-->
ಜಗಲಿ ಕಟ್ಟೆ : ಸಂಚಿಕೆ - 28

ಜಗಲಿ ಕಟ್ಟೆ : ಸಂಚಿಕೆ - 28

ಜಗಲಿ ಕಟ್ಟೆ : ಸಂಚಿಕೆ - 28
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಸಾಧಾರಣ ಕಳೆದ ವಾರದಿಂದ ಪೋಷಕರಿಂದ ವಿದ್ಯಾರ್ಥಿಗಳಿಂದ ಕರೆಗಳು ಬರುತ್ತಾನೆ ಇದೆ. ಈಗಾಗಲೇ ಮಕ್ಕಳ ಜಗಲಿ ಕವನ ಮತ್ತು ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಹಾಗೂ ಮೆಚ್ಚುಗೆ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ...!! ಹೌದು ಕಾಯುವುದು ಸಹಜ.... ಮಕ್ಕಳ ಮನಸೇ ಹಾಗೆ...!! ಏನೋ ಕುತೂಹಲ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಬೇಕೆನ್ನುವ ತವಕ...!!
      ಹೌದು ನಮ್ಮ ಉದ್ದೇಶನೂ ಅಷ್ಟೆ.. ಆದಷ್ಟು ಬೇಗ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ಕಳುಹಿಸಬೇಕೆನ್ನುವುದು ಇದೆ. ಅಂದಾಜು ನೂರರಷ್ಟು ವಿದ್ಯಾರ್ಥಿಗಳ ಪ್ರಶಸ್ತಿ ಪತ್ರಗಳ ಸಿದ್ಧತೆ ಸಲ್ಪ ಸಮಯ ಬೇಕಾಗುವುದು ಸಹಜ. ಪ್ರತಿಯೊಬ್ಬರ ವೈಯಕ್ತಿಕವಾಗಿ ಹೆಸರು, ವಿಳಾಸ ಮತ್ತು ಭಾವಚಿತ್ರಗಳ ದಾಖಲಿಕರಣ ನಡೀತಾ ಇದೆ. ಸುವ್ಯವಸ್ಥೆಯಲ್ಲಿ , ಮುದ್ರಣದ ಯಾವುದೇ ತಪ್ಪಿಲ್ಲದೆ ಜಾಗರೂಕತೆಯಿಂದ ಮಾಡುವುದು ಒಂದು ರೀತಿಯ ತಾಳ್ಮೆಯ ಕೆಲಸವಾಗಿದೆ. ಇಲ್ಲಿ ತಾಂತ್ರಿಕ ಕೆಲಸ ಮುಖ್ಯವಾಗಿರುವುದರಿಂದ ಸಮಯದ ಹೊಂದಾಣಿಕೆ, ಬಿಡುವು, ಇವುಗಳ ಕಾರಣದಿಂದ ತಂತ್ರಜ್ಞರ ಸಹಕಾರನೂ ಅಷ್ಟೇ ಮುಖ್ಯವಾಗಿದೆ.
         ಒಟ್ಟಾಗಿ ಹೇಳುವುದಾದರೆ ಸಾಧ್ಯವಾದಷ್ಟು ಶೀಘ್ರವಾಗಿ ಪ್ರಶಸ್ತಿ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವ ಪ್ರಯತ್ನ ಮಕ್ಕಳ ಜಗಲಿಯಿಂದ ನಡೆಯುತ್ತದೆ. ನಿಮ್ಮೆಲ್ಲರ ಪ್ರೀತಿಯ ಸಹಕಾರ ನಮ್ಮ ಜೊತೆ ನಿರಂತರವಾಗಿರಲಿ....

       ಕೆಲವು ವರ್ಷಗಳ ಹಿಂದೆ ನಾನೊಂದು ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸ್ತಾ ಇದ್ದೆ. ಶಾಲೆಯ ಪ್ರತಿಯೊಬ್ಬ ಮಕ್ಕಳು ಕೂಡ ವಿವಿಧ ಬಗೆಯ ಚಟುವಟಿಕೆಯಲ್ಲಿ ಭಾಗವಹಿಸುವ ಆಸಕ್ತಿವಂತರಾಗಿದ್ದರು. ಕೆಲವಷ್ಟು ವಿದ್ಯಾರ್ಥಿಗಳು ಮಾತ್ರ ನಡತೆಯ ದೃಷ್ಟಿಯಿಂದ ಬಾಧಿತರಾಗಿದ್ದರು. ಮನೆಯ ಸಂಸ್ಕಾರದ ಕೊರತೆ ಯೋ, ಹೆತ್ತವರ ಪ್ರೀತಿಯ ಕೊರತೆಯೋ, ಅಥವಾ ಮಾನಸಿಕ ಒತ್ತಡವೊ ಕಾಣೆ... ಕೆಲವು ಮಕ್ಕಳಲ್ಲಿ ಅವು ಎದ್ದು ಕಾಣುತ್ತಿತ್ತು...!! 
        ಹೀಗೆ ಗುರುತಿಸಲ್ಪಟ್ಟಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬಾಕೆ ಬಂದು... "ಸರ್ ಚಿತ್ರಕಲಾಕೃತಿಗಳನ್ನು ರಚಿಸಬೇಕೆಂದಿದ್ದೇನೆ... ನಾನೂ ಆರ್ಟ್ ಕ್ಲಬ್ ಗೆ ಬರಬಹುದಾ...?" ಎಂದಳು. ಬಹಳ ಆಶ್ಚರ್ಯವಾಯಿತು...! ಆಕೆ ತನ್ನ ಗೆಳತಿಯ ಸಹವಾಸವನ್ನು ಬಿಟ್ಟು ದಿನಾ ಆರ್ಟ್ ಕ್ಲಬ್ಬಿಗೆ ಬಂದು ಎಲ್ಲಾ ಮಕ್ಕಳ ಜೊತೆ ಕಲಾಕೃತಿಗಳನ್ನು ರಚಿಸಲು ಆರಂಭಿಸಿದಳು. ಬಹಳಷ್ಟು ಅನ್ನೋದಕ್ಕಿಂತಲೂ... ಪೂರ್ತಿಯಾಗಿ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡ ಆಕೆ ಉತ್ತಮ ವಿದ್ಯಾರ್ಥಿನಿಯಾಗಿ ಮಾದರಿಯಾದಾಗ ಆ ಶಾಲೆಯಲ್ಲಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು...!!
        ವಿದ್ಯಾರ್ಥಿಗಳಿಗೆ ಕಲೆ ಮತ್ತು ಸಂಸ್ಕಾರಗಳ ಪರಿಚಯವಾಗಬೇಕೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೊರತೆ ಇರುವುದು ನಿರ್ಧಾರದಲ್ಲಿ...!! ಪ್ರತಿಯೊಬ್ಬ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರಯುತವಾದ ಕಲಾ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಜೊತೆಗೆ ಹಿರಿಯರ ಸಹಕಾರ, ಪ್ರಶಂಸೆಯ ಮಾತುಗಳು ನಿರಂತರವಾಗಿದ್ದಾಗ ಇದು ಖಂಡಿತಾ ಸಾಧ್ಯ ಎನ್ನುವುದು ನಾನು ಕಂಡುಕೊಂಡಿರುವ ಸತ್ಯ...!!
        
    
ಕಳೆದ ಸಂಚಿಕೆಯ ಜಗಲಿಕಟ್ಟೆ - 27 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ ಸಹಶಿಕ್ಷಕಿ , ಸುಮಿತಾ ಸಹಶಿಕ್ಷಕಿ, ಎಸ್ ಪಿ ರಝೀಯಾ ಭದ್ರಾವತಿ, ಧನ್ಯಶ್ರೀ 7ನೇ ತರಗತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರಗಳು....
       ಟಿಕ್ಟಾಕ್ , ರೀಲ್ಸ್ ಗಳ ಮೋಡಿಗೆ ಸಿಲುಕಿ, ರಿಯಲ್ ಲೈಫಿನ ಸುಮಧುರ ಕ್ಷಣಗಳನ್ನು ಸವಿಯುವ ಅವಕಾಶವನ್ನು ದೂರ ಮಾಡಿಕೊಳ್ಳುತ್ತಿರುವ ಎಷ್ಟೋ ಮಕ್ಕಳಿಗೆ, ಬಹುಶಃ 'ಮಕ್ಕಳ ಜಗಲಿ ' ಯಂತಹ ಒಂದೊಳ್ಳೆಯ ಮಾರ್ಗದರ್ಶಕ ವೇದಿಕೆ ದೊರೆತರೆ, ಅವರಿಗೂ ಮುಂದೆ ಒಂದೊಳ್ಳೆ ಭವಿಷ್ಯ ಸಿಗಬಹುದೇನೋ? ಕಳೆದ ವಾರ ಜಗಲಿಕಟ್ಟೆ ಓದುಗರ ಮಾತುಕತೆಯಲ್ಲಿ ತಾರಾನಾಥ ಸರ್ ರವರು ಬರೆದಿರುವ ಚೈತನ್ಯದಾಯಕವಾದ ವಿಚಾರಗಳನ್ನು ಓದಿದಾಗ ತುಂಬಾನೇ ಖುಷಿಯಾಯಿತು. ಯಾಕೆಂದರೆ ಬೆಳೆಯುತ್ತಿರುವ ಎಲ್ಲ ಮಕ್ಕಳಲ್ಲೂ ಕಲಾದೇವಿ ನೆಲೆಯಾಗಬೇಕೆಂಬ ನಿಟ್ಟಿನಲ್ಲಿ, ನಾನಾ ಬಗೆಯ ಸ್ಪರ್ಧೆಗಳನ್ನು ಆಯೋಜಿಸುತ್ತಾ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಸಮಾನವಾಗಿ ಹುರಿದುಂಬಿಸಿ ಅಭಿನಂದಿಸುವ ಕಾಯಕವನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ತಾರಾನಾಥ ಸರ್ ರವರಿಗೆ ಧನ್ಯವಾದಗಳು. ಮಕ್ಕಳ ಜಗಲಿಯ ಮುಖೇನ ಒಳ್ಳೊಳ್ಳೆ ಕವಿಗಳನ್ನು, ಕಾದಂಬರಿಕಾರರನ್ನು, ಚಿತ್ರಕಲಾ ಪ್ರವೀಣರನ್ನು ಒಟ್ಟಾಗಿ ಹೇಳುವುದಾದರೆ ಅಮೋಘ ಪ್ರತಿಭೆಯುಳ್ಳ ಪ್ರಜೆಗಳನ್ನು ನಾಡಿಗೆ ನೀಡಿದ ಕೀರ್ತಿ ಸಲ್ಲಬಹುದು.
        ಮಕ್ಕಳ ಜಗಲಿ ಕೇವಲ ಮಕ್ಕಳಿಗೆ ಮಾತ್ರವಲ್ಲ, ಕಲೆಯ ಆರಾಧಕರಾಗಿರುವ ಎಷ್ಟೋ ಮನಸ್ಸುಗಳಿಗೆ ಸ್ಪೂರ್ತಿ ತುಂಬುತ್ತಿದೆ, ಕಲೆಯೊಂದಿಗೆ ಬೆರೆತು ಬದುಕಿನ ಕಳೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶ ಒದಗಿಸಿದೆ.
          ಕಳೆದ ವಾರ ಪ್ರಕಟಗೊಂಡ ಎಲ್ಲ ಲೇಖನಗಳೂ, ಮಕ್ಕಳ ಚಿತ್ರಗಳು ತುಂಬಾನೇ ಚೆನ್ನಾಗಿದ್ದವು. ಯಾಕೂಬ್ ಸರ್ ರವರ "ಗುರುಭ್ಯೋ ನಮಃ" ಲೇಖನದಲ್ಲಿ ಮೂಡಿಬಂದ ಗುರುವಂದನೆಗೆ ಬದಲಾಗಿ ಗುರುನಿಂದನೆ ಮಾಡಿದರೆ ಪರೋಕ್ಷವಾಗಿಯಾದರೂ ಎದುರಿಸಬೇಕಾದ ಬದುಕಿನ ಸವಾಲುಗಳು ಬಹಳಷ್ಟು ಕಠಿಣವಾಗಿರುತ್ತದೆ ಎಂಬುವುದಕ್ಕೆ ಸಾಕ್ಷಿಯಂತೆಯೇ ಇತ್ತು.
        ರಮೇಶ್ ಬಾಯರ್ ಸರ್ ರವರ ಲೇಖನವೂ ಸೊಗಸಾಗಿತ್ತು. ಯಾವುದೇ ವಿಷಯಗಳ ಮೇಲೆ ಕೇವಲ ಮೇಲ್ನೋಟ ಹರಿಸಿದರೆ ಪ್ರಯೋಜನವಿಲ್ಲ, ಅದರ ಬದಲಾಗಿ ಗಮನಿಸುವಿಕೆಯೂ ಜೊತೆಯಾದರೆ ಬದುಕು ಅರ್ಥಗರ್ಭಿತವಾಗಿ ರೂಪುಗೊಳ್ಳಬಹುದು ಎಂಬ ಸಂದೇಶ ಚೆನ್ನಾಗಿತ್ತು.
        ನಮ್ಮೆಲ್ಲರಿಗೂ ವಿಚಾರಗಳ ಹೊಳೆ ಹರಿಸಿ, ಹೊಸ - ಹೊಸ ಸಮಾಚಾರಗಳನ್ನು ತಲುಪಿಸುತ್ತಿರುವ ಮಕ್ಕಳ ಜಗಲಿಯ ಎಲ್ಲ ಲೇಖಕರಿಗೂ ಮನದಾಳದ ವಂದನೆಗಳು.
      ಮತ್ತಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ.
.......................................... ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ 
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ಸರ್ ನಮಸ್ಕಾರ.... ಮಕ್ಕಳ ಜಗಲಿಯಲ್ಲಿ ಎಲ್ಲಾ ಲೇಖನಗಳು ಉತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ಶ್ರೀಮತಿ ವಿಜಯ ಶೆಟ್ಟಿ ಸಾಲೆತ್ತೂರು ಇವರ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ತುಂಬಾ ಪ್ರಯೋಜನಕಾರಿ ವಿಚಾರಗಳಿವೆ. ಇನ್ನೂ ಉತ್ತಮ ವಿಷಯಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ..
.................................... ಗಿರೀಶ್ ಕೋಟ್ಯಾನ್
ಸರಪಾಡಿ, ಬಂಟ್ವಾಳ ತಾಲೂಕು
******************************************


ನಮಸ್ತೇ,
     ಶರಣೆ ಮುಕ್ತಾಯಕ್ಕನವರ ವಚನದಂತೆ ಜೀವನ ಸಾರ್ಥಕವಾಗಲು ಬೇಕಾಗುವ 3 ಪ್ರಮುಖ ಮಾರ್ಗಗಳ ಕುರಿತಾದ ಸವಿಸ್ತಾರ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ.
     ಋಣಾತ್ಮಕ ನೋಟವನ್ನು ದೂರವಿಟ್ಟು ಧನಾತ್ಮಕ ನೋಟವನ್ನು ಬೆಳೆಸೋಣ ಎನ್ನುನ ಕಿವಿ ಮಾತಿನೊಂದಿಗೆ ರಮೇಶ್ ಬಾಯಾರ್ ರವರ 'ನೋಟ' ಲೇಖನ ಸೊಗಸಾಗಿತ್ತು. 
    ದಿನಕರ ಸರ್ ರವರು ವೈರಸ್ ಗಳ ಕುರಿತಾದ ಪ್ರಾಥಮಿಕ ಮಾಹಿತಿಯನ್ನು ಸಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸಗಳೊಂದಿಗೆ ನೀಡಿದ್ದು ಸಾಂದರ್ಭಿಕವಾಗಿತ್ತು.
      ಕೆಂಪು ತಲೆಯ ಕೆಂಬರಲು ಹಕ್ಕಿಯ ಉತ್ತಮ ಪರಿಚಯ ಅರವಿಂದ ಸರ್ ರವರಿಂದ. ವಿಜಯ ಮೇಡಂರವರ ನಿಷ್ಟಾಪಿ ಸಸ್ಯಗಳ ಸಂಚಿಕೆಯಲ್ಲಿ ಚೆನರ ಬಳ್ಳಿಯ ಕುರಿತು ಸವಿಸ್ತಾರ ಮಾಹಿತಿ ಸಿಕ್ಕ ಹಾಗಾಯಿತು.
     ಯಾಕೂಬ್ ಸರ್ ರವರು ಈ ಸಲದ ಹೃದಯದ ಮಾತು ಸಂಚಿಕೆಯಲ್ಲಿ - 'ಗುರು ದೇವೋ ಭವ' ಶೀರ್ಷಿಕೆಗೆ ಅನುಗುಣವಾದ ಘಟನೆಯನ್ನು ಬಹಳ ಅರ್ಥ ಪೂರ್ಣವಾಗಿ ತಿಳಿಸಿದ್ದಾರೆ.
     ವಾಣಿಯಕ್ಕನವರಿಂದ ಮಕ್ಕಳಿಗೆ ಅತೀ ಅಗತ್ಯವೆನಿಸುವ ಸಹಾಯ ವಾಣಿಯ ಕುರಿತಾದ ಪುಸ್ತಕದ ಸುಂದರ ಪರಿಚಯ. ಶಿಕ್ಷಕರ ಡೈರಿಯಲ್ಲಿ ಪೂರ್ಣೇಶ್ ರವರ ಅನುಭವದ ಬುತ್ತಿಯಲ್ಲಿ ಏಕಾಗ್ರತೆ ಮತ್ತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಕುರಿತಾದ ಚಿತ್ರಣ ಅದ್ಭುತವಾಗಿತ್ತು.
     ಮಕ್ಕಳ ಚಿತ್ರಗಳ ಎರಡೂ ಸಂಚಿಕೆಯಲ್ಲಿ ಇಬ್ಬರು ಮಕ್ಕಳು ಬಹಳಷ್ಟು ಸೊಗಸಾಗಿ ಚಿತ್ರಗಳನ್ನು ರಚಿಸಿದ್ದಾರೆ. ಅಭಿನಂದನೆಗಳು ಮಕ್ಕಳಿಗೆ. ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
     ಒಟ್ಟಿನಲ್ಲಿ ಈ ವಾರದ ಜಗಲಿ ಉತ್ತಮ ರೀತಿಯಲ್ಲಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ಮನದಾಳದ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ , ಗಿರೀಶ್ ಕೋಟ್ಯಾನ್ ಸರಪಾಡಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************Ads on article

Advertise in articles 1

advertising articles 2

Advertise under the article