-->
ಕವನಗಳು - ರಚನೆ : ದತ್ತು ಅರಕೇರಿ

ಕವನಗಳು - ರಚನೆ : ದತ್ತು ಅರಕೇರಿ

ಮಕ್ಕಳ ಕವನಗಳು
ಕವನ ರಚನೆ : ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ


       
ಉಸಿರು ಗಟ್ಟಿಹಿಡಿದು ಜೀವ ಕೊಟ್ಟವಳು
ನನ್ನ ಮುದ್ದಿಸಿ ಆಲಿಸಿ ಪಾಲಿಸಿದವಳು
ನನ್ನ ಬಣ್ಣ ನೋಡದೆ ಎತ್ತಿ ಮುದ್ದಾಡಿದವಳು
ನನ್ನ ಮೊದಲ ಹೆಜ್ಜೆ ನೋಡಿ 
ಕಣ್ತುಂಬಿ ಕೊಂಡವಳು
ಕೊನೆಗೆ ನನ್ನಿಂದ ಏನು ಬಯಸದೆ ಇದ್ದವಳು.

ಕುಟುಂಬದವರನ್ನು ಪರಿಚಯಿಸಿದವಳು
ನನ್ನ ಮೊದಲ ಗುರು ಆದವಳು
ನನ್ನ ಮೊದಲ ದೇವತೆಯೇ ಅವಳು
ನನ್ನ ನಗುವನ್ನು ನೋಡಿ ಕಣ್ತುಂಬಿಕೊಂಡವಳು
ಕೊನೆಗೆ ನನ್ನಿಂದ ಏನನ್ನು ಬಯಸದೆ ಇದ್ದವಳು.

ನನ್ನ ಎತ್ತಿ ಮುದ್ದಾಡಿದವಳು
ನನಗಾಗಿ ಸಾವಿರ ಕನಸು ಕಟ್ಟಿಕೊಂಡವಳು
ನನ್ನ ಜೀವನ ಸುಖಕರವಾಗಿರಲಿ 
ಎಂದು ಬಯಸಿದವಳು
ನನಗಾಗಿ ತನ್ನ ಬಯಕೆಗಳನ್ನು ಮರೆತವಳು
ಕೊನೆಗೆ ನನ್ನಿಂದ ಏನನ್ನು ಬಯಸದೆ ಇದ್ದವಳು

ತಾನು ಉಪವಾಸವಿದ್ದು 
ನನ್ನ ಹೊಟ್ಟೆ ತುಂಬಿಸಿದವಳು
ನನ್ನ ಸುಖ ನಿದ್ದೆಗೆ ಮಡಿಲು ಕೊಟ್ಟವಳು
ನನ್ನನ್ನು ಕಷ್ಟಗಳಿಂದ ದೂರವಿಟ್ಟವಳು
ನನ್ನ ಕ್ಷೇಮವನ್ನು ಬಯಸುವವಳು
ಕೊನೆಗೆ ನನ್ನಿಂದ ಏನನ್ನು ಬಯಸದೆ ಇದ್ದವಳು.
............................................ ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
********************************************


           
ಸ್ವತಂತ್ರಕ್ಕಾಗಿ ಹಗಲಿರುಳೆನ್ನದೆ ಶ್ರಮಿಸಿದವರು
ಸಾವೇ ಕಣ್ಣೆದುರಿದ್ದರು ಹೆದರದೆ ಹೋರಾಡಿದವರು
ಬೆಟ್ಟದಷ್ಟು ದೇಶಾಭಿಮಾನ ಹೊಂದಿದವರು
ನಮ್ಮ ಈ ಸ್ವಾವಲಂಬನೆ ಜೀವನಕ್ಕೆ ಕಾರಣರಾದವರು

ರಕ್ತವನ್ನು ಬೆವರಿನಂತೆ ಸುರಿಸಿದವರು
ನಮ್ಮ ಈ ನೆಮ್ಮದಿಯ ಜೀವನಕ್ಕೆ ಕಾರಣರಾದವರು
ಹಲವು ಜನರಲ್ಲಿ ದೇಶಾಭಿಮಾನದ 
ಕಿಚ್ಚನ್ನು ಹಚ್ಚಿದವರು
ಜಿಗಣೆಯಂತೆ ರಕ್ತ ಹೀರುವ ಬ್ರಿಟಿಷರಿಂದ ಮುಕ್ತಿಗೊಳಿಸಿದವರು

ಯುವ ಪೀಳಿಗೆಗೆ ಸ್ಫೂರ್ತಿಯಾದವರು
ಕೆಂಪು ಮುಖದ ನಾಯಿಗಳನ್ನು ಒದ್ದೋಡಿಸಿದವರು
ತಮ್ಮ ಸುಖ ಜೀವನವನ್ನು ನಮಗಾಗಿ ಧಾರೆಯೆರೆದವರು
ಕೊನೆಗೆ ಕತ್ತಲಲ್ಲಿದ್ದ ನಮ್ಮನ್ನ ಬೆಳಕಿಗೆ ತಂದವರು..
............................................ ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
********************************************


     
ಪ್ರೀತಿಸುವೆ ನಾನು ಈ ಕನ್ನಡಾಂಬೆಯನ್ನು
ಇಲ್ಲಿ ಜನಿಸಿದ್ದಕ್ಕೆ ತುಸು ಗರ್ವ ಪಡುವೆನು
ಧಾರಾಳವಾಗಿ ಕೊಟ್ಟಿರುವೆ ನಮಗೆ 
ನಿನ್ನ ಸಂಪತ್ತನ್ನು
ಕನ್ನಡಾಂಬೆ ನಿನಗೆ ಋಣಿಯಾಗಿರುವೆ ನಾನು..

ಉಚಿತವಾಗಿ ಕೊಟ್ಟಿರುವೆ 
ಪ್ರಕೃತಿ ಎಂಬ ಸಂಪತ್ತನ್ನು
ಹಾನಿಯಾಗದಂತೆ ಕಾಯುತ್ತಿರುವೆ 
ನೀನೂ ನಮ್ಮನ್ನು
ಪ್ರವಾಹದ ರೂಪದಲ್ಲಿ ಕೆಲವೊಮ್ಮೆ 
ಸಿಡಿದೇಳುವೆ ನೀನು
ಆದರೆ ತಾಯಿಯಂತೆ ಸಾಕಿರುವೆ 
ನೀನು ನಮ್ಮನ್ನು..

ಈ ನಾಡಲ್ಲಿ ಗಂಧದ ಸುವಾಸನೆ 
ಹೀಗೆ ಬೀರಲಿ ಎಂದೆಂದೂ
ಸಾವಿರಾರು ವರ್ಷದ ಇತಿಹಾಸ ನಿನ್ನದು
ನಿನ್ನ ಹಿರಿಮಗ ರೈತನ 
ಕೈಬಿಡದಿರು ಎಂದೆಂದೂ
ಓ ಕನ್ನಡಾಂಬೆ ಋಣಿಯಾಗಿರುವೆ ನಾ
ನಿನಗೆಂದೆಂದೂ..
............................................ ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
******************************************** 



ವಿದ್ಯಾರ್ಥಿಗಳನ್ನ ಮಕ್ಕಳಂತೆ ಕಾಣುವರು
ವಿದ್ಯಾರ್ಥಿಗಳ ಜೀವನಕ್ಕೊಂದು 
ದಾರಿ ತೋರುವರು
ಬಿದ್ದಂತ ಕಲ್ಲಿನ ಮೇಲೆ ಶಾಸನ ಬರೆದವರು
ಅವರೇ ನಮ್ಮ ಶಿಕ್ಷಕರು..

ತಪ್ಪು ಮಾಡಿದಾಗ ತಾಯಿಯಂತೆ
ತಿಳಿಹೇಳಿದವರು
ನಡತೆ ಕಲಿಸುವಲ್ಲಿ ತಂದೆಯಾದವರು
ಕತ್ತಲೆಯಂತಿದ್ದ ನಮ್ಮ ಜೀವನಕ್ಕೊಂದು ದೀಪವನಿಟ್ಟವರು
ನಿತ್ಯ ನಮ್ಮ ಯಶಸ್ಸಿಗಾಗಿ ಕಾಯುವರು..

ಪ್ರೀತಿಸುವರು ಬಂಧುಗಳಂತೆ
ನಮ್ಮೊಡನೆ ಅವರ ಒಡನಾಟ ಸ್ನೇಹಿತರಂತೆ
ಕಾಯುವರು ನಮ್ಮನ್ನ ದೇವರಂತೆ
ಕಾಣುವೆವು ನಾವವರನ್ನ ತಂದೆ ತಾಯಿಯಂತೆ..

ಸಾಧನೆಯತ್ತ ದಾರಿ ತೋರಿದವರು
ಶಿಲೆಯನ್ನ ಮೂರ್ತಿ ಮಾಡುವ ಶಿಲ್ಪಿ ಅವರು
ಒರಟು ಇದ್ದವರಲ್ಲಿ ಮೃದುಭಾವ ತುಂಬಿದವರು
ಒಟ್ಟಿನಲ್ಲಿ ಹೇಳುವುದಾದರೆ 
ಕಲ್ಲಿದ್ದ ಮಡಕೆಯಲ್ಲಿ ಚಿನ್ನ ತುಂಬಿದವರು..!!
............................................ ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
********************************************



ಬೆಳ್ಳಿ ಬಂಗಾರ ಕಾಣದ
ಮನೆಯೊಳಗೆ ಬೆಳದಿ
ನಿನ್ನ ತಂದೆ ತಾಯಿ ಪ್ರೀತಿನೇ
ಬಂಗಾರ ಎಂದಿ

ಆಡಿ ಬೆಳೆಯೋ ವಯಸ್ಸಿನೊಳಗೆ
ಹಸೀಮನೆ ಏರಿದಿ
ಹುಟ್ಟೂರು ಬಿಟ್ಟು ಕಾಣದ
ಊರಿಗೆ ಹೋದಿ

ಅತ್ತಿ ಮಾವಗ ಹೊಂದಿಕೊಂಡು
ನಡದಿ
ತಂದೆತಾಯಿ ನೆನಪಾದಾಗ ಗಂಡನ
ಕೈ ಹಿಡಿದು ಅತ್ತಿ
ತವರಿಗೆ ಹೋಗುದಂದ್ರೆ 
ನೀ ಹಿಗ್ಗಿ ಸತ್ತಿ

ಗಂಡನ ಮನೆಗೆ ಬರುವಾಗ 
ಕೈತುಂಬಾ ಹಸಿರು ಬಳೆ ತೊಟ್ಟಿ
ಗಂಡನ ಸಾಲಕ್ಕೆ ನಿನ್ನ ಬಂಗಾರ
ಗಿರವಿ ಇಟ್ಟಿ

ಬಂಗಾರಿದ್ದ ಕೊರಳಿಗೆ ಕರಿಮಣಿ
ಹಾಕಿ ನಡದಿ
ಇದ್ದ ಸಾಲ ಮುಟ್ಟಿಸೋಕೆ 
ನೀನೂ ದುಡದಿ

ಎಷ್ಟೇ ದಣಿವಾದ್ರೂ ಗಂಡನಿಗೆ
ಬಿಸಿ ಬಿಸಿ ಅಡುಗೆ ಮಾಡಾಕಿದೆ
ಹರಿದ ಸೀರೆ ಮೇಲೆ ಸಂಸಾರ ಮಾಡಿದಿ
ಗಂಡನ ನಗೆಯೊಳಗೆ ನಿನ್ನ
ನೋವು ಮರತಿ

ಹುಟ್ಟಿನಿಂದ ಬಡತನದೊಳಗೆ
ಬೆಳದಿ
ನಿನ್ನ ಆಸೆ ಆಕಾಂಕ್ಷೆಗಳನ್ನು ಎಲ್ಲಿ
ಮುಚ್ಚಿಟ್ಟಿ…..? ಎಲ್ಲಿ ಮುಚ್ಚಿಟ್ಟಿ..!!
...................................... ದತ್ತು ಅರಕೇರಿ 
ದ್ವಿತೀಯ ಪಿಯುಸಿ 
ಕರ್ನಾಟಕ ಕಲಾ ಮಹಾವಿದ್ಯಾಲಯ 
ಧಾರವಾಡ, ಹಾರೂಗೇರಿ 
ರಾಯಬಾಗ ತಾಲೂಕು, ಬೆಳಗಾವಿ ಜಿಲ್ಲೆ
********************************************



Ads on article

Advertise in articles 1

advertising articles 2

Advertise under the article