಿ ಬದಲಾದ ಹಾಗೂ ಆ ಇಡೀ ಕುಟುಂಬವನ್ನು ಸಂರಕ್ಷಿಸಿ ಕಾಡನ್ನು ದಾಟಲು ಸಹಾಯ ಮಾಡಿದ ಸುಂದರ ಕಥೆಯ ಮೂಲಕ.... ಪ್ರೀತಿಯಿಂದ ಯಾವ ರೀತಿ ನಮ್ಮನ್ನು ಪರಸ್ಪರ ಬೆಸೆದು ಜೀವನವನ್ನು ಸಂಭ್ರಮಿಸುವುದಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ಸುಂದರವಾಗಿ ನಿರೂಪಿಸಿದ್ದಾರೆ.
     ಅಂತರ್ಜಾಲ ಬಹುಪಯೋಗಿ ಮಾಧ್ಯಮ. ಆದರೆ ಅದರ ಉಪಯೋಗ ಅವಶ್ಯಕತೆಗಷ್ಟೇ ಇರಬೇಕು. ನಮ್ಮ ಹೃದಯದ ಭಾವನೆಗಳಿಗೆ ಧಕ್ಕೆಯಾಗದಂತಿರಬೇಕು ಎನ್ನುವುದನ್ನು ರಮೇಶ್ ಬಾಯಾರ್ ಸರ್ ಸೊಗಸಾಗಿ, ವಿವರಣಾತ್ಮಕವಾಗಿ ತಿಳಿಸಿದ್ದಾರೆ.
     ವಸ್ತುವಿನ ಮೇಲೆ ಬಲಪ್ರಯೋಗ ನಡೆದಾಗ ಬಲ ಪ್ರಯೋಗದ ದಿಕ್ಕಿನಲ್ಲಿ ವಸ್ತುವು ಚಲಿಸಿದರೆ ಭೌತಶಾಸ್ತ್ರದಲ್ಲಿ ಕೆಲಸ ನಡೆದಿದೆ ಎಂಬುದನ್ನು ದಿವಾಕರ ಸರ್ ರವರು ಬಹಳ ಚೆಂದದ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.
     ಚೆಂದದ ಒಗಟು, ಚೆಂದದ ಹಕ್ಕಿ ಪರಿಚಯ, ಚೆಂದದ ಹಕ್ಕಿಯ ಛಾಯಾಚಿತ್ರ ಅರವಿಂದರವರಿಂದ.
    ವೀಳ್ಯದೆಲೆಯ ಕುರಿತಾಗಿ ಸವಿಸ್ತಾರವಾದ ಪರಿಚಯ ವಿಜಯಾ ಮೇಡಂ ರವರಿಂದ. ತುಂಬಾ ಮಾಹಿತಿ ಪಡೆದ ಹಾಗಾಯಿತು.
     ತರಬೇತಿ ಕಾರ್ಯಾಗಾರವನ್ನು ಯಾವ ರೀತಿ ನಡೆಸಿದಾಗ ಕಾರ್ಯಾಗಾರ ಯಶಸ್ವಿಯಾಗಬಹುದು ಎಂಬುದನ್ನು ಯಾಕೂಬ್ ಸರ್ ಸವಿವರವಾಗಿ ತಿಳಿಸಿದ್ದಾರೆ.
     ಹಲವು ದಿನಗಳ ನಂತರ ಮತ್ತೆ Art Gallary ಯ ಮೂಲಕ ಚಿತ್ರ ಕಲಾಕಾರರ ಪರಿಚಯ ಜಗಲಿಯಲ್ಲಿ. ನನ್ನ ಹಾಗೂ ಕೈರಂಗಳ ಸರ್ ರವರ ವಿದ್ಯಾರ್ಥಿ ಹರಿಚರಣ್ ಬಿಡಿಸಿದ ಅಮೋಘ ಚಿತ್ರಗಳ ದರ್ಶನವಾಯಿತು. ಪ್ರತಿಭಾವಂತ ವಿದ್ಯಾರ್ಥಿಯಾಗಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಈ ಎತ್ತರಕ್ಕೆ ಬೆಳೆದದ್ದು ನೋಡಿ ತುಂಬಾ ಸಂತೋಷವಾಯಿತು.
     ಸ್ವತಃ ತಾವೇ ಬರೆದ ಸುಂದರ ಪುಸ್ತಕ ಜೊತೆಗೆ ಕತೆ ಬರೆಯಲು ಪ್ರೇರೇಪಿಸುವ ಪುಸ್ತಕದ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
   ಶಿಕ್ಷಕರ ಸ್ಕೂಲ್ ಡೈರಿಯಲ್ಲಿ ವಿದ್ಯಾರ್ಥಿಗಳ ಗುರುಭಕ್ತಿಯ ಕುರಿತಾಗಿ ತಮ್ಮ ಅನುಭವವನ್ನು ಬಹಳ ಚೆನ್ನಾಗಿ ಹಂಚಿಕೊಂಡಿದ್ದಾರೆ ರವೀಂದ್ರ ಸರ್ ರವರು.
     ರಮೇಶ ಉಪ್ಪುಂದರವರ ಈ ವಾರದ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ. ಸಂಚಿಕೆ ನೂರರ ಗಡಿಯ ಹತ್ತಿರ ತಲುಪಿದೆ. ಮುಂದಿನ ಸಂಚಿಕೆಯಲ್ಲಿ ನೂರರ ಸಂಭ್ರಮ. ಶುಭಾಶಯಗಳು ರಮೇಶ್ ರವರಿಗೆ...
     ಈ ವಾರದ ಜಗಲಿ ಸೊಗಸಾಗಿ ಮೂಡಿ ಬರಲು ಕಾರಣಕರ್ತರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು..
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article