-->
ಮೈಸೂರು ದಸರದ ಇತಿಹಾಸ

ಮೈಸೂರು ದಸರದ ಇತಿಹಾಸ

ಮಕ್ಕಳ ಲೇಖನ : ಮೈಸೂರು ದಸರದ ಇತಿಹಾಸ
ರಚನೆ: ಲಿಖಿತಾ ಸಿದ್ದಕಟ್ಟೆ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ   
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
           
  ಆತ್ಮೀಯರೇ… ನಾವೆಲ್ಲರೂ ನಾಡಹಬ್ಬ ದಸರಾ ಆಚರಣೆಯ ಸಂಭ್ರಮದಲ್ಲಿದ್ದೇವೆ. ದಸರಾ ಹಬ್ಬದಂದು ಗೊಂಬೆಗಳನ್ನು ಕೂರಿಸೋ ಪದ್ಧತಿಯೂ ಮೊಟ್ಟ ಮೊದಲು ಮೈಸೂರು ಪ್ರಾಂತ್ಯದಲ್ಲಿ ಆರಂಭವಾಯಿತು ಎನ್ನಲಾಗುತ್ತದೆ. 
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಮಹಾನ್ ಉತ್ಸವದ ಇತಿಹಾಸವೇನು...?
     400-500 ವರ್ಷಗಳ ಹಿಂದೆ ವಿಜಯ ನಗರ ಸಾಮ್ರಾಜ್ಯದ ಹಂಪಿಯಲ್ಲಿ ನಡೀತಾ ಇದ್ದ ಮಹಾನವಮಿ ದಕ್ಷಿಣ ಕರ್ನಾಟಕದ ಮೈಸೂರಿಗೆ ಬಂದಿದ್ದು ಹೇಗೆ...? ಸಂಸ್ಕೃತ ಪದಗಳಾದ ದಶ ಅಂದರೆ ಹತ್ತು. ಹರ ಎಂದರೆ ಸೋಲಿಸುವುದು, ಇವೆರಡೂ ಸೇರಿ ದಶಹರ ಆಯ್ತು. ನಂತರ ಇದೇ ಕನ್ನಡದಲ್ಲಿ ದಸರಾ ಆಯ್ತು ಅಂತ ಹೇಳಲಾಗುತ್ತದೆ. ಇದರ ಪ್ರಕಾರ ಹಿಂದೂ ಚಂದ್ರಮಾನ ಕ್ಯಾಲೆಂಡರ್ ಅಶ್ವೀಜ ಮಾಸದ ಹತ್ತನೇ ದಿನ ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸಿದ ದಿನ. ದುಷ್ಟ ಸಂಹಾರ.. ಶಿಷ್ಟ ರಕ್ಷಣೆ ಅನ್ನೋದು ಮಹಾನವಮಿಯ ಸಂದೇಶ.
    ಸ್ನೇಹಿತರೇ… ಈ ಬಾರಿಯ ಮೈಸೂರು ದಸರಾ 413ನೇ ವರ್ಷದ ದಸರಾ ಮಹೋತ್ಸವ. ಆದರೆ ನಮ್ಮ ಕರುನಾಡಿನ ದಸರಾ ಆರಂಭದಿಂದಲೂ ಮೈಸೂರು ದಸರಾ ಅಂತ ಕರೆಸಿ ಕೊಳ್ತಿರಲಿಲ್ಲ. ಇದರ ಮೂಲ 14ನೇ ಶತಮಾನದ ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದ ಅವಧಿಯಲ್ಲಿ ಮಹಾನವಮಿ ಅನ್ನೋ ಹೆಸರಿನಲ್ಲಿ ಆಚರಿಸುತ್ತಾ ಇದ್ದರು. ವಿಜಯನಗರ ಸಾಮ್ರಾಜ್ಯ ದ ವೈಭವದ ಸಂಕೇತವಾಗಿದ್ದ ಮಹಾನವಮಿ ದಖನ್ ಸುಲ್ತಾನರ ದಾಳಿಯಿಂದ ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ನಿಂತು ಹೋಯಿತು.
       ವಿಜಯ ನಗರ ಸಾಮ್ರಾಜ್ಯದ ನಾಡಹಬ್ಬ ಮಹಾನವಮಿ ಯನ್ನು ರಾಜರು ವೀಕ್ಷಿಸುತ್ತಿದ್ದ ಮಹಾನವಮಿ ದಿಬ್ಬ.
     ಆದರೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅಳಿದುಳಿದ ವಿಜಯನಗರ ಸಾಮ್ರಾಜ್ಯದ ಭಾಗಗಳನ್ನು ಸೇರಿಸಿ ಮೈಸೂರಿನ ಒಡೆಯರು ಹೊಸ ರಾಜ್ಯ ಕಟ್ಟಿದರು. ವಿಜಯನಗರ ಸಾಮ್ರಾಜ್ಯದ ಮಹಾನವಮಿಯನ್ನು ಮೈಸೂರು ದಸರ ವಾಗಿ ತಮ್ಮ ರಾಜ್ಯದಲ್ಲಿ ಮುಂದುವರೆಸಿದರು.1610 ರಲ್ಲಿ ಶ್ರೀ ರಾಜ ಒಡೆಯರ್ ರವರು ಶ್ರೀರಂಗ ಪಟ್ಟಣದಲ್ಲಿ ಮೊದಲ ದಸರಾ ವನ್ನು ಆರಂಭಿಸಿದರು. ಅಂದು ಶುರುವಾದ ಮೈಸೂರು ದಸರ ಮಹೋತ್ಸವ ಇಂದಿಗೂ ವೈಭವದಿಂದ ನಡೆದುಕೊಂಡು ಬರುತ್ತಾ ಇದೆ. 
     ಮೈಸೂರು ದಸರಾದ ಮೆರವಣಿಗೆಗೆ ಜಂಬೂ ಸವಾರಿ ಅನ್ನೋ ಹೆಸರು ಯಾಕೆ ಬಂತು...?      
     ಅರಮನೆಯ ಮುಂಭಾಗದಿಂದ ಹೊರಡುವ ಗಜಪಡೆ ಈ ಮೆರವಣಿಗೆ ಒಂದು ರೀತಿಯ ಆಕರ್ಷಣೆ. ಈ ಸವಾರಿನ ಮೊದಲು ಜುಂಬಿ ಸವಾರಿ ಎನ್ನಲಾಗುತ್ತಿತ್ತು. ಅಂದರೆ ಬನ್ನಿ ಮರದ ಬಳಿ ಹೋಗುವ ಸವಾರಿ ಎಂದರ್ಥ. ಆದರೆ ಮೈಸೂರು ಸಂಸ್ಥಾನ ಬ್ರಿಟೀಷ್ ಆಳ್ವಿಕೆಗೆ ಒಳಪಟ್ಟಾಗ ಭಾಷೆ ಬಾರದ ಇಂಗ್ಲೀಷರು ಆನೆಗಳನ್ನು ಕಂಡು ಜಂಬೂ ಸವಾರಿ ಎಂದು ಕರೆದರು. 
          ಹಂಪಿಯಲ್ಲಿರುವ ಮಹಾನವಮಿ ದಿಬ್ಬ.. ವಿಜಯ ವಿಠಲ ದೇವಾಲಯಗಳು.. ಈ ಮಹೋತ್ಸವದ ಕೇಂದ್ರಗಳಾಗಿದ್ದು, ಈಗಲೂ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ, ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ನಮ್ಮ ವಿಜಯನಗರದ ಅರಸರು. ದಸರಾ ಹಬ್ಬದ ಆಚರಣೆಯೊಂದಿಗೆ ನಮ್ಮ ನಾಡಿನ ಇತಿಹಾಸವನ್ನು ಅರಿತುಕೊಂಡಾಗ ಆಚರಣೆ ಅರ್ಥಪೂರ್ಣವಾಗುತ್ತದೆ.
........................................ ಲಿಖಿತಾ ಸಿದ್ದಕಟ್ಟೆ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ   
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article