-->
ಮಕ್ಕಳ ಕವನಗಳು - ರಚನೆ : ವೈಷ್ಣವಿ. ಎಸ್. ತುಂಗಾ 5ನೇ ತರಗತಿ

ಮಕ್ಕಳ ಕವನಗಳು - ರಚನೆ : ವೈಷ್ಣವಿ. ಎಸ್. ತುಂಗಾ 5ನೇ ತರಗತಿ

ಮಕ್ಕಳ ಕವನಗಳು
ಕವನ ರಚನೆ : ವೈಷ್ಣವಿ. ಎಸ್. ತುಂಗಾ
5 ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ 
ವಿದ್ಯಾನಗರ ಮಾಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

 
ಅಂಬರದಲ್ಲಿ ಕಾಮನಬಿಲ್ಲು  
ರಂಗೇರುವಾಗ
ಹಚ್ಚ ಹಸುರಿನ
ಗುಡ್ಡದ ಹುಲ್ಲುಗಾವಲಿನಲ್ಲಿ
ಬೀಸಣಿಕೆಯಂತೆ ಕಾಣುವ 
ಗರಿಯ ಬಿಡಿಸಿ
ನಯನಮನೋಹರವಾಗಿ 
ನಾಟ್ಯವನಾಡುವೆ ನೀನು...!!
                    
ಹಸಿರು ಮಿಶ್ರಿತ ನೀಲಿ ಬಣ್ಣಗಳು
ಫಳಫಳ ಹೊಳೆಯುವ ನಿನ್ನ ಕಣ್ಣುಗಳು
ಸಹಸ್ರಾಕ್ಷ, ಮಯೂರ, ಶಿಖಿ ಎಂಬ ಸುಂದರ ನಾಮಗಳು  
ನಿನ್ನ ಸೌಂಧರ್ಯವ ಪ್ರಶಂಸಿಸಿ
ಕವಿತೆ ರಚಿಸುವರು ಕವಿಗಳು...!! 

ರೈತನ ಮಿತ್ರನಾಗಿ 
ಕೀಟಭಾದೆ ತಡೆಯುವೆ       
ಮುಕುಂದನ ಜುಟ್ಟನ್ನು ಅಲಂಕರಿಸುವೆ
ರಾಷ್ಟ್ರ ಪಕ್ಷಿ ಎಂಬ ಗೌರವ ಪಡೆದಿರುವೆ 
ಓ ಮಯೂರವೇ 
ನೀನೆಷ್ಟು ಸುಂದರವಾಗಿರುವೆ
ನಿನ್ನ ನೋಡಲು ಬಯಸಿದೆ ನನ್ನ ನೇತ್ರಗಳು..!!
............................... ವೈಷ್ಣವಿ. ಎಸ್. ತುಂಗಾ
5 ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ 
ವಿದ್ಯಾನಗರ ಮಾಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

                     
ಪುಷ್ಪಗಳು ನೋಡಲು ಕಣ್ಣುಗಳಿಗೆ ಚೆಂದ
ಬಣ್ಣ ಬಣ್ಣದ ದಳಗಳಿಂದ ತುಂಬಿದೆ ಅದರಂದ

ನಮ್ಮ ಅಂಗಳದಲ್ಲಿವೆ ಹೂವಿನ ಗಿಡಗಳು
ಗುಲಾಬಿ,ದಾಸವಾಳ,ಸಂಜೆ ಮಲ್ಲಿಗೆ ಸುಮಗಳು
ಹೂವಿನ ಮಕರಂದ ಚಿಟ್ಟೆಗೆ ಆಹಾರ
ನಾ ನೋಡಲು ಹೋಗುವೆ ಸಂಜೆ ವಿಹಾರ

ಸಂಜೆ ಮಲ್ಲಿಗೆ ಕಂಪು ಅರಳುವುದು ಸಂಜೆ   
ದುಂಡು ಮಲ್ಲಿಗೆ ಸುಗಂಧ ಹಬ್ಬಿದೆ ಎಲ್ಲೆಡೆ
ವಿಧವಿಧಗಳಿಂದ ಕೂಡಿದ ದಾಸವಾಳಗಳು
ಹಳದಿ, ಕೇಸರಿ, ರಂಗಿನ ಚೆಂಡು ಹೂಗಳು

ದಿನಾಲು ಹಾಕುವೆ ನೀರನ್ನು ಗಿಡಗಳಿಗೆ
ನಾ ಅರ್ಪಿಸುವೆ ಹೂಗಳನ್ನು ದೇವರಿಗೆ
ಕತ್ತರಿಸಬೇಡಿ ಗಿಡಮರಗಳನ್ನು ನೀವು
ಉಳಿಸಿ -ಬೆಳೆಸೋಣ ಪರಿಸರವನ್ನು ನಾವು
.................................. ವೈಷ್ಣವಿ. ಎಸ್. ತುಂಗಾ
5ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ 
ವಿದ್ಯಾನಗರ ಮಾಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



                       

Ads on article

Advertise in articles 1

advertising articles 2

Advertise under the article