ಪ್ರೀತಿಯ ಪುಸ್ತಕ : ಸಂಚಿಕೆ - 76
Friday, September 15, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 76
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ದೊಡ್ಡ ಪುಸ್ತಕ. ಪುಟ ತುಂಬಾ ಚಿತ್ರ. ಬಹಳ ಚಂದದ ಚಿತ್ರಗಳು. ಪ್ರತಿ ಪುಟದಲ್ಲಿ ಒಂದು ವಾಕ್ಯ. ಅಂದರೆ ಈ ಪುಸ್ತಕದಲ್ಲಿ ಚಿತ್ರಗಳೇ ಬಹಳಷ್ಟು ಕಥೆ ಹೇಳುತ್ತವೆ. “ಮ್ಯಾಂ ನಾನು ಹರು” ಅಂತ ಈ ಪುಸ್ತದಲ್ಲಿ ಒಂದು ಪುಟ್ಟ ಮೇಕೆ. ತನ್ನ ಕಥೆ ಹೇಳುತ್ತದೆ. ತಿನ್ನೋದು, ಓಡೋದು, ಆಡೋದು ಅಂದ್ರೆ ಹರುವಿಗೆ ಇಷ್ಟ. ಈ ಪುಸ್ತಕದ ಲೇಖಕಿ ಮಂಜರಿ ನಿಜವಾದ ಮೇಕೆ ಹರುವನ್ನು ನೋಡಿಯೇ ಈ ಕಥೆ ಬರೆದಿದ್ದಾರೆ. ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಈ ಮೇಕೆಯನ್ನು ಇಟ್ಕೂ ಅಜ್ಜಿ ಕಾಪಾಡಿರುತ್ತಾಳೆ. ಅವನು ಅವರ ಕುಟುಂಬದ ಸದಸ್ಯರ ಜೊತೆಯಲ್ಲಿಯೇ ಬೆಳೆದಿರುತ್ತಾನೆ. ಮುದ್ದು ಮುದ್ದಾಗಿದೆ. ಓದಿ ನೋಡಿ.
ಲೇಖಕರು: ಮಂಜರಿ ಚಕ್ರವರ್ತಿ
ಅನುವಾದ: ತನುಜಾ ಜಕ್ಕಣ್ಣನವರ್
ಚಿತ್ರಗಳು: ಮಂಜರಿ ಚಕ್ರವರ್ತಿ
ಪ್ರಕಾಶಕರು: ತುಲಿಕಾ
ಬೆಲೆ: ರೂ.60
ಈ ಪುಸ್ತಕ ಚಿಕ್ಕ ಮಕ್ಕಳಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************