ಪ್ರೀತಿಯ ಪುಸ್ತಕ : ಸಂಚಿಕೆ - 85
Friday, November 17, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 85
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಪ್ರೀತಿಯ ಮಕ್ಕಳೇ.... ಅಜ್ಜಿಯ ಹತ್ತಿರ ಬೆಚ್ಚಗೆ ಕುಳಿತು ಕಥೆ ಕೇಳಿಸಿಕೊಳ್ಳುವುದು ಎಷ್ಟು ಚಂದದ ಅನುಭವ. ನನಗೆ ಈಗಲೂ ನೆನಪಿಸಿಕೊಂಡರೆ ಖುಷಿ ಅನಿಸುತ್ತದೆ. ಈಗ ಅಜ್ಜಿಯಾಗಿ ಕಥೆ ಹೇಳುವುದಕ್ಕೂ ನನಗೆ ತುಂಬಾ ಖುಷಿ ಅನಿಸುತ್ತದೆ. ಅದಕ್ಕೇ ಈ ಪುಸ್ತಕ ಬಹಳ ಇಷ್ಟವಾಯಿತು. ಬೇವಿನ ಮರದ ಕೆಳಗೆ ನಾಯ್ನಮ್ಮ (ತೆಲುಗು ಭಾಷೆಯಲ್ಲಿ ಅಜ್ಜಿ ಅಂತ ಅರ್ಥ) ಕಲಾ ಮತ್ತು ಅವಳ ಗೆಳತಿಯರಿಗೆ ಸುಂದರವಾದ ಜನಪದ ಕಥೆಗಳನ್ನು ಹೇಳುತ್ತಾರೆ.. ದಿನಾ ಸ್ವಲ್ಪ ಸ್ವಲ್ಪ ಹೇಳುತ್ತಾ, ಮಕ್ಕಳು ಕುತೂಹಲದಿಂದ ಕಾಯುವ ಹಾಗೆ ಮಾಡುತ್ತಾರೆ. ಈ ಪುಸ್ತಕದಲ್ಲಿ ಕಥೆಯ ಒಳಗೆ ಕಥೆ ಇದೆ. ನಾಯ್ನಮ್ಮ, ಅವರ ಮನೆ, ಊರಿನ ಮಕ್ಕಳು, ಮಕ್ಕಳ ಆಟಗಳು, ನಾಯ್ನಮ್ಮ ಮಕ್ಕಳಿಗೆ ಕಥೆ ಹೇಳುವುದು ಇವೆಲ್ಲಾ ಒಂದು ಕಥೆ. ಆಮೇಲೆ ನಾಯ್ನಮ್ಮ ಹೇಳುವ ಕಥೆ ಇನ್ನೊಂದು ಕಥೆ. ಮಜಾ ಇದೆಯಲ್ಲಾ. ಓದಿ ನೋಡಿ.. ಖಂಡಿತವಾಗಿ ಖುಶಿಯಾಗುತ್ತದೆ.
ಲೇಖಕರು: ಪಿ. ಅನುರಾಧಾ
ಅನುವಾದ: ಶಾಲಿನಿ ಜೈಕುಮಾರ್
ಚಿತ್ರಗಳು: ಏ.ವಿ. ಇಳಂಗೋ
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ. 135
6+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************