ಪ್ರೀತಿಯ ಪುಸ್ತಕ : ಸಂಚಿಕೆ - 79
Friday, October 6, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 79
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಬಡಜನರ ನೋವಿನ ಕಥೆ ಇದು. ಸೋನ್ ನದಿಯ ತಟದ ಹಳ್ಳಿಯಲ್ಲಿ ಬಡ ಜನರ ಮೇಲೆ ನಡೆಯುವ ದೌರ್ಜನ್ಯದ ಚಿತ್ರಣ ಇದರಲ್ಲಿ ಇದೆ. ಶ್ರೀಮಂತರು ಹೇಗೆ ಕೆಳಸ್ತರದಲ್ಲಿ ಇರುವ ಜಾತಿಯ ಜನರನ್ನು ದಿಕ್ಕುಗೆಡುವ ಹಾಗೆ ಮಾಡುತ್ತಾರೆ, ಎಂಬ ವಿವರಣೆ ಇದೆ. ಇಷ್ಟು ನೋವಿನ ಕಥೆಗಳನ್ನು ಎಷ್ಟೋ ಮಕ್ಕಳು ಅನುಭವಿಸಿರುತ್ತಾರೆ. ಆದರೆ ಅವರು ಆ ಬಗ್ಗೆ ಮಾತಾಡುವುದು ಕಡಿಮೆ. ಈ ಕಥೆಯಲ್ಲಿ ಲಾಟೀನು ಒಂದು ಭರವಸೆಯ ಬೆಳಕಿನಂತೆ ಬರುತ್ತದೆ. ದಬ್ಬಾಳಿಕೆ ಮಾಡುವವರ ಬಗ್ಗೆ ಜನರಿಗೆ ಅರಿವು ಮೂಡಿಸಲು ಹೊರಡುವ ಪ್ರಯತ್ನ ಇದರಲ್ಲಿ ಕಾಣುತ್ತದೆ. ಇದು ಮಾನವ ಹಕ್ಕಿಗೆ ಸಂಬಂಧಿಸಿದ ಕಥೆ.
ಲೇಖಕರು: ಮಧುಕರ ಸಿಂಹ
ಅನುವಾದ: ತಿಪ್ಪೇ ಸ್ವಾಮಿ
ಚಿತ್ರಗಳು: ಪರೇಶ್ ಚೌಧರಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.20
9ನೇ 10ನೇ ತರಗತಿಯ ಮಕ್ಕಳು ಓದಬಹುದು
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************