ಪ್ರೀತಿಯ ಪುಸ್ತಕ : ಸಂಚಿಕೆ - 82
Friday, October 27, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 82
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಗುಲಾಬೊ ಇಲಿಯಮ್ಮ ಚಂದವಾದ ಪುಟ್ಟ ಹೆಂಗಸು. ಒಂದು ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾಳೆ. ಅಂಗಡಿಗೆ ಬೇಕಾದ ಸಾಮಾನುಗಳನ್ನು ಹತ್ತಿರದ ಪೇಟೆಯಿಂದ ತರುತ್ತಾಳೆ. ತನ್ನ ಅಂಗಡಿಯಲ್ಲಿ ಮಾರುತ್ತಾಳೆ. ಒಮ್ಮೆ ಹೋದಾಗ ಪೇಟೆಯಿಂದ ಬಲೂನ್ ಕೂಡಾ ತರುತ್ತಾಳೆ. ಬಲೂನ್ ತಂದ ಮೇಲೆ ಮನೆಯಲ್ಲಿ ಒಂದು ವಿಶೇಷ ಘಟನೆ ನಡೆಯುತ್ತದೆ. ಬಲೂನ್ ಒಳಗಿನಿಂದ ಯಾರೋ ಮಾತಾಡುತ್ತಾರೆ. ‘ಹೊರಗೆ ಬಿಡಿ, ಹೊರಗೆ ಬಿಡಿ..’ ಅಂತ ಕೂಗಿ ಹೇಳುತ್ತಾರೆ. ಏನು ವಿಚಿತ್ರ! ಬಲೂನಿನ ಒಳಗೆ ಇದ್ದವರು ಯಾರು? ಆಮೇಲೆ ಏನಾಯಿತು? ಕುತೂಹಲವಿದೆಯಲ್ಲವೇ...? ಓದಿ ನೋಡಿ. ಚಿತ್ರಗಳು ಕೂಡಾ ಸುಂದರವಾಗಿವೆ.
ಲೇಖಕರು: ಖದ್ಸಿಯಾ ಝೈದಿ
ಅನುವಾದ: ಎಚ್. ನಾಗರಾಜಪ್ಪ
ಚಿತ್ರಗಳು: ನಿರೇನ್ ಸೇನ್ ಗುಪ್ತಾ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.45
6+ ವಯಸ್ಸಿವರಿಗಾಗಿ ಇದೆ. ಇತರ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************