-->
ಜೀವನ ಸಂಭ್ರಮ : ಸಂಚಿಕೆ - 114

ಜೀವನ ಸಂಭ್ರಮ : ಸಂಚಿಕೆ - 114

ಜೀವನ ಸಂಭ್ರಮ : ಸಂಚಿಕೆ - 114
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

       

ಮಕ್ಕಳೇ, ಶಾಂಡಿಲ್ಯ ಎನ್ನುವ ಋಷಿ ಹೇಳುತ್ತಾನೆ.... ನಮ್ಮ ಮನಸ್ಸು ಏಕೆ ಸ್ಥಿರವಾಗಿ ಇರುವುದಿಲ್ಲ..? ಅದಕ್ಕೆ ಕಾರಣ
1. ಅಜ್ಞಾನ 
2. ಅಜ್ಞಾನದಿಂದ ಭ್ರಮೆ 
3. ಭ್ರಮೆಯಿಂದ ಮನಸ್ಸು ಚಂಚಲ 
4. ಚಂಚಲತೆಯಿಂದ ವಿನಾಶ

1. ಅಜ್ಞಾನ : ನಮಗೆ ಸರಿಯಾದ ಜ್ಞಾನ ಇಲ್ಲದೆ ಇರುವುದು. ಯಾವುದು ಸತ್ಯ? ಯಾವುದು ಸತ್ಯವಲ್ಲ ? ಯಾವುದು ಸರಿ? ಯಾವುದು ಸರಿ ಅಲ್ಲ? ಯಾವುದು ಸಂತೋಷ ಕೊಡುತ್ತದೆ?. ಯಾವುದು ಸಂತೋಷ ಕೊಡುವುದಿಲ್ಲ..? ಎನ್ನುವ ಜ್ಞಾನ ಇಲ್ಲದೆ ಇದ್ದರೆ ಅದು ಅಜ್ಞಾನ.

2. ಅಜ್ಞಾನದಿಂದ ಭ್ರಮೆ : ನಮಗೆ ಸರಿಯಾದ ಜ್ಞಾನ ಇಲ್ಲದೆ ಇದ್ದಾಗ ಸತ್ಯವಲ್ಲದ್ದು ನಮ್ಮಲ್ಲಿ ಭ್ರಮೆ ಉಂಟು ಮಾಡುತ್ತದೆ. ಅದು ಸಂತೋಷ ಕೊಡುತ್ತದೆ ಎಂದು ಭ್ರಮಿಸುತ್ತೇವೆ. ಆ ಭ್ರಮೆ ಸತ್ಯವಲ್ಲ. ಆದರೆ ಅದು ಸಂತೋಷ ಕೊಡುವಂತೆ ಕಾಣುತ್ತದೆ.

3. ಭ್ರಮೆಯಿಂದ ಮನಸ್ಸು ಚಂಚಲ: ಸತ್ಯವಲ್ಲದ ಭ್ರಮೆ ಸಂತೋಷ ಕೊಡುವಂತೆ ಕಾಣುವುದರಿಂದ ಮನಸ್ಸು ಅದರ ಹಿಂದೆ ಹೋಗುತ್ತದೆ. ಆ ಭ್ರಮೆಯ ವಸ್ತುವಿಗೆ ಮನಸ್ಸು ಅಂಟಿಕೊಂಡು ಬಿಡುತ್ತದೆ. ಅದರಿಂದ ಬಿಡುಗಡೆ ಕಷ್ಟವಾಗುತ್ತದೆ.

4. ಚಂಚಲತೆಯಿಂದ ವಿನಾಶ :
     ಒಂದು ಉದಾಹರಣೆಯಿಂದ ನೋಡೋಣ. ತಾಯಿ ಮನೆಯಲ್ಲಿ ಹಬ್ಬ ಮಾಡಿದ್ದಾಳೆ. ಸಿಹಿ ಹೋಳಿಗೆ, ಪಾಯಸ, ಬಗೆ ಬಗೆಯ ಪಲ್ಯ, ಸಾಂಬಾರು ಮತ್ತು ಅನ್ನ ಮಾಡಿದ್ದಾಳೆ. ಆದರೆ ಮಗ ಪೊಟ್ಟಣದಲ್ಲಿ ಅಂಗಡಿಯಿಂದ ತಿಂಡಿ ತಂದಿದ್ದಾನೆ. ಮಧ್ಯಪಾನ ತಂದಿದ್ದಾನೆ. ಇದರಲ್ಲಿ ಸರಿಯಾದ ಜ್ಞಾನ ತಾಯಿ ಮಾಡಿರುವ ಅಡುಗೆ, ಅದು ದೇಹ ರಕ್ಷಿಸುತ್ತದೆ, ಮನಸ್ಸನ್ನು ಉಲ್ಲಾಸ ಪಡಿಸುತ್ತದೆ. ಆದರೆ ಮಗನ ಅಜ್ಞಾನ ಮಧ್ಯಪಾನ ಸಂತೋಷ ಪಡಿಸುತ್ತದೆ ಮತ್ತು ಅಂಗಡಿ ಪೊಟ್ಟಣ ಸಂತೋಷ ಕೊಡುತ್ತದೆ ಎಂದು ಭಾವಿಸಿದ್ದಾನೆ. ಆತನ ಮನಸ್ಸು ಮದ್ಯ ಮತ್ತು ಅಂಗಡಿ ತಿಂಡಿಗೆ ಬಂಧಿಸಿದೆ. ಆದ್ದರಿಂದ ಬಿಡಿಸಿಕೊಳ್ಳಲು ಆಗುತ್ತಿಲ್ಲ. ಯಾವುದು ಸತ್ಯ ಜ್ಞಾನ ಅಂತ ತಿಳಿದಿಲ್ಲ. ಆತ ಮದ್ಯಪಾನ, ಅಂಗಡಿ ಪೊಟ್ಟಣಕ್ಕೆ ಸಂತೋಷ ಕೊಡುತ್ತದೆ ಎಂದು ಆತನ ಮನಸ್ಸು ಭ್ರಮಿಸಿದೆ. ಹೀಗೆ ಅಜ್ಞಾನದಿಂದ ಭ್ರಮಿಸಿದೆ. ಈ ಭ್ರಮೆಯಿಂದ ಮನಸ್ಸು ಬೇರೆ ಬೇರೆ ಅಂಗಡಿ ತಿಂಡಿ, ಬೇರೆ ಬೇರೆ ಮದ್ಯದ ಕಡೆ ಮನಸ್ಸು ಚಂಚಲವಾಗುತ್ತದೆ. ಅದನ್ನು ತಿಂದರೆ ಹೀಗೆ ಸಂತೋಷ. ಇದನ್ನು ಕುಡಿದರೆ ಹಾಗೆ ಸಂತೋಷ. ಹೀಗೆ ಮನಸ್ಸು ಚಂಚಲವಾಗಿ ಆ ಕಡೆ ಈ ಕಡೆ ಅಲೆದಾಡುತ್ತದೆ. ಅಲೆದಾಡುವ ಮನಸ್ಸು ಯಾವುದಕ್ಕೋ ಅಂಟುಕೊಂಡಿದೆ. ಆ ಅಂಟಿಕೊಂಡಿರುವ ವಸ್ತು ಈತನನ್ನು ಮುಗಿಸಿಬಿಡುತ್ತದೆ. ಇದರಿಂದ ವ್ಯಕ್ತಿ ನಾಶವಾಗುತ್ತಾನೆ. ಅದಕ್ಕಾಗಿ ಸತ್ಯ ಜ್ಞಾನ ಮಾಡಿಕೊಳ್ಳಬೇಕಾಗಿದೆ. ಸತ್ಯ ಜ್ಞಾನ ಇದ್ದಾಗ ಮನಸ್ಸು ಭ್ರಮೆಯ ಕಡೆ ಹೋಗುವುದಿಲ್ಲ. ಏಕೆಂದರೆ ಅದು ಭ್ರಮೆ ಎಂಬ ಅರಿವು ಇರುತ್ತದೆ. ಭ್ರಮೆಯು ಮೂಡದಿದ್ದಾಗ ಮನಸ್ಸು ಚಂಚಲವಾಗುವುದಿಲ್ಲ. ಮನಸ್ಸು ದೃಢವಾಗಿರುತ್ತದೆ. ದೃಢ ಮನಸ್ಸು ಮನುಷ್ಯನನ್ನು ಸಾಧನೆಯ ಕಡೆ ಕರೆದೊಯ್ಯುತ್ತದೆ. ಆದ್ದರಿಂದ ಮಕ್ಕಳೇ ನಾವು ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲ ಸತ್ಯವಲ್ಲ. ಸತ್ಯ ಜ್ಞಾನ ಪಡೆಯಬೇಕಾದರೆ ಯಾರು ಸತ್ಯ ಜ್ಞಾನ ಪಡೆದಿದ್ದಾರೋ ಅವರ ಬಳಿ ಹೋಗಬೇಕು. ಅವರಿಲ್ಲದಿದ್ದರೆ ಅವರು ಹೇಳಿರುವ ಸತ್ಯ ಜ್ಞಾನ, ಅವರು ಬಿಟ್ಟು ಹೋಗಿರುವ ಭಾಷಣ ಮತ್ತು ಬರೆದಿರುವ ಪುಸ್ತಕದಲ್ಲಿದೆ, ಅದನ್ನು ಮನನ ಮಾಡಿ ಅನುಸರಿಸೋಣ ಅಲ್ಲವೇ ಮಕ್ಕಳೇ
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article