-->
ಪ್ರೀತಿಯ ಪುಸ್ತಕ : ಸಂಚಿಕೆ - 83

ಪ್ರೀತಿಯ ಪುಸ್ತಕ : ಸಂಚಿಕೆ - 83

ಪ್ರೀತಿಯ ಪುಸ್ತಕ
ಸಂಚಿಕೆ - 83
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                

                         ನನ್ನ ಹೆಸರು ಗುಲಾಬಿ
     ಪ್ರೀತಿಯ ಮಕ್ಕಳೇ.... ನನ್ನ ಒಬ್ಬಳು ಪುಟ್ಟ ಸ್ನೇಹಿತೆ ಸ್ವರ. ಅವಳ ಮನೆಗೆ ಮುನ್ಸಿಪಾಲಿಟಿಯಿಂದ ಕಸ ಕೊಂಡೊಯ್ಯಲು ಬರುತ್ತಾರೆ. ಎಲ್ಲರೂ ‘ಕಸದವರು, ಕಸದವರು’ ಅಂತ ಅವರನ್ನು ಕರೆದರೆ ಸ್ವರ ಹೇಳುತ್ತಾಳೆ, "ಅವರು ಕಸದವರು ಅಲ್ಲ, ಸ್ವಚ್ಚಮಾಡುವವರು” ಅಂತ. ಎಷ್ಟು ಸತ್ಯ ಅಲ್ಲವೇ? ಈ ಪುಸ್ತಕ ಓದುವಾಗ ನನಗೆ ಸ್ವರನ ಮಾತು ನೆನಪಾಯಿತು.
    'ನನ್ನ ಹೆಸರು ಗುಲಾಬಿ' ಶಾಲೆಗೆ ಹೋಗುವ ಒಬ್ಬ ಪುಟ್ಟ ಹುಡುಗಿ ಗುಲಾಬಿಯ ಕಥೆ. ಅವಳ ಅಪ್ಪ ಚರಂಡಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಾರೆ, ಅದಕ್ಕಾಗಿ ಕೆಲವು ಸಹಪಾಠಿಗಳು ಅವಳನ್ನು ‘ಗಬ್ಬು ಗುಲಾಬಿ’ ಅಂತ ಗೇಲಿ ಮಾಡುತ್ತಾರೆ. ಗುಲಾಬಿಗೆ ಬೇಸರವೂ ಆಗುತ್ತದೆ; ಅಪ್ಪ ಯಾಕೆ ಇಂತಹ ಕೆಲಸ ಮಾಡುತ್ತಾರೆ ಅಂತ ಕೋಪವೂ ಬರುತ್ತದೆ. ಗುಲಾಬಿಯನ್ನು ಯಾಕೆ ಮಕ್ಕಳು ಹಾಗೆ ಗೇಲಿ ಮಾಡುತ್ತಾರೆ, ಅವಳಿಗೆ ನೋವಾಗುವುದಿಲ್ಲವೇ ಅಂತ ಮನಸ್ಸಿಗೆ ಪ್ರಶ್ನೆ ಮೂಡಿಸುತ್ತದೆ ಈ ಪುಸ್ತಕ. ಗುಲಾಬಿ ಹೇಗೆ ಇದನ್ನು ಎದುರಿಸಿದಳು? ಎಂತಹ ನಿರ್ಧಾರ ತೆಗೆದುಕೊಂಡಳು? ತಿಳಿದುಕೊಳ್ಳಲು ಓದಿ ಈ ಪುಸ್ತಕ. ಮನಮುಟ್ಟುವ ಚಿತ್ರಗಳೂ ಇವೆ. ಇದು ಚಿಕ್ಕವರು ದೊಡ್ಡವರು ಎಲ್ಲರೂ ಓದಲೇ ಬೇಕಾದ ಪುಸ್ತಕ
ಲೇಖಕರು: ಸಾಗರ್ ಕೋಳ್ವಣ್ಕರ್
ಅನುವಾದ: ಬಾಗೇಶ್ರೀ
ಚಿತ್ರಗಳು: ಸಾಗರ್ ಕೋಳ್ವಣ್ಕರ್
ಪ್ರಕಾಶಕರು: ತುಲಿಕ ಪಬ್ಲಿಷರ್ಸ್ 
ಬೆಲೆ: ರೂ.50
6+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************
Ads on article

Advertise in articles 1

advertising articles 2

Advertise under the article